Dec 1, 2019

ಒಂದು ಬೊಗಸೆ ಪ್ರೀತಿ - 42

ಡಾ. ಅಶೋಕ್.‌ ಕೆ. ಆರ್.‌
ತೋರಿಸ್ಕೊಂಡು ಮಾತ್ರೆ ನುಂಗಲಾರಂಭಿಸಿದ ಮೇಲೆ ವಾಂತಿ ಹೆಚ್ಚು ಕಡಿಮೆ ನಿಂತೇ ಹೋಯಿತು ಅನ್ನುವಷ್ಟು ಕಡಿಮೆಯಾಯಿತು. ಊಟ ಇನ್ನೂ ಸರಿ ಸೇರುತ್ತಿರಲಿಲ್ಲ, ಆದರೂ ಮುಂಚಿಗಿಂತ ವಾಸಿ. ಸಂಜೆ ಮನೆಗೆ ಬಂದವಳೇ ಸಾಗರನಿಗೆ ಫೋನ್‌ ಮಾಡಿದೆ. 

ʼಎಷ್ಟೊತ್ಗೋ ಬರ್ತಿ ನಾಳೆʼ ನಾಳೆ ಹುಣಸೂರು ರಸ್ತೆಯಲ್ಲಿರೋ ಸೈಲೆಂಟ್‌ ಶೋರ್ಸ್‌ನಲ್ಲಿ ಗೆಟ್‌ ಟುಗೆದರ್ರು. ಎಪ್ಪತ್ತೆಂಭತ್ತು ಜನ ಬರುವವರಿದ್ದರು. ಮೈಸೂರಲ್ಲಿರುವವರು ಸ್ವಲ್ಪ ಚಟುವಟಿಕೆಯಿಂದ ತೊಡಗಿಸಿಕೊಳ್ಳಬೇಕು ಎಂದಿದ್ದರು. ಈ ಸಲ ಬಿಟ್ಟು ಬಿಡ್ರಪ್ಪ ನನ್ನ, ಹುಷಾರಿಲ್ಲ. ಮುಂದಿನ ಸಲ ಪೂರ್ತಿ ನಾನೇ ನೋಡ್ಕೋತೀನಿ ಬೇಕಿದ್ದರೆ ಎಂದು ಅದೂ ಇದೂ ಜವಾಬ್ದಾರಿ ಒಪ್ಪಿಸಲು ಫೋನಾಯಿಸಿದ್ದ ಗೆಳೆಯರಿಗೆ ತಿಳಿಸಿದ್ದ. 

“ನೀ ಎಷ್ಟೊತ್ತಿಗೆ ಬರ್ತಿ ಅಂತೀಯೋ ಅಷ್ಟೊತ್ತಿಗೆ ಬರ್ತೀನಿ” 

ʼನಾ ಏನ್‌ ಹೇಳೋದು. ಹನ್ನೊಂದರಷ್ಟೊತ್ತಿಗೆ ರೆಸಾರ್ಟಿಗೆ ಬರಬೇಕಂತ ಗ್ರೂಪಲ್ಲಿ ಹಾಕಿದ್ದಾರಲ್ಲ. ಅಷ್ಟೊತ್ತಿಗೆ ಬಾ ರೆಸಾರ್ಟಿಗೆʼ ನಗುತ್ತಾ ಹೇಳಿದೆ. 

“ಹೇ ಹೋಗೇ ಗೂಬೆ. ಎಷ್ಟೊತ್ತಿಗೆ ಸಿಗ್ತಿ ಹೇಳು” 

ʼನಾ ರಜೆ ಹಾಕಿದ್ದೀನಿ. ಬೆಳಿಗ್ಗೆ ಮನೆಗೇ ಬಾ. ಇಲ್ಲೇ ತಿಂಡಿ ತಿನ್ಕೊಂಡು ಅದೂ ಇದೂ ಮಾಡ್ಕಂಡು ಜೊತೇಲೇ ಹೋದರಾಯಿತುʼ 

“ಬರ್ತೀನಿ ಮನೆಗೆ ತಿಂಡಿಗೆ. ಜೊತೇಲೆಲ್ಲ ಬರೋಕಾಗಲ್ಲಪ್ಪ, ನನ್‌ ಫ್ರೆಂಡ್ಸು ಕಾಯ್ತಿರ್ತಾರೆ. ಅವರ ಜೊತೆಗೆ ಒಂದಷ್ಟು ಹರಟೆ ಕೊಚ್ಕಂಡು ಹನ್ನೆರಡರಷ್ಟೊತ್ತಿಗೆ ಬರ್ತೀವಿ ರೆಸಾರ್ಟಿಗೆ” 

ʼಓ. ಹಂಗೆ. ಸರಿ ಬಾ ಎಂಟೂವರೆ ಒಂಭತ್ತರಷ್ಟೊತ್ತಿಗೆʼ 

“ರಾಜೀವ್‌ ಇರ್ತಾರಾ?"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ʼಇಲ್ವೋ. ಅವರು ಏಳೂವರೆಯಷ್ಟೊತ್ತಿಗೆಲ್ಲ ಹೋಗಿಬಿಡ್ತಾರೆʼ 

“ಅಯ್ಯೋ. ನಂಗ್‌ ಅವರನ್ನೂ ಭೇಟಿಯಾಗಬೇಕಿತ್ತಲ್ಲೇ” 

ʼಅವರೂ ಇದ್ರೆ ನಿಂಗ್‌ ಅದೂ ಇದೂ ಎಲ್ಲಾ ಸಿಗಲ್ವಲ್ಲʼ 

“ಥೂ. ಸದಾಶಿವನಿಗೆ ಅದೇ ಜ್ಞಾನವಂತೆ. ಇಲ್ವೇ ನಂಗ್‌ ನಿಜಕ್ಕೂ ಅವರನ್ನು ಭೇಟಿಯಾಗಬೇಕು ಅಂತಿದೆ” 

ʼಸರಿ ಹಂಗಾದ್ರೆ. ಹೇಗಿದ್ರೂ ನಮ್‌ ಫಂಕ್ಷನ್‌ ಮುಗಿಯೋದು ಐದೂವರೆ ಆರಾಗ್ತದೆ. ಸಂಜೆ ಕಾಫಿ ಕುಡ್ಕಂಡು ಹೊರಡೋದು ಅಂತ ಹಾಕಿದ್ರಲ್ಲ ಗ್ರೂಪಲ್ಲಿ. ಅಷ್ಟೊತ್ತಿಗೆ ಇವರೂ ಬಂದಿರ್ತಾರೆ. ಬಂದು ಹೋದರಾಯಿತಲ್ಲʼ 

“ಹು. ಅದೇ ಸರಿ. ಓಕೆ ಹಂಗಾದ್ರೆ ನಾಳೆ ಸಿಕ್ತೀನಿ” 

ಇವನೆಂತವನಿವನು, ಇಂತಹ ಒಂದು ಅಕ್ರಮ ಅನೈತಿಕ ಅಂತ ಸಮಾಜ ಕರೆಯೋ ಸಂಬಂಧದಲ್ಲಿ ನಿನ್ನ ಗಂಡನ್ನ ಭೇಟಿಯಾಗ್ಲೇಬೇಕು ಅಂತ ಇವನು ಬಲವಂತ ಮಾಡ್ತಾನಲ್ಲ ಅಂತ ನಗು ಬಂತು. ನಮ್ಮಿಬ್ಬರ ಸಂಬಂಧ ಮುಚ್ಚಿದ ಬಾಗಿಲು ಕಿಟಕಿಗಳ ಹಿಂದೆಯೇ ಮುಗಿದುಹೋಗಬಾರದು ಕಣೇ ಅಂತ ಇತ್ತೀಚೆಗೆ ಸುಮಾರು ಸಲ ಹೇಳಿದ್ದ. ನಮ್ಮಿಬ್ಬರ ಕುಟುಂಬ, ಅಂದರೆ ನಾ ಮದುವೆಯಾದ ನಂತರ ನಮ್ಮಿಬ್ಬರ ಕುಟುಂಬವೂ ಸ್ನೇಹದಿಂದಿರಬೇಕು ಅನ್ನುತ್ತಿದ್ದ. ನಮ್ಮಿಬ್ಬರ ಮಧ್ಯೆ ಸೆಕ್ಸ್‌ ಆಗದೇ ಹೋಗಿದ್ದರೆ ಖಂಡಿತವಾಗಿ ಫ್ಯಾಮಿಲಿ ಫ್ರೆಂಡ್ಸ್‌ ಆಗಬಹುದಿತ್ತು ಅಂತ ಹಲುಬುತ್ತಿದ್ದ. ಬಿಡೋ, ನಿಂಗಿಷ್ಟವಿಲ್ಲ ಅಂದರೆ ಇನ್ಮುಂದೆ ಮಾಡೋದ್‌ ಬೇಡ ಅಂದ್ರೆ ಹಂಗಲ್ವೇ ಅಂತ ರಾಗ ಎಳೆಯುತ್ತಿದ್ದ. ನಮ್ಮಿಬ್ಬರ ಕುಟುಂಬದ ಮಧ್ಯೆ ಸ್ನೇಹ ಬೆಳಯಬಹುದಾ? ಅದು ಸಾಧ್ಯವಾಗುವ ಕೆಲಸವಾ ಅನ್ನುವ ಅನುಮಾನ ನನ್ನಲ್ಲಿದ್ದೇ ಇತ್ತಾದರೂ ಅವನ ಬಯಕೆ ನೆರವೇರುವುದು ನನಗೂ ಖುಷಿಯ ಸಂಗತಿಯೇ ಅಲ್ಲವಾ ಅನ್ನಿಸಿತ್ತು. ಬರ್ತಾನಲ್ಲ ನಾಳೆ ಅದೇನ್‌ ಸ್ನೇಹ ಬೆಳೆಸ್ಕೋತಾನೋ ಮೂಡಿ ರಾಜೀವನ ಜೊತೆಗೆ ಎಂದುಕೊಳ್ಳುತ್ತಾ ನಾಳೆಗೆ ಯಾವ ಬಟ್ಟೆ ಧರಿಸಲಿ ಎಂದು ಬೀರು ತೆರೆದವಳಿಗೆ ಕಂಡಿದ್ದು ಕಪ್ಪು ಸೀರೆ. ನಂಗೆ ತುಂಬಾ ಇಷ್ಟವಾಗಿ ತೆಗೆದುಕೊಂಡಿದ್ದ ಫ್ಯಾನ್ಸಿ ಸೀರೆಯದು. ಅವತ್ಯಾವತ್ತೋ ಚಾಮುಂಡಿ ಬೆಟ್ಟಕ್ಕೆ ಅಪ್ಪ ಅಮ್ಮ ತಮ್ಮನೊಂದಿಗೆ ಹೊರಡುವಾಗ ಈ ಸೀರೆ ಧರಿಸಿ ಹೋಗಿದ್ದೆ. ದೇವಸ್ಥಾನಕ್ಕೋಗಬೇಕಾದರೆ ಕಪ್ಪು ಬಟ್ಟೆ ಧರಿಸ್ತಾರ….ಶಾಂತಂ ಪಾಪಂ ಅಂತೇಳಿ ಅಮ್ಮ ಬಟ್ಟೆ ಬದಲಿಸುವಂತೆ ಬಲವಂತಿಸಿದ್ದರು. ʼನಿಮ್ಮ ಲೆಕ್ಕಕ್ಕೆ ಕಪ್ಪಗಿರೋ ಮನುಷ್ಯರೂ ದೇವಸ್ಥಾನಕ್ಕೆ ಕಾಲಿಡಬಾರದಾʼ ಎಂದು ನಗಾಡುತ್ತಾ ಹಳದಿ ಬಣ್ಣದ ಚೂಡಿ ತೊಟ್ಟಿಕೊಂಡಿದ್ದೆ. ಅದಾದ ಮೇಲೆ ಈ ಸೀರೆಯನ್ನು ಧರಿಸಿಯೇ ಇರಲಿಲ್ಲ. ಕಪ್ಪು ಸೀರೆಯಲ್ಲಿ ಚೆಂದ ಕಾಣ್ತಿ ನೀನು, ಹಾಕೋದೇ ಇಲ್ವಲ್ಲ ಯಾಕೆ ಅಂತ ರಾಜೀವ ಒಂದೆರಡು ಸಲ ಕೇಳಿದ್ದರು. ಇದನ್ನೇ ಧರಿಸುವ ನಾಳೆ. 

ಹೇಳಿದಂತೆ ಸಾಗರ ಒಂಭತ್ತರಷ್ಟೊತ್ತಿಗೆ ಮನೆ ಹತ್ತಿರ ಬಂದವನು ಹೊರಗಿನಿಂದಲೇ ಫೋನು ಮಾಡಿ “ಹೊರಗೆ ಬಾ ಏನೋ ತೋರಿಸಬೇಕು ನಿನಗೆ” ಎಂದ. ಹೊರಗೆ ಹೋದರೆ ಹೊಚ್ಚ ಹೊಸ ಕಾರು! 

ʼಅಯ್ಯೋ ನಿನ್ನ ಹೇಳಲೇ ಇಲ್ಲವಲ್ಲೋ. ಯಾವಾಗ ತಗೊಂಡೆʼ 

“ಒಂದ್‌ ವಾರವಾಯ್ತೆ ಬಂದು. ಹೆಂಗಿದ್ರು ಈ ವಾರ ಬರ್ತಿದ್ನಲ್ಲ, ನಿನಗೆ ಸರ್ಪೈಸ್‌ ಕೊಡುವ ಅಂತ ಸುಮ್ಮನಿದ್ದೆ" ಕಾರೊಳಗೆ ಕುಳಿತು ನೋಡಿ, ಹಂಗೆ ಒಂದ್‌ ರೌಂಡ್‌ ಹಾಕಿ ಬಂದು ಮನೆ ಸೇರಿದೊ. ಬಾಗಿಲಿನ ಚಿಲಕವಾಕಿದ ಸಾಗರ ಅಡುಗೆಮನೆಯಲ್ಲಿದ್ದ ನನ್ನನ್ನು ಕೂಗಿ ಕರೆದ. ʼಇರೋ ತಿಂಡಿ ತರ್ತೀನಿʼ ಎಂದವಳಿಗೆ. “ನಿನ್‌ ತಿಂಡಿ ಮನೆ ಹಾಳಾಯ್ತು. ಮೊದಲು ಬಾ ಇಲ್ಲಿ” ಎಂದ. ಇನ್ನೇನೋ ಸರ್ಪೈಸ್‌ ಇಟ್ಟಿರ್ತಾನೆ ಅಂದುಕೊಂಡು ಹೊರಬಂದೆ. ಹತ್ತಿರ ಬಂದು ಕೈಹಿಡಿದುಕೊಂಡ. ಮೊಣಕಾಲೂರಿ ಕುಳಿತು ಗರ್ಭದ ಜಾಗಕ್ಕೊಂದು ಸುದೀರ್ಘ ಮುತ್ತು ನೀಡಿದ. ನಿಧಾನಕ್ಕೆ ತಲೆ ಮೇಲಕ್ಕೆತ್ತಿ “ಕಂಗ್ರಾಟ್ಸ್‌ ಚಿನ್ನಿ" ಎಂದವನ ದನಿಯಲ್ಲಿದ್ದ ಖುಷಿ ಸ್ವತಃ ಆತನೇ ಅಪ್ಪನಾಗ್ತಿದ್ದಾನೇನೋ ಅನ್ನುವಷ್ಟಿತ್ತು. ಮಾತು ಹೊರಡಲಿಲ್ಲ, ಕಣ್ಣಲ್ಲೆರಡು ಹನಿ ಚುಮುಕಿತು. “ಅಳಬಾರದೇ ಈ ಹೊತ್ತಲ್ಲಿ. ಮಗೂಗ್‌ ಏನಾದ್ರೂ ಆದ್ರೆ” ಎಂದು ಕಣ್ಣು ಮಿಟುಕಿಸಿದ. 

ʼನಾ ಪ್ರೆಗ್ನೆಂಟ್‌ ಆದಾಗಿಂದ ನೋಡ್ತಿದ್ದೀನಿ. ನನಗಿಂತ ನಿನಗೆ ಮಗೂನೇ ಹೆಚ್ಚು ಪ್ರಿಯವಾಗೋಗಿದೆʼ 

“ಮತ್ತೆ. ಸದ್ಯಕ್ಕೆ ಮಗೂನೇ ಇಂಪಾರ್ಟೆಂಟು” ಎಂದವನ ತಲೆಗೊಂದು ಮೊಟಕಿ ಅಡುಗೆಮನೆಗೆ ಬಂದು ಎರಡು ತಟ್ಟೆಗೆ ಚಿತ್ರಾನ್ನ ಹಾಕಿಕೊಂಡು ಬಂದೆ. ತಿಂಡಿ ತಿಂದು ಮುಗಿಸಿ ಇಬ್ಬರೂ ರೂಮಿಗೋಗಿ ಅಡ್ಡಾದೆವು. ಐದು ನಿಮಿಷದ ಮಾತುಕತೆಯ ನಂತರವೂ ಆತ ನನ್ನ ಬಟ್ಟೆ ತೆಗೆಯಲು ಆತುರಸಿದೇ ಹೋದ, ʼಯಾಕೋ ಏನೂ ಬೇಡ್ವಾʼ ಎಂದೆ. 

“ಹೇ. ಈಗ ಅದೆಲ್ಲ ಏನು ಬೇಡ” ಅಂದ. 

ʼಯಾಕೋ? ʼ 

‌ “ಮಗೂಗ್ ಏನಾದ್ರೂ ಹೆಚ್ಚು ಕಡಿಮೆಯಾದ್ರೆ” 

ʼಅಯ್ಯೋ ಗೂಬೆ. ಮಗೂಗ್‌ ಏನೋ ಆಗುತ್ತೆ. ಏನಷ್ಟುದ್ದ ಇರೋಹಂಗ್‌ ಹೇಳ್ತಿʼ 

“ಅಂದ್ರೂ ಬೇಡ್ವೇ. ನನಗ್‌ ಮನಸ್ಸಾಗೋದಿಲ್ಲ" 

ʼನನ್‌ ಮುದ್ದುʼ ಎನ್ನುತ್ತಾ ಅವನ ಕೆನ್ನೆಗೊಂದು ಮುತ್ತು ಕೊಟ್ಟೆ. 

“ಸೆಕ್ಸ್‌ ಬೇಡ ಅಂದೆ ರೋಮ್ಯಾನ್ಸ್‌ ಬೇಡ ಅಂತೇನೂ ಹೇಳಲಿಲ್ಲಪ್ಪ" ಎಂದವನೇ ಧರಿಸಿದ್ದ ಚೂಡಿಯ ಮೇಲಿಂದಲೇ ಒಳಗೆ ಕೈಹಾಕಿ ಮೊಲೆಗಳನ್ನು ನೋಯುವಂತೆ ಅಮುಕಿದ. ʼಮೆತ್ಗೋʼ ಎಂದವಳ ದನಿಯಲ್ಲಿ ಬೆತ್ತಲಾಗುವ ಚಡಪಡಿಕೆಯಿತ್ತು. ಬೆತ್ತಲಾಗಿ ದೇಹ ದೇಹದೊಡನೆ ಮಾತನಾಡಲು ಅನುವು ಮಾಡಿಕೊಟ್ಟು ನಾವು ಮೌನಕ್ಕೆ ಶರಣಾದೆವು. ಒಂದಷ್ಟು ಸಮಯದ ಬಳಿಕ ನಿಮಿಷದ ಕಾಲ ಮುಖಮೈಥುನ ಮಾಡಿದೆ. ಇದ್ದಕ್ಕಿದ್ದಂತೆ ಸಾಗರನಿಗೆ ಜೊತೆಯಾಗಿ ಸ್ನಾನ ಮಾಡುವ ಬಯಕೆಯಾಯಿತು. ಇಬ್ಬರೂ ಬೆತ್ತಲೆಯಾಗೇ ಬಚ್ಚಲುಮನೆ ಸೇರಿದೆವು. ಒಬ್ಬರೊಬ್ಬರ ದೇಹವನ್ನು ಅರಿಯುತ್ತಾ ಸೋಪು ಹಚ್ಚಿಕೊಳ್ಳುವಾಗ…. “ಧರಣಿ……. ಸೆಕ್ಸ್‌ ಏನೋ ಬೇಡ.… ಆದರೆ ಇದರ ಗಡಸುತನ ಕಡಿಮೆ ಮಾಡೇ…...ಹಿಂಗೇ ಬರೋಕಾಗ್ತದಾ ಗೆಟ್‌ ಟುಗೆದರ್‌ಗೆ” ಎಂದು ನಗಾಡಿದ. 

ಒಂದಷ್ಟು ಹೆಚ್ಚೇ ಸೋಪನ್ನು ಹಚ್ಚಿ ಹಸ್ತಮೈಥುನ ಮಾಡಿದೆ. ಎರಡು ನಿಮಿಷಕ್ಕೆ ಮೆತ್ತಗಾದ. ʼಸರೀನಾ ಬಾಸ್‌ʼ ಎಂದು ನಕ್ಕು ಸ್ನಾನ ಮುಗಿಸಿದೊ. 

ಮೈಒರೆಸಿಕೊಂಡು ಚೂಡಿದಾರ್‌ ಹಾಕಿಕೊಳ್ಳುವಾಗ “ಏನ್‌ ಬಟ್ಟೆ ಹಾಕೊಂಡ್‌ ಬರ್ತೀಯೇ ಫಂಕ್ಷನ್‌ಗೆ” ಎಂದು ಕೇಳಿದ. 

ʼಏನೋ ಹಾಕೊಂಡ್‌ ಬರ್ತೀನಪ್ಪ. ಇಲ್ಲೇ ಹೇಳೋಕಾಗ್ತದಾ…. ಬೆಳಿಗ್ಗೆಯಿಂದ ನೀ ಸರ್ಪೈಸ್‌ ಮೇಲ್‌ ಸರ್ಪೈಸ್‌ ಕೊಟ್ಟಿದ್ದೀಯ. ಮಧ್ಯಾಹ್ನ ನಾ ಸರ್ಪೈಸ್‌ ಕೊಡ್ತೀನಿʼ 

“ಆ…ಆ…. ಸರಿ ಸರಿ. ಅದೆಂಗ್‌ ಬರ್ತೀಯೋ ನೋಡ್ತೀನ್‌ ಬಿಡು. ಸರೀನೆ. ನಾನೂ ಹೊರಡ್ತೀನಿ. ಫ್ರೆಂಡ್ಸ್‌ ಹತ್ರ ಹೋಗಿ ಅಲ್ಲಿಗೇ ಬರ್ತೀನಿ ಸೀದಾ. ಸಂಜೆ ಸಿಗ್ತಾರಾ ರಾಜೀವು” 

ʼಹುನೋ. ಸಿಕ್ತಾರೆ. ಹೇಳಿದ್ದೀನಿ ಹಿಂಗೆ ನನ್ನ ಹಳೆ ಹೊಸ ಫ್ರೆಂಡು ಸಾಗರ ಮನೆಗೆ ಬರ್ತಾನೆ ಅಂತ. ಬೇಗ ಬಂದಿರ್ತೀನಿ ನಾನೂನು ಅಂತ ಹೇಳಿದ್ದಾರೆʼ 

“ಓಕೆ ಓಕೆ. ಸಿಗುವ ಮಧ್ಯಾಹ್ನ” ಎಂದ್ಹೇಳಿ ಹೊರಟ ಸಾಗರ. 

ಬಹಳ ದಿನಗಳ ನಂತರ ಬರೋಬ್ಬರಿ ಒಂದು ಘಂಟೆ ತಯಾರಾದೆ. ಸೀರೆ ಹಂಗುಟ್ಟು ಹಂಗ್‌ ಬೇಡ ಅಂತ ಹಿಂಗುಟ್ಟು ಕೂದಲು ಹಂಗ್‌ ಬಾಚಿ ಹಂಗ್‌ ಬೇಡ ಅಂತ ಹಿಂಗ್‌ ಬಾಚಿ ಯಾವ್‌ ಫೌಂಡೇಶನ್‌ ಮೇಲ್‌ ಯಾವ್‌ ಫೌಂಡೇಶನ್‌ ಹಾಕೋದು ಅಂತ ಕನ್ಫೂಸ್‌ ಆಗಿ ಕೊನೆಗೆ ಗೂಗಲ್‌ ಮಾಡಿ ತಯಾರಾಗುವಷ್ಟರಲ್ಲಿ ಒಂದು ಘಂಟೆ ಸಮಯ ಕಳೆದಿತ್ತು. ನನಗೇ ಮೆಚ್ಚುಗೆಯಾಗುವಷ್ಟು ಮುದ್ದಾಗಿ ಕಾಣುತ್ತಿದ್ದೆ. ಸೈಲೆಂಟ್‌ ಶೋರ್ಸ್‌ ತಲುಪುವಷ್ಟರಲ್ಲಿ ಹನ್ನೊಂದೂವರೆಯಾಗಿತ್ತು. ಒಂದತ್ತು ಮಂದಿ ಅದಾಗಲೇ ಬಂದಿದ್ದರು. ಹಲೋ, ಹಾಯ್‌, ಓ ಹೇಗಿದ್ದೀಯ, ಸೋ ನೈಸ್‌ ಟೂ ಸೀ ಯೂ, ಎಷ್ಟ್‌ ವರ್ಷವಾಗೋಯ್ತಲ್ಲ ಸಿಕ್ಕಿ ಅಂತೆಲ್ಲ ಒಂದಷ್ಟು ಹೆಚ್ಚು ನಾಟಕೀಯವಾಗೇ ಮಾತನಾಡಿ ಕೈಕುಲುಕಿಕೊಂಡು ಬುಕ್‌ ಮಾಡಿದ್ದ ಪಾರ್ಟಿ ಹಾಲಿಗೆ ಹೋಗಿ ಕುಳಿತೆವು. ಒಳಬರುವವರೆಗೆ ಕಾಣುವಂತೆ ಕುಳಿತೆ ನಾನು. ಈ ಕಪ್ಪು ಸೀರೆಯಲ್ಲಿ ನನ್ನ ನೋಡುವಾಗ ಸಾಗರನ ಕಣ್ಣಲ್ಲಿ ಮೂಡುವ ವಾಂಛೆಯನ್ನು ಕಾಣಬೇಕಿತ್ತು ನಾನು. ಒಬ್ಬಬ್ಬರಾಗಿ, ಕೆಲವರು ಇಬ್ಬಿಬ್ಬರಾಗಿ ಪಾರ್ಟಿ ಹಾಲಿನ ಒಳಹೊಕ್ಕರು. ಪ್ರತಿ ಬಾರಿಯೂ ಹಲೋ, ಹಾಯ್‌, ಓ ಹೇಗಿದ್ದೀಯ, ಸೋ ನೈಸ್‌ ಟೂ ಸೀ ಯೂ, ಎಷ್ಟ್‌ ವರ್ಷವಾಗೋಯ್ತಲ್ಲ ಸಿಕ್ಕಿ ಪುನರಾವರ್ತಿಸಿತು. ಹನ್ನೆರಡಾಗಿ ಐದು ನಿಮಿಷವಾಗಿತ್ತೇನೋ ಸಾಗರ ಅವನ ಗೆಳೆಯರೊಟ್ಟಿಗೆ ಒಳಬಂದ. ನನ್ನ ನೋಡಿ ಅವನಲ್ಲಿ ವಾಂಛೆ ಮೂಡೋದಿರಲಿ ಕಪ್ಪು ಶರ್ಟು ಕಪ್ಪು ಪ್ಯಾಂಟಿನಲ್ಲಿ ಅವ ನಡೆದು ಬಂದಿದ್ದು ನನ್ನಲ್ಲೇ ಕಾಮವನ್ನು ಉತ್ತುಂಗಕ್ಕೇರಿಸಿತು. ಯೋನಿಯ ಭಾಗವೆಲ್ಲ ಕ್ಷಣಾರ್ಧದಲ್ಲಿ ತೇವಗೊಂಡುಬಿಟ್ಟಿತು. ಅತ್ತಿತ್ತ ಕಣ್ಣಾಡಿಸಿ ನನ್ನೆಡೆಗೆ ನೋಡಿದವನಿಗೆ ಅಚ್ಚರಿ, ಇವಳೂ ಕಪ್ಪು ಬಣ್ಣದ ಸೀರೆಯನ್ನೇ ಧರಿಸಿದ್ದಾಳಲ್ಲ ಅಂತ. ಸಾಗರ ಮತ್ತವನ ಗೆಳೆಯರ ತಂಡದೊಂದಿಗೆ ಮತ್ತೊಂದು ಸುತ್ತು ಹಲೋ, ಹಾಯ್‌, ಓ ಹೇಗಿದ್ದೀಯ, ಸೋ ನೈಸ್‌ ಟೂ ಸೀ ಯೂ, ಎಷ್ಟ್‌ ವರ್ಷವಾಗೋಯ್ತಲ್ಲ ಸಿಕ್ಕಿ ….. ಮುಗಿಯಿತು. ಇವರಾಗಮನದೊಂದಿಗೆ ಹೆಚ್ಚು ಕಮ್ಮಿ ಬರುತ್ತೇವೆ ಎಂದಿದ್ದವರೆಲ್ಲ ಬಂದಾಗಿತ್ತು, ಒಂದಿಬ್ಬರನ್ನು ಹೊರತುಪಡಿಸಿ, ಅವರ ಜಾಗ ತುಂಬಲು ಬರುವುದಕ್ಕಾಗುವುದಿಲ್ಲ ಎಂದಿದ್ದ ಇಬ್ಬರು ಬಂದಿದ್ದರು. ಒಂದಷ್ಟೊತ್ತು ಗುಜು ಗುಜು ಮಾತುಕತೆ. ಬಹಳಷ್ಟು ಮಂದಿ ಪಿಜಿ ಮುಗಿಸಿದ್ದರು, ಒಂದಷ್ಟು ಜನ ಕೊನೆಯ ವರ್ಷದ ಪಿಜಿ ಮಾಡುತ್ತಿದ್ದರು, ಕೆಲವರು ಈ ಪಿಜಿ ಸಹವಾಸವೇ ಬೇಡಪ್ಪ ಎಂದು ನಿರ್ಧರಿಸಿ ಪಿ.ಹೆಚ್.ಸಿಯಲ್ಲಿ ನೆಲೆ ಕಂಡುಕೊಂಡಿದ್ದರು. ಸದ್ಯ ನಾ ಕೊನೆಗೆ ಡಿ.ಎನ್.ಬಿಗಾದರೂ ಸೇರಿಕೊಂಡಿದ್ದೆ. ಇಲ್ಲಾಂದರೆ ಇವತ್ತು ಡಿಪ್ರೆಶನ್‌ ಖಂಡಿತ ಒಕ್ಕರಿಸಿಕೊಂಡಿರೋದು. ಇಲ್ಲಿರುವ ಹೆಚ್ಚಿನವರ ಬಳಿ ಮಾತನಾಡಿಯೇ ಇರಲಿಲ್ಲ. ನನ್ನ ಗೆಳತಿಯರೆಂದು ಇದ್ದವರು ಯಾರೂ ಇವತ್ತು ಬಂದಿರಲಿಲ್ಲ, ಇಬ್ಬರು ಫಾರಿನ್ನು ಇನ್ನೊಬ್ಬಳಿಗೆ ಡೆಲಿವರಿ ಡೇಟ್‌ ಹತ್ತಿರದಲ್ಲಿತ್ತು. ಹಳೆ ಕ್ಲಾಸ್ಮೇಟ್ಸ್‌ ಗೆಟ್‌ ಟುಗೆದರ್‌ ಅನ್ನಿಸದೆ ಹೊಸಬರೊಡನೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದಂತಹ ಭಾವನೆ ನನ್ನಲ್ಲಿ. ಇಲ್ಲಿರೋರಲ್ಲಿ ಪರಿಚಿತ ಅಂದ್ರೆ ಸಾಗರ ಒಬ್ನೆ. ಗೆಳೆಯರೊಡನೆ ಹರಟುವಾಗ ಮಧ್ಯೆ ಮಧ್ಯೆ ನನ್ನ ಕಡೆಗೆ ನೋಡ್ತಿದ್ದ. ನನ್ನ ಸುತ್ತಲಿದ್ದವರನ್ನು ಮಾತನಾಡಿಸುವ ನೆಪದಲ್ಲಿ ನಾ ಕುಳಿತಿದ್ದಲ್ಲಿಗೆ ಬಂದ. ಅವರನ್ನು ಮಾತನಾಡಿಸಿ ನನ್ನನ್ನೂ ಚೂರು ಮಾತನಾಡಿಸಿದ. ಇಬ್ಬರೇ ಸಿಗುವ ಸಂದರ್ಭವೇ ಒದಗಿ ಬರಲಿಲ್ಲ ಕೊನೆಯವರೆಗೂ. ಊಟಕ್ಕೆ ಮುಂಚೆ ಒಂದಷ್ಟು ಆಟಗಳನ್ನಿಟ್ಟಿದ್ದರು. ಸುಮ್ನೆ ಒಂದಷ್ಟು ತರಲೆ ಆಟಗಳು. ಟೈಂಪಾಸ್‌ ಆಗಬೇಕಲ್ಲ. ಇಲ್ಲಾಂದ್ರೆ ಕೆಲಸ ಓದು ಮನೆ ಮಕ್ಳು ಅಂತ ಹತ್ತದಿನೈದು ನಿಮಿಷಕ್ಕೆ ಮಾತು ಮುಗಿದು ಹೋಗ್ತವಲ್ಲ. ನಾನೂ ಒಂದೆರಡು ಆಟವಾಡಿ ಸೋತೆ. ಸಾಗರ ಯಾವ ಆಟಕ್ಕೂ ಬರಲಿಲ್ಲ. ಕೊಟ್ಟ ದುಡ್ಡಿಗೆ ಮೋಸವಿಲ್ಲದಂತೆ ಊಟದಲ್ಲಿ ರುಚಿಯಿತ್ತು. ಮಾಂಸ ತಿನ್ನೋರಿಗೆ ಹೆಚ್ಚು ಆಯ್ಕೆಗಳಿದ್ದವು. ಊಟದ ನಂತರ ಒಂದಷ್ಟು ವಿರಾಮ, ಒಂದಷ್ಟು ಸೆಲ್ಫಿ, ಒಂದಷ್ಟು ಹರಟೆ, ಇನ್ನೊಂದೆರಡು ಆಟ, ಕೊನೆಗೊಂದು ಗ್ರೂಪ್‌ ಫೋಟೋ ಮುಗಿಸಿ ಹೊರಡುವಾಗ ಐದೂವರೆಯಾಗಿತ್ತು. ಕೆಳಗೆ ಪಾರ್ಕಿಂಗಿನಲ್ಲಿ ಅಲ್ಲಲ್ಲಿ ಗೆಳೆಯರು ಗುಂಪು ಗುಂಪಾಗಿ ಹರಟುತ್ತಾ ನಿಂತಿದ್ದರು. ಗುಂಪಿನಲ್ಲಿ ಹರಟುವಷ್ಟು ಗೆಳೆತನ ನನಗೆ ಇದ್ದಿರಲೂ ಇಲ್ಲವಲ್ಲ. ಗುಂಪಿನೊಂದರಲ್ಲಿದ್ದ ಸಾಗರ ನನ್ನ ಗಾಡಿಯ ಬಳಿಗೆ ಬಂದ. 

“ಹೊರಟ್ಯೇನೇ…. ನನಗ್‌ ಸರ್ಪೈಸ್‌ ಕೊಡ್ತೀನಿ ಅಂತೇಳಿ ನನ್‌ ನೋಡಿ ನೀನೇ ಸರ್ಪೈಸ್‌ ಆದಂಗಿತ್ತಪ್ಪ" 

ʼಅಲ್ವ ಮತ್ತೆ. ನಾ ಹೇಳೇ ಇರಲಿಲ್ಲ ನಿನಗೆ ಕಪ್ಪು ಸೀರೆ ಉಡ್ತೀನಿ ಅಂತʼ 

“ಅಲ್ವ! ನನಗೂ ಅಚ್ಚರಿಯಾಯ್ತು. ಎಷ್ಟೇ ಆಗಲಿ ಇಬ್ಬರೂ ಸೋಲ್‌ ಮೇಟ್ಸ್‌ ಅಲ್ವ” ನಗಾಡುತ್ತಾ ಹೇಳಿದ. ಅಲ್ಲೇ ಅವನಿಗೊಂದು ಮುತ್ತು ಕೊಡುವಷ್ಟು ಮುದ್ದು ಮೂಡಿತು. ಮನದ ಭಾವನೆ ಮುಖದ ಮೇಲೆ ಪ್ರಬಲವಾಗೇ ಪ್ರತಿಫಲಿಸಿರಬೇಕು! 

“ಲೇ ಲೇ…ಏನೇ ಹಿಂಗ್‌ ನುಂಗಾಕೋಳಂಗೆ ನೋಡ್ತಿದ್ದಿ. ಹೈಡ್‌ ಯುವರ್‌ ಫೀಲಿಂಗ್ಸ್.‌ ಫ್ರೆಂಡ್ಸ್‌ ಎಲ್ಲಾ ಇಲ್ಲೇ ಇದ್ದಾರೆ. ನೋಡಿ ತಪ್ಪು ತಿಳ್ಕೋಬಿಟ್ಟಾರು ಮತ್ತೆ….” ಅವನ ಮಾತು ಮುಗಿಯುವ ಮುಂಚೆ ಅವನ ಗೆಳೆಯನೊಬ್ಬ ಅವನನ್ನು ಕೂಗಿ ಕರೆದ. 

“ಸರಿ ಕಣೆ. ಹೋಗಿರು ನೀ ಮನೆಗೆ. ಬರ್ತೀನಿ ಇನ್ನೊಂದು ಘಂಟೆಯೊಳಗೆ” ಎಂದ್ಹೇಳಿ ಗೆಳೆಯರ ಗುಂಪಿನೆಡೆಗೆ ನಡೆದ. 

ಗಾಡಿ ಶುರು ಮಾಡಿಕೊಂಡು ಹೊರಟವಳಿಗೆ “ಏನೇ ಹಿಂಗ್‌ ನುಂಗಾಕೋಳಂಗೆ ನೋಡ್ತಿದ್ದಿ. ಹೈಡ್‌ ಯುವರ್‌ ಫೀಲಿಂಗ್ಸ್.‌ ಫ್ರೆಂಡ್ಸ್‌ ಎಲ್ಲಾ ಇಲ್ಲೇ ಇದ್ದಾರೆ. ನೋಡಿ ತಪ್ಪು ತಿಳ್ಕೋಬಿಟ್ಟಾರು ಮತ್ತೆ” ಮಾತುಗಳೇ ಕಾಡುತ್ತಿತ್ತು. ಫೀಲಿಂಗ್ಸ್‌ ಹೈಡ್‌ ಮಾಡಿಕೊಳ್ಳೋಕೆ ಯಾಕಾದರೂ ಪ್ರೀತಿಸಬೇಕು? ಅವನು ಹೇಳಿದ್ದು ಸರಿಯೇ ಅಲ್ಲವಾ? ನಮ್ಮಿಬ್ಬರ ಸಂಬಂಧವೇನಿದ್ದರೂ ನಾಲ್ಕು ಗೋಡೆಯ ನಡುವೆ ಅಂತ ತುಂಬಾ ಸ್ಪಷ್ಟವಾಗಿ ಅರಿವಾಗುವಂತೆ ಮಾಡಿಬಿಟ್ಟ. ಮುಂಚೆಯೂ ನಮ್ಮದೇನಿದ್ದರೂ ಕಳ್ಳ ಸಂಬಂಧ ಅಷ್ಟೇ ಅಂತ ಅವನು ಗೋಳಾಡಿದ್ದುಂಟು. ಆವಾಗ್ಯಾವಾಗಲೂ ಅದು ನನ್ನ ತಲೆಗೆ ಹೋಗಿರಲಿಲ್ಲ. ಯಾವುದೋ ಹೋಟೆಲ್ಲಿನ ಪಾರ್ಕಿಂಗ್‌ ಲಾಟ್‌ನಲ್ಲಿ ಕೂಡ ನನ್ನ ಭಾವನೆಗಳನ್ನು ತೋರ್ಪಡಿಸದೇ ಇರುವಷ್ಟು ಕಳ್ಳತನದ ಸಂಬಂಧ ನಮ್ಮದು ಅಂತ ಅರಿವಾಗಿದ್ದು ಅವನ ಹೈಡ್‌ ಯುವರ್‌ ಫೀಲಿಂಗ್ಸ್‌ ಮಾತಿನಿಂದ. ಇಂತ ಕಳ್ಳತನದ, ಹೌದು ಇಷ್ಟು ದಿನ ನಮ್ಮ ಸಂಬಂಧ ಕಳ್ಳತನದ್ದು ಅನೈತಿಕವಾದದ್ದು ಎಂದು ಸಾಗರ ಹೇಳುವಾಗ ಅದಂಗಲ್ಲ ಹಿಂಗೆ ಅಂತ ವಿವರಿಸುತ್ತಿದ್ದೆ. ಇವತ್ತು ನನಗೇ ನಮ್ಮದು ಕಳ್ಳತನದ ಸಂಬಂಧ, ಅನೈತಿಕ ಸಂಬಂಧ ಎಂದು ಅನ್ನಿಸಲಾರಂಭಿಸಿತು. ಅಕಸ್ಮಾತ್‌ ನನ್ನ ಮಗುವಿಗೆ ಈ ಸಂಬಂಧದ ಬಗ್ಗೆ ತಿಳಿದುಬಿಟ್ಟರೆ? ಮೂಡಿದ ಪ್ರಶ್ನೆ ಬೆಟ್ಟದಾಕಾರದಲ್ಲಿ ಮೂಡಲಾರಂಭಿಸಿತು. 

ಹೇಳಿದಂತೆಯೇ ಒಂದು ಘಂಟೆಯ ನಂತರ ಸಾಗರ ಮನೆಗೆ ಬಂದ. ರಾಜೀವನಿಗೆ ಪರಿಚಯ ಮಾಡಿಸಿದೆ. ಇಬ್ಬರೂ ಹಾಲಿನಲ್ಲಿ ಕುಳಿತು ಕುಶಲೋಪರಿ ಮಾತಾಡಿಕೊಳ್ಳಲು ಬಿಟ್ಟು ನಾ ಅಡುಗೆ ಮನೆಗೆ ಹೋಗಿ ಕಾಫಿಗಿಟ್ಟೆ. ಹೊಸ ಪರಿಚಯವೆಂದು ರಾಜೀವ ಕಮ್ಮಿ ಮಾತಾಡುವವರೇನಲ್ಲ. ಕಾಲೇಜು, ಕಾಲೇಜಿನ ಹತ್ತಿರ ಹುಡುಗರು ಸೇರುತ್ತಿದ್ದ ಜಾಗಗಳು, ಮೆಸ್ ಗಳೆಲ್ಲವೂ ಇಬ್ಬರಿಗೂ ಗೊತ್ತಿದ್ದ ಸ್ಥಳಗಳೇ ಆಗಿತ್ತಾದ್ದರಿಂದ ಮಾತನಾಡಲು ವಿಷಯಗಳಿಗೆ ಕೊರತೆಯಿರಲಿಲ್ಲ. ಮಾತಾಡ್ತ ಮಾತಾಡ್ತ ಇಬ್ಬರಿಗೂ ಇದ್ದ ಕಾಮನ್‌ ಫ್ರೆಂಡ್ಸುಗಳ ಪಟ್ಟಿಯೂ ತಯಾರಾಯಿತು. ನನ್ನಿರುವಿಕೆಯನ್ನೇ ಮರೆತವರಂತೆ ಹರಟುತ್ತಿದ್ದವರನ್ನು ಕಂಡು ಹೊಟ್ಟೆ ಉರಿಯದೇ ಇದ್ದೀತಾ…. 

ʼಹಲೋ ನನಗೆ ಫ್ರೆಂಡು ಅವನು. ನೀವಿಬ್ಬರೇ ಹರಟೆ ಹೊಡೆದರೆʼ 

“ಒಳ್ಳೆ ಕತೆ ನಿಂದು. ನಿಂಗ್‌ ಹಳೇ ಫ್ರೆಂಡು. ನನಗೆ ಹೊಸ ಫ್ರೆಂಡು” ರಾಜೀವನ ಮಾತಿಗೆ ಸಾಗರನೂ ನಕ್ಕ. ರಾಜೀವನ ಬೆನ್ನ ಹಿಂದೆ ಕುಳಿತಿದ್ದ ನಾನು ಸಾಗರ ನನ್ನೆಡೆಗೆ ನೋಡಿದಾಗೊಮ್ಮೆ ಕಣ್ಣೊಡೆದೆ. ಥೂ ತರ್ಲೆ ಅಂತ ಮನಸ್ಸಲ್ಲೇ ಬಯ್ದುಕೊಂಡು ರಾಜೀವನ ಕಡೆಗೆ ನೋಡಿ ಮಾತು ಮುಂದುವರೆಸಿದ. 

“ಯಾವಾಗಾದ್ರೂ ಬಿಡುವು ಮಾಡಿಕೊಂಡು ಬನ್ನಿ ಪಾರ್ಟಿ ಮಾಡುವ” ರಾಜೀವನ ಮಾತು ಕೇಳಿ ಸಿಟ್ಟೇ ಬಂತು. ಪರಿಚಯವಾಗಿ ಹತ್ತು ನಿಮಿಷ ಕೂಡ ಆಗಿಲ್ಲ. ಆಗಲೇ ಯಾಕೆ ಪಾರ್ಟಿ ಮತ್ತೊಂದು ಅಂತ ಮಾತಾಡ್ಬೇಕು. ಎಲ್ಲರತ್ರಾನೂ ಕುಡಿತಕ್ಕಂಟಿಕೊಂಡೇ ಹಾಳಾಗ್ತಾರಪ್ಪ ಇವರು ಎಂದು ಬಯ್ದುಕೊಳ್ಳುತ್ತ ʼಇಲ್ಲ ಅವನು ಕುಡಿಯೋದಿಲ್ಲʼ ಅಂದೆ. 

“ಅದ್ಯಾಕೆ? ಲೈಟ್‌ ಆಗಿ ಬಿಯರ್ರೋ ಬ್ರೀಜರ್ರೋ ತಗಂಡ್ರಾಗುತ್ತೆ. ತೊಂದರೆಯಿಲ್ಲ” 

“ಅದೇನೋ ಕುಡೀಬೇಕು ಅಂತ ಅನ್ನಿಸಲಿಲ್ಲ. ಸಿಗರೇಟ್‌ ಸೇದ್ತೀನಷ್ಟೇ” 

“ಓ! ಅಷ್ಟಿದ್ರೂ ಬೇಕಾದಷ್ಟಾಯಿತು….ಕಂಪನಿ ಕೊಡೋಕೆ” ರಾಜೀವನ ವ್ಯಂಗ್ಯಭರಿತ ಮಾತು. ಬೆಂಗಳೂರಿಗೆ ಹೋಗಬೇಕೀಗ, ಬರ್ತೀನಿ ಎಂದ್ಹೇಳಿ ಸಾಗರ ಹೊರಟ. 

ಗೇಟಿನ ಬಳಿ ಹೋಗಿ ʼತಲುಪಿದ ಮೇಲೆ ಮೆಸೇಜ್‌ ಮಾಡೋʼ ಎಂದ್ಹೇಳಿ ಒಳಬಂದೆ. 

ʼಅಲ್ಲಾ ರೀ ಆ ಸಾಗರ ಪರಿಚಯ ಆಗಿ ಹತ್‌ ನಿಮಿಷ ಕೂಡ ಆಗಿಲ್ಲ. ಅಷ್ಟು ಬೇಗ ಕುಡಿಯೋಕೆಲ್ಲ ಕರೀಬೇಕಿತ್ತಾ….ʼ 

“ಅಯ್ಯೋ. ನನಗ್‌ ಹೊಸ ಪರಿಚಯ. ಆದರೆ ನಿನಗೆ ಹಳೇ ಫ್ರೆಂಡೇ ಅಲ್ವ. ಹಂಗಾಗಿ ಕರೆದೆ ಅಷ್ಟೇ. ಅದರಲ್ಲೇನಿದೆ” 

ʼಮ್.‌ ಅದೇನೋ ಸರೀನೇ. ಆದರೂ ನೀವೆಲ್ರತ್ರಾನೂ ಹಿಂಗೇನಪ್ಪ. ಥಟ್ಟಂತ ಕುಡಿಯೋಕೆ ಕರೆದುಬಿಡ್ತೀರಾ….. ನಂಗೇನೋ ಸರಿ ಕಾಣಲ್ಲ ಇದುʼ 

“ಹುಡುಗ್ರು ಇನ್ನೆಂಗ್‌ ಕ್ಲೋಸ್‌ ಆಗೋದು.…. ನಿಂಗೊತ್ತಾಗಲ್ಲ ಬಿಡು” ಎಂದವರೇ ಟಿವಿ ಹಾಕಿಕೊಂಡು ಕುಳಿತರು. ನನಗೂ ಬೆಳಿಗ್ಗೆಯಿಂದ ಓಡಾಡಿ ಸುಸ್ತಾದಂತಾಗಿತ್ತು. ಕುಳಿತು ಜಗಳವಾಡುವಷ್ಟು ಶಕ್ತಿ ಇಲ್ಲದ ಕಾರಣ ರೂಮಿಗೋಗಿ ಮಲಗಿಕೊಂಡೆ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment