ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹೆಣ್ಣಿನ ಬಗ್ಗೆ ನಮಗಿರುವ ಪೂರ್ವಾಗ್ರಹ ಮನಸ್ಥಿತಿಯನ್ನು ಒಮ್ಮೆ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಿದೆ. ಆಳಿಸಿಕೊಳ್ಳುವವರಿರಲಿ, ಆಳುವವರು ಸಹ ಹೆಣ್ಣನ್ನು ಒಬ್ಬ ಸ್ವತಂತ್ರಜೀವಿಯಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳಲಾರದ ಒಂದು ಜೀವಿಯಂತೆ ಪರಿಗಣಿಸುತ್ತಿರುವುದನ್ನು ನಾವು ನೋಡಬಹುದು.ಇದಕ್ಕೆ ತತ್ಕ್ಷಣದ ಉದಾಹರಣೆಯೆಂದರೆ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಪ್ರದಾನಮಂತ್ರಿಯವರಾದ ನರೇಂದ್ರಮೋದಿಯವರು ಹೆಣ್ಣುಮಕ್ಕಳ ಬಗ್ಗೆ ಒಂದು ಘೋಷಣೆಯನ್ನು ಹರಿಯಬಿಟ್ಟರು. ಮಾಧ್ಯಮಗಳು ಸಹ ಆ ಘೋಷಣೆಯ ಹಿಂದಿರುವ ಮನಸ್ಥಿತಿಯನ್ನು ವಿಶ್ಲೇಷಣೆ ಮಾಡಲು ಹೋಗದೆ ಪ್ರದಾನಿಯವರನ್ನು ಕೊಂಡಾಡಿದ್ದೇ ಕೊಂಡಾಡಿದ್ದು!
“ಬೇಟಿ ಬಚಾವ್-ಬೇಟಿ ಪಡಾವ್”
“ಮಗಳನ್ನು ರಕ್ಷಿಸಿ- ಮಗಳನ್ನು ಓದಿಸಿ”
ಎನ್ನುವುದೇ ಆ ಜನಪ್ರಿಯ ಘೋಷಣೆಯಾಗಿತ್ತು.