ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪಲಿತಾಂಶಗಳು ರಾಜಕೀಯ ವಲಯದಲ್ಲಿ ನಿರೀಕ್ಷಿಸಿದವೇ ಆಗಿದ್ದರೂ, ಕಾಂಗ್ರೆಸ್ ಈ ಮಟ್ಟದಲ್ಲಿ ಸೋಲುತ್ತದೆಯೆಂದು ಸ್ವತ: ಅದರ ವಿರೋಧಿಗಳೂ ಊಹಿಸಿರಲಿಲ್ಲವೆಂಬುದು ಮಾತ್ರ ಸತ್ಯ! ಮಹಾರಾಷ್ಟ್ರದ ಬಹುತೇಕ ನಗರ ಪಾಲಿಕೆಗಳನ್ನು ಮತ್ತು ಜಿಲ್ಲಾ ಪರಿಷದ್ ಗಳನ್ನು ಬಿಜೆಪಿ ಮತ್ತು ಶಿವಸೇನೆ ವಶ ಪಡಿಸಿಕೊಂಡಿದ್ದು ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿಯೂ ತಾನು ಬಲಿಷ್ಠವಾಗುತ್ತಿದ್ದೇನೆಂಬ ಸೂಚನೆಯನ್ನೂ ಬಿಜೆಪಿ ನೀಡಿದೆ. ಅದರಲ್ಲೂ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದ್ದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸೋಲನ್ನಪ್ಪಿದ್ದು, ಕಳೆದ ಬಾರಿಗಿಂತ ಹೀನಾಯಪ್ರದರ್ಶನ ನೀಡಿದೆ. ರಾಷ್ಟ್ರದ ವಾಣಿಜ್ಯ ರಾಜದಾನಿಯೆಂದೇ ಪ್ರಸಿದ್ದವಾಗಿರುವ ಮುಂಬೈ ಅನ್ನು ಗೆಲ್ಲುವುದು ಎಲ್ಲಪಕ್ಷಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಚುನಾವಣೆಗು ಮೊದಲು ನಾನು ಮುಂಬೈ ಚುನಾವಣೆಯನ್ನು ವಿಶ್ಲೇಷಣೆ ಮಾಡುವಾಗಲೇ ಬಿಜೆಪಿ ಶಿವಸೇನೆಯ ಪ್ರಾಬಲ್ಯದ ಬಗ್ಗೆ ಬರೆದಿದ್ದೆ. ಈಗ ಸ್ವಲ್ಪ ಪಲಿತಾಂಶಗಳ ಬಗ್ಗೆ ಅದರ ಹಿಂದಿರುವ ಕಾರಣಗಳ ಬಗ್ಗೆ ನೋಡೋಣ:
ಮಾರ್ಚ್ 13, 2017
ಮಾರ್ಚ್ 8, 2017
ವೃದ್ದಾಪ್ಯ ವೇತನವೂ ಹನುಮಕ್ಕನ ಅಲೆದಾಟವೂ!
![]() |
ಚಿತ್ರಮೂಲ: youthkiawaaz |
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹುಲಿಹಳ್ಳಿಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದೊಳಗೆ ಹನುಮಕ್ಕ ಕಾಲಿಟ್ಟಾಗ ನಿಂಗಣ್ಣ ಅನ್ನೊ ಆರಡಿಯ ಅಟೆಂಡರ್ ಕಷ್ಟಪಟ್ಟು ಸೊಂಟ ಬಗ್ಗಿಸಿ ಕಸ ಹೊಡೆಯುತ್ತಿದ್ದ.
ಅಪ್ಪಾ ಸಾಮಿ, ಡಾಕುಟರು ಎಷ್ಟೊತ್ತಿಗೆ ಬರ್ತಾರೆ? ಅನ್ನೊ ದ್ವನಿ ಕೇಳಿಸಿದಾಕ್ಷಣ ಕೈಲಿದ್ದ ಪೊರಕೆಯನ್ನು ಮೂಲೆಗೆ ಬಿಸಾಕಿ ಯಾಕವ್ವಾ? ಅವರು ಬರೋದು ಹನ್ನೊಂದು ಗಂಟೆ ಮೇಲೇನೆ ಅನ್ನುತ್ತ ಖಾಲಿ ಹೊಡೆಯುತ್ತ ಬಿದ್ದಿದ್ದ ಆಸ್ಪತ್ರೆಯೊಳಗೆ ಯಾರೊ ಒಬ್ಬರು ಮಾತಿಗೆ ಸಿಕ್ಕಿದ ಖುಶಿಯಲ್ಲಿ ಮುಖವರಳಿಸಿ ಅಲ್ಲೆ ಇದ್ದ ಬೆಂಚಿನಲ್ಲಿ ಅವಳ ಜೊತೆ ಅವನೂ ಆಸೀನನಾದ. ಏನಿಲ್ಲ ಸಾಮಿ, ವಯಸಾದೋರಿಗೆ ಸರಕಾರದೋರು ಐನೂರು ರೂಪಾಯಿ ಕೊಡ್ತಾರಲ್ಲ ಅದಕ್ಕೆ ಡಾಕುಟರ ಸಯಿನ್ ಬೇಕಾಗಿತ್ತು ಅಂತ ಹನುಮಕ್ಕ ಹೇಳಲು ಎಲ್ಲ ಹೊಳೆದವನಂತೆ ಅಯ್ಯೋ ಅವ್ವ ಅದು ವೃದ್ದಾಪ್ಯವೇತನ ಅದನ್ನ ಮಾಡಿಕೊಡೋನು ವಿಲೇಜ್ ಅಕೌಂಟೆಂಟ್ ಅಂದ್ರೆ ಸೆಕ್ರೇಟರಿ. ಅವರು ಪಂಚಾಯಿತಿ ಆಪೀಸಲ್ಲಿ ಇರ್ತಾರೆ. ಅಲ್ಲಿಗೋಗೋದು ಬಿಟ್ಟು ಇಲ್ಲಿಗ್ಯಾಕೆ ಬಂದೆ ಅಂದ. ಅವನ ಮಾತಿಗೆ ತಬ್ಬಿಬ್ಬಾದ ಹನುಮಕ್ಕ ನಿಜಾನ? ಮತ್ತೆ ನಮ್ಮ ಪಕ್ಕದ ಮನೆ ಹುಡುಗ ಡಾಕುಟರ ಹತ್ರ ವಯಸಿನ ಬಗ್ಗೆ ಬರೆಸಿಕೊಂಡು ಬಾ ಅಂದನಲ್ಲ. ಹೂನವ್ವಾ, ನಿಂಗೆ ಅರವತ್ತು ವರ್ಷ ಆಗಿದೆ ಅಂತಷ್ಟೆ ಡಾಕ್ರ್ಟು ಬರಕೊಡೋದು ಮಿಕ್ಕಿದ್ದೆಲ್ಲ ಸೆಕ್ರೇಟರೀನೆ ಮಾಡಿಕೊಡೋದು. ಹೋಗಲಿ, ವಯಸ್ಸಿನ ಫಾರಂ ತಂದಿದಿಯಾ ಅಂತ ಕೇಳಿದ. ಪಾರಮ್ಮು ಕೋಳಿ ಎಲ್ಲ ನಂಗೆ ಗೊತ್ತಿಲ್ಲ ಅಂದ ಹನುಮಕ್ಕನ ನೋಡಿ ನಿಂಗಣ್ಣಂಗೆ ಅಯ್ಯೋ ಅನಿಸಿ, ಅವ್ವಾ ಇಲ್ಲಿಂದ ಬಸ್ಸ್ಟಾಂಡ್ ಹೋಗೋ ದಾರೀಲಿ ಒಂದು ಪೆಟ್ಟಿಗೆ ಅಂಗಡಿ ಐತಲ್ಲ ಅದೇ ಐಯ್ನೋರ್ದು ಅವರ ಹತ್ರ ವಯಸಿನ ಫಾರಂ ತಗೊಂಬಾ. ಬರೇ ಎಂಟಾಣೆಯಷ್ಟೆ! ಅಂದ.
ಮಾರ್ಚ್ 1, 2017
ಬೇಡಿಕೆ ಈಡೇರುವವರೆಗೆ ಧರಣಿ: ಚಲೋ ಗುಡಿಬಂಡೆ.
ಚಿಕ್ಕಬಳ್ಳಾಪುರದ ಗುಡಿಬಂಡೆ ಸರ್ಕಾರಿ ಪ್ರೌಡಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ದಲಿತ ಯುವಕ ಮುರಳಿ ಜನವರಿ 20 ರಂದು ಗುಡಿಬಂಡೆ ಕೆರೆಯ ಬಳಿ ಹೆಬ್ಬೆಟ್ಟಿನ ಗಾತ್ರದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪಕ್ಕದ ಕೊಂಬೆ ಮುರಿದಿದೆ.
ಈ ಘಟನೆಯ ಹಿನ್ನೆಲೆ ಎಂತಹವರನ್ನೂ ನಡುಗಿಸುತ್ತದೆ. ನಮ್ಮ ದೇಶದ ಜಾತಿ ಪದ್ದತಿ, ಶೈಕ್ಷಣಿಕ ಪದ್ಧತಿಯ ಕರಾಳ ಮುಖವನ್ನು ಮತ್ತೆ ನಮ್ಮ ಮುಂದಿಟ್ಟಿದೆ. ಮುರಳಿ ಅದೇ ಶಾಲಾವರಣದಲ್ಲಿರುವ 8 ನೇ ತರಗತಿಯ ಮೇಲ್ಜಾತಿ ಹೆಣ್ಣು ಮಗಳೊಂದಿಗೆ ಸ್ನೇಹದಿಂದಿದ್ದಾನೆ. ಇದನ್ನು ಅದೇ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಆ ಹುಡುಗಿಯ ಅಣ್ಣ ಸಾಯಿ ಗಗನ್ ಗೆ ಸಹಿಸಲಾಗಿಲ್ಲ. ತನ್ನ ತಂಗಿಯನ್ನು ಚುಡಾಯಿಸಿದ ಎಂಬ ನೆಪ ಒಡ್ಡಿ ದಿನಾಂಕ 18 ರಂದು ಶಾಲಾವರಣದಲ್ಲಿಯೇ ತನ್ನ ಸ್ನೇಹಿತರೊಂದಿಗೆ ಕೂಡಿ ಮುರಳಿಯನ್ನು ಥಳಿಸಿದ್ದಾನೆ. ಶಿಕ್ಷಕರು ಜಗಳ ಬಿಡಿಸಿ ಬುದ್ಧಿ ಹೇಳಿ ಕಳಿಸಿದ್ದಾರೆ. ಮುರಳಿ ಸಹಜವಾಗಿ ಮನೆಗೆ ಮರಳಿದ್ದಾನೆ. ಮಾರನೇ ದಿನ ಶಾಲೆಗೆ ಹೋದಾಗ ಮತ್ತೆ ಮುರಳಿಯನ್ನು ಸಾಯಿ ಗಗನ್ ಮತ್ತು ಸ್ನೇಹಿತರ ತಂಡ ಹಿಗ್ಗಾ ಮುಗ್ಗ ಥಳಿಸಿದೆ. ಅಂದೂ ಸಹ ಮುರಳಿ ಶಾಲೆ ಮುಗಿಸಿ ಮನೆಗೆ ಮರಳಿದ್ದಾನೆ. ದಿನಾಂಕ 20 ರಂದೂ ಸಹ ಎಂದಿನಂತೆ ಶಾಲೆಗೆ ಹೋಗಿರುವ ಮುರಳಿಯನ್ನು ಮತ್ತೆ ಸಾಯಿಗಗನ್ ತಂಡ ಶಾಲಾ ಆವರಣದೊಳಗೆ ಹಾಗೂ ಹೊರಗೆ ಥಳಿಸಿದ್ದಾರೆ. ಅಷ್ಟೆ ಅಲ್ಲ ಒಂದಷ್ಟು ಬೈಕುಗಳಲ್ಲಿ ಮುರಳಿಯನ್ನು ಹೊತ್ತೊಯ್ದಿದ್ದಾರೆ. ಇದನ್ನು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ದಸಂಸದ ಸಿ.ಜಿ.ಗಂಗಪ್ಪ ಹೇಳುತ್ತಾರೆ. ಹೀಗೆ ಮುರಳಿಯನ್ನು ಬೈಕಿನಲ್ಲಿ ಹೊತ್ತೊಯ್ದ ನಂತರ ಸಂಜೆ 3:00 ಗಂಟೆಗೆ ಸಮೀಪ ಮುರಳಿ ಶವವಾಗಿ ಪತ್ತೆಯಾಗಿದ್ದಾನೆ.
ಫೆಬ್ರ 27, 2017
ಡೈರಿ-ಸಿ.ಡಿ.ಇತ್ಯಾದಿಗಳು ಮತ್ತು ರಾಜಕೀಯ ಪಕ್ಷಗಳ ಪಾರದರ್ಶಕತೆಯೂ!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇಂಡಿಯಾದಂತಹ ಸಂಸದೀಯ ಪ್ರಜಾಪ್ರಭುತ್ವಕ್ಕೆ ರಾಜಕೀಯ ಪಕ್ಷಗಳೇ ಜೀವಾಳ. ಅದರಲ್ಲೂ ಬಹುಪಕ್ಷೀಯ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುಂದೆ ಸಾಗಲು ಸಿದ್ದಾಂತಗಳ ಮೂಲದಿಂದ ಹುಟ್ಟಿದ ಬಲಾಢ್ಯ ರಾಜಕೀಯ ಪಕ್ಷಗಳು ಅತ್ಯವಶ್ಯ. ಹಾಗೆ ಪಕ್ಷಗಳ ಸಂಖ್ಯಾದೃಷ್ಠಿಯಿಂದ ನೋಡಿದರೆ ನಾವು ಭಾರತೀಯರು ಶ್ರೀಮಂತರೇನೆ! ಯಾಕೆಂದರೆ ನಮ್ಮ ದೇಶದಲ್ಲಿ ಈಗ 7 ರಾಷ್ಟ್ರೀಯ ಪಕ್ಷಗಳು ಹಾಗು ಸುಮಾರು 48 ಮಾನ್ಯತೆ ಪಡೆಯಲ್ಪಟ್ಟ ಪ್ರಾದೇಶಿಕ ಪಕ್ಷಗಳು ಇವೆ, ಇನ್ನು ನೊಂದಾಯಿತವಾಗಿದ್ದರೂ ಮಾನ್ಯತೆ ಪಡೆಯದ ನೂರಕ್ಕೂ ಹೆಚ್ಚು ಪಕ್ಷಗಳಿವೆ. ಸಾವಿರಾರು ಜಾತಿ ಉಪಜಾತಿಗಳಿರುವನಮ್ಮಲ್ಲಿ ಮುಂದೊಂದು ದಿನ ಜಾತಿಗಳ ಸಂಖ್ಯೆಯನ್ನೂ ಮೀರಿ ಪಕ್ಷಗಳು ಸೃಷ್ಠಿಯಾದರೆ ಅಚ್ಚರಿ ಪಡಬೇಕಿಲ್ಲ. ಇವೆಲ್ಲ ಮಾತುಗಳನ್ನು ಈಗ ಹೇಳಲು ಕಾರಣ. ಕಳೆದೊಂದು ವಾರದಿಂದ ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಠಿಸಿರುವ ಕಾಂಗ್ರೆಸ್ ಪರಿಷದ್ ಸದಸ್ಯರೊಬ್ಬರ ಡೈರಿ ಪ್ರಕರಣ. ಆದಾಯ ತೆರಿಗೆ ಇಲಾಖೆಯವರು ವಶಪಡಿಸಿಕೊಂಡಿದ್ದಾರೆಂದು ಹೇಳಲಾಗುತ್ತಿರುವ ಈ ಡೈರಿಯಲ್ಲಿ ಕಾಂಗ್ರೆಸ್ಸಿನ ಸಚಿವರುಗಳಿಂದ ಹಣ ಸಂಗ್ರಹಿಸಿ ಪಕ್ಷದ ಹೈಕಮ್ಯಾಂಡಿಗೆ ದೇಣಿಗೆ ನೀಡಿದ್ದಾರೆಂಬ ವಿವರಗಳು ಅದರಲ್ಲಿವೆಯೆಂದು ಬಾಜಪದ ರಾಜ್ಯಾದ್ಯಕ್ಷರಾದ ಶ್ರೀ ಯಡಿಯೂರಪ್ಪನವರು ಆರೋಪಿಸಿದ ಬೆನ್ನಲ್ಲೆ ಆಂಗ್ಲಬಾಷೆಯ ವಾಹಿನಿಯೊಂದು ಸದರಿ ಡೈರಿಯದು ಎನ್ನಲಾದ ಕೆಲವು ಪುಟಗಳನ್ನು ಪ್ರಕಟಿಸಿದೆ. ಇದೀಗ ಇದು ಬಾರಿ ವಿವಾದಕ್ಕೆ ಕಾರಣವಾಗಿದ್ದು, ಆರೋಪ ಪ್ರತ್ಯಾರೋಪಗಳು ಎಗ್ಗಿರದೆ ನಡೆಯುತ್ತಿವೆ. ಈ ಡೈರಿಯ ಸತ್ಯಾಸತ್ಯತೆಯನ್ನಾಗಲಿ, ಅದರಲ್ಲಿರುವ ಹೆಸರು ಮೊತ್ತಗಳ ಬಗ್ಗೆ ನಾನು ಮಾತನಾಡಲು ಇಲ್ಲಿ ಇಚ್ಚಿಸುವುದಿಲ್ಲ. ನನ್ನ ಕುತೂಹಲ ಮತ್ತು ವಿಷಾದ ಇರುವುದು ಈ ರಾಷ್ಟ್ರೀಯ ಪಕ್ಷಗಳು ತಮ್ಮತಮ್ಮ ಹೈಕಮ್ಯಾಂಡಿಗೆ ಪಕ್ಷವನ್ನು ನಡೆಸಲು ಮತ್ತು ಇತರೆ ರಾಜ್ಯಗಳ ಚುನಾವಣೆಗಳನ್ನು ನಡೆಸಲು ಹಣ ನೀಡುತ್ತಲೇ ಬಂದಿರುವ ಕೆಟ್ಟ ಸಂಪ್ರದಾಯದ ಬಗ್ಗೆ ಮಾತ್ರ.
ಫೆಬ್ರ 24, 2017
ರಾಜಕೀಯ ಪಕ್ಷಗಳ ಮ್ಯಾನೇಜರುಗಳು!
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕಾಂಗ್ರೆಸ್ಸಿಗೆ ಬೇಕಾಗಿರುವುದು ಮ್ಯಾನೇಜರುಗಳು ಮಾತ್ರ, ನಾಯಕರುಗಳಲ್ಲ! ಮಾಜಿಮುಖ್ಯಮಂತ್ರಿಗಳಾದ ಶ್ರೀಎಸ್.ಎಂ.ಕೃಷ್ಣಾ ಎವರು ಹೇಳಿದ ಈ ಮಾತು ಕಾಂಗ್ರೆಸ್ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತದೆಯೊ ಬಿಡುತ್ತದೆಯೊ ಗೊತ್ತಿಲ್ಲ. ಆದರೆ ಜನರಲ್ ಆಗಿ ನೋಡಿದರೆ ಈ ಮಾತು ಬಹುತೇಕ ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ಯಾಕೆಂದರೆ ಇವತ್ತು ಒಂದು ರಾಜಕೀಯ ಪಕ್ಷವನ್ನು ನಡೆಸಲು ನಾಯಕನಾಗಲಿ, ಸಿದ್ದಾಂತವಾಗಲಿ ಬೇಕಾಗಿರುವಂತೆ ಕಾಣುತ್ತಿಲ್ಲ. ಯಾಕೆಂದರೆ ನಾಯಕನೊಬ್ಬನ ಮರ್ಜಿಯಿಂದ, ಸಿದ್ದಾಂತಗಳ ಹಂಗಿನಿಂದಲೇ ಒಂದು ರಾಜಕೀಯ ಪಕ್ಷವೊಂದನ್ನು ಮುನ್ನಡೆಸುವ ಕಾಲ ಬದಲಾಗಿದೆ. ಈಗೇನಿದ್ದರೂ ಪಕ್ಷದ ಕಛೇರಿ ಮತ್ತು ಅದರ ದೈನಂದಿನ ಖರ್ಚುವೆಚ್ಚಗಳನ್ನು ನೋಡಿಕೊಳ್ಳಬಲ್ಲ, ಜಾತಿಜಾತಿಗಳ ಸಮಾವೇಶವನ್ನು ಸಂಘಟಿಸಬಲ್ಲ, ಚುನಾವಣಾ ಸಮಯದಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಬಲ್ಲ, ಸ್ಪರ್ದಿಸಿದ ಅಭ್ಯರ್ಥಿಗಳ ಖರ್ಚುವೆಚ್ಚಗಳನ್ನು ಅಗತ್ಯವಿರುವ ಹಣವನ್ನು ಅಥವಾ ಪಕ್ಷದ ನಿದಿಯನ್ನು ಕ್ರೋಡೀಕರಿಸುವ ಮತ್ತು ವಿತರಿಸುವ ಸಾಮಥ್ರ್ಯವುಳ್ಳ ವ್ಯಕ್ತಿಯೊಬ್ಬ ಸಹಜವಾಗಿಯೇ ಪಕ್ಷದ ನಾಯಕನಾಗಿ ಬಿಡುವುದು ಇವತ್ತಿನ ರಾಜಕಾರಣದ ಶೈಲಿಯಾಗಿದೆ. ಇಂಡಿಯಾದ ರಾಜಕೀಯದಲ್ಲಿ ಇದಕ್ಕೆ ಹಲವು ಉದಾಹರಣೆಗಳನ್ನು ಕೊಡಬಹುದಾಗಿದೆ. ತೀರಾ ಇತ್ತೀಚಿನದೆ ಒಂದು ನಿದರ್ಶನವೆಂದರೆ, ತಮಿಳುನಾಡಿನ ರಾಜಕೀಯದಲ್ಲಿ ಶ್ರೀಮತಿ ಶಶಿಕಲಾ ನಟರಾಜನ್ ವಹಿಸಿದ ಪಾತ್ರ!
ಫೆಬ್ರ 19, 2017
ಫೆಬ್ರ 18, 2017
ಸಮೂಹ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ
ಡಾ. ಸುಶಿ ಕಾಡನಕುಪ್ಪೆ
ತಂತ್ರಜ್ನಾನ ವ್ಯಕ್ತಿಯ ಮೇಲೆ ಮಾಂತ್ರಿಕ ಹಿಡಿತ ಹೊಂದಿದೆ ಎಂಬುದಕ್ಕೆ ಸಾಮಾನ್ಯವಾದ ಉದಾಹರಣೆ ನಮ್ಮ ಸುತ್ತ ನಡೆಯುವ ಸಾರ್ವಜನಿಕ ಘಟನೆಯನ್ನು ತಮ್ಮ ಸ್ಮಾರ್ಟ್ ಫೋನ್ನ್ನಲ್ಲಿ ಸೆರೆ ಹಿಡಿಯುವುದು, ವಿಡಿಯೋ ತೆಗೆಯುವುದು ಮತ್ತು ತಕ್ಷಣವೇ ಅಂತರ್ಜಾಲಕ್ಕೆ ಹರಿಬಿಡುವುದು.
ಅಮೇರಿಕಾದಲ್ಲಿ ಒಬ್ಬ ವ್ಯಕ್ತಿ ಒಂದು ಬಹುಮಹಡಿ ಕಟ್ಟಡದಿಂದ ಆತ್ಮಹತ್ಯೆಗೆಂದು ಕೆಳಗೆ ಬೀಳಲು ಪ್ರಯತ್ನಿಸುತ್ತಿದ್ದ ಘಟನೆ ವರದಿಯಾಗಿದೆ. ವರದಿಯಲ್ಲಿ ವಿವರಿಸಿದ್ದಂತೆ, ಅಲ್ಲಿ ನೆರೆದ ಹಲವರು ತಮ್ಮ ಸ್ಮಾರ್ಟ್ ಫೋನ್ಗಳಲ್ಲಿ ಆತ ಬೀಳುವುದನ್ನು ವಿಡಿಯೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಕೆಲವರು ತಮ್ಮ ವಿಡಿಯೋಗೆ ಬೇಕಾದ ಘಟನೆ ಸೃಷ್ಟಿಸಲೋ ಎಂಬಂತೆ ಆತನನ್ನು ಕೆಳಗೆ ಬೀಳಲು ಹುರಿದುಂಬಿಸುತ್ತಿದ್ದರು. ಇಲ್ಲಿ ಯಾರೂ ಆತನ ಆತ್ಮಹತ್ಯೆಯ ಪ್ರಯತ್ನವನ್ನು ತಡೆಯುವ ಗೋಜಿಗೆ ಹೋಗಲಿಲ್ಲ ಎಂದು ವರದಿಯಾಗಿದೆ. ಇದನ್ನು ಗಮನಿಸಿದಾಗ ಮಾನವನ ಒಂದು ಹೊಸ ರೀತಿಯ ಅಪಾಯಕಾರಿ ನಡತೆ ರೂಪುಗೊಂಡಿರುವುದು ತಿಳಿಯುತ್ತದೆ. ಈ ರೀತಿಯ ಮಾನವನ ನಡತೆಯ ಬಗ್ಗೆ ಆತಂಕ ವ್ಯಕ್ತ ಪಡೆಸಿರುವ ಅಲ್ಲಿನ ಮನೋವಿಜ್ನಾನಿಗಳು ಸಮೂಹ ಮಾಧ್ಯಮಗಳು ಸಮಾಜವನ್ನು ರೂಪಿಸುತ್ತಿರುವ ಬಗೆಯನ್ನು ಚರ್ಚಿಸಿದ್ದಾರೆ.
ಬರಪರಿಸ್ಥಿತಿಯ ವೀಕ್ಷಣೆ ಎಂಬ ಕಪಟ ನಾಟಕವೂ ಬಡಪಾಯಿ ರೈತರೂ!
ಕು.ಸ.ಮಧುಸೂದನ ರಂಗೇನಹಳ್ಳಿ
ಅಂತೂ ಕೇಂದ್ರ ಸರಕಾರ ಬರಪರಿಹಾರಕ್ಕೆಂದು ಕರ್ನಾಟಕಕ್ಕೆ ನಾಲ್ಕು ನೂರಾ ಐವತ್ತು ಕೋಟಿ ರೂಪಾಯಿಗಳ ಮೊದಲ ಕಂತನ್ನು ಆರ್ಥಿಕ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿದೆ. ಕೇಂದ್ರ ಕಳುಹಿಸಿದ್ದ ಬರ ಅಧ್ಯಯನ ತಂಡ ಒಂದೆರಡು ದಿನ ಬರಪೀಡಿತ ಪ್ರದೇಶಗಳಲ್ಲಿ ಅಡ್ಡಾಡಿ ಸಲ್ಲಿಸಿದ ವರದಿಯ ಪರಿಣಾಮವಾಗಿ ಕೇಂದ್ರ ಸುಮಾರು ಒಂದು ಸಾವಿರದ ಏಳುನೂರು ಕೋಟಿ ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದ್ದು, ಈಗದರ ಮೊದಲ ಕಂತು ಬಿಡುಗಡೆಯಾಗಿದೆ. ವಿಪರ್ಯಾಸ ಎಂದರೆ ತನ್ನ ರಾಜ್ಯದ ಬರಪರಿಹಾರ ಕಾರ್ಯಗಳಿಗೆ ನಮ್ಮ ರಾಜ್ಯ ಕೇಂದ್ರವನ್ನು ಕೇಳಿದ್ದು ಸರಿ ಸುಮಾರು ನಾಲ್ಕು ಸಾವಿರ ಕೋಟಿರೂಪಾಯಿಗಳನ್ನು! ಇರಲಿ, ಬಿಡುಗಡೆಯಾದ ಪರಿಹಾರ ಮೊತ್ತದ ಬಗ್ಗೆ ನಾನಿಲ್ಲ ಮಾತನಾಡಲು ಇಚ್ಚಿಸುವುದಿಲ್ಲ. ನನ್ನ ತಕರಾರು ಇರುವುದು ಬರದ ಅಧ್ಯಯನಕ್ಕೆಂದು ರಾಜ್ಯಗಳಗೆ ಬೇಟಿ ನೀಡುವ ಕೇಂದ್ರದ ತಂಡಗಳು ಬರಪ್ರದೇಶಗಳ ವೀಕ್ಷಣೆ ಮಾಡುವ ರೀತಿಯ ಬಗ್ಗೆ.
ಫೆಬ್ರ 14, 2017
ಸಮಾಜದ ಕ್ರೌರ್ಯದ ಗುಂಡಿಯೊಳಗಿಳಿಸುವ 'ಅಮರಾವತಿ'
ಡಾ. ಅಶೋಕ್. ಕೆ. ಆರ್
ಕನ್ನಡದಲ್ಲಿ ಇಂತಹುದೊಂದು ಹಸಿ ಹಸಿ ಚಿತ್ರವನ್ನು ನೋಡಿ ಬಹಳ ದಿನಗಳಾಗಿತ್ತು. ನಿನ್ನೆ ರಾತ್ರಿ ಮೂಗಿಗಂಟಿದ ಮಲದ ಗುಂಡಿಯ ವಾಸನೆಯು ಇನ್ನೂ ಹೋಗಿಲ್ಲ ಎನ್ನುವುದಷ್ಟೇ ಸಾಕು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಲು. ಪೌರ ಕಾರ್ಮಿಕರ ಬಗ್ಗೆ ವರದಿಗಳು ಬರುತ್ತವೆ, ಡಾಕ್ಯುಮೆಂಟರಿಗಳೂ ಸಿಗುತ್ತವೆ, ಅವರ ಸುತ್ತಲೇ ಸುತ್ತುವ ಪೂರ್ಣ ಪ್ರಮಾಣದ ಚಿತ್ರವೊಂದು ಇಲ್ಲಿಯವರೆಗಂತೂ ಬಂದಂತಿಲ್ಲ. ಪೌರ ಕಾರ್ಮಿಕರ ಬದುಕಿನ ಸಂಗತಿಗಳನ್ನು ಕತೆಯಾಗಿಸಿ ಸಿನಿಮಾ ಮಾಡುವ ಧೈರ್ಯವನ್ನು ನಿರ್ದೇಶಕ ಗಿರಿರಾಜ್ ತೆಗೆದುಕೊಂಡಿರುವುದರಲ್ಲಿ ಹೆಚ್ಚಿನ ಅಚ್ಚರಿಯೇನಿಲ್ಲ. ನವಿಲಾದವರು ಎಂಬ ಯ್ಯೂಟ್ಯೂಬ್ ಸಿನಿಮಾ, ಜಟ್ಟ, ಮೈತ್ರಿ ಚಿತ್ರಗಳಲ್ಲೂ ಅವರು ವಿಭಿನ್ನ ಕತೆಯನ್ನೇ ಆಯ್ದುಕೊಂಡಿದ್ದರು. ಮುಖ್ಯವಾಹಿನಿಯ ಜನರು ನೋಡದ ಬದುಕನ್ನು, ಊಹಿಸದ ಜೀವನ ರೀತಿಯನ್ನು ತೆರೆಯ ಮೇಲೆ ನೇಯ್ದಿದ್ದರು. ಆ ಎಲ್ಲಾ ಸಿನಿಮಾಗಳಿಗಿಂತಲೂ ಕಷ್ಟಕರವಾದ ಕತೆಯನ್ನು ಈ ಬಾರಿ ಆಯ್ದುಕೊಂಡಿದ್ದಾರೆ, ಅದರಲ್ಲವರು ಸಂಪೂರ್ಣವಾಗಿ ಗೆದ್ದಿದ್ದಾರಾ?