ನವೆಂ 15, 2016

ಜನಪರ ಕೆಲಸಗಳ ಜೊತೆಯೇ ಶಕ್ತಿರಾಜಕಾರಣದಲ್ಲಿಯೂ ಯಶಸ್ವಿಯಾದ ನಾಯಕ - ಶ್ರೀ ದೇವರಾಜ್ ಅರಸ್

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಸಕ್ರಿಯ ರಾಜಕಾರಣಿಯೊಬ್ಬ ತಾನು ಮಾಡುವ ಜನಪರ ಕೆಲಸಗಳಿಗೆ ಚ್ಯುತಿ ಬಾರದಂತೆ ರಾಜಕಾರಣ ಮಾಡುವುದು ತೀರಾ ಅಪರೂಪ ಮತ್ತು ವಿಶೇಷ!. ಯಾಕೆಂದರೆ ಶಕ್ತಿರಾಜಕಾರಣದ ಕುತಂತ್ರಗಳಲ್ಲಿ ಮುಳುಗಿ ಹೋಗುವ ರಾಜಕೀಯ ನಾಯಕನೊಬ್ಬ ಜನಪರವಾಗಿ ಕೆಲಸ ಮಾಡಲಾಗದಷ್ಟು ಮಟ್ಟಿಗೆ ತನ್ನ ತಂತ್ರಗಾರಿಕೆಯಲ್ಲಿ ಮುಳುಗಿ ಹೋಗಿರುವುದನ್ನು ನಾವು ಇಂಡಿಯಾದ ಪ್ರಜಾಸತ್ತೆಯ ಇತಿಹಾಸದಲ್ಲಿ ಬಹಳಷ್ಟು ಉದಾಹರಣೆಗಳನ್ನು ಕಂಡಿದ್ದೇವೆ. ಹಾಗೆಯೇ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಭರದಲ್ಲಿ ರಾಜಕೀಯ ತಂತ್ರಗಾರಿಕೆಗಳಲ್ಲಿ ವಿಫಲರಾಗಿ ಹೋದ ಹಲವರನ್ನೂ ನಾವು ನೋಡಿರುವುದುಂಟು. ಇಂಡಿಯಾದ ಮಟ್ಟಿಗೆ ಜನಪರ ಕಾರ್ಯಗಳನ್ನೂ ಹಾಗು ಶಕ್ತಿ ರಾಜಕಾರಣವನ್ನೂ ಒಟ್ಟೊಟ್ಟಿಗೆ ಮಾಡಿಕೊಂಡು ಅದರಲ್ಲಿ ಗೆದ್ದವರ ಸಂಖ್ಯೆ ತೀರಾ ವಿರಳ.

ನವೆಂ 14, 2016

ದ್ವಂದ್ವದಲ್ಲಿರುವ ಜನತಾದಳದ ಮುಂದಿನ ನಡೆಗಳು?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರಿಗೆ ಅರ್ಥವಾಗುವ ಒಂದು ವಿಷಯವೆಂದರೆ: ಆಡಳಿತಾರೂಢ ಕಾಂಗ್ರೆಸ್ ವಿರೋಧಪಕ್ಷಗಳಿವೆಯೆಂಬುದನ್ನು ಮರೆತಂತೆ ತನ್ನ ಪಾಡಿಗೆ ತಾನು ಅಡರಿದ ಮಂಪರಿನಲ್ಲಿ ಆಡಳಿತ ನಡೆಸುತ್ತಿದ್ದರೆ (ಆಡಳಿತದ ವೈಖರಿಯ ಬಗ್ಗೆ ಬೇರೆಯದೇ ಆಗಿ ಬರೆಯಬೇಕಾಗುತ್ತದೆ), ಅಧಿಕೃತ ವಿರೋಧಪಕ್ಷವಾದ ಬಾಜಪ ವಸ್ತುನಿಷ್ಠವಾಗಿ ಆಡಳಿತದ ಲೋಪದೋಷಗಳ ಬಗ್ಗೆ ಸರಕಾರದ ಗಮನ ಸೆಳೆಯುವ ಹಾಗು ಜನಪರ ಆಡಳಿತದ ಬಗ್ಗೆ ಸರಕಾರದ ಕಣ್ಣು ತೆರೆಸುವ ಯಾವುದೇ ಕಾರ್ಯಕ್ರಮಗಳನ್ನೂ ಹಾಕಿಕೊಳ್ಳದೆ, ಕೇವಲ ಜನರನ್ನು ಬಾವನಾತ್ಮಕವಾಗಿ ಕೆರಳಿಸುವಂತಹ ಜನಪ್ರಿಯವಾಗಬಲ್ಲಂತ ವಿಷಯಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ತನ್ನ ರಾಜಕೀಯ ಮಾಡುತ್ತಿದೆ (ಇದನ್ನು ಸಹ ಪ್ರತ್ಯೇಕವಾಗಿ ಬರೆಯಬಹುದಾಗಿದೆ).

ನವೆಂ 12, 2016

ಜಾತಿ ಮತ್ತು ಧರ್ಮ ರಾಜಕಾರಣಗಳ ಸುಳಿಯಲ್ಲಿ ಉತ್ತರಪ್ರದೇಶದ ಚುನಾವಣೆಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಉತ್ತರ ಪ್ರದೇಶದ ರಾಜ್ಯವಿದಾನಸಭೆಗೆ 2017ರ ಪೂರ್ವಾರ್ದದಲ್ಲಿ ನಡೆಯಲಿರುವ ಚುನಾವಣೆಗಳಿಗಾಗಿ ಬಹುತೇಕ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ದತೆ ನಡೆಸುತ್ತಿದ್ದು,ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ವಿಷಯಗಳಿಗೆ ಪ್ರದಾನ್ಯತೆ ಕೊಡುತ್ತ ಚುನಾವಣೆಯ ಕಾವನ್ನು ಏರಿಸುತ್ತಿವೆ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಜನರ ಬಾವನಾತ್ಮಕ ವಿಷಯಗಳಿಗೇ ಹೆಚ್ಚು ಮಹತ್ವ ನೀಡುತ್ತ, ಜಾತಿ ಧರ್ಮಗಳ ನೆಲೆಯಲ್ಲಿಯೇ ಮತ ಪಡೆಯುವ ಹುನ್ನಾರ ನಡೆಸಿವೆ. ಉತ್ತರ ಪ್ರದೇಶದ ಮಟ್ಟಿಗೆ ಜಾತಿ ರಾಜಕಾರಣ ತೀರಾ ವಾಸ್ತವವಾಗಿದ್ದು, ಈಗಾಗಲೇ ಜಾತಿ ಸಮೀಕರಣಗಳ ಲೆಕ್ಕಾಚಾರಗಳು ಎಲ್ಲ ಪಕ್ಷಗಳ ಆಂತರೀಕ ವಲಯದಲ್ಲಿ ಮಹತ್ವ ಪಡೆಯುತ್ತಿವೆ.

ನವೆಂ 11, 2016

ದಲಿತಶಕ್ತಿಯ ವಿರುದ್ದ ಒಗ್ಗಟ್ಟಾಗುತ್ತಿರುವ ಉತ್ತರಪ್ರದೇಶದ ರಾಜಕೀಯ ಪಕ್ಷಗಳು.

ku sa madhusudhan
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಒಬ್ಬ ದಲಿತ ನಾಯಕಿ ಮಾಯಾವತಿಯವರನ್ನು ಮತ್ತು ದಲಿತರ ರಾಜಕೀಯ ದ್ವನಿಯಾದ ಬಹುಜನ ಪಕ್ಷವನ್ನು ಮುಗಿಸುವ ಒಂದು ಷಡ್ಯಂತ್ರ ಉತ್ತರ ಪ್ರದೇಶದಲ್ಲಿ ಸದ್ದಿರದೆ ನಡೆಯುತ್ತಿದೆ. ಇನ್ನೇನು ಮುಂದಿನ ವರ್ಷದ ಪೂರ್ವಾರ್ದದಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಬಹುಜನ ಪಕ್ಷವನ್ನು ಸೋಲಿಸುವ ಮೂಲಕ ದಲಿತರ ದನಿಯನ್ನು ಹತ್ತಿಕ್ಕುವ ರಾಜಕೀಯ ಚದುರಂಗದಾಟ ಈಗಾಗಲೇ ಶುರುವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದ ಮುಸ್ಲಿಂ ಸಮುದಾಯ ತದನಂತರ ನಡೆದ ಕೆಲವು ಕೋಮುಗಲಭೆಗಳಲ್ಲಿ ಸಮಾಜವಾದಿ ಪಕ್ಷ ತೆಗೆದುಕೊಂಡ ನಿರ್ದಾರಗಳಿಂದ ಅಸಮಾದಾನಗೊಂಡು ಅದರಿಂದ ದೂರ ಸರಿಯುತ್ತಿದೆಯೆಂಬ ಬಾವನೆ ಸಾರ್ವಜನಿಕರಲ್ಲಿ ಮೂಡಿತ್ತು. ಇದರ ಲಾಭ ಪಡೆಯಲು ಹೊರಟ ಬಹುಜನ ಪಕ್ಷ ಈಗಾಗಲೇ ತಾನು ಸಿದ್ದಪಡಿಸಿಕೊಂಡಿರುವ ದಲಿತ ಮತ್ತು ಬ್ರಾಹ್ಮಣ ಮತಬ್ಯಾಂಕಿನ ಜೊತೆಗೆ ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ನಿರ್ದರಿಸಿ ಪಶ್ಚಿಮ ಉತ್ತರಪ್ರದೇಶದ ಸುಮಾರು 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೇಟು ನೀಡಲು ನಿರ್ದರಿಸಿತು.

ಮೇಕಿಂಗ್ ಹಿಸ್ಟರಿ: ರಾಜನ ಉಗ್ರ ಪ್ರವಾಸ

saketh rajan
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
1830ರ ಡಿಸೆಂಬರ್ 14ರಿಂದು 1831ರ ಜನವರಿ 10ರವರೆಗೆ ಶತ್ರುಗಳು ರೈತರಲ್ಲಿ ಭೀತಿಯನ್ನುಟ್ಟಿಸಲು ಪ್ರಚಾರ ನಡೆಸಿದರು. ಈ ಭೀತಿಯ ಪ್ರಚಾರವನ್ನು ರಾಜನ ಪ್ರವಾಸದ ಭಾಗವಾಗಿ ನಡೆಸಲಾಯಿತು; ಮೈಸೂರು, ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳ ತೊಂದರೆಗೀಡಾದ ಪ್ರದೇಶಗಳಿಗೆ ರಾಜ ಪ್ರವಾಸ ನಡೆಸುತ್ತಿದ್ದ. 

ರಾಜನೊಂದಿಗೆ ಸಾವಿರ ಸೊವರ್ಗಳು, 200 ಮಂದಿ ಅಂಗರಕ್ಷಕರು ಮತ್ತು ಮೂರು ಬೆಟಾಲಿಯನ್ನಿನಷ್ಟು ಕಾಲಾಳು ಸೈನಿಕರಿದ್ದರು. ರೈತರನ್ನು ಸಂತೈಸುವುದು ಇದರ ಉದ್ದೇಶವಾಗಿತ್ತು, ಆದರೆ ವಾಸ್ತವದಲ್ಲಿ, ರೈತರು ಪ್ರತಿರೋಧಿಸುವ ಧೈರ್ಯವನ್ನೂ ಮಾಡಬಾರದೆಂಬ ನಿಟ್ಟಿನಲ್ಲಿ ನಡೆದ ಪ್ರಭುತ್ವದ ಶಕ್ತಿ ಪ್ರದರ್ಶನವಾಗಿತ್ತಿದು. 

ಉಪಲಬ್ಧತೆ

ಪ್ರವೀಣಕುಮಾರ್ ಗೋಣಿ 
ಎದೆಯ ಬಾಗಿಲ ತೆರೆಯದೆ 
ಬಂದು ಪವಡಿಸುವನೇ ಪರಮಾತ್ಮ ?
ಭೋಗದ ಬಲೆಯಲ್ಲಿ ಸಿಲುಕಿ 
ಕಾಣೆಯಾಗಿಹ ಮನಕೆ ತಾಕೀತೆ 
ಅವನ ಬರುವೆಯಾ ಪುಳಕ ?


ನವೆಂ 9, 2016

ಮಾಹಿತಿ ಹಕ್ಕು ಮತ್ತು ರಾಜಕೀಯ ಪಕ್ಷಗಳ ಜಾಣಮೌನ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇವತ್ತು ಮಾಹಿತಿ ಹಕ್ಕು ಕಾಯಿದೆ ದೇಶದಾದ್ಯಂತ ಸಂಚಲನ ಮೂಡಿಸಿದೆ. ಒಂದು ದಶಕದ ಹಿಂದೆ ಶಾಸನವಾಗಿ ಜಾರಿಗೆ ಬಂದಮಾಹಿತಿ ಹಕ್ಕು ಕಾಯಿದೆಯಡಿ ಕೇಂದ್ರ ಹಾಗು ಹಲವು ರಾಜ್ಯ ಸರಕಾರಗಳ ಭ್ರಷ್ಟತೆಯ ಹಲವು ಪ್ರಕರಣಗಳು ಬಯಲಾಗಿವೆ,ಆಗುತ್ತಿವೆ.ಅದರಲ್ಲೂ ಪತ್ರಕರ್ತರುಗಳ ಹಾಗು ನಮ್ಮವರೇ ಆದ ಭ್ರಷ್ಟಾಚಾರದ ವಿರುದ್ದ ಸತತವಾಗಿ ಹೋರಾಡುತ್ತಿರುವ ಶ್ರೀಯುತ ಹಿರೇಮಠರಂತವರ ಕೈಲಿ ಸಿಕ್ಕ ಈ ಆಯುಧ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.. ದೇಶದಾದ್ಯಂತ ಇರುವ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾಯಿದೆಯನ್ನು ಬಳಸಿ ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾಹಿತಿ ಹಕ್ಕು ಹೋರಾಟಗಾರರೆಂಬ ಹೊಸದೊಂದು ಸಮುದಾಯವೇ ಸೃಷ್ಠಿಯಾಗಿದೆ. ಯಾಕಾದರೂ ಈ ಕಾಯಿದೆಯನ್ನು ಜಾರಿಗೆ ತಂದೆವೋ ಎಂದು ರಾಜಕಾರಣಿಗಳು ಇವತ್ತು ಪರಿತಪಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಇದರ ಜೊತೆಗೆ ಕೆಲವು ಅಡ್ಡ ಪರಿಣಾಮಗಳೂ ಈ ಕಾಯಿದೆಯಿಂದಾಗಿವೆ. ಸಮಾಜಸೇವಕರ ಮುಖವಾಡ ಹಾಕಿಕೊಂಡ ಕೆಲವರು ಈ ಕಾಯ್ದೆಯನ್ನು ಬಳಸಿಕೊಂಡು ಪಡೆದ ಅಧಿಕೃತ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಸರಕಾರದ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತ ದುಡ್ಡು ಮಾಡುವ ದಂದೆಯೊಂದನ್ನು ಸಹ ಶುರು ಮಾಡಿರುವುದು ಕೆಲವೆಡೆ ಕಂಡು ಬರುತ್ತಿದೆ. ಇಂತಹ ಕೆಲವು ದೌರ್ಬಲ್ಯಗಳ ಹೊರತಾಗಿಯೂ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕಾಯಿದೆ ಸ್ವಲ್ಪ ಮಟ್ಟಿಗಾದರು ಧನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.

ನವೆಂ 8, 2016

ಮೊದಲು ಕವಿತೆ ಹೀಗಿರಲಿಲ್ಲ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಈ ಮೊದಲು ಕವಿತೆ ಹೀಗಿರಲಿಲ್ಲ
ಕಾಡಂಚಲ್ಲಿ ದನಕರುಗಳ ಮೇಯಿಸುತ್ತಿದ್ದ ಹರಯದ ಹುಡುಗ ಹುಡುಗಿಯರ ಕೊರಳಲ್ಲಿ ಹುಟ್ಟಿ
ಊರೊಳಗಿನ
ರಾಗಿ ಬೀಸುವ ಹೆಂಗಸರ ಗಂಟಲೊಳಗೆ
ಹರಯದ ಹುಡುಗಿಯರ ಹೊಸಗೆಯ ಆರತಿಯೊಳಗೆ
ಜೋಳಿಗೆ ಹಾಕಿ ಕೇರಿಗಳ ತಿರುಗುತ್ತಿದ್ದಅಲೆಮಾರಿ ಕೊರಳುಗಳೊಳಗೆ
ಹಾಡುಗಳಾಗಿ ಬೆಳೆಯುತ್ತ ಹೋಯಿತು.

ನವೆಂ 6, 2016

ಬಾಲ್ಯವೆಂದರೆ…..!

ಕು.ಸ.ಮಧುಸೂದನ್
ಬಾಲ್ಯದ ಬಗ್ಗೆ ಬಹಳ ಜನ
ರೊಮ್ಯಾಂಟಿಕ್
ಆಗಿ ಮಾತಾಡುತ್ತಾರೆ
ನನ್ನ ಕೈಲಿ ಆಗೋದಿಲ್ಲ.

ಬಾಲ್ಯವನ್ನು ನೆನಪಿಸಿಕೊಳ್ಳುವುದೆಂದರೆ
ನನಗೆ
ಹಳೆ ಗಾಯದ ಕಲೆಗಳನ್ನು
ಅದರ ನೋವನ್ನು 
ನೆಕ್ಕಿದಂತಾಗುತ್ತದೆ.

ನವೆಂ 5, 2016

ನೀನು ಮಾತ್ರ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನೀನೊಂದು ಬರೀ ರಕ್ತಮಾಂಸದ
ಏರುಯೌವನದ ಜೀವಂತ ಹೆಣ್ಣು 
ಮಾತ್ರವಾಗಿದ್ದರೆ ಇಷ್ಟೊಂದು ಪ್ರೀತಿಸುತ್ತಿರಲಿಲ್ಲ ನಾನು!

ನನ್ನಗಾಢ ವಿಷಾದದ ಬಟ್ಟಲೊಳಗಿನ ಮಧು ನೀನು
ನನ್ನ ಒಂಟಿತನದ ನಟ್ಟಿರುಳುಗಳ ಕನಸು ನೀನು
ನನ್ನ ಅನಾಥಅಲೆಮಾರಿ ಹಗಲುಗಳ ಹುಡುಕಾಟ ನೀನು
ನಾನು ಕಳೆದುಕೊಂಡ ಎಲ್ಲವನೂ
ಮೊಗೆಮೊಗೆದು ಕೊಡಬಲ್ಲ 
ಸಾವಿರದ ನೋವಿರದ ದೇವತೆ ನೀನು.