Sep 11, 2018

‘ದುರಿತಕಾಲದ ದನಿ’: ವರ್ತಮಾದ ತಲ್ಲಣಗಳಿಗೆ ಹಿಡಿದ ಕೈಗನ್ನಡಿ

ಪದ್ಮಜಾ ಜೋಯ್ಸ್ ದರಲಗೋಡು
"ಕವಿತೆ ಹುಟ್ಟುವುದಿಲ್ಲ ಸುಖದ ಉದ್ಗಾರಗಳಲ್ಲಿ,
ಅದು ಹುಟ್ಟುವುದು ನೋವಿನ ಛೀತ್ಕಾರಗಳಲ್ಲಿ...!!

ಕು.ಸ.ಮಧುಸೂದನ ರಂಗೇನಹಳ್ಳಿ ಯವರ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಭಟ್ಟೀ ಇಳಿಸಿದ ಸಂಕಲನ.ಈ ದನಿಯ ಹಿಂದಿನ ಕಾಳಜಿ ದೀನದಲಿತರ ಕಷ್ಟ ಸಂಕಷ್ಟಗಳಿಗೆ ಮಿಡಿಯುವ ಹೃದಯದ ಸ್ವಚ್ಛ ಶುದ್ಧ ಮಾನವೀಯತೆ ಮನಕಲಕುವಂತಿದೆ.

‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೇ...

"ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನೆಡೆದಿದ್ದರೇ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ, ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದ್ದರೇ ಧರ್ಮವೋ ಸ್ವತಃ ತಾನೇ ಪ್ರಭುತ್ವವಾಗುವ ದಿಸೆಯಲ್ಲಿ ತನ್ನನ್ನು ಅಣಿಗೊಳಿಸಿಕೊಳ್ಳುತ್ತಿದೆ. ಹೀಗೆ ಬಂಡವಾಳ, ಧರ್ಮ , ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಸಾಹಿತ್ಯ ಮತ್ತು ಸೃಜನಶೀಲ ಕಲಾಪ್ರಕಾರಗಳು ಮುಂದಾಗಬೇಕಿದೆ."" 

ಇವರು ಹೇಳುವಂತೆ ಕವಿಗೆ ಬಹಳಷ್ಟು ಸಾಮಾಜಿಕ ಹೊಣೆಗಾರಿಕೆಗಳಿರಬೇಕಾಗುತ್ತದೆ, ನಿಜವೇ ಸಾಹಿತಿ ಸಮಾಜದ ಭಾವಗಳ ಪ್ರತಿಬಿಂಬವಾಗಿರಬೇಕು... ‘ಕಲೆಗಾಗಿ ಕಲೆ ಮಾತನ್ನು ಬಿಟ್ಟು ಸಮುದಾಯಕ್ಕಾಗಿ ಸಾಹಿತ್ಯ!’ ಈ ವರ್ತಮಾನದ ವಾಸ್ತವವೇ ದುರಿತಕಾಲದ ದನಿಯಲ್ಲಿ ಕವಿತೆ್ಗಳಾಗಿ ಮೂಡಿಬಂದಿವೆ.

ಈ ಕವಿತೆಗಳು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೇ, ನಾವಲ್ಲದ ನಮ್ಮ ಹೊರಪ್ರಪಂಚವನ್ನೂ ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ತೊಡಗಿವೆ.

‘ರಣ ಹಸಿವಿನಿಂದ’...ಕವಿತೆಯಲ್ಲಿ ಮೊನ್ನೆಮೊನ್ನೆಯವರೆಗೂ ನೆಡೆದ ಅಕಾರಣ ಯುದ್ಧಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತಾ ಕುತಿದ್ದಾರೆ..... 

ಪ್ರತಿ ಮನುಷ್ಯನಿಗೂ ಇರಬಹುದಾದ ಮೃಗದ ಮುಖವಾಡವ ಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತ... ಹೌದಲ್ಲವಾ??

"ಖಾಲಿ ಶಿಲುಬೆಗೆ ಹೊಡೆಯುವುದಿಲ್ಲ ಯಾರೂ ಮೊಳೆಗಳ
ಕಷ್ಟ ಕಾಲದ ಕವಿತೆಗಳು ಅನ್ನದ ಅಗುಳಾಗುವುದಿಲ್ಲ....
ಬಯಲ ಗಾಳಿಯಲಿ ಹಣತೆ ಉರಿಯುವುದಿಲ್ಲ....
ನಿಜ ಕಷ್ಟ ಕಾಲದ ಮಾತುಗಳಿಗೆ ಕೊನೆಯಿರುವುದಿಲ್ಲ....

"ಬಾ ಮಗುವೆ ಬಾ ನನ್ನ ಹತ್ತಿರಕೆ.. ಯಲ್ಲಿ ನಿಸರ್ಗದಿಂದಲೇ ಪಾಠ ಹೇಳಿಕೊಡುವ ಯಾವ ಮಕ್ಕಳಿಗೂ ತ಼ಂದೆಯಾಗಿಬಿಡುವ ಅಂತಃಕರಣದ ಅಪ್ಪನಾಗಲಾರದ ಅಪ್ಪ ಎಂಬ ಮಾತು ಮನವ ಮೂಕವಾಗಿಸುತ್ತದೆ.. 

"ಭಯಗೊಂಡ ಬರಹಗಾರರು ಇದೀಗ ಪುರಾಣ ಪುಣ್ಯ ಕತೆಗಳ ಪುನರ್ ಸೃಷ್ಟಿಸುತ್ತ ದಣಿಗಳ ಪುರಸ್ಕಾರಕ್ಕಾಗಿ ಕಾಯುತ್ತ ಕೂತಿದ್ದಾರೆ....--- ಇದು ಅಂತಹವರನ್ನೂ ಕಣ್ಮುಂದೆ ತ಼ಂದು ವ್ಯಂಗ್ಯದ ನಗು ಮೂಡಿಸುತ್ತದೆ..

ತಾತ ಮತ್ತು ಕವಿತೆ-- ಅಜ್ಜ ಅಪ್ಪನ ದುಡ್ಡಲ್ಲಿ ಹೆಸರಲ್ಲಿ ಅವರಿಲ್ಲದೆಯೂ ಅವರುಳಿಸಿದ ಉಸಿರಲ್ಲಿ ಬದುಕುತ್ತಿರುವ ಕೀಳರಿಮೆ ಪಶ್ಚಾತ್ತಾಪ ಸೃಜಿಸುವುದೂ ಸುಳ್ಳಲ್ಲ..

ಛಿದ್ರಗೊಂಡ ಆತ್ಮದ ತುಣುಕುಗಳನ್ನು ಮೂಸಿ ನೋಡಿದ ಬೀದಿ ನಾಯಿ ತಿರುಗಿ ನೋಡಿ ಬೊಗುಳಿ ಓಡಿಹೋಯಿತು... ಕೊಳೆತ ಆತ್ಮಗಳ ಕತೆ ಇಷ್ಟೇನೆ!! .... ಓದುತ್ತಲೇ ಮೈ ಝುಂ ಅನಿಸಿಬಿಡುತ್ತದೆ. 

"ರಾಜರಸ್ತೆಯ ವಿಜಯೋತ್ಸವದ ಘೋಷಗಳ ನಡುವೆ ಕ್ಷೀಣವಾಗಿ ಕೇಳುವ ಹಸಿದವರ ಪ್ರಲಾಪದ ಆಲಾಪಗಳೊಳಗೆ ಸಿಂಹಾಸನಗಳ ಉರುಳಿಸುವ ಶಾಪದ ಬಿಸಿಯಿತ್ತು"""

ಮಾಮೂಲಿನಂತಿಲ್ಲ ಈ ರಾತ್ರಿ ಹಸಿದವರಾರೂ ಮಲಗಿಲ್ಲ ಯಮ ಯಾತನೆಯಲ್ಲಿ .... ಉಂಡವರೂ ಮಲಗಿಲ್ಲ ಹೊಟ್ಟೆ ಉಬ್ಬರದಲ್ಲಿ ....!!! ಮನೆ ಮಸಣವಾಗುತ್ತಿದೆ, 

ಒಳಗೆ ಅವರು ಹೊರಗೆ ನಾವು..... ಇಲ್ಲಿ ಪ್ರಸ್ತುತ ಸಮಾಜದ ವ್ಯವಸ್ಥೆಯ ಬೆತ್ತಲೆ ಅನಾವರಣವಾಗಿದೆ... 

ನಾಯಕರು ಮತ್ತು ಪಾರಿವಾಳಗಳು , ಬರೆದು ಬಿಸಾಕಿದ ಕಾಗದದ ಚೂರಂತೆ... ದುಸ್ವಪ್ನದಲ್ಲಿನ ಬಂದು ಹೀಗೆ ಹಸಿರಿಗೇಕೆ ಉರಿ ಹಚ್ಚಿದೆ ಅದೇನಂತಹ ದ್ವೇಷಾಗ್ನಿಯಿತ್ತು ನಿನ್ನೊಳಗೆ ??" ಜಂಗಮ ಸ್ಥಾವರ.... ಹೀಗೆ ಇಲ್ಲಿನ ಇಲ್ಲಿನ ಕವಿತೆಗಳು ಸಮಕಾಲೀನ ಸಮಾಜದ ಎಲ್ಲ ಆಗುಹೋಗುಗಳಿಗೂ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಸಾಗುತ್ತವೆ.

ಎಲ್ಲಾ ೫೭ ಕವಿತೆಗಳೂ ನಮ್ಮ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿಗಳೇ.. ರೋಷ ಅಸಹಾಯಕತೆಯ ಶಬ್ಧವಾಗದ ದನಿಗಳು... ಇದನ್ನ ಓದಿದ ಕೆಲವು ಮನಗಳಾದರೂ ಸಶಭ್ಧವಾಗಿ ಪ್ರತಿಭಟನೆಗೆ ನಿಂತರೇ ಅಲ್ಪಸ್ವಲ್ಪ ಬದಲಾವಣೆ ಸಾಧ್ಯವೇನೋ...

"ಕುರುಡರ ಸಂತೆಯಲ್ಲಿಯೂ ಕನ್ನಡಿ ಮಾರುವ ಧೈರ್ಯ ಮಾಡುವವನೇ ನಿಜವಾದ ಕವಿ....! ೆನ್ನುವಲ್ಲಿ ಕವಿಯೊಬ್ಬನ ಎದೆಗಾರಿಗೆ ಕಂಡು ಬರುತ್ತದೆ.

ಹೀಗೆ ಇವತ್ತಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಯಾರಾದರೂ ಹೇಳಲೇಬೇಕಾದ್ದನ್ನು ತಮ್ಮಕವಿತೆಗಳ ಮೂಲಕ ಹೇಳುತ್ತ ಒಟ್ಟು ಸಮಾಜದ ದನಿಯಾಗಲು ಕವಿ ಪ್ರಯತ್ನಿಸಿದ್ದಾರೆ

ಹೌದು ಇಲ್ಲಿ ಕವಿತೆಗಳು ಮಾತನಾಡುತ್ತವೆ.... ಕವಿತೆಗಳ ಮಾರುಕಟ್ಟೆಯ ಸರಕನ್ನಾಗಿಸಿದ ಪ್ರಕಾಂಡ ಪಂಡಿತರುಗಳ ಮಾತುಗಳನ್ನು ಕವಿತೆಗಳು ಓದುವವರ ದನಿಯಲ್ಲಿ ಧ್ವನಿಸಿ ಸುಳ್ಳಾಗಿಸಲೀ ಲೇಖಕರ ಸಮಾಜ ವ್ಯವಸ್ಥೆ ಸುಧಾರಣೆ ಮಾಡುವ ಕವಿಯ ಆಶಯ ಈಡೇರಲೆಂದು ನಾವು ಆಶಿಸಬಹುದು! ಇಂತಹ ಕವಿತೆಗಳು ಜನರನ್ನು ತಲುಯಪಿದಾಗಲೇ ಕವಿಯ ಪ್ರಯತ್ನಕ್ಕೆ ಸಾರ್ಥಕತೆ ಬರುವುದು. ಕನ್ನಡದ ೋದುಗರು ಈ ಸಂಕಲನವನ್ನು ಕೊಂಡು ಓದಬೇಕಾಗಿದೆ.

ಪುಸ್ತಕ ಬೇಕಾದವರಿಗೆ ಮಾಹಿತಿ

'ದುರಿತಕಾಲದ ದನಿ' ಪುಸ್ತಕ ಬೇಕಾದವರು ಕೆಳಗಿನ ಖಾತೆಗೆ ಹಣ ಪಾವತಿಸಿ, ಕೆಳಗಿನ ವಾಟ್ಸಪ್ ನಂಬರಿಗೆ ವಿಳಾಸ ಮೆಸೇಜು ಮಾಡಿದರೆ ಕೊರಿಯರ್ ಮುಖಾಂತರ ಪುಸ್ತಕ ತಲುಪಿಸಲಾಗುವುದು

ಪುಸ್ತಕದ ಬೆಲೆ-1೦೦=೦೦ ರೂಪಾಯಿಗಳು ಅಂಚೆ ವೆಚ್ಚ=25=೦೦ ಒಟ್ಟು ಮೊತ್ತ==125=೦೦ ರೂಪಾಯಿಗಳು

ಹೆಸರು- ಅನಿತಾ.ಟಿ,
ಬ್ಯಾಂಕ್-ವಿಜಯಾ ಬ್ಯಾಂಕ್
ಅಕೌಂಟ್ ನಂಬರ್—118201011005030
ಐ.ಎಫ್.ಎಸ್.ಸಿ.ಕೋಡ್-VIJB0001182
ವಾಟ್ಸಪ್ ನಂಬರ್-7975589773, 9743766940

No comments:

Post a Comment