Oct 20, 2019

ಒಂದು ಬೊಗಸೆ ಪ್ರೀತಿ - 36

ಡಾ. ಅಶೋಕ್.‌ ಕೆ. ಆರ್.‌
'ರಾಜೀವನ ಜೊತೆ ಮೆಸೇಜ್ ಮಾಡಿದ್ದನ್ನು. ನಮ್ಮ ಮನೆಯವರನ್ನು ಒಪ್ಪಿಸು ಅಂತ ಕಾಲೆಳೆದಿದ್ದನ್ನು ಹೇಳಿದ್ದೆ ಅಲ್ವ'

“ಹು" ನನ್ನೆದೆಯ ಮೇಲೆ ಕೈಯಾಡಿಸುತ್ತಾ ಹೇಳಿದ ಸಾಗರ.

'ನಾ ಏನೋ ತಮಾಷೆಗೆ ಅನ್ನುವಂತೆ ಹೇಳಿದ್ದು. ಅವನೂ ತಮಾಷೆಯಾಗೇ ತಗೊಂಡಿರ್ತಾನೆ ಅಂತಂದುಕೊಂಡಿದ್ದೆ. ನನ್ನೆಣಿಕೆ ಸುಳ್ಳಾಗಿತ್ತು. ಸರೀ ಒಂದು ವಾರಕ್ಕೆ ಮತ್ತೊಮ್ಮೆ ಅವನಿಂದ ಮೆಸೇಜು ಬಂತು. ನಮ್ಮ ಮನೆಯಲ್ಲಿ ಮಾತನಾಡಿ ಒಪ್ಪಿಸಿದ್ದೀನಿ. ಇದೇ ಭಾನುವಾರ ನಿಮ್ಮ ಮನೆಗೆ ಬರ್ತೇವೆ. ಇವತ್ತೋ ನಾಳೆಯೋ ನಮ್ಮಮ್ಮ ನಿಮ್ಮಮ್ಮನಿಗೆ ಫೋನ್ ಮಾಡಬಹುದು ಎಂದಿದ್ದ. ಅವತ್ತು ನನ್ನ ಮನಸ್ಸಲ್ಲಿ ಗೊಂದಲವಿತ್ತಾ, ಗಾಬರಿಯಿತ್ತಾ, ಸಂತಸವಿತ್ತಾ ಅಥವಾ ಇವೆಲ್ಲದರ ಮಿಶ್ರಭಾವವಿತ್ತಾ? ಒಂದೂ ನೆನಪಾಗ್ತಿಲ್ಲ ಈಗ. ಅವತ್ತೇ ಅವರಮ್ಮ ನಮ್ಮಮ್ಮನಿಗೆ ಫೋನ್ ಮಾಡಿದ್ದರು. ಅಪ್ಪ ಅಮ್ಮ ಈ ವಿಷಯವನ್ನು ಗುಟ್ಟು ಗುಟ್ಟಲ್ಲಿ ಚರ್ಚಿಸಿದ್ದು ನನ್ನರಿವಿಗೂ ಬಂದಿತ್ತು. ರಾತ್ರಿ ಊಟಕ್ಕೆ ಕುಳಿತಾಗ ಅಪ್ಪ "ನೋಡಮ್ಮ. ರಾಜೀವನ ಮನೆಯವರು ಫೋನ್ ಮಾಡಿದ್ರು. ಧರಣೀನ ನಮ್ಮ ರಾಜೀವನಿಗೆ ತೋರಿಸುತ್ತೀರಾ ಅಂತ. ಒಳ್ಳೆ ಮನೆತನ. ಆಸ್ತಿಗೆಲ್ಲ ಏನೂ ತೊಂದರೆ ಇಲ್ಲದ ಮನೆ. ಜೊತೆಗೆ ರಾಜೀವ ನಾವು ಕಂಡಂತೆ ಒಳ್ಳೆ ಹುಡುಗ. ಆದರೆ ಡಾಕ್ಟರಲ್ಲ. ಇಷ್ಟೆಲ್ಲ ತಲೇಲಿ ಯೋಚನೆ ಬಂದ್ರೂ ಹೆಣ್ಣು ತೋರಿಸೋದಿಲ್ಲ ಅಂತೇಳೋದಿಕ್ಕೆ ಮನಸ್ಸಾಗಲಿಲ್ಲ. ತೋರಿಸ್ತೀವಿ ಅಂತ ಹೇಳಿದ್ದೀವಿ. ಮುಂಚೆ ಬಂದ ಗಂಡುಗಳತ್ರ ನೀ ಕೆಟ್ಟದಾಗಿ ನಡ್ಕೊಂಡಿದ್ದಿದೆ....”

'ಇವಾಗೆಲ್ಲಿ ಹಂಗಿದ್ದೀನಿ?'

“ಹು. ಇತ್ತೀಚೆಗೆ ಹಂಗೆಲ್ಲ ಮಾಡಿಲ್ಲ ನೀನು. ಅಂದ್ರೂ ನೆನಪಿಸಬೇಕು ಅನ್ನಿಸಿತು. ಇಷ್ಟು ದಿನ ಬಂದಿದ್ದವರು ಅಪರಿಚಿತರು. ನೀ ಆಡಿದ್ದೆಲ್ಲ ನಡೀತು. ಇವರು ಪರಿಚಿತರು. ನೀ ಒಪ್ತೀಯೋ ಬಿಡ್ತೀಯೋ ನಂತರದ ಪ್ರಶ್ನೆ. ನಮಗಾಗಲೀ ಅವರಿಗಾಗಲೀ ಅವಮಾನವಾಗುವಂತೆ ಮಾತ್ರ ನಡೆದುಕೊಳ್ಳಬೇಡ" ಎಂದು ಬೇಡುವ ದನಿಯಲ್ಲಿ ಕೇಳಿಕೊಂಡರು. ಇವರಿಗೆ ನಾನು ರಾಜೀವ ಮಾತಾಡಿಕೊಂಡಿದ್ದರ ಅರಿವಿದ್ದಂತಿರಲಿಲ್ಲ. ರಾಜೀವನೂ ಅವರ ಮನೆಯಲ್ಲಿ ಹೇಳಿಲ್ಲವೋ ಏನೋ. ನಾನು ಅದರ ಬಗ್ಗೆ ಸೊಲ್ಲೆತ್ತಲಿಲ್ಲ. ಯಾವಾಗ ಬರ್ತಾರಂತೆ ಅಂತ ಕೇಳಿದೆ. ಭಾನುವಾರ ಻ಅಂತ ತಿಳಿಸಿದರು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.
ಭಾನುವಾರ ಬಂತು. ಮೊಟ್ಟ ಮೊದಲಬಾರಿಗೆ ಗಂಡು ನೋಡುವ ದಿನ ನಾ ಖುಷಿಯಲ್ಲಿದ್ದೆ. ರಾಜೀವನನ್ನು ನಾ ಆಗಲೇ ಒಪ್ಪಿಕೊಂಡುಬಿಟ್ಟಿದ್ದೆ ಅನ್ನಿಸುತ್ತೆ. ಗೊತ್ತಿಲ್ಲದ ಹುಡುಗನೊಟ್ಟಿಗೆ ಮದುವೆಯಾಗುವುದಕ್ಕಿಂತ ಗೊತ್ತಿರುವ ಹುಡುಗ ಬೆಟರ್ರು ಅನ್ನಿಸಿರಬೇಕು....'

“ಇದಕ್ಕೆ ಇನ್ನೂ ಒಂದು ಕಾರಣವಿರಬೇಕು" ಸಾಗರ ಹೇಳಿದ. ನಮ್ಮಿಬ್ಬರ ನಡುವಿದ್ದ ಗಾಳಿಯನ್ನು ಮತ್ತಷ್ಟು ಹೊರದಬ್ಬುತ್ತಾ ಅವನಿಗಂಟಿಕೊಂಡು 'ಏನು ಕಾರಣ? ಪ್ರಕೃತಿ ಲೆಕ್ಕದಲ್ಲಾ?' ಎಂದು ನಗಾಡಿದೆ.

ಅವನೂ ಮುಗುಳ್ನಗುತ್ತಾ "ಪ್ರಕೃತಿಯ ಲೆಕ್ಕಗಳನ್ನೆಲ್ಲ ಅವತ್ತೇ ಮಾತನಾಡಿ ಆಗಿದೆಯಲ್ಲ! ಇದು ಬೇರೆಯದೇ ಕಾರಣ"

'ಮ್. ಏನದು?'

“ನಿಂಗಷ್ಟು ದಿನ ನೋಡಲು ಬಂದ ಗಂಡುಗಳೆಲ್ಲ ಡಾಕ್ಟರುಗಳೇ ಅಲ್ಲವಾ?”

'ಹು'

“ಡಾಕ್ಟರ್ ಮಗಳಿಗೆ ಡಾಕ್ಟರ್ ಗಂಡನ್ನೇ ಹೆಚ್ಚು ಹುಡುಕ್ತಾರೆ ಅಪ್ಪ ಅಮ್ಮ. ನೀ ಯಾರಾದ್ರೂ ಡಾಕ್ಟರ್ ಅನ್ನು ಮದುವೆಯಾಗಿದ್ದರೆ ಅಷ್ಟೂ ದಿನ ಪುರುಷೋತ್ತಮನ ಗೆಳೆಯರು 'ಯಾರಾದ್ರೂ ಡಾಕ್ಟರ್ ಸಿಕ್ರೆ ನಿನ್ನ ಬಿಟ್ಟೋಗ್ತಾಳೆ' ಅಂತವನಿಗೆ ಹೇಳ್ತಿದ್ದಿದ್ದು, ಪುರುಷೋತ್ತಮನ ಮನಸ್ಸಿನಲ್ಲೂ ಇದ್ದ ಅದೇ ಭಾವನೆಯನ್ನು ನಿಜವಾಗಿಸಿಬಿಟ್ಟಂತಾಗುತ್ತಿತ್ತು. ಅದಿಕ್ಕೆ ನೀ ಬಹುಶಃ ಫಾರ್ಮಸಿ ಓದಿದವನನ್ನು ಮದುವೆಯಾಗಲು ಒಪ್ಪಿರಬೇಕು. ಅಷ್ಟರಮಟ್ಟಿಗೆ ಪುರುಷೋತ್ತಮನಿಗೆ 'ಡಾಕ್ಟರಿಗೋಸ್ಕರ ನಿನ್ನನ್ನು ಬಿಟ್ಟಿದ್ದಲ್ಲ ನಾನು. ನಿನ್ನ ಅಸಡ್ಡೆಯಿಂದಾಗಿ ಬೇಜವಾಬ್ದಾರಿತನದಿಂದಾಗಿ ಬೇರೆ ಮದುವೆಯಾಗ್ತಿರೋದು' ಅಂತ ಹೇಳಿಕೊಳ್ಳುವ ನಿನ್ನನ್ನು ನೀನು ಸಮರ್ಥಿಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತಿತ್ತು" ಎಲಾ ಇವನ ಎಷ್ಟು ಚೆಂದ ಅರ್ಥ ಮಾಡ್ಕೋತಾನಿವನು ಎಂದಚ್ಚರಿ ಪಡುತ್ತಾ 'ಲವ್ ಯು ಬಂಗಾರ. ಎಷ್ಟು ಚೆಂದ ಅರ್ಥ ಮಾಡ್ಕೋತಿ ನನ್ನ ಮನಸ್ಸನ್ನ. ಎಷ್ಟೇ ಆದ್ರೂ ಸೋಲ್ ಮೇಟ್ ಅಲ್ವ' ಎಂದ್ಹೇಳುತ್ತಾ ಅವನ ತುಟಿಗೆ ನನ್ನ ತುಟಿ ಸೇರಿಸಿದೆ. ತುಟಿಗಳು ಮಾತಾಡಿಕೊಂಡವು, ನಾಲಿಗೆಗಳು ಮಾತಾಡಿಕೊಂಡವು. ಮುತ್ತು ಮುಗಿಸಲು ಅವನೊಮ್ಮೆ ಪ್ರಯತ್ನಿಸಿದ, ಅವನ ತಲೆಯನ್ನು ಗಟ್ಟಿ ಹಿಡಿದು ಮುತ್ತು ಮುಗಿಯಲನುವು ಮಾಡಿಕೊಡಲಿಲ್ಲ. ಮುತ್ತು ಮುಗಿಸಲು ನಾನೊಮ್ಮೆ ಪ್ರಯತ್ನಿಸಿದೆ, ನನ್ನ ತಲೆಯನ್ನು ಗಟ್ಟಿ ಹಿಡಿದು ಅವನದಕ್ಕೆ ಅನುವು ಮಾಡಿಕೊಡಲಿಲ್ಲ. ಐದು ನಿಮಿಷವೋ ಹತ್ತು ನಿಮಿಷವೋ ಸುದೀರ್ಘ ಚುಂಬನ ಮುಗಿದು ಕೊನೆಗೆ ತುಟಿಗಳು ಬೇರ್ಪಟ್ಟಾಗ ಇಬ್ಬರು ಏದುಸಿರು ಬಿಡುತ್ತಿದ್ದೆವು. ಯಕಶ್ಚಿತ್ ಒಂದು ಮುತ್ತಿನಿಂದ ಸುಸ್ತಾಗಿ ಹೋಗಿದ್ದು ಇಬ್ಬರಿಗೂ ಅಚ್ಚರಿಯ ಸಂಗತಿ. ಅವನನ್ನು ಗಟ್ಟಿ ತಬ್ಬಿಕೊಂಡು 'ಈ ಕ್ಷಣ ಫ್ರೀಜ್ ಆಗಿ ಖಾಯಂ ಆಗಿಹೋಗಿದ್ರೆ ಎಷ್ಟು ಚೆಂದಿರೋದು' ಎನ್ನುವಾಗ ಕಣ್ಣಂಚಿನಲ್ಲಿ ನೀರಿತ್ತು. ಅವನಿಗೆ ಕಾಣುವ ಮುಂಚೆ ಆರಿಹೋದ ನೀರಹನಿಯದು. 

“ಸುಮ್ನಿರೋ. ಇಷ್ಟಾದ್ರೂ ಸಿಕ್ಕಿದ್ವಲ್ಲ. ಅದೇ ಸದ್ಯದ ಖುಷಿ" ಎಂದು ಜೋರು ಉಸಿರೆಳೆದುಕೊಳ್ಳುತ್ತಾ ಹೇಳಿದ ಸಾಗರ "ನಾನ್ ರೆಡಿ ಕಣೆ" ನಗುತ್ತಾ ಹೇಳಿದ. ಅವನ ತೊಡೆಯ ನಡುವೆ ಕೈಹಾಕಿ ಸ್ಪರ್ಷಿಸಿದೆ. 'ಅಯ್! ಅದೆಂಗೋ ಇಷ್ಟು ಬೇಗ' ಅಚ್ಚರಿಯಾಗಿತ್ತು. 

“ಮತ್ತೆ ನಮ್ ಧರು ಅಂದ್ರೆ ಸುಮ್ನೇನಾ...”

ಈ ಸಲ ಪ್ರವೇಶದಲ್ಲಾಗಲೀ ಅವನ ಮುಂದೊಗಲು ಹಿಂದೆ ಹೋಗುವುದರಲ್ಲಾಗಲೀ ಯಾವುದೇ ವಿಘ್ನವಾಗಲಿಲ್ಲ! ಮೊದಲ ಸಲವಲ್ಲವಾ ಸಾಗರನಿಗೆ ಬೇಗನೆ ಸ್ಖಲನವಾಗಿತ್ತು. “ಬೇಗ ಆಗೋಯ್ತೆ" ಎಂದ್ಹೇಳಿ ಎದೆಗೊರಗಿದವನ ತಲೆಯನ್ನು ಹಿಡಿದೆತ್ತಿ ಅವನ ಹಣೆಯ ಮೇಲಿದ್ದ ಬೆವರನ್ನು ನಾಲಗೆಯಿಂದ ನೆಕ್ಕಿದಾಗ "ಇದೇನೇ ಇದು" ಎಂದ.

'ಏನಿಲ್ವೋ ಇಷ್ಟು ದಿನ ನಾವಿಬ್ಬರೂ ಮಾನಸಿಕವಾಗಿ ಒಂದಾಗಿದ್ದೋ ಇವತ್ತು ದೈಹಿಕವಾಗೂ ಒಂದಾದೋ. ಇವತ್ತಿನಿಂದ ನಾವಿಬ್ರೂ ಒಂದೇ ಆದೋ ಅಲ್ವ'

“ಹು ಧರು" ಎಂದವನು ನನ್ನೆದೆಯ ನಡುವೆ ಮುಖ ಹುದುಗಿಸಿದ. ಅವನ ಬಿಸಿಯುಸಿರಿನ ಶಾಖ ನನ್ನನ್ನು ಮತ್ತೊಂದು ಸುತ್ತಿಗೆ ಅಣಿಯಾಗಿಸುತ್ತಿತ್ತು. 

'ಲೋ. ನೀನಿಂಗೆ ಜೋರು ಉಸಿರು ಬಿಡ್ತಿದ್ರೆ ನಂಗ್ ಮತ್ತೊಂದ್ ರೌಂಡ್ ಬೇಕು ಅನ್ನಿಸ್ತದೆ ನೋಡು' ನಗುತ್ತಾ ಹೇಳಿದೆ. 

ಛಂಗನೆ ಎದ್ದು ಪಕ್ಕದಲ್ಲಿ ಕುಳಿತು “ಅಯ್ಯಪ್ಪ. ಈಗ್ಲೇ ಸುಸ್ತಾಗೋಗಿದೆ. ಇನ್ನೊಂದ್ಸಲ ನನ್ ಕೈಲಾಗಲ್ಲಪ್ಪ" ನಗುತ್ತಾ ಹೇಳಿ ಕೆಳಗೆ ಬಿದ್ದಿದ್ದ ಅವನ ಒಳಉಡುಪನ್ನು ಎತ್ತಿಕೊಳ್ಳಲು ಬಗ್ಗಿದ. 

'ಗೂಬೆ. ಅದನ್ಯಾಕೆ ಹಾಕೋತಿ. ಬಾ ಹಂಗೇ ತಬ್ಬಿ ಮಲಗಿಕೊಳ್ಳುವ. ಇನ್ನೂ ಎಷ್ಟೆಲ್ಲ ಕತೆ ಹೇಳೋದಿದೆ ನಿಂಗೆ'

“ಇನ್ನೊಂದ್ಸಲ ಅಂತೆಲ್ಲ ಹೇಳ್ಬಾರ್ದು ಅಂದ್ರೆ ಹಂಗೇ ಬರ್ತೀನಿ"

'ತರ್ಲೆ. ಇನ್ನೊಂದ್ಸಲ ಇನ್ನೊಂದ್ಸಲ ಅಂತ ನಾ ಬಲವಂತ ಮಾಡಿದ್ರೂ ಅದು ಮೆತ್ತಗಿದ್ರೆ ಆಗ್ತದಾ? ಸುಮ್ನೆ ಬಾ' ಎಂದ್ಹೇಳುತ್ತಾ ಮೇಲೆಳೆದುಕೊಂಡೆ.

ಒಂದೈದು ನಿಮಿಷ ಇಬ್ಬರೂ ಮಾತನಾಡಲಿಲ್ಲ. ಇದೆಲ್ಲ ಏನು ಸತ್ಯವೋ ಕನಸೋ ಅನ್ನುವ ಅಚ್ಚರಿ ನನ್ನಲ್ಲಿತ್ತು. ನಾಲಗೆಯಲ್ಲಿನ್ನೂ ಇರುವ ಅವನ ಬೆವರಿನ ಉಪ್ಪುಪ್ಪು ರುಚಿ ಇದು ಸತ್ಯವೇ ಎಂದು ಸಾರಿ ಹೇಳುತ್ತಿತ್ತು. ಮಗುವೊಂದು ಅಮ್ಮನನ್ನು ತಬ್ಬಿ ಮಲಗುವಂತೆ ನನ್ನ ಸಾಗರ ನನ್ನನ್ನು ಕವುಚಿಕೊಂಡು ಮಲಗಿದ್ದಾನೆ. ಮಗುವಿನಂತ ಮನಸ್ಸಿನ ಸಾಗರನಿಂದಲೇ ನನಗೊಂದು ಮಗು ಹುಟ್ಟಲಾರದಾ? ಹಾಳಾದ್ದು ನನ್ನ ಹಾರ್ಮೋನುಗಳೆಲ್ಲ ನೆಟ್ಟಗಿದ್ದಿದ್ದರೆ ಓವುಲೇಷನ್ ದಿನಾನ ಲೆಕ್ಕ ಹಾಕಿ ಕರೆಸಿಕೊಳ್ಳಬಹುದಿತ್ತು. ಇವನ ಮಗುವಿಗೆ ಅಮ್ಮನಾಗುವ ಅದೃಷ್ಟ ನನಗಿಲ್ಲ ಅಷ್ಟೇ. ಹೋಗ್ಲಿ, ನನಗೆ ಒಂದು ಮಗುನಾದ್ರೂ ಆಗ್ತದಾ? ರಾಜೀವನ ನಿರಾಸಕ್ತಿಯ ನೆನಪಾಯಿತು. ಇನ್ನು ಮೇಲೆ ಹಂಗೆಲ್ಲ ನಿರಾಸಕ್ತಿ ತೋರಿಸೋದಿಲ್ಲ. ಮಗು ಮಾಡೋ ಕೆಲಸದಲ್ಲಿ ಫುಲ್ ಬ್ಯುಸಿಯಾಗ್ತೀನಿ ನೋಡು ಅಂತ ತಮಾಷೆಯಾಗಿ ಹೇಳಿದ್ದ ರಾಜೀವ. ಸದ್ಯ ಇಷ್ಟಾದರೂ ಹೇಳುವಂತಾದರಲ್ಲ. ಮಗು ಆಗ್ತದೆ ಇನ್ನೊಂದೆರಡು ವರ್ಷದೊಳಗೆ ಎಂದು ಅನ್ನಿಸಲಾರಂಭಿಸಿತ್ತು. ನನ್ನ ತಲೆಯಲ್ಲಿನ ಗೊತ್ತು ಗುರಿಯಿಲ್ಲದ ಯೋಚನೆಗಳು ಮುಖದ ಮೇಲೂ ಪ್ರತಿಫಲನವಾಗಿರಬೇಕು. 

“ಏನೇ ಯೋಚಿಸ್ತಿದ್ದಿ? ಎಲ್ಲೋ ಕಳ್ದೋಗಿರೋ ಹಂಗಿದೆ" ಎಂದು ಕೇಳಿದ ಸಾಗರ.

'ಏನಿಲ್ವೋ. ಯಾಕ್ ನೀನು ಮೊದಲೇ ಸಿಗಲಿಲ್ಲ ನನಗೆ ಅಂತ ಯೋಚಿಸ್ತಿದ್ದೆ' ಸುಳ್ಳುಗಳೆಂಗೆ ರಪ್ಪಂತ ಬಂದುಬಿಡ್ತಾವೆ! ಸುಳ್ಳು ಮೆದುಳಿನಿಂದ ಬರ್ತದೆ ಅನ್ನೋದೇ ಸುಳ್ಳೇನೊ. ಗಂಟಲೊಳಗೆ ಸುಳ್ಳಿನ ಫ್ಯಾಕ್ಟರಿ ಇರ್ತದೇನೋ. ಮೆದುಳಿನ ಆದೇಶಕ್ಕೆ ಕಾಯದೆ ಅವಶ್ಯ ಬಿದ್ದಾಗ ಪಟ್ ಪಟ್ಟಂತ ಸುಳ್ಳು ಉತ್ಪಾದಿಸಿ ಬಿಸಾಕ್ತದೆ! 

“ಏನ್ ಮಾಡೋದಪ್ಪ. ನೀ ಲವ್ ಮಾಡಿರದಿದ್ದರೆ, ನಾವಿಬ್ರೂ ಎಂಬಿಬಿಎಸ್ ಟೈಮಲ್ಲಿ ಪರಿಚಯವಾಗಿದ್ದಿದ್ದರೆ...... ಇನ್ನೂ ಎಷ್ಟೆಷ್ಟೋ ರೇಗಳು ನಿಜವಾಗಿದ್ದರೆ ನಾವಿಬ್ರೂ ಹಿಂಗ್ ಕದ್ದು ಕದ್ದು ಭೇಟಿಯಾಗೋ ಅವಶ್ಯಕತೆ ಇರ್ತಿರಲಿಲ್ಲ"

'ಮ್. ಅದೂ ಸತ್ಯಾನೇ'

“ಸರಿ. ರಾಜೀವ ನಿನ್ನನ್ನು ಬಂದು ನೋಡಿಕೊಂಡು ಹೋದ ಮೇಲೆ ಏನಾಯ್ತು ಹೇಳು....”

'ಇವತ್ತವೆಲ್ಲ ಬೇಕೇ ಬೇಕೇನೋ. ನಂಗೇನೋ ಹಿಂಗೇ ನಮ್ಮಿಬ್ಬರ ಬಗ್ಗೆ ಮಾತಾಡ್ಕಂಡಿರೋಣ ಅನ್ಸುತ್ತಪ್ಪ'

“ಹು. ನಂಗೂ ಹಂಗೇ ಅನ್ಸುತ್ತೆ. ಆದ್ರೂ ನಿನ್ ತೋಳ ತೆಕ್ಕೇಲಿ ಮಲಿಕ್ಕೊಂಡು ಈ ವಿಷಯಗಳನ್ನು ಕೇಳೋಕು ಮೆಸೇಜು ಫೋನು ಕಾಲುಗಳಲ್ಲಿ ಈ ವಿಷಯಗಳನ್ನ ಕೇಳೋಕು ವ್ಯತ್ಯಾಸವಿರ್ತದಲ್ಲ. ನಂಗಿಲ್ಲೇ ಕೇಳಬೇಕು ಅನ್ನಿಸ್ತಿದೆ. ಹಂಗಾಗಿ ಹೇಳು"

'ಸರಿ ಚಿನ್ನ' ಅಂತ್ಹೇಳಿ ಅವನ ಎದೆ ಮೇಲೊಂದು ಮುತ್ತು ಕೊಟ್ಟು ಅವನ ಕಣ್ಣಲ್ಲಿ ಕಣ್ಣನಿಟ್ಟು ನೋಡುತ್ತಾ ಹಳೆಯ ದಿನಗಳಿಗೆ ಜಾರಿ ಹೋದೆ. 

'ರಾಜೀವ ನೋಡಿಕೊಂಡು ಹೋದ ಎರಡು ದಿನಕ್ಕೆ ಅವರ ಮನೆಯವರು ಫೋನ್ ಮಾಡಿದ್ದರು ನಮ್ಮಪ್ಪನಿಗೆ. ನಮ್ಮದು ಒಪ್ಪಿಗೆ ಇದೆ. ನಿಮ್ಮ ಒಪ್ಪಿಗೆ ತಿಳಿಸಿ. ನಿಮಗೆ ಒಪ್ಪಿಗೆಯಾದರೆ ಮನೆ ನೋಡಕ್ ಬನ್ನಿ ಎಂದಿದ್ದರು. ಅಪ್ಪನಿಗೆ ಅವರು ಒಪ್ಪಿದ್ದೇನೋ ಖುಷಿ ಕೊಟ್ಟಿತ್ತು, ಆದರೆ ನಾ ಹೆಂಗಿದ್ರೂ ಒಪ್ಪೋದಿಲ್ಲ ಸುಖಾಸುಮ್ನೆ ಗೊತ್ತಿರೋರ ಹತ್ತಿರ ನಿಷ್ಠುರ ಕಟ್ಟಿಕೊಂಡಂಗಾಯ್ತು. ಅವರ ಬಳಿಯೇನೋ ಮಗಳನ್ನು ಕೇಳಿ ಹೇಳ್ತೀನಿ ಎಷ್ಟೇ ಆದ್ರೂ ಅವರೇ ಅಲ್ವ ಮದುವೆಯಾಗೋರು ಅಂತ ಹೇಳಿ ಸಮಯ ತೆಗೆದುಕೊಂಡಿದ್ದರು. ಎರಡು ಮೂರು ದಿನ ಅವರಿಗೆ ಏನಂತ ಹೇಳೋದು ಅನ್ನೋ ಗೊಂದಲದಲ್ಲೇ ಅಪ್ಪ ಇದ್ದರಂತೆ. ಇದರ ಮಧ್ಯೆ ರಾಜೀವ ಮೆಸೇಜ್ ಮಾಡಿ ನಮ್ಮ ಮನೆಯವರು ಒಪ್ಪಿಗೆ ಕೊಟ್ಟಾಗಿದೆ. ಅದ್ಯಾಕೆ ನಿಮ್ಮ ಮನೇಲಿ ಇನ್ನೂ ಒಪ್ಪಿಗೆ ಸೂಚಿಸಿಲ್ಲ. ಡಾಕ್ಟರ್ ಅಲ್ಲದ ಅಳಿಯ ನಿಮ್ಮಪ್ಪ ಅಮ್ಮನಿಗೆ ಬೇಡವೇನೋ ಅಂತೇಳಿದ. ನಿಜ ಹೇಳ್ತೀನಿ ಸಾಗರ, ಆ ಕ್ಷಣದಲ್ಲಿ ರಾಜೀವನೊಟ್ಟಿಗೆ ಮದುವೆಯಾಗುವುದಕ್ಕೆ ಪೂರ್ಣವಾಗಿ ನಿರ್ಧರಿಸಿಬಿಟ್ಟೆ' ಸಾಗರ 'ಇದೆಲ್ಲಾ ನನಗ್ ಗೊತ್ತು' ಎನ್ನುವಂತೆ ನಕ್ಕ.

'ಯಾಕೋ ನಗ್ತಿದಿ?'

“ಏನಿಲ್ವೇ"

'ಏನೋ ಇದೆ ಅಂತ ಗೊತ್ತು. ಹೇಳು'

“ಮತ್ತೇನಿಲ್ಲ. ನಿಂಗೆ ಕಡಿಮೆ ಓದಿರೋ ಒಂಚೂರು ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಇರೋ ಹುಡುಗರೇ ಹೆಚ್ಚು ಇಷ್ಟವಾಗೋದಲ್ವಾ? ಅವರನ್ನ ಮೇಲೆತ್ತಿ ದೊಡ್ಡೋಳು ಅನ್ನಿಸಿಕೋಬೇಕು ಅಂತ ಕೂಡ ನಿಂಗನ್ನಿಸುತ್ತೋ ಏನೋ" ಸಾಗರನ ಮಾತಿಗೆ ಸಿಟ್ಟೇ ಬಂದಿತ್ತು. ಸಿಟ್ಟು ಮಾಡಿಕೊಳ್ಳುವ ದಿನವಲ್ಲವಿದು. 

'ಇರಬಹುದು. ಇಲ್ಲದೇನೂ ಇರಬಹುದು..... ನಿಜ ಹೇಳ್ಬೇಕು ಅಂದ್ರೆ ಗೊತ್ತಿಲ್ಲ ಸರಿಯಾಗಿ ನನಗೆ. ಬೇಸಿಕಲಿ ನಾ ಅವತ್ತು ರಾಜೀವನ ಜೊತೆ ತಮಾಷೆಗೆ ಮನೆಗೆ ಬಂದು ಕೇಳು ಅಂದಿದ್ದು. ಅವ ಬಂದೇ ಬಿಡುತ್ತಾನೆ ಅಂತ ಎಣಿಸಿರಲಿಲ್ಲ. ರಾಜೀವನ ಪ್ರಕಾರ ನಾ ಒಪ್ಪಾಗಿದೆ, ನನ್ನ ಮನೆಯವರಿನ್ನೂ ಒಪ್ಪಿಲ್ಲ. ನಮ್ಮ ಮನೆಯವರ ಪ್ರಕಾರ ಅವರು ಒಪ್ಪಾಗಿದೆ ನಾ ಒಪ್ಪೋದಿಲ್ಲ ಻ಅಂತಿತ್ತು...... ಒಳ್ಳೆ ತಮಾಷೆ ನಂಗವಾಗ. ಮಾರನೇ ದಿನಾ ನಾನೇ ಅಮ್ಮ ಒಬ್ಬಳೇ ಇದ್ದಾಗ ವಿಷಯ ತೆಗೆದೆ. ಏನಮ್ಮ ಅವರ ಮನೆಯವರೇನೂ ತಿಳಿಸಲಿಲ್ಲವಾ ಅಂತ'

“ಅವರು ತಿಳಿಸಿ ಮೂರು ದಿನವಾಯ್ತು. ನೀ ಹೆಂಗಿದ್ರೂ ಒಪ್ಪೋದಿಲ್ಲವಲ್ಲ ಅಂತ ನಿಮ್ಮಪ್ಪ ಒದ್ದಾಡ್ತಾ ಇದ್ದಾರೆ"

'ನನ್ನನ್ನೇನೂ ಕೇಳೇ ಇಲ್ಲ ನೀವ್ಯಾರೂ'

“ಕೇಳಿದ್ರೇನ್ ಒಪ್ಪೋಳಂಗೆ ಹೇಳ್ತಿದ್ದಿ"

'ನಂಗ್ ಕೇಳ್ದೇನೇ ನಾ ಒಪ್ಪಿಲ್ಲ ಅಂತ ನೀವ್ ನೀವೇ ತೀರ್ಮಾನ ತೆಗೆದುಕೊಂಡುಬಿಟ್ರಿ ಅನ್ನಿ'

“ಏನ್ ಮಾಡೋದವ್ವ ಎಲ್ಲಾ ನಮ್ ಹಣೇಬರ.... ಎಲ್ಲರತ್ರ ಻ಅವಮಾನ ಻ಅನುಭವಿಸಬೇಕು ಅಂತ ಬರೆದಿದ್ರೆ ಏನ್ ಮಾಡೋಕಾಗ್ತದೆ.......ತಡಿ ತಡಿ.....ಏನಂದೆ ನೀನು.....ಅಂದ್ರೆ ನಿನ್ ಮಾತಿನ ಅರ್ಥ.......”

ಸುಮ್ಮನೆ ನಗುತ್ತಾ ನಿಂತೆ.

“ನಿಜವಾಗ್ಲೂ ಒಪ್ಪಿಗೆಯೇನೇ ನಿಂಗೆ" ಖುಷಿಯನ್ನು ಭಾವನೆಗಳಿಂದ ಮುಚ್ಚಿಡುವ ಪ್ರಯತ್ನವನ್ನೇನೂ ಅಮ್ಮ ಮಾಡಲಿಲ್ಲ.

'ಹು. ನನ್ನದೇನೂ ಅಭ್ಯಂತರವಿಲ್ಲ. ನಿಮಗೆ ಒಪ್ಪಿಗೆಯಾದ್ರೆ ಆಯ್ತು'

ಖುಷಿಯಿಂದ ತಬ್ಬಿ ಮುತ್ತಿಟ್ಟು ಓಡಿಹೋಗಿ ಅಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಪ್ಪ ಅರ್ಧ ದಿನ ರಜೆ ಹಾಕಿ ಒಂದ್ ಕೆಜಿ ಸ್ವೀಟು, ನಂಗಿಷ್ಟ ಅಂತ ವೈಭವ್ ಹೋಟೆಲ್ಲಿನ ಬಿರಿಯಾನಿ ಕಟ್ಟಿಸಿಕೊಂಡು ಬಂದಿದ್ದರು. ನಾ ಬಿರಿಯಾನಿ ತಿಂದು ಸ್ವೀಟು ತಿಂದು ರೂಮಿಗೆ ಹೋಗಿ ಅಡ್ಡಾದ ಮೇಲೆ ಅಪ್ಪ ರಾಜೀವನ ಮನೆಯವರಿಗೆ ಫೋನ್ ಮಾಡಿ ಒಪ್ಪಿಗೆ ತಿಳಿಸಿ ಮುಂದಿನ ಭಾನುವಾರ ಮನೆ ನೋಡಲು ಬರ್ತೀವೆಂದು ತಿಳಿಸಿದರು. ಒಳಗೆ ಮಲಗಿದ್ದವಳಿಗೆ ನಾ ಏನ್ ಮಾಡ್ದೆ? ಇದ್ ಸರೀನಾ? ತಪ್ಪಾ? ಆರು ವರ್ಷದ ಪ್ರೀತೀನಾ ಇಷ್ಟು ಸುಲಭವಾಗಿ ಕಡಿದುಕೊಂಡುಬಿಡಬಹುದಾ? ಬಹಳಷ್ಟು ಪ್ರಶ್ನೆಗಳು ಮೂಡುತ್ತಿತ್ತು. ಆದರೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಹೆಚ್ಚು ಗೊಂದಲಗಳಿರಲಿಲ್ಲ. ಪ್ರೀತಿಯ ಲೆಕ್ಕದಲ್ಲಿದು ತಪ್ಪು ನಿರ್ಧಾರವೇ ಆಗಿರಬಹುದಾಗಿದ್ದರೂ ನನ್ನ ಜೀವನದ ಲೆಕ್ಕಾಚಾರದಲ್ಲಿದು ಸರಿಯಾದ ನಿರ್ಧಾರವೇ ಅನ್ನಿಸಿತ್ತು. ಯೋಚನೆಗಳ ಭಾರದಲ್ಲಿ ಮುಳುಗಿಹೋಗಿದ್ದವಳಿನ್ನೇನೂ ನಿದ್ರೆಯ ಮಂಪರಿಗೆ ಜಾರಬೇಕೆನ್ನಿಸುವಷ್ಟರಲ್ಲಿ ಫೋನ್ ಶಬ್ದ ಮಾಡಿತು. ಪುರುಷೋತ್ತಮ ಮೆಸೇಜು ಕಳುಹಿಸಿದ್ದ.

“ಸಿಕ್ತೀಯ ಇವತ್ತು"

'ಇಲ್ವೋ ಹೇಳಿದ್ನಲ್ಲ ನಿನ್ನೇನೆ. ಇವತ್ತು ರಜ ಅಂತ'

“ಮ್. ಹೌದಲ್ವ. ಮರೆತಿದ್ದೆ. ಏನ್ ಮಾಡ್ತಿದ್ದೆ"

'ಏನಿಲ್ಲ. ಅಪ್ಪ ಬಿರಿಯಾನಿ ತಂದಿದ್ರು. ಬಿರಿಯಾನಿ ತಿಂದು, ಜೊತೆಗೆ ತಂದಿದ್ದ ನಾಲ್ಕು ನಂದಿನಿ ಪೇಡ ತಿಂದು ಸುಮ್ಮನೆ ಮಲಗಿದ್ದೆ'

“ಏನಪ್ಪ ಸ್ಪೆಷಲ್ಲು. ಅಪ್ಪ ಮಗಳು ದೂರದೂರ ಆಗೋಗಿದ್ದೋರು ಈಗ ಮತ್ತೆ ಕ್ಲೋಸಾಗಿಬಿಟ್ಟಿದ್ದೀರಾ! ಮದ್ವೆ ಗಿದ್ವೆ ಫಿಕ್ಸ್ ಆಗೋಯ್ತ ಹೆಂಗೆ ನಿಂದು" ತಮಾಷೆಯಾಗಿ ಅವನು ಕೇಳಿದ್ದು ವಿಷಯ ತಿಳಿಸುವ ನನ್ನ ಕೆಲಸವನ್ನು ಹಗುರಾಗಿಸಿಬಿಟ್ಟಿತು!

'ಹು. ಕಣೋ. ಒಪ್ಕೊಂಡೆ. ಹುಡುಗನ ಮನೆಯವರೂ ಒಪ್ಪಿದ್ದಾರೆ. ನೋಡ್ಬೇಕು ಏನಾಗ್ತದೆ ಅಂತ'

“ಏನು!?! ತಮಾಷೆ ಮಾಡ್ತಿದ್ದೀಯ?”

'ನಿನ್ನತ್ರ ತಮಾಷೆಯಾಗಿ ಮಾತಾಡಿದ್ಯಾವಾಗ ಅನ್ನೋದೇ ನನಗೆ ಮರೆತುಹೋಗಿದೆ ಕಣೋ..... ಈ ವಿಷಯದಲ್ಯಾಕೆ ತಮಾಷೆ ಮಾಡಲಿ.......'

“ನೀನಿಂತ ಚಿನಾಲಿ ಸೂಳೆಮುಂಡೆ ಅಂತ ಗೊತ್ತಿತ್ತು ನಂಗೆ....ಫಕ್ ಆಫ್"

'ಥ್ಯಾಂಕ್ಸ್ ಕಣೋ'

ಮತ್ತಾತ ರಿಪ್ಲೈ ಮಾಡಲಿಲ್ಲ. 

“ಅಷ್ಟು ಸುಲಭವಾಗಿ ಸುಮ್ಮನಾಗಿಬಿಟ್ಟನಾ ಅವನು?” ನನ್ನನ್ನು ಸಮಾಧಾನಿಸಲೆಂಬಂತೆ ಬೆನ್ನು ಸವರುತ್ತಾ ಕೇಳಿದ ಸಾಗರ. ಮನಸ್ಸು ದುಗುಡದಿಂದಿದ್ದರೂ ನಗುತ್ತಾ 'ಅಷ್ಟು ಸುಲಭವಾಗಿ ಪುರುಷೋತ್ತಮ ಸುಮ್ಮನಾಗಿಬಿಡೋದಾ! ಒಳ್ಳೆ ಕತೆ ನಿಂದು. ನನ್ನ ಜೀವನದ ಭಯಂಕರ ದಿನಗಳ ಪ್ರಾರಂಭವಾಗಿತ್ತದು ಅಷ್ಟೇ'

“ಮ್"

'ಮಾರನೇ ದಿನ ನನಗೆ ಬೆಳಗಿನ ಡ್ಯೂಟಿ ಇತ್ತು. ಮಧ್ಯಾಹ್ನ ಎರಡಕ್ಕೆ ಡ್ಯೂಟಿ ಮುಗಿಯೋದಿತ್ತು. ಒಂದೂವರೆಯಷ್ಟೊತ್ತಿಗೆ ಪುರುಷೋತ್ತಮನ ಫೋನ್ ಬಂದಿತ್ತು'

“ನಿಂಜೊತೆ ಮಾತನಾಡಬೇಕು. ಹೊರಗೆ ಕಾಫಿ ಶಾಪಿಗೆ ಬಾ"

'ಇನ್ನೊಂದರ್ಧ ಘಂಟೆ ಡ್ಯೂಟಿ ಮುಗಿಯುತ್ತೆ ಕಣೋ. ಬರ್ತೀನಿರು'

“ಇನ್ನತ್ತು ನಿಮಿಷದಲ್ಲಿ ನೀ ಇಲ್ಲಿಗೆ ಬರದಿದ್ದರೆ ಆಸ್ಪತ್ರೆಯೊಳಗೆ ನಾನೇ ಬಂದು ರಂಪ ರಾಮಾಯಣ ಮಾಡ್ತೀನಿ" ನಂಗೆ ನಿಜಕ್ಕೂ ಭಯವಾಯಿತು. ಕೋಪದ ಕೈಗೆ ಬುದ್ಧಿ ಕೊಟ್ಟರೆ ಪುರುಷೋತ್ತಮ ಏನೂ ಮಾಡಲು ಹೇಸುವವನಲ್ಲ. ಆಸ್ಪತ್ರೆಯ ಸಹೋದ್ಯೋಗಿಗಳ ಮುಂದೆ, ರೋಗಿಗಳ ಮುಂದೆ ನನ್ನ ಮರ್ಯಾದೆ ಹೋಗುವುದು ನನಗಿಷ್ಟವಿರಲಿಲ್ಲ. ಜೊತೆಗಿದ್ದ ಡಾಕ್ಟರಿಗೆ ಒಂಚೂರು ಅರ್ಜೆಂಟಿತ್ತು, ಬರ್ತೀನಿ ಅಂತ್ಹೇಳಿ ಐದು ನಿಮಿಷದಲ್ಲಿ ಕಾಫಿ ಶಾಪಿಗೆ ಹೋದೆ. ಒಳಗೆ ಒಂದು ಕಾಫಿ ಲೋಟವನ್ನು ಕೈಯಲ್ಲಿಡಿದುಕೊಂಡು ಕುಳಿತಿದ್ದ. ನನ್ನೆದೆಯ ಬಡಿತದ ವೇಗ ಹಾರ್ಟೆಲ್ಲಿ ಹೊಡೆದೋಗ್ತದೋ ಅನ್ನುವಷ್ಟಿತ್ತು. ಹೋಗಿ ಅವನೆದುರಿಗೆ ಕುಳಿತೆ. ಅವನ ಕಣ್ಣೆಲ್ಲ ಕೆಂಪಗಾಗಿತ್ತು. ರಾತ್ರಿ ಪೂರಾ ನಿದ್ರೆ ಮಾಡಿರುವನಂತೆ ಕಾಣಿಸಲಿಲ್ಲ. ಅದರಲ್ಲೇನು ಅಸಹಜತೆಯಿದೆ. ಪಾಪವೆನ್ನಿಸಿತು ಅವನನ್ನು ನೋಡಿದಾಗ. ನನಗೂ ಕಾಫಿ ಕುಡಿಯಬೇಕಿತ್ತು. ಅವನೊಂದೇ ಲೋಟ ಅವನಿಗಷ್ಟೇ ಹೇಳಿಕೊಂಡಿದ್ದಂತನ್ನಿಸಿತು. ಸರಿ ನಾನೊಂದು ತಗಂಡ್ ಬರೋಣ ಅಂತ ಮೇಲೇಳುತ್ತಿದ್ದೆ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment