Sep 1, 2019

ಒಂದು ಬೊಗಸೆ ಪ್ರೀತಿ - 29

ಡಾ. ಅಶೋಕ್.‌ ಕೆ. ಆರ್.‌
ಬಾಗಿಲ ಚಿಲುಕ ಹಾಕಿ ಬಂದು ಹಾಸಿಗೆಯಲ್ಲಿ ಅಡ್ಡಾದೆ. ಕಣ್ಣಂಚಿನಲ್ಲಿ ನೀರು ಸುರಿದು ಯಾವಾಗ ಒಣಗಿತೋ ಯಾವಾಗ ನನಗೆ ನಿದ್ರೆ ಆವರಿಸಿತೋ ನನಗೂ ತಿಳಿಯದು. ಸಮಯ ನೋಡಿದರೆ ಏಳೂವರೆ ಆಗಿತ್ತು. ರಾಜೀವ ಇನ್ನೂ ಬಂದಿರಲಿಲ್ಲ. ಫೋನ್ ಮಾಡಿದೆ. ಕಟ್ ಮಾಡಿದರು. ಮತ್ತೊಮ್ಮೆ ಮಾಡುವಷ್ಟರಲ್ಲಿ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಫೋನ್ ಸ್ವಿಚ್ ಆಫ್ ಮಾಡಿಕೊಂಡು ಅಪ್ಪನ ಮನೆಗಾದರೂ ಹೋಗಿಬಿಡುವ ಎಂದುಕೊಳ್ಳುವಷ್ಟರಲ್ಲಿ ಸಾಗರನ ಫೋನ್ ಬಂದಿತ್ತು. ಕರೆ ಸ್ವೀಕರಿಸಿ ಹಲೋ ಅನ್ನುವಷ್ಟರಲ್ಲಿ "ಯಾಕೋ ಭಯಂಕರ ಬೇಸರವಾಗ್ತಿದೆ ಕಣೇ" ಅಂದ. ದನಿಯಲ್ಲಿ ದುಃಖವಿತ್ತು. 

'ಸೇಮ್ ಹಿಯರ್ ಕಣೋ. ನಾನೂ ಒಂದ್ ರೌಂಡು...ಒಂದೇನಾ?? ಎಷ್ಟೋ ರೌಂಡು ಅತ್ತು ಮುಗಿಸಿದೆ ಈಗಷ್ಟೇ' 

“ಯಾಕೋ ಪುಟ್ಟಾ. ಏನಾಯ್ತೋ? ನಾನೇನಾದ್ರೂ ತಪ್ಪಾಗ್ ನಡ್ಕಂಡ್ನ? ಅಥವಾ ಅವತ್ತು ನಾನೇನೋ ಗೀಚಿದ್ದು ಓದಿ ಹೇಳಿದ್ದಕ್ಕೆ ಬೇಜಾರ್ ಮಾಡ್ಕಂಡ್ಯ?” 

಻಻ಅಯ್ಯೋ ಅದನ್ನೆಲ್ಲ ಯೋಚಿಸುವಷ್ಟು ಪುರುಸೊತ್ತಾದರೂ ನನಗೆಲ್ಲಿದೆ ಅನ್ನೋ ವಾಕ್ಯ ಬಾಯಿಗೆ ಬಂತಾದರೂ ಬೇಸರಗೊಳ್ಳುತ್ತಾನೆ ಅಂತ ಹೇಳಲಿಲ್ಲ. ಹೆಸರಿಗಷ್ಟೇ ಸೋಲ್ ಮೇಟು, ಆತ್ಮಸಂಗಾತಿ..... ಅದ್ಯಾರೇ ಆದ್ರೂ ಮನದ ಭಾವನೆಗಳನ್ನು ಪೂರ್ಣವಾಗಿ ಹಂಚಿಕೊಳ್ಳೋದಿಕ್ಕಾಗೋದಿಲ್ಲ ಻ಅನ್ನುವುದಷ್ಟೇ ಅಂತಿಮ ಸತ್ಯ. 

'ಹೇ. ಇಲ್ವೋ. ಅದಕ್ಯಾಕ್ ಬೇಸರ ಮಾಡಿಕೊಳ್ಳಲಿ. ಗೊತ್ತಲ್ವ ನಿಂಗ್ಯಾಕೆ ಹಂಗೆಲ್ಲ ಻ಅನ್ನಿಸ್ತದೆ ಅಂತ' 

“ಮತ್ತೆ ಇನ್ನೇನಾಯ್ತೆ" 

'ನೀ ಯಾಕ್ ಭಯಂಕರ ಬೇಸರದಲ್ಲಿದ್ದೆ?' 

“ಏನಿಲ್ವೇ ಮಾಮೂಲಿ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಏನ್ ಮಾಮೂಲಿ' 

“ಅದೇ ನೀ ಸಿಗಲಿಲ್ಲವಲ್ಲ ನನ್ನ ಜೀವನದಲ್ಲಿ ಅಂತ" 

'ಸಿಕ್ಕಿದ್ದೀನಲ್ಲೋ' 

“ಮ್. ಸಿಕ್ಕಿದ್ದಿ. ಇಲ್ಲ ಻ಅಂತಲ್ಲ. ಪೂರ್ತಿಯಾಗಿ ಸಿಗಲಿಲ್ಲ, ಸಂಗಾತಿಯಾಗಲಿಲ್ಲವಲ್ಲ ಻ಅಂತ" 

'ಮ್. ಎಷ್ಟ್ ದಕ್ಕುತ್ತೋ ಅಷ್ಟೇ ದಕ್ಕೋದು. ಇಷ್ಟಾದರೂ ಸಿಕ್ಕಿದ್ದೀವಲ್ಲ ಻ಅಂತ ಖುಷಿ ಪಡಬೇಕಷ್ಟೇ' 

“ಅದೇನೋ ನಿಜ. ನಿಂಗೇನಾಯ್ತು ಹೇಳು. ನೀ ಇಷ್ಟು ಬೇಸರದಿಂದ ಮಾತಾಡೋದನ್ನ ನಾ ಕೇಳೇ ಇಲ್ಲವೇನೋಪ್ಪ" 

'಻಻ಅಯ್ಯೋ ಅದೊಂದ್ ದೊಡ್ ಕತೆ ಕಣೋ' 

“ನಾನಂತೂ ಪುರುಸೊತ್ತಾಗಿದ್ದೀನಪ್ಪ" 

ನಗು ಬಂತು. ಸಂಜೆಯಿಂದ ನಡೆದಿದ್ದನ್ನೆಲ್ಲ ಹೇಳಿದೆ. ರಾಜಿ ಜೊತೆಗೆ ನಿಯಮಿತವಾಗಿ ಸೆಕ್ಸ್ ಮಾಡುತ್ತಿಲ್ಲವೆನ್ನುವುದನ್ನು ಹೇಳುವುದಕ್ಕೆ ಮುಂಚೆ ನಾಲ್ಕು ಬಾರಿ ಯೋಚಿಸುವಂತಾಯಿತು. ಗಂಡನ ಜೊತೆ ದೇಹ ಸುಖ ಸಿಗ್ತಾಯಿಲ್ಲ ಻ಅನ್ನೋ ಕಾರಣಕ್ಕೆ ನನ್ನ ಬಳಿ ಕ್ಲೋಸ್ ಆದೆಯಾ ಅಂತ ಻ಅವನಿಗನ್ನಿಸಿದರೆ ಅಂತ ಯೋಚನೆಯಾಯಿತು. ಅಷ್ಟೆಲ್ಲ ಚೀಪಾಗಿ ಯೋಚಿಸೋನಲ್ಲ ಸಾಗರ್ ಅನ್ನೋ ನಂಬಿಕೆಯಿಂದ ನಾಲ್ಕು ಬಾರಿ ಯೋಚಿಸಿದ ನಂತರ ಹೇಳಿದೆ. 

ಒಂದರೆಕ್ಷಣ ಸಾಗರ ಏನೂ ಹೇಳಲಿಲ್ಲ. ಻ಅವನ ಮೌನ ನನಗೆ ದಿಗಿಲು ಹುಟ್ಟಿಸುತ್ತೆ. 

“ಟ್ರೀಟ್ ಮೆಂಟ್ ತಗೊಳ್ಳೋವಾಗ ಸೆಕ್ಸ್ ಮಾಡ್ಲೇಬೇಕಲ್ವ? ಇಲ್ಲಾಂದ್ರೆ ಟ್ರೀಟ್ ಮೆಂಟ್ ತಗಂಡ್ ಏನುಪಯೋಗ?” 

'ನಾನೂ ಅದನ್ನೇ ಹೇಳಿದ್ದಪ್ಪ. ಻ಅಷ್ಟಕ್ಕೆ ಬಾಗಿಲು ದಡಾರೆಂದು ಹಾಕಿ ಹೋದವರು ಇನ್ನೂ ಬಂದಿಲ್ಲ. ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ' 

“ಎಲ್ ಹೋಗಿರ್ತಾರೋ...” 

'ಫ್ರೆಂಡ್ಸ್ ಜೊತೆ ಹೋಗಿರ್ತಾರೆ. ಇಲ್ಲ ಻ಅವರ ಮನೆಗೆ ಹೋಗಿ ಅಮ್ಮ ಻ಅಕ್ಕನ ಜೊತೆ ಸೇರ್ಕಂಡು ನನ್ನ ಪೋಸ್ಟ್ ಮಾರ್ಟಮ್ ಮಾಡ್ತಿರ್ತಾರೆ' 

“ಮ್..... ನೀ ತಪ್ ತಿಳಿಯಲ್ಲ ಻ಅಂದ್ರೆ ಒಂದ್ ಕೇಳ್ಲಾ....” 

'ಇದೇನೋ ಹೊಸದಾಗಿ....ಕೇಳೋ....' 

“ಅದೆಂಗೆ ನಿನ್ನಂತವಳ ಜೊತೆ ಸೆಕ್ಸ್ ಮಾಡಲ್ಲ ಻ಅಂದ್ರೆ....” 

'ನಾನೇನಪ್ಪ ಹೇಳಲಿ..... ನನ್ನ ಬಗ್ಗೆ ನಾನೇ ಹೇಳ್ಕೋಬಾರ್ದು. ಐ ಆ್ಯಮ್ ಗುಡ್ ಅಟ್ ಸೆಕ್ಸ್' 


“ಗೊತ್ತು ನಂಗೆ" 

'ಅದೆಂಗ್ ಗೊತ್ತೋ...' 

“ಸೆಕ್ಸ್ ಚ್ಯಾಟ್ ಅಲ್ಲೇ ಗೊತ್ತಾಗೋದಿಲ್ವ. ಸುಮ್ನೆ ಮಾತಿಗೋಸ್ಕರ ಻಻ಅಂತ ನೀ ಹೇಳಿರೋಲ್ಲ. ಹೇಳಿದ್ದನ್ನೆಲ್ಲ ನೀ ಉತ್ಕಟತೆಯಿಂದ ಮಾಡ್ತಿ ಅನ್ನೋ ನಂಬಿಕೆ ನನಗಿದೆ" 

'ಹು. ಆದರೆ ಏನುಪಯೋಗ. ರಾಜೀವನಿಗಂತೂ ನನ್ನ ಜೊತೆ ಸೆಕ್ಸ್ ಮಾಡೋಕೆ ಮೂಡ್ ಬರೋದೆ ಅಪರೂಪದಲ್ಲಿ ಅಪರೂಪ. ನಂಗಂತೂ ಕನಿಷ್ಠ ವಾರಕ್ಕೊಂದೆರಡು ದಿನವಾದರೂ ಸೆಕ್ಸ್ ಮಾಡಬೇಕಂತ ಆಸೆ. ಇನ್ನೂ ಜಾಸ್ತಿಯಾದರೂ ಬೇಸರವೇನಿಲ್ಲ! ನಾನಾಗೇ ಮುಂದಾದಾಗ ಸ್ಪಂದಿಸುತ್ತಾರೆ, ಇಲ್ಲ ಻ಅಂತಲ್ಲ. ಆದರೆ ಅವರು ಮುಂದಾಗೋದು ಕಡಿಮೆಯಾಗಿಬಿಟ್ಟಾಗ ನನಗೂ ಪದೇ ಪದೇ ಅವರನ್ನು ಬಡಿದೆಬ್ಬಿಸೋಕೆ ಮನಸ್ಸಾಗೋದಿಲ್ಲ. ಻಻ಅದೇನ್ ಅವರಿಗೆ ನನ್ನ ಮೇಲೆ ಪ್ರೀತಿ ಇಲ್ವಾ? ಅಥವಾ ನನ್ನ ದೇಹ ಻ಅವರಲ್ಲಿ ಕಾಮಾಸಕ್ತಿ ಮೂಡಿಸೋದಿಲ್ವ? ಅಂತೆಲ್ಲ ಯೋಚನೆ ಬಂದುಬಿಡುತ್ತೆ. ಎಷ್ಟೇ ಜಗಳವಾಡಿದ್ರೂ ಪ್ರೀತಿ ಇದ್ದೇ ಇದೆ ಅಂತ ಗೊತ್ತು. ಮೋಸ್ಟ್ಲಿ ನನ್ನ ದೇಹದ ಬಗ್ಗೆ ಅವರಿಗೆ ಆಸಕ್ತಿ ಇಲ್ವೋ ಏನೋ ಬಿಡು. ನಾವ್ ನಾವ್ ಪಡಕೊಂಡು ಬಂದಿದ್ದು. ಕೊನೇ ಪಕ್ಷ ಒಂದು ಮಗುವಾಗುವವರೆಗಾದರೂ ಸೆಕ್ಸ್ ಬಗ್ಗೆ ಬಲವಂತವಾಗಿ ಆಸಕ್ತಿ ತೋರಿಸಿದರೆ ಅಷ್ಟೇ ಸಾಕು ಅನ್ನಿಸಿಬಿಟ್ಟಿದೆ' 

“ಅಂದ್ರೂ ನಿನ್ನ ಜೊತೆ ಅದೆಂಗೆ ಅಷ್ಟು ಸಪ್ಪೆಯಾಗಿ ಇರೋಕೆ ಸಾಧ್ಯ...ನಾನಾಗಿದ್ದಿದ್ದರೆ.....”ಮಾತು ನಿಲ್ಲಿಸಿಬಿಟ್ಟ. 

'ನೀನಾಗಿದ್ದರೆ....' 

“ಏನಿಲ್ಲ ಬಿಡೋ" 

'ಹೇಳೋ ಪರವಾಗಿಲ್ಲ' 

“ನೀನೇ ಸಾಕು ಬಿಡೋ ಅನ್ನೋವರೆಗೂ ಬಿಡ್ತಿರಲಿಲ್ಲ"
ನಿಮಗೀ ಕಾದಂಬರಿ ಮೆಚ್ಚುಗೆಯಾಗುತ್ತಿದ್ದಲ್ಲಿ 'ಹಿಂಗ್ಯಾಕೆ' ವೆಬ್ ಪುಟಕ್ಕೆ ಬೆಂಬಲವಾಗಿ ನಿಮ್ಮಿಂದ ಸಾಧ್ಯವಾದಷ್ಟು ಹಣವನ್ನು ಕಳಿಸಿಕೊಡಲು ಕೆಳಗಿರುವ ಲಿಂಕ್ ಕ್ಲಿಕ್ಕಿಸಿ. ನಿಮ್ಮ ಬೆಂಬಲ ಮುಂದಿನ ದಿನಗಳಲ್ಲಿ ಈ ಕಾದಂಬರಿಯ ಇ - ಪುಸ್ತಕ ಉಚಿತವಾಗಿ ಲಭ್ಯವಾಗಿಸಲು ಸಹಕಾರಿಯಾಗಲಿದೆ.

'ಓಹೋ! ಸಿಕ್ಕಾಗ ನೋಡ್ತೀನಿ ಬಿಡು ಅದೆಷ್ಟು ಸುಸ್ತು ಮಾಡಿಸ್ತೀಯೋ ಅಂತ' 

“ಲೇ ಧರಣಿ. ನಿಜಕ್ಕೂ ನಾವಿಬ್ರೂ ಸೆಕ್ಸ್ ಮಾಡ್ತೀವೇನೇ" 

'ಯಾಕೆ ಮಾಡಬಾರದಾ?' 

“ತಪ್ಪಾಗ್ತದೇನೋ ಅಂತ" 

'ಏನೋಪ. ನಾ ಻ಅಷ್ಟೆಲ್ಲ ಯೋಚಿಸೋಳಲ್ಲ. ಮನಸ್ಸು ಪೂರ್ತಿ ಹಂಚಿಕೊಂಡವನ ಜೊತೆ ಸೆಕ್ಸ್ ಮಾಡೋಕೆ ನನಗೇನೂ ಅಭ್ಯಂತರವಿಲ್ಲ. ಻ಅದು ಬೇಕೇ ಬೇಕು ಅಂತಾನೂ ಇಲ್ಲ. ಆದರೂ ತಪ್ಪೇನಿಲ್ಲ ಻ಅನ್ನೋಳು ನಾನು' 

“ಅಲ್ವೇ. ನಾವಿಬ್ರೂ ಸಿಕ್ಕಾಗ ಻ಅಕಸ್ಮಾತ್ ನಾ ಸೆಕ್ಸ್ ಬೇಡ ಻ಅಂದ್ರೆ ಏನ್ಮಾಡ್ತಿ" 

'ಮ್. ಹೋಗಿ ಬಾಗಿಲು ಹಾಕಿ ಒಳಬಂದು ರೇಪ್ ಮಾಡಿಬಿಡ್ತೀನಿ' 

“ಥೂ ಪಾಪಿ" 

'ಹ ಹ. ಸಾಗರ......ಚಿನ್ನೂ......' 

“ಹೇಳೋ....” 

'ಯಾವಾಗೋ ಬರ್ತೀಯಾ.....' 

“ಗೊತ್ತಿಲ್ವೇ. ಇಷ್ಟ್ ದೂರದಲ್ಲಿದ್ದೀವಿ" 

'ಯಾವ್ ಮಹಾ ದೂರಾನೋ. ಬಸ್ ಹತ್ತಿ ಬಂದರೆ ಒಂದು ರಾತ್ರಿ ಪಯಣವಷ್ಟೇ....' 

“ಹು. ಅಂದ್ರೂ ಯಾಕೋ ಭಯವಾಗ್ತದೆ ಕಣೇ" 

'ಭಯ ಯಾಕೋ. ರೇಪ್ ಗೀಪ್ ಮಾಡಲ್ಲ ಬಾ ಒಂದ್ಸಲ' 

“ಬಂದ್ರೆ ಎಲ್ಲೇ ಭೇಟಿಯಾಗೋದು" 

'ಇನ್ನೆಲ್ಲಿ ನಮ್ಮ ಮನೆಯಲ್ಲೇ' 

“ಏನೂ ತೊಂದರೆಯಿಲ್ವಾ" 

'ಅದರಲ್ಲೇನು ತೊಂದರೆ. ಎಂತದೂ ಇಲ್ಲ. ಯಾವತ್ ಬರ್ತೀಯೋ?' 

“ಯಾವಾಗ್ ಬರ್ಲೋ ಪುಟ್ಟ" 

ಓ! ಇವನು ಬರೋದಿಕ್ಕೆ ತಯಾರಾಗೇ ಬಿಟ್ನ ಻ಅಂತ ಒಮ್ಮೆಲೆ ಅಚ್ಚರಿಯಾಯಿತು. ಜೊತೆಗೆ ಎದೆ ತುಂಬಿ ಉಕ್ಕುವಷ್ಟು ಖುಷಿ. ಮುಂದಿನ ವಾರದ ನನ್ನ ಡ್ಯೂಟಿ ರೋಸ್ಟರ್ ನೆನಪಿಸಿಕೊಂಡೆ. ಮುಂದಿನ ಬುಧವಾರ ನೈಟ್ ಡ್ಯೂಟಿ ಇದೆ. ರಾಜೀವ ಬೆಳಿಗ್ಗೆ ಏಳೂವರೆ ಎಂಟರಷ್ಟೊತ್ತಿಗೆ ಡ್ಯೂಟಿಗೆ ಹೋಗ್ತಾರೆ. ಅವತ್ತೇ ಸರಿಯಾದ ದಿನ ಻ಅನ್ನಿಸಿತು. 

'ಮುಂದಿನ ಬುಧವಾರ ಬರ್ತೀಯಾ?' 

“ಮ್. ಸರಿ" 

'ಇಷ್ಟ್ ಬೇಗ ಒಪ್ಕೋಬಿಟ್ಯಾ! ಅಂದ್ಕೊಂಡಿರಲಿಲ್ಲ ಕಣೋ' 

“ನನಗೂ ನಿನ್ನ ನೋಡಬೇಕು ಅನ್ಸುತ್ತೆ ಕಣೇ" 

'ಬರೀ ನೋಡಬೇಕು ಅಂತಾನಾ' 

“ಇಲ್ಲ. ನೋಡಬೇಕು ಒಮ್ಮೆ ತಬ್ಬಿಕೋಬೇಕು. ನಿನ್ನ ಹಣೆಗೊಂದು ಮುತ್ತು ಕೊಟ್ಟು ನಿನ್ನ ಮಡಿಲಲ್ಲಿ ತಲೆಯಿಟ್ಟು ಅಳಬೇಕು....” 

'ಅಳೋದ್ಯಾಕೆ...' 

“ನೀ ಸಿಗಲಿಲ್ಲವಲ್ಲ ಻ಅಂತ" 

'ಮ್. ಅಷ್ಟೇ ಸಾಕಾ. ಬೇರೇನೂ ಬೇಡ್ವಾ...' 

“ಹು. ಇನ್ನೂ ಬೇಕು....ಬೇಕೇ ಬೇಕಾ ಗೊತ್ತಿಲ್ಲ" 

'಻ಅದೇನೇನು ಬೇಕೋ ಹೇಳೋ. ರೆಡಿಯಾಗಿರ್ತೀನಿ' 

“ನೀನೊಂದು ಗಮನಿಸಿದ್ದೀಯಾ ಧರು. ಇತ್ತೀಚೆಗೆ ನಮ್ಮಿಬ್ಬರ ಮಾತುಕತೆ....ಅದೆಷ್ಟೇ ಗಂಭೀರ ವಿಷಯದ ಬಗ್ಗೆ ನಡೆದಿದ್ದರೂ ಕೂಡ ಕೊನೆಗೆ ಸೆಕ್ಸ್ ಚ್ಯಾಟ್ ಆಗಿ ಮುಗೀತದೆ. ಸೆಕ್ಸ್ ಬಗ್ಗೆ ಮಾತಾಡೋಕಷ್ಟೇ ನಾವು ಹತ್ತಿರವಾಗಿದ್ದಾ ಅನ್ನಿಸಿಬಿಡ್ತದೆ ಕೆಲವೊಮ್ಮೆ ನನಗೆ" 

ನನ್ನ ಻ಅನುಭವಕ್ಕೂ ಅದು ಬಂದಿತ್ತು. ಆತ್ಮೀಯತೆ ಬೆಳೆದಾಗ ಇದೆಲ್ಲ ಸಹಜವೆಂದೆನ್ನಿಸಿತ್ತು. 

'ಮನಸ್ಸು ಹಂಚಿಕೊಂಡ್ರೆ ಶ್ರೇಷ್ಠ, ದೇಹ ಹಂಚಿಕೊಂಡ್ರೆ ಕೀಳು ಅಂತಾನಾ...' 

“ಹಂಗಲ್ವೇ. ಮುಂಚೆ ಎಷ್ಟೊಂದ್ ವಿಷಯ ಚರ್ಚೆ ಮಾಡ್ತಿದ್ದೋ. ಈಗ ಆ ಮಾತುಗಳಿಗೆಲ್ಲ ಪೂರ್ಣ ವಿರಾಮ ಬಿದ್ದಂತಾಗಿದೆ ಅನ್ನಿಸಿಬಿಟ್ಟಿದೆ" 

'ಮ್. ನೀನೇ ಹೇಳ್ತಿರ್ತೀಯಲ್ಲ ಯಾವಾಗ್ಲೂ ಪ್ರಕೃತಿ ಲೆಕ್ಕದಲ್ಲಿ ಪ್ರಕೃತಿ ಲೆಕ್ಕದಲ್ಲಿ ಅಂತ ಻ಅದರ ಪ್ರಕಾರ ನೋಡಿದ್ರೆ ದೇಹದಾಕರ್ಷಣೆಯೇ ಮುಖ್ಯವೋ ಏನೋ ಯಾರಿಗೊತ್ತು' 

“ಇರ್ಬೇಕೇನೋ. ಸಾರಿ ಕಣೇ...” 

'ಯಾಕೆ' 

“ನೀ ಸೆಕ್ಸ್ ಚ್ಯಾಟ್ ಮಾಡೋಕೆ ಉತ್ಸುಕಳಾಗಿದ್ದೆ. ನಾ ಏನೇನೋ ಮಾತಾಡಿಬಿಟ್ಟೆ" 

'ಅದಕ್ಯಾಕೆ ಸಾರಿ? ಓ ರಾಜೀವನ ತರಾನೇ ನನ್ನ ಬಯಕೆ ತಿರಸ್ಕರಿಸಿದೆ ಅಂತನ್ನಿಸ್ತಾ?' 

“ಮ್. ಇರ್ಬೇಕು" 

'ಹಂಗೆಲ್ಲ ಏನಿಲ್ವೋ. ನೀ ಒಳ್ಳೆಯವನಿದ್ದಿ. ನಿನಗೆ ಹೆಂಡತಿಯಾಗಿ ಬರೋಳು ಪುಣ್ಯ ಮಾಡಿರ್ತಾಳೆ' 

“ಅದ್ಯಾಕೋ" 

'ಹುಡುಗಿ ಮನಸ್ಸನ್ನ ಻ಅರ್ಥ ಮಾಡ್ಕೊಳ್ಳೋದು ಗೊತ್ತು ನಿಂಗೆ' 

“ಮ್. ನೋಡುವ ಆ ಅದೃಷ್ಟವಂತೆ ಎಲ್ಲಿದ್ದಾಳೆ ಅಂತ. ಻ಅಲ್ವೇ ನಿಂಗ್ ನನ್ನ ಮೇಲೆ ಇಷ್ಟೆಲ್ಲ ಲವ್ ಆಗೋಗಿದೆಯಲ್ಲ ಒಂದ್ಸಲಕ್ಕೂ ರಾಜೀವನಿಗೆ ಡೈವೋರ್ಸ್ ಕೊಟ್ಟು ಸಾಗರನನ್ನು ಮದುವೆಯಾಗಬೇಕು ಅಂತ ಻ಅನ್ನಿಸಲೇ ಇಲ್ವ" 

'ಯೋಚನೆ ಬರದೆ ಇರ್ತದೇನೋ. ಬಂದಿತ್ತು. ಬಹಳಷ್ಟು ಸಲ ಬಂದಿತ್ತು. ಆದರೆ ನನ್ನ ಮದುವೆಯ ದಿನಗಳು ನೆನಪಾಗಿ ಆ ಯೋಚನೆಯನ್ನು ಬದಿಗೆ ತಳ್ಳಿ ಹಾಕಿತು. ರಾಜೀವ ನನಗೆ ಕೊಟ್ಟ ನೈತಿಕ ಬೆಂಬಲ ಬಹಳ ದೊಡ್ಡ ಮಟ್ಟದ್ದು. ಅವರ ಜಾಗದಲ್ಲಿ ಬೇರ್ಯಾರೇ ಇದ್ದಿದ್ದರೂ ನನ್ನ ಮದುವೆಯಾಗುತ್ತಿರಲಿಲ್ಲ' 

“ಆಗದೇ ಇದ್ದಿದ್ದರೆ ಆಗ್ತಿತ್ತು. ನಾ ಮದುವೆಯಾಗ್ಬೋದಿತ್ತು ನಿನ್ನ" 

'ಆಹಾ...ಆಸೆ ನೋಡು' ಒಂದು ನಿಟ್ಟುಸಿರು ಬಿಟ್ಟೆ. 'ಇಲ್ವೋ ಆ ಜಾಗದಲ್ಲಿ ನೀನಿದ್ದಿದ್ದರೂ ನನ್ನ ಮದುವೆಯಾಗುತ್ತಿರಲಿಲ್ಲ ಻ಅನ್ಸುತ್ತೆ ನಂಗೆ' 

“ಅದೆಂಗ್ ಹೇಳ್ತಿ. ಅಂತದ್ದೇನಾಗಿತ್ತು ನಿನ್ನ ಮದುವೆಯ ಸಮಯದಲ್ಲಿ" 

'ಏನೇನೋ ಆಗಿತ್ತೋ. ನಿಂಗೇಳಿದ್ನಲ್ಲ ಪುರುಷೋತ್ತಮ ತುಂಬಾ ಪೊಸೆಸಿವ್ ಆಗಿರ್ತಿದ್ದ ಻ಅಂತ' 

“ಪ್ರೀತೀಲಿ ಅದು ಸಹಜವೇ ಅಲ್ವ" 

'ಉಹ್ಞೂ. ಇವನ ಪೊಸೆಸಿವ್ ನೆಸ್ ಸಹಜತೆಯ ಗಡಿ ದಾಟಿ ಬಿಟ್ಟಿತ್ತು. ಪಿಯುಸಿಯಲ್ಲಿ ಜೊತೆಗಿದ್ದಾಗ ಆ ಪೊಸೆಸಿವ್ ನೆಸ್ ಹೆಚ್ಚು ಕಾಡ್ತಿರಲಿಲ್ಲ. ನಾ ಮೆಡಿಕಲ್ಲಿಗೆ ಸೇರಿದ ಮೇಲೆ ಹೆಚ್ಚು ತೊಂದರೆಯಾಗೋಕೆ ಪ್ರಾರಂಭವಾಯಿತು. ಒಂದ್ ವರ್ಷದವರೆಗೆ ಎಲ್ಲಾ ಚೆನ್ನಾಗೇ ಇತ್ತು ಅಂತಿಟ್ಕೋ. ಅವನಿಗೆ ನನ್ನ ಮೇಲಿದ್ದ ಪ್ರೀತಿ ನನ್ನ ಉಸಿರು ಕಟ್ಟಿಸುವಷ್ಟು ಉತ್ಕಟವಾಗಿದ್ಯಾವಾಗ ಻ಅಂತ ನನಗೂ ಸರಿ ನೆನಪಿಲ್ಲ ಬಿಡು. ಆಗೆಲ್ಲ ಓಹ್! ನನ್ ಹುಡುಗನಿಗೆ ನನ್ನ ಮೇಲೆ ಎಷ್ಟು ಪ್ರೀತಿ ಅಂತ ಻ಅನ್ನಿಸೋದು. ಈಗ ನೆನಪಿಸಿಕೊಂಡರೆ ನಾನೆಂಗೆ ಅಷ್ಟೊಂದು ದಡ್ಡಿ ತರ ಇದ್ದೆ ಅಂತ ಻ನಗು ಬರ್ತದೆ. ನೀ ನಿಮ್ ಕಾಲೇಜಲ್ಲಿ ಹುಡುಗರ ಜೊತೆಗೆ ಮಾತನಾಡಬಾರದು ಅಂತೆಲ್ಲ ಪದೇ ಪದೇ ಹೇಳೋನು. ನಮ್ಮ ಬ್ಯಾಚಿನವರು ಪಾರ್ಟಿ ಗೀರ್ಟಿಗೆ ಹೋದರೆ ನಾ ನಾನಾ ಕಾರಣ ಹೇಳಿ ತಪ್ಪಿಸಿಕೊಳ್ಳುವುದ್ಹೇಗೆ ಅಂತ ಯೋಚಿಸುವುದರಲ್ಲಿ ನಿರತಳಾಗಿರುತ್ತಿದ್ದೆ. ಅಪ್ಪಿ ತಪ್ಪಿ ನಾನು ಯಾರಾದ್ರೂ ಹುಡುಗನೊಟ್ಟಿಗೆ ಮಾತನಾಡಿದ ವಿಷಯ ಹೇಳಿದೆನೋ ಅಲ್ಲಿಗೆ ಆ ಇಡೀ ವಾರ ನನ್ನ ಕತೆ ಮುಗೀತು ಅಂತ ಲೆಕ್ಕ. ಮಾತು ಮಾತಿಗೂ ಹಂಗಿಸುತ್ತಲೇ ಇರೋನು. ನಾ ಡಾಕ್ಟರ್ ಆಗಲ್ಲವಲ್ಲ ಻ಅದಿಕ್ಕೆ ನೀ ನನ್ನ ಮರೆತು ಬಿಡ್ತಿ. ಯಾರಾದ್ರೂ ಡಾಕ್ಟರ್ನೇ ಕಟ್ಟಿಕೊಳ್ತಿ ಅನ್ನೋನು. ಇಲ್ವೋ ನಾ ನಿನ್ನ ಲವ್ ಮಾಡ್ತಿರೋದು, ಬೇರೆಯವರ ಜೊತೆ ಮಾತನಾಡದೆ ಇರೋಕೆ ಆಗ್ತದಾ ನೀನೇ ಹೇಳು? ಮಾತನಾಡಿದ್ದಕ್ಕೆಲ್ಲ ನಾ ನಿನ್ನ ಬಿಟ್ಬಿಡ್ತೀನಿ ಅಂತೆಲ್ಲ ನೀ ಅಂದುಕೊಂಡರೆ ಹೆಂಗೆ. ನಾಳೆ ದಿನ ನಾ ದೊಡ್ಡ ಡಾಕ್ಟರ್ ಆಗಿ ಕೆಲಸ ಮಾಡುವಾಗ ಹತ್ತಾರು ಜನರ ಜೊತೆ ಮಾತಾಡಿಕೊಂಡೆ ಕೆಲಸ ಮಾಡಬೇಕಲ್ಲ ಻ಅಂತಿದ್ದ ಹಾಗೆ. ಮದುವೆಯಾದ ಮೇಲೆ ನೀ ಕೆಲಸಕ್ಕೋಗೋದೇನು ಬೇಡ, ನನ್ ಹುಡುಗಿ ಮನೇಲಿ ರಾಣಿ ತರಾ ಇರ್ಬೇಕು. ದುಡ್ದು ತರೋಕೆ ನಾನಿಲ್ವ ಻ಅನ್ನೋನು. ಅಯ್ಯೋ ಬಂಗಾರ ಻ಅಂತ ಮುದ್ ಮಾಡ್ತಿದ್ದೆ ಅವನ ಕಾಳಜಿಗೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ತದೆ. ಅಕಸ್ಮಾತ್ ನಾವಿಬ್ಬರು ಮದುವೆಯಾಗಿದ್ದರೆ ನಾ ಗೃಹ ಬಂಧನದಲ್ಲೇ ಇದ್ದುಬಿಡ್ತಿದ್ನೇನೋ ಅಂತ. ಻ಅವನ ಪೊಸೆಸಿವ್ ನೆಸ್ ತೀರ ಎಷ್ಟರಮಟ್ಟಿಗೆ ಹೋಗಿದೆಯೆಂದು ಅರಿವಾಗಿದ್ದು ನಾವು ಇಂಟರ್ನ್ ಶಿಪ್ಪಿನಲ್ಲಿದ್ದಾಗ. ನಾ ಎಲ್ಲಾ ವರ್ಷ ಪಾಸಾಗಿದ್ದು ಆತನಿಗೆ ಖುಷಿಯ ವಿಚಾರವಾಗಿರಲಿಲ್ಲವೇನೋಪ್ಪ. ನಾ ಫೇಲ್ ಆಗಿದ್ರೆ ಅವನಿಗೆ ನೆಮ್ಮದಿ ಸಿಕ್ಕಿರೋದೇನೋ. ಕೀಳರಿಮೆಯಿಂದ ನರಳುತ್ತಿದ್ದಂತೆಯೂ ಅವನು ತೋರುತ್ತಿರಲಿಲ್ಲ. ಻಻ಇಂಟರ್ನ್ ಶಿಪ್ಪಲ್ಲಿ ಕೈಲಿ ಸ್ವಲ್ಪ ದುಡ್ಡೂ ಓಡಾಡ್ತಿತ್ತಲ್ಲ ಜೊತೇಲಿ ಕೆಲಸ ಮಾಡೋರ ಹುಟ್ಟಿದಹಬ್ಬವನ್ನು ಆಚರಿಸ್ತಿದ್ದೋ ನಮ್ಮ ಯುನಿಟ್ಟಿನಿಲ್ಲಿ. ನನ್ನ ಹುಟ್ಟಿದ ದಿನವೂ ಬಂತು. 'ನೀನು ಕಾಲೇಜಲ್ಲಿ ಹುಟ್ಟಿದಹಬ್ಬ ಆಚರಿಸಬಾರದು' ಅಂತ ಕಟ್ಟುನಿಟ್ಟಾಗಿ ಹೇಳಿದ್ದ ಪರಶು. ಆದರೆ ಜೊತೆಗಿದ್ದ ಗೆಳೆಯರು ಟೇಬಲ್ ಮುಂದೆ ಕೇಕು ತಂದು ಇಟ್ಟರೆ ನಾ ಏನು ಮಾಡಲಿ? ನಮ್ಮ ಆಸ್ಪತ್ರೆಯ ಎದುರಿಗಿನ ಪರಿವಾರ್ ಬೇಕರಿಯಲ್ಲಿ ಕೇಕು ಕಟ್ಟು ಮಾಡಿದ್ದಾಗಿತ್ತು. ನಾವು ಬರ್ತ್ ಡೇ ಸೆಲೆಬ್ರೇಷನ್ ಮುಗಿಸಿ ವಾಪಸ್ ಆಸ್ಪತ್ರೆಗೆ ಹೊರಟೊ. ಇವನ ಫೋನ್ ಬಂತು. ಪಕ್ಕದ ರಸ್ತೆಗೆ ಕರೆಸಿಕೊಂಡ. ಻಻ಅವನ ಕೈಯಲ್ಲಿ ಉಡುಗೊರೆಯಿತ್ತು. ಖುಷಿ ಖುಷಿಯಿಂದ ಻ಅವನ ಬಳಿಗೆ ಹೋದೆ. ಏನೊಂದೂ ಮಾತನಾಡದೆ ಚಟಾರನೆ ಕೆನ್ನೆಗೊಂದು ಏಟು ಕೊಟ್ಟು ಕೈಯಲ್ಲಿದ್ದ ಉಡುಗೊರೆಯನ್ನು ಪಕ್ಕದ ಮೋರಿಯೊಳಗೆ ಬಿಸಾಕಿ ಹೊರಟುಹೋದ. ದಾರಿಯಲ್ಲಿದ್ದವರೆಲ್ಲ ಒಮ್ಮೆ ನನ್ನ ಕಡೆ ನೋಡಿ ಸುಮ್ಮನಾದರು. ಯಾಕೆ ಏನು ಅಂತ ಹೇಳದೆಯೇ ಕೆನ್ನೆಗೊಂದು ಬಾರಿಸಿದ್ದ. ಻ಅದೇ ಮೊದಲ ಬಾರಿಗೆ ಆತ ನನ್ನ ಮೇಲೆ ಕೈ ಮಾಡಿದ್ದು. ಏನಾಯ್ತು ಏಕಾಯ್ತು ಅಂತ ಯೋಚಿಸುವಷ್ಟರಲ್ಲಿ ಆತ ಮಾಯವಾಗಿದ್ದ. ಸುಧಾರಿಸಿಕೊಂಡ ಮೇಲೆ ಫೋನ್ ಮಾಡಿದೆ. ಅದೆಷ್ಟೇ ಮುನಿಸಿದ್ದರೂ ಫೋನ್ ಅಂತೂ ರಿಸೀವ್ ಮಾಡ್ತಿದ್ದ. ಏನಾಯ್ತೋ ದಿಡೀರ್ ಅಂತ ಬಂದು ಹಿಂಗ್ ಮಾಡಿಬಿಟ್ಯಲ್ಲ ಅಂದೆ. 'ಗೊತ್ತಿಲ್ಲದವಳ ತರ ಮಾತಾಡ್ತೀಯ ಚಿನಾಲಿ. ನೋಡ್ದೆ ನಿನ್ನ ಆಟಗಳನ್ನು ಬೇಕರಿಯಲ್ಲಿ' ಅಂತ್ಹೇಳಿ ಫೋನ್ ಇಟ್ಟುಬಿಟ್ಟ. ಪರಶು ಬಗ್ಗೆ ಮೊಟ್ಟ ಮೊದಲ ಸಲ ಭಯ ಅಂತಾಗಿದ್ದು ಅವತ್ತೇ. ನಾ ತಪ್ಪೇನೂ ಮಾಡಿರಲಿಲ್ಲ. ಸ್ನೇಹಿತರು ಕೇಕ್ ತಂದು ಟೇಬಲ್ ಮೇಲಿಟ್ಟಾಗ ಇಲ್ಲ, ನನ್ನ ಹುಡುಗನಿಗೆ ಇದೆಲ್ಲ ಇಷ್ಟವಾಗಲ್ಲ ಅಂತ ಅಲವತ್ತುಕೊಳ್ಳುವುದು ಸಾಧ್ಯವಿತ್ತೇ? ಉಸಿರುಕಟ್ಟಿಸುವಷ್ಟು ಪೊಸೆಸಿವ್ನೆಸ್ ಬೆಳೆಸಿಕೊಂಡಿದ್ದಾನೆ ಅಂತ ಅರಿವಾಗಿತ್ತು. ಅದೇನು ಪ್ರೀತಿಯಲ್ಲಿ ಕುರುಡಾಗಿದ್ದೆನೋ ಅಥವಾ ಆ ರೀತಿಯ ವರ್ತನೆಯನ್ನೇ ನಿಜವಾದ ಪ್ರೀತಿ ಅಂತ ತಿಳಿದುಕೊಂಡಿದ್ದೆನೋ ಗೊತ್ತಿಲ್ವೋ ಅವನು ಅಷ್ಟೆಲ್ಲ ಕೆಟ್ಟದಾಗಿ ವರ್ತಿಸಿದರೂ ಅವನ ಪ್ರೀತಿಯನ್ನು ತಿರಸ್ಕರಿಸಿ ಮುನ್ನಡೆಯಬೇಕೆಂದು ಅನ್ನಿಸಲಿಲ್ಲ. ಮೆಸೇಜಲ್ಲಿ ಒಂದ್ ಗುಡ್ ಬೈ ಕಳಿಸಿದ್ದರೂ ಮುಗುದೋಗಿರೋದು. ಅವನ ಪೊಸೆಸಿವ್ನೆಸ್ ಅವನು ಕೊಟ್ಟ ಏಟುಗಳಿಗಿಂತಲೂ ನನಗೆಚ್ಚು ಭಯ ಮೂಡಿಸಿದ್ದು ಅವನು ನನ್ನನ್ನು ಹಿಂಬಾಲಿಸುತ್ತಿದ್ದಾನೆ ಅನ್ನುವ ಸಂಗತಿ. ಅವನಾಗಲೇ ಡಿಗ್ರಿ ಮುಗಿಸಿದ್ದ. ಕೆಲಸಕ್ಕೆ ಸೇರಿರಲಿಲ್ಲ. ಫ್ರೆಂಡ್ಸ್ ಜೊತೆ ಸುತ್ತಾಡಿಕೊಂಡು ನಿಂತಿರ್ತಿದ್ದ ಅಂದ್ಕೊಂಡಿದ್ದೆ. ಅವನು ಫ್ರೆಂಡ್ಸ್ ಜೊತೆ ಅಲೀತಿರಲಿಲ್ಲ, ನನ್ನ ಬೆನ್ನ ಹಿಂದೆ ಗೂಢಚಾರಿಕೆ ಮಾಡ್ತಿದ್ದಾನೆ ಅನ್ನೋದು ಅವತ್ತು ಅರಿವಾಗಿತ್ತು. ಇದಕ್ಕೆ ಮುಂಚೆಯೂ ಅವನು ನಾ ಗೆಳತಿಯರೊಂದಿಗೆ ಹೊರಗೆ ಹೋಗಿದ್ದಾಗ ಸಿಕ್ಕಿಬಿಡೋನು. ಆಕಸ್ಮಿಕ ಅಂತ ಅಂದುಕೋತಿದ್ದೆ. ಆಕಸ್ಮಿಕವಾಗಿರಲಿಲ್ಲ ಻ಅಂತ ಅವತ್ತು ಅರಿವಾಯಿತು. ಒಂದು ವಾರದವರೆಗೆ ನಾ ವಿವರಣೆ ಮೇಲೆ ವಿವರಣೆ ನೀಡಿದ ನಂತರ ಒಂದಷ್ಟು ಸಮಾಧಾನಗೊಂಡ. ತಾತ್ಕಾಲಿಕ ಻ಅಷ್ಟೇ. ಗಂಡಸರಿಗೆ ಮೊದಲ ಸಲ ಕೈ ಮಾಡೋಕೆ ಸಮಯವಾಗ್ತದೆ, ಒಂದ್ಸಲ ಕೈ ಮಾಡಿದ ಮೇಲೆ ಅದರಲ್ಲೇನೋ ಖುಷಿ ಸಿಗ್ತದೋ ಏನೋ ಪದೇ ಪದೇ ಕೈ ಮಾಡಲಾರಂಭಿಸುತ್ತಾರೆ. ಪರಶು ಕೂಡ ಻ಅಷ್ಟೇ ಚಿಕ್ಕ ಪುಟ್ಟ ವಿಷಯಕ್ಕೆ ಜಗಳ ತೆಗೆದು ಕೆನ್ನೆಗೆ ಬಾರಿಸೋನು. ಬಹಳಷ್ಟು ಸಲ ನಾ ನಮ್ಮ ಕಾಲೇಜಿನ ಹುಡುಗರೊಟ್ಟಿಗೆ ಮಾತನಾಡಿದ್ದು ಕಾರಣವಾಗಿರ್ತಿತ್ತು. ಮಾತಿನ ಮಧ್ಯೆ ಅವನು ಹಿಂಗ್ ಮಾಡ್ದ ಇವನು ಹಿಂಗ್ ಹೇಳ್ದ ಅಂತ ನಾ ಒದರಿ ಬಿಟ್ತಿದ್ದೆ. ಪರಶು ಎರಡೇಟು ಬಿಗಿಯುತ್ತಿದ್ದ. ನಾನು ಆ ಪಿಜಿ ಮಾಡ್ತೀನಿ ಈ ಪಿಜಿ ಮಾಡ್ತೀನಿ, ಚೆನ್ನಾಗಿ ಕೆಲಸ ಮಾಡಿ ಹೆಸರು ದುಡ್ಡು ಸಂಪಾದಿಸ್ತೀನಿ ಅಂತಿದ್ದೆ. ಮನೇಲಿರಬೇಕು ನೀನು ರಾಣಿಯಂಗೆ, ಕೆಲಸಕ್ಕೆಲ್ಲ ಹೋಗುವಂತಿಲ್ಲ ಅಂತ ಒಂದೇಟು ಬಿಗಿಯುತ್ತಿದ್ದ. ನಾ ದಡ್ಡಮ್ಮ. ಻ಅವನು ಹೊಡೆದಾಗ ಎರಡನಿ ಕಣ್ಣೀರು ಹಾಕುತ್ತಿದ್ದೆ. ಮುಂದಿನ ಸಲ ಮತ್ತೆ ಮಾತನಾಡಿ ಒದೆ ತಿನ್ನುತ್ತಿದ್ದೆ. ಅವನಿಗೆ ಹೊಡೆಯುವುದು ಅಭ್ಯಾಸವಾದ ಹಾಗೆ ನನಗೆ ಹೊಡೆಸಿಕೊಳ್ಳುವುದೂ ಅಭ್ಯಾಸವಾಗುತ್ತಿತ್ತೇನೋ' 

“ಈ ಕಾಲದ ಹುಡುಗೀರೂ ಹಿಂಗ್ ಹೊಡೆಸಿಕೊಂಡು ಇರ್ತಾರ. ಻಻ಅದೂ ಲವರ್ ಜೊತೆಗೆ" 

'ಮ್. ಏನ್ ಹೇಳಲಪ್ಪ. ನಾನೇನು ಅಷ್ಟು ದಡ್ಡಿ ಇದ್ನೋ, ಪ್ರೀತಿಯಲ್ಲಿ ಅಷ್ಟು ಕುರುಡಾಗಿದ್ನೋ ಗೊತ್ತಿಲ್ಲ. ಬಹುಶಃ ನಾವಿಬ್ರೂ ಗಂಡ ಹೆಂಡತಿ ಅನ್ನೋ ಭಾವನೆ ಮನಸ್ಸಲ್ಲಿ ಬೆಳೆದುಬಿಟ್ಟಿದ್ದಕ್ಕೆ ಸುಮ್ನಿದ್ನೋ ಏನೋ' 

“ಗಂಡನ ಕೈಲೂ ಹೊಡೆಸಿಕೊಳ್ಳಬಾರದು, ಹೊಡೆಸಿಕೊಂಡರೂ ಸುಮ್ಮನಿರಬಾರದು ಅಲ್ವ?” 

'ಹು. ಹೌದು' 

“ಹೋಗ್ಲಿ ಬಿಡು. ಅಲ್ಲ. ನಿಮ್ ಲವ್ ಶುರುವಾಗಿದ್ದು ಪಿಯುಸಿಯಲ್ಲಿ. ಇಂಟರ್ನ್ ಶಿಪ್ ಅಂದ್ರೆ ನಿಮ್ಮ ಪ್ರೀತಿ ಶುರುವಾಗಿ ಐದಾರು ವರ್ಷವಾಗಿತ್ತು. ನಿಮ್ಮ ಮನೆಯಲ್ಲಾಗಲೀ ಅವರ ಮನೆಯಲ್ಲಾಗಲೀ ನಿಮ್ಮ ಪ್ರೀತಿ ಬಗ್ಗೆ ಏನೂ ತಿಳಿಯಲೇ ಇಲ್ವ" 

'ಅವರಮ್ಮನಿಗೆ ಮಗ ಯಾರ್ಜೊತೆಯೋ ಸುತ್ತಾಡ್ತಿದ್ದಾನೆ ಅಂತ ಗೊತ್ತಿತ್ತು. ಮಾಮೂಲಿ ಯಾರೋ ಫ್ರೆಂಡು ಅಂದ್ಕೊಂಡಿದ್ರೋ ಏನೊ. ಅವರಕ್ಕನಿಗೆ ನಮ್ಮ ಪ್ರೀತಿಯ ವಿಷಯ ತಿಳಿದಿತ್ತು. ಇನ್ನು ನಮ್ಮ ಮನೆಯಲ್ಲಿ ಅಪ್ಪ ಻ಅಮ್ಮನಿಗೆ ಅದರ ಸುಳಿವಿರಲಿಲ್ಲ. ತಮ್ಮನಿಗೆ ಪೂರ್ತಿ ಗೊತ್ತಿತ್ತು. ನಾನು ತಮ್ಮ ಇಬ್ಬರೇ ಇದ್ದಾಗ ಪರಶು ಮನೆಗೆ ಬರೋನು. ನನಗೆ ಗೊತ್ತಿರೋ ಮಟ್ಟಿಗೆ ಇವತ್ತಿಗೂ ನನ್ನ ತಮ್ಮ ಪರಶು ಸಂಪರ್ಕದಲ್ಲಿದ್ದಾರೆ' 

“ನಿನ್ನ ತಮ್ಮನ ಬಳಿ ವಿಚಾರಿಸಬೇಕು ಅವನ ಬಗ್ಗೆ ಅಂತ ಅನ್ನಿಸಲ್ವ" 

'ಇಲ್ವೋ ಅನ್ನಿಸಲ್ಲ. ಅನ್ನಿಸೋದೇ ಇಲ್ಲ ಅಂತೆಲ್ಲ ಹೇಳೋಕಾಗಲ್ಲ. ಅನ್ನಿಸ್ತದೆ. ಆದರೆ ಅವನು ನನ್ನಲ್ಲಿ ಬಿಟ್ಟುಹೋಗಿರೋ ಭಯ ವಿಚಾರಿಸೋಕೆ ಬಿಡಲ್ಲ' 

“ಹೊಡೆದಿದ್ದರಿಂದ ಉಂಟಾದ ಭಯವಾ?” 

'ಅಯ್ಯೋ ಅವ ಮುಂದಿನ ದಿನಗಳಲ್ಲಿ ಮಾಡಿದ್ದನ್ನು ನೆನಪಿಸಿಕೊಂಡರೆ ಹೊಡೆದದ್ದೆಲ್ಲ ಏನೂ ಲೆಕ್ಕಕ್ಕಿಲ್ಲ. ಅವೆಲ್ಲ ಶುರುವಾಗಿದ್ದು ಮನೆಯಲ್ಲಿ ಪ್ರೀತಿಯ ವಿಷಯ ತಿಳಿದಾಗ' 

“ಹೆಂಗ್ ಗೊತ್ತಾಯ್ತು ನಿಮ್ಮ ಮನೆಯಲ್ಲಿ"

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

1 comment: