Aug 11, 2019

ಒಂದು ಬೊಗಸೆ ಪ್ರೀತಿ - 26

ಡಾ. ಅಶೋಕ್.‌ ಕೆ. ಆರ್.‌
ನಾನೂ ಸಾಗರ ಲವ್ ಯು ಲವ್ ಯು ಟೂ ಅಂತೇಳಿಕೊಂಡ ಮೇಲೆ ಬರುತ್ತಿರುವ ಮೊದಲ ನೈಟ್ ಡ್ಯೂಟಿ ಇದು. ಬೆಳಿಗ್ಗೆ ಡ್ಯೂಟಿಯಿದ್ದಾಗ ಆಗೊಮ್ಮೆ ಈಗೊಮ್ಮೆ ಮೆಸೇಜು ಮಾಡಲಷ್ಟೇ ಸಾಧ್ಯವಾಗಿತ್ತು, ಸಾಗರನ ಮನವಿನ್ನೂ ಪೂರ್ಣ ತಿಳಿಯಾಗಿಲ್ಲವೇನೋ ಎಂದೇ ನನಗನ್ನಿಸುತ್ತಿತ್ತು. ಹಂಗೇನಿಲ್ವೇ, ಓದೋದ್ರಲ್ಲಿ ಸ್ವಲ್ಪ ಬ್ಯುಸಿ. ನೀ ಬಿಡುವಾದಾಗ ಫೋನ್ ಮಾಡು ಮಾತಾಡುವ ಅಂತೇಳಿದ್ದ. ಮಾತಿನಲ್ಲಿ ಉದಾಸೀನತೆಯಿರಲಿಲ್ಲವಾದರೂ ಹೊಸತಾಗಿ ಪ್ರೀತಿಗೆ ಬಿದ್ದವರಲ್ಲಿದ್ದ ಉತ್ಸಾಹವೂ ಇರಲಿಲ್ಲ. ಸರಿ ಅವನ ಮನದ ಗೊಂದಲಗಳೂ ಪೂರ್ಣ ತಪ್ಪೇನಲ್ಲವಲ್ಲ. ಎಷ್ಟು ಸಮಯ ಬೇಕೋ ಅಷ್ಟನ್ನು ಆತ ತೆಗೆದುಕೊಳ್ಳಲಿ ಎಂದುಕೊಂಡು ನಾನೂ ಹೆಚ್ಚು ಮೆಸೇಜು ಮಾಡುವುದಕ್ಕೆ ಹೋಗಲಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಹೋದರೆ ಮನೆ ಕೆಲಸದ ಸುಸ್ತು. ಜೊತೆಗೆ ಅಪ್ಪ ಅಮ್ಮ ಶಶಿ ಒಂದೇ ಸಮ ಫೋನ್ ಮಾಡಿಕೊಂಡು ಏನಂದ್ರು ಏನಂದ್ರು ಒಪ್ತಾರಂತ ಒಪ್ಪಬಹುದು ಅಂತ ನಿನಗನ್ನಿಸುತ್ತ ಅಂತ ಪಟ್ಟು ಬಿಡದೆ ಪ್ರಶ್ನೆ ಕೇಳಿ ಕೇಳಿ ಮತ್ತಷ್ಟು ಸುಸ್ತು ಮಾಡಿಸೋರು. 

ರಾತ್ರಿ ಹತ್ತರವರೆಗೆ ರೋಗಿಗಳಿದ್ದರು. ಹತ್ತಕ್ಕೆ ಬಿಡುವಾದಾಗ ಸಾಗರನಿಗೆ ಮೆಸೇಜು ಮಾಡಿದೆ. 

'ಏನ್ ಮಾಡ್ತಿದ್ಯೋ' 

"ಊಟ ಮುಗಿಸಿ ಸಿಗರೇಟು ಹಚ್ಚಿದ್ದೆ" 

'ಅಷ್ಟೊಂದೆಲ್ಲ ಸಿಗರೇಟು ಸೇದಬೇಡ್ವೋ' 

"ಯಾಕೋ"

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

'ಮುತ್ತು ಕೊಡುವಾಗ ವಾಸ್ನೆ ಬರ್ತದೆ' 

"ತರ್ಲೆ. ನನ್ನ ಕಟ್ಟಿಕೊಳ್ಳೋಳ ಪ್ರಾಬ್ಲಂ ಅದು ಬಿಟ್ಟಾಕು" 

'ಯಾಕೆ? ನಂಗೂ ಪ್ರಾಬ್ಲಮ್ಮೇ....' 

"ಅಂದ್ರೆ" 

'ಅಂದ್ರೆ.... ಏನೂ ಇಲ್ಲ ಬಿಡು' 

"ಮ್. ಸರಿ" 

'ಫೋನ್ ಗೀನ್ ಮಾಡ್ಲಾ ಆಮೇಲಿಂದಾ ಹೆಂಗೆ' 

"ಮಾಡೇ. ಅದನ್ನೇನ್ ಕೇಳ್ತಿ" 

'ಸರಿ ತಡಿ. ಒಂದಷ್ಟು ಕೆಲಸ ಮುಗಿಸಿ ಮಾಡ್ತೀನಿ' 

ಕೆಲಸವೇನೂ ಇರಲಿಲ್ಲ. ಯಾಕೋ ಮುಗುಮ್ಮಾಗಿ ಮಾತಾಡ್ತಿದ್ದಾನೆ. ಏನು ಮೆಸೇಜು ಮಾಡೋದು ಅನ್ನೋದು ಹೊಳೆಯದೇ ಕೆಲಸ ಮುಗಿಸಿ ಮಾಡ್ತೀನಿ ಅಂತ ಹೇಳಿ ಬಿಡುವು ತೆಗೆದುಕೊಂಡೆ. ಇವತ್ತು ಫೋನ್ ಮಾಡೋದೇ ಬೇಡ ಅಂತನ್ನಿಸಿತಾದರೂ ಅವನೊಡನೆ ಮಾತನಾಡದೆ ಇರಲು ನನಗೂ ಕಷ್ಟವಾಗುತ್ತಿತ್ತು. ತಲೆ ತುಂಬಾ ಬೆಡ್ ಶೀಟು ಹೊಚ್ಚಿಕೊಂಡು ಫೋನಲ್ಲಿ ಮೆಲ್ಲಗಿನ ದನಿಯಲ್ಲಿ ಮಾತನಾಡುವ ಸುಖವೇ ಸುಖ. ಎಷ್ಟೋ ವರ್ಷಗಳ ..... ವರ್ಷಗಳೇನು? ಯುಗಗಳೇ ಆಗಿಹೋದಂತಿದೆ..... ಪರಶು ಜೊತೆಯಲ್ಲಿ ಹೀಗೆ ಹರಟುತ್ತಿದ್ದೆ. ಪಕ್ಕದ ರೂಮಿನಲ್ಲಿದ್ದ ಅಪ್ಪ ಅಮ್ಮನಿಗೂ ಕೇಳದಷ್ಟು ಮೆಲ್ಲಗಿನ ದನಿಯಲ್ಲಿ ಮಾತನಾಡುತ್ತಿದ್ದೆ. ಮಾತನಾಡುತ್ತಿದ್ದುದೆಲ್ಲಿ? ಕಾಲ ಸರಿದಂತೆ ಅವನು ಬಯ್ಯುತ್ತಿದ್ದ.... ನಾನು ಹಂಗಲ್ಲ ಕಣೋ ಹಿಂಗೆ ಅಂತ ಸಮಾಧಾನಕರ ಮಾತುಗಳನ್ನು ಪುನರಾವರ್ತಿಸುತ್ತಿದ್ದೆ. ಮೆಡಿಕಲ್ ಸೇರಿ ಒಂದು ವರುಷದವರೆಗೂ ಚೆನ್ನಾಗೇ ಇತ್ತು ಎಲ್ಲ. ಅದೆಲ್ಲಿ ಸಮಸ್ಯೆಯಾಯಿತೋ ಗೊತ್ತಿಲ್ಲ, ಆಮೇಲಿನ ದಿನಗಳದ್ದೆಲ್ಲ ಸವಿ ನೆನಪುಗಳಿಗಿಂತ ಕಹಿ ಕಷ್ಟಗಳೇ ಹೆಚ್ಚು ನೆನಪಾಗ್ತವೆ. ಸಾಗರನನ್ನು ನೆನಪು ಮಾಡಿಕೊಂಡಾಗಲೆಲ್ಲ ನಾನ್ಯಾಕೆ ಪುರುಷೋತ್ತಮನನ್ನು ನೆನಪಿಸಿಕೊಳ್ಳುತ್ತೇನೆ? ಸಾಗರನಲ್ಲಿ ಪರಶುನನ್ನು ಕಾಣಲು ಹಂಬಲಿಸುತ್ತಿದ್ದೇನಾ? ಸಾಧ್ಯವಿಲ್ಲ. ಪರಶುವಿನ ಗುಣಕ್ಕೂ ಸಾಗರನ ವ್ಯಕ್ತಿತ್ವಕ್ಕೂ ಹೋಲಿಕೆಯೇ ಇಲ್ಲ. ಇಬ್ಬರೂ ಬೇರೆ ಬೇರೆ ಗ್ರಹದ ಜೀವಿಗಳಂತಿದ್ದಾರೆ. ಚೂರು ಹೋಲಿಕೆಯೂ ಇಬ್ಬರ ನಡುವಿಲ್ಲ. ಬಹುಶಃ ಪರಶುವಿನ ಬಗ್ಗೆ ನಾನು ಇನ್ಯಾರ ಬಳಿಯೂ ಮಾತನಾಡುವುದಕ್ಕೆ, ದಿನಂಪ್ರತಿ ನೆನಪಾಗುವವನ ಬಗ್ಗೆ ಇನ್ಯಾರ ಬಳಿಯೂ ಹೇಳಿಕೊಳ್ಳಲಾಗದ್ದಕ್ಕೆ ಸಾಗರ ಉತ್ತರವಾಗಿ ಸಿಕ್ಕಿದ್ದಾನೆ. ಇವನ ಬಳಿಯಾದರೆ ಎಲ್ಲವನ್ನೂ ಹಂಚಿಕೊಳ್ಳಬಹುದು. ಯಾವುದೇ ಮುಜುಗರವಿಲ್ಲದೆ ತೋಡಿಕೊಳ್ಳಬಹುದು. ನಾನಾದರೂ ಜೀವನದಲ್ಲಿ ಒಂದು ಲವ್ ಬಿಟ್ಟು ಬೇರೇನು ಕಡಿದು ಹಾಕಿದ್ದೀನಿ. ಹಾಗಾಗಿ ಸಾಗರನ ಜೊತೆ ಮಾತನಾಡುವಾಗೆಲ್ಲ ಪರಶು ಬಗ್ಗೆಯೇ ಹೇಳಿಕೊಳ್ಳುತ್ತೇನೋ ಏನೋ? ರಾಜಿಗೆ ಪರಶು ವಿಷಯ ಚೂರ್ಚೂರು ಗೊತ್ತಿದೆಯಾದರೂ ಪೂರ್ಣ ಸಂಗತಿಗಳನ್ನು ಹಂಚಿಕೊಳ್ಳುವುದು ಅಸಾಧ್ಯ. ಇನ್ನು ತಮ್ಮ ಶಶಿಗೆ ಹೆಚ್ಚು ಕಡಿಮೆ ಎಲ್ಲವೂ ಗೊತ್ತು. ಎಷ್ಟಾದರೂ ತಮ್ಮ, ಎಷ್ಟೇ ಸ್ನೇಹದಿಂದಿದ್ದರೂ ತಮ್ಮನೇ ಅಲ್ಲವೇ, ಮದುವೆಯಾದ ಮೇಲೆ ನಾ ಪರಶುನನ್ನು ಮರೆತುಬಿಟ್ಟಿದ್ದೇನೆ ಅಂತ ತೋರ್ಪಡಿಸಿಕೊಳ್ಳಲೇಬೇಕಲ್ಲ. ಮನದ ಗೊಂದಲ ಯೋಚನೆಗಳನ್ನೆಲ್ಲ ಪೂರ್ಣವಾಗಿ ಹೇಳಿಕೊಂಡುಬಿಟ್ಟರೆ ನಾನೇ ಚೀಪ್ ಅನ್ನಿಸಿಕೊಂಡುಬಿಡುತ್ತೇನೆ. ನಾನಷ್ಟೇ ಯಾಕೆ ಯಾರೂ ಅವರ ಮನದ ಪೂರ್ಣ ಯೋಚನೆಗಳನ್ನು ಅನ್ಯರ ಬಳಿ ಹಂಚಿಕೊಳ್ಳಲಾರರು. ಏನೋ ನನ್ನ ಅದೃಷ್ಟಕ್ಕೆ ಸಾಗರ ದಕ್ಕಿದ್ದಾನೆ. ಯಾವ ಚಿಂತೆಗೂ ಆಸ್ಪದ ನೀಡದೆ ಇವನೊಡನೆ ಎಲ್ಲವನ್ನೂ ಹಂಚಿಕೊಳ್ಳಬಹುದು. ಅದಕ್ಕೇ ಅಲ್ವಾ ಅವ ನನ್ನ ಆತ್ಮ ಸಂಗಾತಿ. ಮನದಲ್ಲೇ ಸಾಗರನ ತುಟಿಗೆರಡು ಮುತ್ತು ನೀಡಿದೆ. 

"ಮುಗೀಲಿಲ್ವಾ ಕೆಲಸಗಳು" ಸಾಗರನ ಮೆಸೇಜು ಬಂತು. ನನ್ನ ಫೋನಿಗೆ ಕಾಯುತ್ತಿದ್ದಾನಿವನು ಅಂತ ನೆನಪಿಸಿಕೊಂಡು ಖುಷಿಯಾಯಿತು. ಅಪ್ಪಿ ಮುದ್ದಾಡುವಷ್ಟು ಖುಷಿಯಾಯಿತು. 

ಡ್ಯೂಟಿ ಡಾಕ್ಟರ್ ರೂಮಿಗೋಗಿ ಮಲಗಿಕೊಂಡು ಫೋನ್ ಮಾಡಿದೆ. ಒಂದೇ ರಿಂಗಿಗೆ ಎತ್ತಿಕೊಂಡ. 

'ಏನೋ ಕೈಯಲ್ಲೇ ಮೊಬೈಲ್ ಇಟ್ಕೊಂಡು ಕಾಯ್ತಿದ್ದ?' ನಗುತ್ತಾ ಕೇಳಿದೆ. 

"ಕಾಯೋ ಹಂಗೆ ಮಾಡಿದ್ದಿಯಲ್ಲಪ್ಪ" ಅವನೂ ನಗುತ್ತಲೇ ಹೇಳಿದ. 

'ಕೋಪಾನ?' 

"ಯಾಕೆ" 

'ನಿನ್ನ ಜೀವನದಲ್ಲಿ ಬಂದು ಬೇಡದಿರೋ ತೊಂದರೆ ಎಲ್ಲಾ ಕೊಡ್ತಿರೋದಕ್ಕೆ' 

"ಹಂಗೇನಿಲ್ವೇ. ನಿನ್ನ ಪ್ರೀತ್ಸೋದಕ್ಕೇನು ನಂಗ್ ಬೇಸರವಿಲ್ಲ. ನಿನ್ನಂತವಳ ಪ್ರೀತಿ ಸಿಕ್ಕಿದ್ದು ನನ್ನದೇ ಅದೃಷ್ಟ. ನೀ ಪೂರ್ತಿ ಜೀವನ ಸಿಕ್ಕೋದಿಲ್ವಲ್ಲ ಅನ್ನೋದಷ್ಟೆ ಬೇಸರ ನಂಗೆ. ಯಾಕೆ ನಂಗ್ ನೀ ಮುಂಚೇನೆ ಸಿಗಲಿಲ್ಲ. ಕೊನೇಪಕ್ಷ ನೀ ರಾಜೀವನನ್ನು ಮದುವೆಯಾಗೋಕೆ ಮುಂಚೇನಾದ್ರೂ ಸಿಗಬಾರದಿತ್ತಾ?” 

'ಮ್. ಏನ್ ಮಾಡೋಕಾಗುತ್ತಪ್ಪ. ಯಾರನ್ನೂ ಮಾತನಾಡಿಸದ ರೀತಿಯಲ್ಲೇ ನಾ ಬದುಕಬೇಕಿತ್ತು. ನಿನ್ನಂತೋನು ಲೈಫ್ ಪಾರ್ಟನರ್ ಆಗೋ ಅದೃಷ್ಟ ನನ್ನಂತವಳಿಗಿಲ್ಲ ಬಿಡೋ. ಜೊತೆಯಾಗಿ ಬದುಕದಿದ್ದರೇನಾಯ್ತು ಸಾಯೋವರ್ಗೂ ಮಾನಸಿಕವಾಗಂತೂ ಜೊತೆಯಾಗೇ ಇರಬಹುದು ಬಿಡೊ' 

"ಹು. ಅದೂ ಸತ್ಯಾನೇ. ಆದ್ರೂ ದೈಹಿಕವಾಗೂ ಜೊತೆಯಾಗಿದ್ದರಷ್ಟೇ ಅಲ್ವಾ ಇಡಿ ಇಡಿಯಾಗಿ ಸಿಗೋದು" 

'ಏನ್ ಸಿಗುತ್ತೆ ಇಡಿ ಇಡಿಯಾಗಿ' ಪೋಲಿತನ ನನ್ನ ದನಿಯಲ್ಲಿ ಧಾರಾಳವಾಗಿ ಇಣುಕುತ್ತಿತ್ತು. 

"ನಿಂದೆಲ್ಲಾ ಇಡಿ ಇಡಿಯಾಗೇ ಸಿಗ್ತದೆ ಬಿಡು" ಮತ್ತೇರಿಸುವ ದನಿಯಲ್ಲೇಳಿದ. 

'ಅಂದ್ರೆ' ಗೊತ್ತಿಲ್ಲದವಳಂತೆ ಕೇಳಿದೆ. 

"ಹೇ ಹೋಗೆ.. ನಾಚ್ಕೆ ಆಗ್ತದೆ" 

'ನಮ್ಮಿಬ್ಬರ ಮಧ್ಯೆ ಎಂತದೋ ನಾಚ್ಕೆ. ಹೇಳೋ' 

"ಒಂದೇನೋ ಕೇಳ್ಲಾ....." 

'ಕೇಳು' 

"ತಪ್ ತಿಳೀಬಾರ್ದು ನೀನು" 

'ನಮ್ ಮಧ್ಯೆ ಎಂತದೋ ತಪ್ ತಿಳಿಯೋದು? ಕೇಳು' 

"ಅಲ್ಲ ಇದ್ ತೀರ ಪರ್ಸನಲ್ಲು" 

'ಪರವಾಗಿಲ್ಲ ಕೇಳು ಚಿನ್ನಿ. ನನ್ನ ನಿನ್ನ ನಡುವೆ ಯಾವ ಗೋಡೆಯೂ ಇರೋದು ಬೇಡ' 

"ನಿನ್ ಸೈಜ್ ಎಷ್ಟೆ" 

'ಇಷ್ಟು ಕೇಳೋಕೆ ಇಷ್ಟು ಬಿಲ್ಡಪ್ಪ! ಯಾವುದರ ಸೈಜ್ ಬೇಕು' 

"ಮೇಲ್ಗಡೇದು" 

'ಮೂವತ್ತಾರು' 

"ಓ! ತುಂಬಾ ದೊಡ್ಡದು ಅನ್ನು" 

'ಹು. ಕಣಪ್ಪ. ಏನ್ ಮಾಡಾಣ. ನಮ್ ಕಷ್ಟ ನಮಗೆ' 

"ಅಂದ್ರೂ ನನಗಿಷ್ಟ ಬಿಡು" 

'ಅದ್ಯಾಕೆ ಗಂಡಸ್ರಿಗೆಲ್ಲ ದೊಡ್ಡ ದೊಡ್ಡದೇ ಇಷ್ಟ' 

"ಏನೋಪ್ಪ! ಪ್ರಕೃತಿ ಲೆಕ್ಕದಲ್ಲಿ ನೋಡಿದಾಗ ದೊಡ್ಡ ಮೊಲೆ ಅಂದರೆ ಮಕ್ಕಳನ್ನು ಚೆನ್ನಾಗಿ ಸಾಕುತ್ತಾಳೆ ಅಂತ ನಮ್ಮ ಮೆದುಳಿಗೆ ಅನ್ಸುತ್ತೋ ಏನೋ" 

'ಅದೇನದು ಯಾವಾಗ್ಲೂ ಪ್ರಕೃತಿ ಲೆಕ್ಕದಲ್ಲಿ ಪ್ರಕೃತಿ ಲೆಕ್ಕದಲ್ಲಿ ಅಂತೇಳ್ತಿರ್ತಿ' 

"ಅದ್ ಹಂಗೆ. ನಾವು ಬಹಳಷ್ಟು ಸಲ ನಮ್ಮ ಮನಸ್ಸಿನ ಭಾವನೆ ಮತ್ತೊಂದು ಮಗದೊಂದು ಅಂತ ಮಾತನಾಡ್ತಿರ್ತೀವಿ. ಕೊನೆಗೆ ವಿಶ್ಲೇಷಿಸಿ ನೋಡಿದಾಗ ಪ್ರಕೃತಿ ಲೆಕ್ಕದ ಯಾವುದೋ ಬೇಸಿಕ್ ಇನ್ಸ್ಟಿಂಕ್ಟ್ ಅಲ್ಲಿ ಕೆಲಸ ಮಾಡ್ತಿರ್ತದೆ. ನಾವು ಪರಿಸರದಿಂದ ಬಹಳಷ್ಟು ದೂರ ಸಾಗಿ ಬಂದು ಬಿಟ್ಟಿರೋದ್ರಿಂದ ಅದನ್ನ ಮರೆತು ಕಾವ್ಯಾತ್ಮಕವಾಗಿ ನಮ್ಮ ಭಾವನೆಗಳಿಗೊಂದು ರೂಪ ಕಟ್ಟಿಕೊಳ್ಳುವುದರಲ್ಲಿ ತೊಡಗಿಕೊಂಡಿರ್ತೇವೆ" 

'ಆದ್ರೂ ಆ ಭಾವನೆಗಳ ರೂಪ ಆಕರ್ಷಣೀಯವೇ ಅಲ್ಲವೇ' 

"ಅದ್ ಹೌದು. ಆ ಆಕರ್ಷಣೆಗಳ ಕಾರಣದಿಂದಲೇ ಅಲ್ಲವೇ ನಮ್ಮಿಬ್ಬರ ನಡುವೆ ಈ ಸಂಬಂಧ ಮೂಡಿರೋದು" 

'ಹು. ಸಾಗರ....' 

"ಹೇಳೇ" 

'ನಿನ್ನ ನೋಡಬೇಕು ಅನ್ನಿಸ್ತಿದೆ ಕಣೋ ಪುಟ್ಟ' 

"ಫೇಸ್ ಬುಕ್ ಓಪನ್ ಮಾಡಿ ನೋಡು ಫೋಟೋಸ್ ಹಾಕಿದ್ದೀನಿ" 

'ತರ್ಲೆ. ನಿನ್ನ ನೇರವಾಗಿ ನೋಡಬೇಕು ಅನ್ನಿಸ್ತಿದೆ ಅಂದಿದ್ದು' 

"ಮ್. ನಂಗೂ ಅನ್ನಿಸ್ತದೆ ಕಣೇ. ನಾನಿಲ್ಲಿ ನೀನಲ್ಲಿ. ಹೆಂಗೆ ನೋಡೋದು" 

'ಒಳ್ಳೆ ಬೇರೆ ದೇಶದಲ್ಲಿ ಇದ್ದೋರ ತರ ಮಾತಾಡ್ತೀಯಪ್ಪ. ಒಂದ್ ರಾತ್ರಿ ಜರ್ನಿ ಅಷ್ಟೇ ಮಂಗಳೂರಿಂದ. ನೋಡ್ಲೇಬೇಕು ಅಂತಿದ್ರೆ ನೀ ಬಂದೇ ಬರ್ತಿದ್ದೆ' 

"ಬರ್ತೀನಿ ಕಣೇ" 

'ಯಾವಾಗ್ಲೋ' 

"ಆದಷ್ಟು ಬೇಗ ಬರ್ತೀನೇ. ಬಂದ್ರೆ ಎಲ್ಲಿ ಸಿಗೋದು" 

'ಎಲ್ಲಿ ಅಂದ್ರೆ ಇನ್ನೆಲ್ಲಿ. ನಮ್ಮ ಮನೇಲಿ' 

"ಹಸ್ಬೆಂಡು" 

'ಅವರೂ ಇರ್ತಾರೆ' 

"ಹೇ ಹೋಗೇ. ನಿನ್ ಹಸ್ಬೆಂಡು ನಿನ್ ಅಪ್ಪ ಅಮ್ಮ ತಮ್ಮ ಸೋನಿಯಾ ಎಲ್ರನ್ನೂ ಭೇಟಿಯಾಗೋ ಆಸೆ ನಂಗೂ ಇದೆ. ಇಲ್ಲ ಅಂತಲ್ಲ. ಆದರೆ ಮೊದಲ ಸಲ ನಾವಿಬ್ರೇ ಭೇಟಿಯಾಗಬೇಕೇ...." 

'ಯಾಕೋ' 

"ಲವ್ ಯು ಕಣೇ ಧರೂ ಅಂತ ಎಲ್ಲರ ಮುಂದೆ ಹೇಳೋಕಾಗ್ತದೇನೇ ಗೂಬೆ" 

'ಗೊತ್ತು ಕಣೋ. ನಂಗೂ ಹಂಗೇ ಭೇಟಿಯಾಗಬೇಕು ಮೊದಲ ಸಲ ಅಂತ ಮನಸ್ಸಲ್ಲಿದೆ ಕಣೋ' 

"ಆದರೂ ಭೇಟಿಯಾಗೋದು ರಿಸ್ಕೇ ಕಣೇ" 

'ಯಾಕೋ' 

"ಆಮೇಲೇನಾದ್ರೂ ಹೆಚ್ಚು ಕಮ್ಮಿ ಆಗಿಬಿಟ್ರೆ" 

'ಹೆಚ್ಚು ಕಮ್ಮಿ ಏನಾಗ್ತದೆ?' 

"ಅಲ್ಲ ನಮ್ಮಿಬ್ಬರ ಮಧ್ಯೆ ಏನಾದ್ರೂ ನಡೆದುಬಿಟ್ರೆ" 

'ಏನಾದ್ರೂ ಅಂದ್ರೆ' 

"ಥೂ ಥೂ ಎಲ್ಲಾ ಬಿಡಿಸಿ ಹೇಳಬೇಕಪ್ಪ ಇವಳಿಗೆ. ನಮ್ಮಿಬ್ಬರ ಮಧ್ಯೆ ಸೆಕ್ಸ್ ನಡೆದುಬಿಟ್ರೆ ಅಂತೇಳಿದ್ದು" 

'ನಡೀಲಿ ಬಿಡು. ಅದರಲ್ಲೇನಿದೆ' 

"ತಪ್ಪಲ್ಲವೇನೇ ಅದು" 

'ಯಾಕ್ ತಪ್ಪು. ನನಗೆ ಮದುವೆಯಾಗಿದೆ ಅಂತಾನಾ?' 

"ಹು" 

'ಮ್. ಒಂದೇನೋ ಕೇಳ್ಲಾ?' 

"ಮ್" 

'ನಿನ್ನ ಕಲ್ಪನೇಲಿ ನನ್ನ ಜೊತೆ ದೇಹ ಹಂಚಿಕೊಂಡಿಲ್ವಾ ನೀನು' 

"ಸುಮಾರ್ ಸಲ. ದಿನ ನಾನು ನಿನ್ನ ತೋಳತೆಕ್ಕೆಯಲ್ಲೇ ಮಲಗೋದು ಕಣೇ" 

'ಮತ್ತೆ ಆವಾಗ ತಪ್ಪು ಅನ್ನಿಸಲಿಲ್ವ' 

"ಇಲ್ಲಪ್ಪ. ಅದು ಬರಿ ಕಲ್ಪನೆ ಅಲ್ವಾ" 

'ನೋಡೋ. ನಾನು ಅಷ್ಟೆಲ್ಲ ಯೋಚಿಸೋಳಲ್ಲ. ಮನಸ್ಸು ಹಂಚಿಕೊಂಡವರು ದೇಹವನ್ನೂ ಹಂಚಿಕೊಳ್ಳೋದು ದೊಡ್ಡ ವಿಷಯವೂ ಅಲ್ಲ, ಅದು ತಪ್ಪೂ ಅಲ್ಲ. ಇಬ್ಬರ ನಡುವೆ ಭಾಂದವ್ಯ ಬೆಳೆಯೋಕೆ ಸೆಕ್ಸ್ ಕೂಡ ಒಂದು ದಾರಿಯಷ್ಟೇ. ಗಂಡು ಹೆಣ್ಣಿನ ನಡುವೆ ಭಾಂದವ್ಯ ಬೆಳೆಯೋಕೆ ಅದೊಂದೇ ದಾರಿ ಅಂತ ಅಂದುಕೊಳ್ಳೋದು ಎಷ್ಟು ತಪ್ಪೋ ಮನಸ್ಸು ಹಂಚಿಕೊಂಡ್ರೂ ಪರವಾಗಿಲ್ಲ ದೇಹ ಹಂಚಿಕೊಳ್ಳಬಾರದು ಅಂತಂದುಕೊಳ್ಳೋದು ಅಷ್ಟೇ ತಪ್ಪು. ಹಂಚಿಕೋಬೇಕು ಅಂದ್ರೆ ಹಂಚಿಕೊಳ್ಳೋದು ಬೇಡ ಅನ್ನಿಸಿದರೆ ಬೇಡ. ಅಷ್ಟೇ' 

"ಅಷ್ಟೇ ಅಂತೀಯ?” 

'ಹು ಕಣೋ ಅಷ್ಟೇ' 

"ಸರಿ. ತಮಾಷೆ ನೋಡು. ಇನ್ನೂ ನೀ ಹೆದರಬೇಕು ನನ್ನ ಮೀಟ್ ಮಾಡೋಕೆ, ಇವನೇನಾದ್ರೂ ನನ್ನ ರೇಪ್ ಗೀಪ್ ಮಾಡಿಬಿಟ್ರೆ ಅಂತ. ನಾನೇ ಹೆದರ್ತಿದ್ದೀನಿ" 

'ನಾನ್ಯಾಕೆ ಹೆದರ್ಲಿ? ನಾ ನಿನ್ನ ಪ್ರೀತಿಸ್ತಿದ್ದೀನಿ ಅಂತಂದ ಮೇಲೆ ನಿನ್ನ ಜೊತೆ ಮನಸು ಹಂಚಿಕೊಳ್ಳೋಕೆ ದೇಹ ಹಂಚಿಕೊಳ್ಳೋಕೆ ಸಿದ್ಧ ಅಂತಲೇ ಅರ್ಥವಲ್ಲವೇ? ನೀನ್ ರೇಪ್ ಯಾಕೆ ಮಾಡ್ಬೇಕು? ಧರು ಅಂತ ಕರುದ್ರೆ ಸಾಕು ನಿನ್ನ ತೋಳ ತೆಕ್ಕೆಯಲ್ಲಿರ್ತೀನಿ' 

ಅತ್ತ ಕಡೆ ಮೌನ. 

'ಯಾಕೋ ಏನಾಯ್ತು?' 

"ಯಂತದಿಲ್ವೇ. ಯಾಕೋ ಕಣ್ಣಲ್ ನೀರ್ ಜಿನುಗ್ತು" 

'ಅಳಬೇಡ್ವೋ. ನಿನ್ ಕಣ್ಣಲ್ ನೀರ್ ತರಿಸೋಳು ನಾನಾಗಬಾರದು' 

"ಅಯ್ಯೋ ಅಷ್ಟೆಲ್ಲ ಅತ್ತಿಲ್ವೇ. ಸುಮ್ನೆ ಚೂರು ತೇವವಾಯ್ತಷ್ಟೇ" 

'ಹಂಗೆ' ಎನ್ನುತ್ತಾ ನಕ್ಕೆ. 

'ಲೋ ಸಾಗರ.... ನನ್ನ ಜೊತೆ ಕಲ್ಪನೇಲಿ ಏನೇನೋ ಮಾಡ್ದೆ ಅಂದ್ಯಲ್ಲ. ಏನೇನ್ ಮಾಡ್ದೆ' 

"ಅವೆಲ್ಲಾ ಹೇಳ್ಬೇಕಾ?" 

'ಹೇಳ್ಬಾರ್ದಾ ಮತ್ತೆ. ತಿಳ್ಕೊಳ್ಳೋ ಕುತೂಹಲ ನಂಗೂ ಇರುತ್ತಲ್ವಾ. ನನ್ನ ಹುಡುಗ ಹೆಂಗೆಂಗೆ ಅಂತ' 

"ಮ್. ಇರ್ತದೆ. ನೀ ನಗೋದಿಲ್ಲ ಅಂದ್ರೆ ಹೇಳ್ತೀನಪ್ಪ" 

'ನಗೋದಿಲ್ಲ ಹೇಳೋ ಮಾರಾಯ' 

"ಅದೇನಪ್ಪ ಅಂದ್ರೆ ನನ್ನ ಮದುವೆ ಆದ ಮೇಲೆ ನನ್ನ ಹೆಂಡತಿ ಜೊತೆಗೆ ಮೊದಲ ರಾತ್ರಿ ಹೇಗಿರಬೇಕೆಂಬ ಕಲ್ಪನೆ ಮಾಡಿಕೊಳ್ಳುತ್ತಲೇ ಇರ್ತಿದ್ದೆ. ಆ ಹೆಂಡತಿಯೂ ಕಲ್ಪನೆಯವಳೇ ಆಗಿರುತ್ತಿದ್ದಳು. ನೀ ಬಂದ ಮೇಲೆ ಆ ಕಲ್ಪನೆಯ ಹುಡುಗಿಯ ಜಾಗದಲ್ಲಿ ನೀನಿದ್ದೆ" 

'ಮ್. ಅಂದ್ರೆ ನನ್ನ ನಿನ್ನ ಹೆಂಡತಿ ಅಂತ ನಿರ್ಧಾರ ಮಾಡಿಬಿಟ್ಟಿದ್ದಿ ಅನ್ನು' ನನ್ನ ದನಿಯ ಪಸೆ ಆರಿತ್ತು. ಈ ಹುಡುಗ ನನ್ನ ಇಷ್ಟೊಂದು ಹಚ್ಚಿಕೊಂಡುಬಿಟ್ಟಿದ್ದಾನಲ್ಲ ಅಂತ ಸಾಗರನ ಮೇಲಿದ್ದ ಪ್ರೀತಿ ನೂರ್ಮಡಿಯಾಯಿತು. ಈ ಪ್ರೀತಿಯಿಂದ ಯಾರಿಗಾದರೂ ನಯಾ ಪೈಸೆ ಉಪಯೋಗವಾಗುವುದು ಸಾಧ್ಯವಾ? ಈ ಪ್ರೀತಿಯೂ ನನ್ನಳೆಯ ಪ್ರೀತಿಯಂತೆ ನೋವೇ ತರ್ತದಾ? ಯಾಕೋ ಗೊಂದಲದ ಗೂಡಾಯಿತು ಮನಸ್ಸು. ಸಾಗರ ಮಾತನಾಡುವ ಹುಕಿಯಲ್ಲಿದ್ದ. ನನ್ನ ಮನದ ಗೊಂದಲಗಳನ್ನು ಅವನಿಗೆ ವರ್ಗಾಯಿಸಿ ಅವನ ಮಾತಿನ ಓಘಕ್ಕೆ ತಡೆಯೊಡ್ಡಲು ನನಗೆ ಮನಸ್ಸಾಗಲಿಲ್ಲ. 

"ಹು ಕಣೇ. ಪ್ರೀತಿ ಮೂಡಿದೆ ಅಂದ ಮೇಲೆ ಮದುವೆಯಾದಂತೆಯೇ ಲೆಕ್ಕ ಅಲ್ಲವಾ?" 

'ಅಂತಹುದೊಂದು ಚೌಕಟ್ಟು ಕಟ್ಟಿಕೊಳ್ಳಬೇಕು ಅನ್ನಿಸಿದರೆ ಅಡ್ಡಿಯಿಲ್ಲ. ಮುಂದಕ್ಕೆ ಹೇಳು' 

"ಅದೇನಂದರೆ ನಾ ನಿನ್ನ ಮನೆಗೆ ಬಂದಿರ್ತೀನಿ. ನೀ ನನ್ನ ಮೆಚ್ಚಿನ ನೀಲಿ ಬಣ್ಣದ ಸೀರೆ ಉಟ್ಟಿರ್ತಿ. ಎಷ್ಟೋ ವರ್ಷದ ನಂತರ ಭೇಟಿಯಾಗಿರ್ತೀವಿ. ಮುಂಚೆ ಭೇಟಿಯಾಗಿದ್ರೂ ಸಹ ಮಾತಂತೂ ಆಡಿರಲಿಲ್ವಲ್ಲ. ಹಂಗಾಗಿ ಒಂದರ್ಧ ಒಂದು ಘಂಟೆ ಮಾತಾಡ್ತಾನೇ ಕುಳಿತಿರ್ತೀವಿ. ಇರೋ ಟೀ ಮಾಡ್ತೀನಿ ಅಂತ ನೀ ಅಡುಗೆ ಮನೆಗೆ ಹೋಗ್ತಿ. ಅರೆಕ್ಷಣದ ನಂತರ ನಾ ಕೂಡ ಅಡುಗೆ ಮನೆಗೆ ಬರ್ತೀನಿ. ಅಲ್ಲಿ ನೀ ಹಾಲು ಕಾಯಿಸುತ್ತಿರ್ತಿ. ಬಾಗಿಲ ಪಕ್ಕದಲ್ಲಿದ್ದ ಪ್ರಿಜ್ಜಿನ ಬಳಿ ನಿಂತು ಮಾತು ಮುಂದುವರಿಸ್ತೀನಿ. ಹಾಲು ಕುದಿಯಲಾರಂಭಿಸ್ತದೆ. ಇಬ್ಬರೂ ಒಬ್ಬರನ್ನೊಬ್ಬರು ಕಾಣ್ತೀವಿ. ಬಾ ಇಲ್ಲಿ ಅಂತ ನಾ ಸನ್ನೆ ಮಾಡಿದಾಕ್ಷಣ ನೀ ಬಂದು ನನ್ನ ಎದೆಯಲ್ಲಿ ತಲೆ ಇಡ್ತಿ. ಇಬ್ರೂ ಒಂದೈದು ನಿಮಿಷ ಅದೇ ಭಂಗಿಯಲ್ಲಿ ನಿಂತಿರ್ತೀವಿ. ಹಾಲು ಕುದ್ದು ಉಕ್ಕುತ್ತೆ. ಅದನ್ನು ಆರಿಸಿ ಇಬ್ಬರೂ ರೂಮಿಗೆ ಬಂದು ಸೇರ್ತೇವೆ. ರೂಮು ಸೇರುವಷ್ಟರಲ್ಲಿ ನಿನ್ನ ಸೀರೆ ಸೆರಗನ್ನು ಕೆಳಕ್ಕೆ ಬೀಳಿಸಿರ್ತೀನಿ. ನೀ ನನ್ನ ಅಂಗಿಯ ಮೊದಲೆರಡು ಗುಂಡಿ ಕಳಚಿರ್ತಿ. ಮೆಲ್ಲಗೆ ನಿನ್ನ ಹಣೆಗೊಂದು ಮುತ್ತು ಕೊಡ್ತೇನೆ. ನೀ ತಿರುಗಿಸಿ ನನ್ನ ತುಟಿಗೆ ಮುತ್ತು ಕೊಟ್ಟು ಗಟ್ಟಿ ತಬ್ಬಿ ಹಿಡೀತೀಯಾ..... ಕೇಳಿಸ್ಕೋತಿದಿಯೇನೇ.... ಉಸಿರೇ ಇಲ್ಲ" 

'ಇಲ್ವೋ ಕೇಳಿಸ್ಕೋತಿಲ್ಲ. ಅನುಭವಿಸುತ್ತಿದ್ದೀನಿ...... ಉಸಿರಿಲ್ವಾ? ಇಲ್ಲಿ ನನ್ನ ಎದೆ ಮೇಲೆ ಕೆಳಕ್ಕೆ ಭರ ಭರ ಅಂತ ಓಡಾಡ್ತಿದೆ. ಮುಂದಕ್ಕೇಳು' 

"ಇಬ್ಬರೂ ಮುತ್ತು ಕೊಟ್ಟಿಕೊಳ್ಳುತ್ತಲೇ ಬಟ್ಟೆಗಳನ್ನೆಲ್ಲಾ ಕಳಚಿಕೊಂಡು ಹಾಸಿಗೆಯ ಮೇಲೆ ಅಡ್ಡಾಗ್ತೀವಿ. ನಾ ನಿನ್ನ ಮೊಲೆಗಳನ್ನು ಚೀಪುತ್ತಾ ಮಲಗ್ತೀನಿ. ನೀ ನನ್ನ ಶಿಶ್ನವನ್ನು ಮೆಲ್ಲನೆ ನೆವರಿಸುತ್ತಾ ಮಲಗ್ತಿ. ಮಧ್ಯೆ ಮಧ್ಯೆ ಮಾತನಾಡುತ್ತಾ ಮಧ್ಯೆ ಮಧ್ಯೆ ದೇಹದ ಇಂಚಿಂಚನ್ನೂ ಸ್ಪರ್ಶಿಸುತ್ತಾ ಘಂಟೆಗಳ ಕಾಲ ಸವೆಸಿ ನಿದ್ರೆಗೆ ಜಾರುತ್ತೇವೆ" 

'ವಾ ಮತ್ತೆ ಸೆಕ್ಸು?' 

"ಮೊದಲ ರಾತ್ರೀಲೇ ಎಂತದೇ ಸೆಕ್ಸು. ನನ್ನ ಕನಸಿನ ಮೊದಲ ರಾತ್ರಿ ಹಿಂಗೇ ಇರ್ಬೇಕು ಅಂತ ನನ್ನಾಸೆ" 

'ಇಷ್ಟೆಲ್ಲ ಮಾಡಿದ ಮೇಲೆ ಸೆಕ್ಸ್ ಮಾಡದೆ ಇರೋದೆಂಗೋ' 

"ಯಾಕ್ ಆಗಲ್ವ?" 

'ಆಗ್ತದೆ ಅಂತೀಯ' 

"ನಂಗೇನ್ ಗೊತ್ತೆ. ನೀ ಹೇಳ್ಬೇಕು ಅನುಭವಿ ಮೇಡಮ್ಮೂ" ಕೊಂಚ ತಮಾಷೆಯ ದನಿಯಲ್ಲೇ ಆತ ಹೇಳಿದ; ಆತನ ಮಾತಿನ ಹಿಂದಿನ ಅರ್ಥಗಳು ಹೊಳೆಯದಷ್ಟು ದಡ್ಡಿಯೇನಲ್ಲವಲ್ಲ ನಾನು. ಸರಸದ ಮನಸ್ಸು ಇದ್ದಕ್ಕಿದ್ದಂತೆಯೇ ಕೋಪದ ಕೈವಶವಾಯಿತು. ಸಾಗರನ ಮೇಲೆ ಕೋಪ ವ್ಯಕ್ತಪಡಿಸಲೂ ಮನಸ್ಸಾಗಲಿಲ್ಲ. ಥಟ್ಟನೆ ಫೋನ್ ಕಟ್ ಮಾಡಿದೆ. ಫೋನನ್ನು ಮಂಚದ ಪಕ್ಕದಲ್ಲಿದ್ದ ಮೇಜಿನ ಮೇಲೆ ಇಡುವಷ್ಟರಲ್ಲಿ ಸಾಗರನ ಕರೆ ಬಂದಿತ್ತು. ರಿಸೀವ್ ಮಾಡ್ಲಾ ಕಟ್ ಮಾಡ್ಲಾ ಎಂಬ ಯೋಚನೆಯಲ್ಲೇ ರಿಸೀವ್ ಮಾಡಿದೆ. 

"ಹಲೋ ಏನೋ ಕಟ್ ಆಯ್ತು" ಎಂದ. ನಾ ಕರೆ ಕಟ್ ಮಾಡಿರಬಹುದೆಂಬ ಯೋಚನೆ ಅವನಿಗೆ ಬಂದಿರಲಿಕ್ಕಿಲ್ಲ. 

'ಹು. ಏನೋ ಗೊತ್ತಿಲ್ಲ. ಸುಮಾರೊತ್ತಿಂದ ಮಾತನಾಡುತ್ತಿದ್ದೆವಲ್ಲ ಅದಕ್ಕಿರಬಹುದು' ನನ್ನ ದನಿಯಲ್ಲಿನ ಗಡಸುತನ ನನ್ನರಿವಿಗೇ ಬಂದಿದೆ, ಅವನಿಗೆ ತಿಳಿಯದೇ ಇರ್ತದಾ ಎಂದನ್ನಿಸಿತು. ಅವನಿಗ್ಯಾಕೋ ತಿಳಿಯಲಿಲ್ಲ. 

"ಹು. ಇರ್ಬೇಕು. ನಾವಿಬ್ರೂ ಜೊತೆ ಸೇರೋ ಮಾತಾಡೋದು ಈ ಮೊಬೈಲ್ ಕಂಪನಿಯವರಿಗೂ ಇಷ್ಟವಿಲ್ಲ ನೋಡು" 

ಮಾತು ಮುಂದುವರೆಸುವ ಮನಸ್ಸಿರಲಿಲ್ಲ ನನಗೆ. ಒಮ್ಮೆ ಆಕಳಿಸಿದೆ. 

"ಸರಿ ಕಣೇ. ತಡವಾಯ್ತು. ನಿಂಗೂ ನಿದ್ರೆ ಬರ್ತಿರಬೇಕು, ನನಗೂ ಕಣ್ಣು ಎಳೀತಿವೆ. ಮಲಗು. ಗುಡ್ ನೈಟ್. ಲವ್ ಯು" 

'ಗುಡ್ ನೈಟ್ ಕಣೋ. ಲವ್ ಯು ಟೂ' ಎಂದೇಳಿ ಫೋನಿಟ್ಟೆ. 

ಫೋನಿಟ್ಟು ಟಾಯ್ಲೆಟ್ಟಿಗೆ ಹೋಗಿ ಬರುವಷ್ಟರಲ್ಲಿ ಮೊಬೈಲಿಗೆ ಮೂರು ಮೆಸೇಜುಗಳು ಬಂದಿದ್ದವು. ಸಾಗರನವು. 

"ನೋವಾಯ್ತು ಕಣೇ" 

"ಫೋನ್ ಕಟ್ ಆಗಲಿಲ್ಲ. ನೀನೇ ಕಟ್ ಮಾಡ್ದೆ ಅಂತ ಗೊತ್ತಾಗಿದೆ ನಂಗೆ" 

"ತಪ್ ನಂದೇ. ಅನುಭವಿ ಮೇಡಮ್ಮೂ ಅಂತೆಲ್ಲ ಹೇಳ್ಬಾರ್ದಿತ್ತು. ತಪ್ ಮಾಡ್ದೇ ತಾನೇ ನಾನು. ಹಿಂಗೆಲ್ಲ ಹೇಳ್ಬಾರ್ದು ಸಾಗರ್ ತಪ್ಪದು ಅಂತ ಬಯ್ದು ಬುದ್ಧಿ ಹೇಳಬೇಕಿತ್ತಲ್ವ ನೀನು. ಅದನ್ನ ಬಿಟ್ಟು ಫೋನ್ ಕಟ್ ಮಾಡಿ ನಂತರ ಯಾರೋ ಅಪರಿಚಿತನೊಡನೆ ಮಾತನಾಡಿದ ಹಾಗೆ ಮಾತನಾಡಿದ್ರೆ ಹೇಗೆ? ಮ್. ಹೋಗ್ಲಿ ಬಿಡು. ನನ್ನನ್ನು ಬಯ್ದು ಸಮಾಧಾನ ಪಡಿಸಿ ಬುದ್ವಾದ ಹೇಳಿ ಸರಿ ಮಾಡಿ ಜೊತೆಯಲ್ಲಿರುವಂತೆ ನೋಡಿಕೊಳ್ಳೋಕೆ ನಾನೇನು ನಿನ್ನ ಮದುವೆಯಾದವನಾಗಲೀ ಮದುವೆಯಾಗುವವನಾಗಲೀ ಅಲ್ಲವಲ್ಲ. ನಾ ದೂರ ಹೋದ್ರೂ ಎಂತದೂ ವ್ಯತ್ಯಾಸವಾಗಲ್ಲ. ಮದುವೆಯಾಗಿರೋ ನಿನ್ನ ಬಗ್ಗೆ ಪ್ರೀತಿ ಪ್ರೇಮದ ಭಾವನೆಗಳನ್ನು ಬೆಳೆಸಿಕೊಂಡಿದ್ದು ನನ್ನ ತಪ್ಪೋ ಏನೋ. ಬಾಯ್" 

ಅವನ ಮೇಲಿದ್ದ ಕೋಪ ಮರೆಯಾಗಿ ಅಲಲಾ ಈ ಹುಡುಗ ಹೆಂಗೆ ನನ್ನ ಮನದ ಭಾವನೆಗಳನ್ನು ಹಿಂಗೆ ಬರೋಬ್ಬರಿ ಕಂಡುಹಿಡಿದುಬಿಡುತ್ತಾನಲ್ಲ ಅಂತ ಖುಷಿಯಾಯಿತು. 

'ಪ್ರೀತಿ ಹೇಳಿ ಕೇಳಿ ಹುಟ್ಟುತ್ತಾ? ಪ್ರೀತಿ ಹುಟ್ಟೋದು ತಪ್ಪೆಂಗ್ ಆಗ್ತದೋ? ಏನಪ್ಪ ಇವನು ಹಿಂಗ್ ಹೇಳಿ ಬಿಟ್ಟಾ ಅಂತ ನಂಗೆ ಇದ್ದಕ್ಕಿದ್ದಂತೆ ಸ್ವಲ್ಪ ಶಾಕ್ ಆಗಿದ್ದು ನಿಜ. ಇಲ್ಲಾಂತ ಹೇಳಲಾರೆ. ಆದರೆ ನೀ ಹೇಳಿದ್ದು ಏನು ಸುಳ್ಳಲ್ಲವಲ್ಲ. ಪರಶು ಜೊತೆ ಸೆಕ್ಸ್ ಮಾಡದೆ ಹೋದರೂ ರೊಮ್ಯಾನ್ಸ್ ಮಾಡಿದ್ದಂತೂ ಸತ್ಯವೇ, ಇನ್ನು ರಾಜಿ ಜೊತೆ ಒಂದಷ್ಟು ಅಪರೂಪಕ್ಕೆ ಸೆಕ್ಸ್ ಮಾಡ್ತಿರೋದಂತೂ ಇದ್ದೇ ಇದ್ಯಲ್ಲ. ಸೋ ಅದರ ಲೆಕ್ಕಕ್ಕೆ ನಾನು ಅನುಭವಿ ಮೇಡಮ್ಮೇ ಬಿಡು. ಸಾರಿ ಕಣೋ. ಅಪರೂಪಕ್ಕೆ ನೀನು ಒಳ್ಳೆ ಮೂಡಲ್ಲಿದ್ದೆ. ನಾ ಹಾಳು ಮಾಡಿಬಿಟ್ಟೆ. ಅದೂ ಮೊದಲ ರಾತ್ರೀನೇ ನಿನ್ನ ಮೂಡು ಹಾಳು ಮಾಡಬಾರದಿತ್ತು' ಎಂದು ಟೈಪಿಸಿ ಕೊನೆಯಲ್ಲಿ ಎರಡು ತರ್ಲೆ ಸ್ಮೈಲಿ ಕಳುಹಿಸಿದೆ. 

ಮೆಸೇಜು ಓದಿ ಮುಗಿಸುತ್ತಿದ್ದಂತೆಯೇ ಕರೆ ಮಾಡಿದ. ಮಾತಾಡೋಕೆ ಪೂರ್ತಿ ಮನಸ್ಸಿಲ್ಲವಾದರೂ ಮಾತನಾಡದೇ ಇರುವುದು ಕೂಡ ನನ್ನಿಂದಾಗುತ್ತಿರಲಿಲ್ಲ. 

'ಹೇಳೋ' ದನಿಯಲ್ಲಿ ಮುಂಚಿದ್ದ ಉತ್ಸುಕತೆಯ ಜೊತೆಗೆ ಒಂದಷ್ಟು ಮಾದಕತೆ ಸೇರಿದ್ದು ಅರಿವಾಯಿತು. 

"ಏನೇ ಹೇಳ್ಲಿ. ಸಾರಿ" 

'ಏ ಬಿಡೋ. ಅದೆಂತದದು ಸಾರಿ. ನೀ ತಮಾಷೆ ಮಾಡ್ದೆ. ನನಗೇನೇನೋ ನೆನಪಾಗಿ ಬೇಸರವಾಯಿತು' 

"ಅಂದ್ರೂ ಹಂಗ್ ಹೇಳಬಾರದಿತ್ತು" 

'ಹೋಗ್ಲಿ ಬಿಡೋ ಪುಟ್ಟ' ಎಂದೇಳಿದವಳಿಗೆ ಯಾಕೋ ಇವನು ಸಮಾಧಾನ ಆಗುವಂತೆಯೇ ಕಾಣುವುದಿಲ್ಲವಲ್ಲ, ಏನ್ ಮಾಡೋದು ಅಂತ ಯೋಚಿಸುತ್ತಲೇ 'ಸಾರಿ ಎಲ್ಲ ಬೇಡ ಪುಟ್ಟ' ಎನ್ನುತ್ತಾ ಫೋನಿನಲ್ಲೇ ಮುತ್ತು ಕೊಟ್ಟೆ. 

"ಅಂದ್ರೂ ತಪ್ಪು ಮಾತಾಡ್ದೆ ಅಂತ ಹೇಳ್ಬೇ....." ದಡ್ಡ ತಗಂಬಂದು ನಾ ಮುತ್ತು ಕೊಟ್ಟಿದ್ದು ಗೊತ್ತೇ ಆಗಿಲ್ಲ ಇವನಿಗೆ ಎಂದುಕೊಳ್ಳುತ್ತಾ ಮನದಲ್ಲೇ ನಗುತ್ತಾ ಮತ್ತೊಂದು ಮುತ್ತು ಕೊಟ್ಟೆ. 

"ಏನೇ ಅದು ಶಬ್ದ?” 

'ಏನೋ ಗೊತ್ತಿಲ್ಲಪ್ಪ' 

"ಹೇ ತರ್ಲೆ ಮುತ್ತು ಕೊಟ್ಟಾ?" 

'ಹು' 

"ಹೇಳ್ಬಿಟ್ಟು ಕೊಡೋದ್ ಅಲ್ವಾ" 

'ಯಾಕೋ' 

"ನಾನೂ ತಿರುಗಿಸಿ ಕೊಡ್ತಿದ್ದೆನಪ್ಪ" 

'ಈಗ್ಲೂ ಕೊಡು' 

"ಎಲ್ಲಿಗೆ ಕೊಡ್ಲಿ" 

'ಎಲ್ಲಿಗಾದ್ರೂ ಕೊಡು' 

"ಮೊದ್ಲು ಹಣೆಗೆ, ಆಮೇಲೆ ಕೆನ್ನೆಗೆ, ಆಮೇಲೆ ತುಟಿಗೆ, ಆಮೇಲೆ ನಿನ್ನ ಕತ್ತಿಗೆ, ಆಮೇಲೆ ಹಂಗೆ ಕೆಳಗೆ ಬಂದು ನಿನ್ನ ಚೂಡಿ ಕೆಳಗೆ ಮಾಡಿ ಎದೆಯ ನಡುವಿನ ಸೀಳಿಗೆ...." 

ಅವನು ವಿವರಿಸುತ್ತಾ ಹೋಗುತ್ತಿದ್ದರೆ ಅವನ ತುಟಿಗಳು ಹಣೆ ಕೆನ್ನೆ ತುಟಿ ಕತ್ತು ಸೀಳಿನಲ್ಲೆಲ್ಲ ಹರಿದಂತಾಯಿತು. ಕತ್ತಿನ ಬಳಿ ಮುತ್ತು ಕೊಡುವಾಗ ತಾಕಿದ ಅವನ ಬಿಸಿಯುಸಿರು ನನ್ನ ಮನದ ಕಾಮನೆಗಳನ್ನೆಲ್ಲ ಬಡಿದೆಬ್ಬಿಸಿತು. ಗಟ್ಟಿಯಾಗಿ ಸಾಗರನನ್ನು ತಬ್ಬಿಕೊಂಡೆ. 

'ಸಾಗರ.....' 

"ಹೇಳೇ ಧರೂ......" ಅವನ ದನಿಯೂ ಅವನದಾಗಿರುವಂತೆ ತೋರಲಿಲ್ಲ. ಅಷ್ಟು ಮಾದಕತೆ ತುಂಬಿತ್ತವನಲ್ಲಿ. 

'ಸಾಗರ......' 

"ಮ್....." 

'ಲವ್ ಯು ಕಣೋ...... ' 

"ಲವ್ ಯು ಟೂ ಕಣೇ....." 

'ನಂಗೆ ಏನೇನೋ ಅನ್ನಿಸ್ತಿದೆ' 

"ಏನೇನು ಅನ್ನಿಸ್ತಿದೆಯೇ" 

'ನಂಗ್ ನೀ ಬೇಕು' 

"ನಂಗೂ ನೀ ಬೇಕು" 

'ಪೂರ್ತಿ ಮೂಡ್ ಬಂದುಬಿಟ್ಟಿದೆಯೋ' 

"ನಂಗೂ ಅಷ್ಟೇ" 

'ಏನಾದ್ರೂ ಮಾಡೋ' 

“ಏನ್ ಮಾಡ್ಲೇ" 

'ಏನ್ ಬೇಕಾದ್ರೂ ಮಾಡು' 

“ಏನ್ ಬಟ್ಟೆ ಹಾಕೊಂಡಿದ್ದೀಯೇ" 

'ಚೂಡಿ' 

“ಒಳಗೆ" 

'ಒಳಗಿನ್ನೇನೋ ಬ್ರಾ ಅಂಡರ್‍‍ವೇರು' ನಗು ಬಂತು. 

“ಅಲ್ವ. ಹು. ಮೊದಲು ನಿನ್ನ ಹಿಂದಿನಿಂದ ತಬ್ಬಿಕೊಂಡು ನನ್ನೆರಡೂ ಕೈಗಳನ್ನು ನಿನ್ನ ಹೊಟ್ಟೆ ಮೇಲಾಡಿಸಿ ಹಂಗೆ ಮೇಲಕ್ಕೆ ಬಂದು ನಿನ್ನ ದೊಡ್ಡ ದೊಡ್ಡ ಮೊಲೆಗಳನ್ನು ಬಿಗಿಯಾಗಿ ಹಿಡಿತೀನಿ....” 

ಕಲ್ಪನೇಲೂ ಇಷ್ಟೊಂದ್ ಶಕ್ತಿ ಇರ್ತದೆ ಅಂತ ಆಗಲೇ ಅರಿವಾಗಿದ್ದು ನನಗೆ. ಅವನು ವಿವರಿಸುತ್ತಾ ಹೋದ ಹಾಗೆಲ್ಲ ನನ್ನ ಮೊಲೆತೊಟ್ಟುಗಳು ಬಿಗಿಯಾದವು. ಕೆಳಗಾಗಲೇ ಒಂದಷ್ಟು ದ್ರವ ಸ್ರವಿಸುತ್ತಿತ್ತು. ಸಾಗರನ ಕಲ್ಪನೆ ಮುಂದುವರೆಯುತ್ತಾ ಹೋದಂಗೆ ನಾ ಬೆತ್ತಲಾಗಿದ್ದೆ, ಅವನ ಕಲ್ಪನೆಯಲ್ಲಿ. ನಿಜದಲ್ಲೂ ಬಟ್ಟೆ ತೆಗೆದು ಹಾಕೋಣವೆಂದೆನ್ನಿಸಿತು. ಆದರೆ ನಾ ಮಲಗಿರೋದು ಡ್ಯೂಟಿ ಡಾಕ್ಟರ್ಸ್ ರೂಮಿನಲ್ಲಿ. ರಾತ್ರಿ ಹೊತ್ತಿನಲ್ಲಿ ಯಾರಾದ್ರೂ ರೋಗಿ ಗಂಭೀರವಾಗಿ ಬಂದರೆ ಬಟ್ಟೆ ತೊಟ್ಟೆಲ್ಲ ಹೋಗುವುದಕ್ಕೆ ತಡವಾಗ್ತದೆ. ನಾನೂ ಕಲ್ಪನೆಯಲ್ಲೇ ಬೆತ್ತಲಾದೆ. ಕಲ್ಪನೆಯಲ್ಲಿ ಬೆತ್ತಲಾದ ಸಾಗರನನ್ನು ತಬ್ಬಿ ಹಿಡಿದೆ. ನನ್ನ ದೇಹದ ಪ್ರತಿ ಮೂಲೆಯನ್ನು ಸಾವಕಾಶವಾಗಿ ಸ್ಪರ್ಶಿಸಿದ. ಕೈಯಿಂದ ಸ್ಪರ್ಶಿಸಿದ, ತುಟಿಯಿಂದ ಮುದ್ದಿಸಿದ. ಇಬ್ಬರೂ ಸಂಪೂರ್ಣ ಬೆತ್ತಲಾಗಿದ್ದೆವು. ಇಬ್ಬರೂ ಗಡುಸಾಗಿದ್ದೆವು. 

'ನನ್ ಕೈಯಲ್ಲಿ ತಡಕೊಳ್ಳೋಕೆ ಆಗ್ತಿಲ್ವೋ. ಬಾರೋ. ನನ್ನೊಳಗೆ ಬಾ' ಎಂದೆ. 

“ಮೊದಲ್ನೇ ದಿನಾನೇ ಮಾಡಿಬಿಡೋದೇನೇ" ಎಂದು ಕೇಳಿದ. ಻಻ಅವನ ಕಲ್ಪನೆಯ ಮೊದಲ ರಾತ್ರಿ ನೆನಪಾಯಿತು. ಬೆತ್ತಲಾಗಿ ತಬ್ಬಿ ಹಿಡಿದು ಇಡೀ ರಾತ್ರಿ ಕಳೆಯುವ ಆಸೆ ಅವನಿಗೆ. ನನಗೆ ಪೂರ್ಣವಾಗಿ ತೊಡಗಿಕೊಳ್ಳುವ ಬಯಕೆ. 

'ಹು. ಸುಮ್ನೆ ತಬ್ಬಿ ಮಲಗೋಕೆ ಆಸೆ ಅಲ್ವ ನಿನಗೆ. ಸರಿ ನಿನ್ನಿಷ್ಟ. ಆದರೆ ನಾವು ನಿಜ್ಜ ಸಿಕ್ಕಾಗ ಮಾಡಲೇಬೇಕು ನೋಡು ಮತ್ತೆ. ನಾವ್ ಪದೇ ಪದೇ ಸಿಗೋರಲ್ಲ. ತಡ ಮಾಡೋಕಾಗಲ್ಲ' ಻ಅಂತ್ಹೇಳಿ ನಕ್ಕೆ. ನಗಬಾರದಿತ್ತೇನೋ ಅನ್ನಿಸಿತು. 

ಅವನು ಕ್ಷಣ ಹೊತ್ತು ಮೌನದಿಂದಿದ್ದ. 

'ಏನಾಯ್ತೋ' 

“ಅದು....ಅದು.....ನಂಗ್ಯಾಕೋ ಸಮಾಧಾನವಾಗ್ತಿಲ್ಲ. ಮುಂದುವರಿಸಬೇಕು ಅನ್ನಿಸ್ತಿದೆ" 

'ಮ್. ಮುಂದುವರೆಸು.... ತಡೆದೋರ್ಯಾರು ನಿನ್ನ' 

“ಮ್. ಒಳಗೆ ಬರ್ಲಾ" 

'ಕೇಳೋದೇನಿದೆಯೋ ಬಾ'. ನಿಜದಲ್ಲಿ ಅವನು ಹಸ್ತ ಮೈಥುನ ಮಾಡಿಕೊಳ್ಳುತ್ತಿದ್ದ ಸದ್ದು ಕೇಳಿಸಿತು. ನನಗೂ ತಡೆಯಲಾಗಲಿಲ್ಲ. 'ಲವ್ ಯೂ ಸಾಗರ್.....' ಎಂದ್ಹೇಳುತ್ತಾ ಪ್ಯಾಂಟಿನ ಲಾಡಿ ಸಡಿಲ ಮಾಡಿ ಕೈ ಒಳಗಾಕಿಕೊಂಡೆ. ಸಾಗರನೇ ಪ್ರವೇಶಿಸಿದಂತಾಯಿತು. 

"ಲವ್ ಯೂ ಟೂ ಧರು....ಮಿಸ್ ಯು ಧರು....ಫಕ್ ಯು" 

ಅವನ ದನಿ ನನ್ನನ್ನು ಹುಚ್ಚೆಬ್ಬಿಸಿತು. 'ಫಕ್ ಮಿ ಸಾಗರ್....ಫಕ್ ಮಿ ಹಾರ್ಡ್' ಎಂದವಳ ದನಿಯಲ್ಲಿ ಸುಖದ ಸುಸ್ತಿನ ಗುರುತಿತ್ತು. ಅವನ ಹಸ್ತ ಮೈಥುನದ ವೇಗ ಹೆಚ್ಚುತ್ತಿದ್ದಂತೆ ನನ್ನ ಕೈಯಾಟದ ವೇಗವೂ ಹೆಚ್ಚಾಯಿತು. 

ಕ್ಷಣಹೊತ್ತಿನ ನಂತರ ಻ಅವನ ಉಸಿರಾಟದ ವೇಗ ಹೆಚ್ಚಾಗಿ ಕೊನೆಗೆ ಸ್ಖಲನ ನಂತರದ ಬಿಡುವಿನ ಉಸಿರಾಟ ಕೇಳಿಸಿತು. 

“ಆಗೋಯ್ತೆ" ಅಂದ. 

'ಗೊತ್ತಾಯ್ತೋ' ಅಂದೆ. 

“ಅದೆಂಗೆ ಗೊತ್ತಾಯ್ತು" 

'ಅದಂಗೇ. ಗೊತ್ತಾಯ್ತದೆ' 

“ಚೆನ್ನಾಗಿತ್ತಾ...” 

'ಹು. ಕೆಳಗೆಲ್ಲ ತೇವವಾಗೋಗಿದೆ ನಂಗೆ. ಡ್ಯೂಟೀಲಿರೋಳಿಗೆ ಹಿಂಗಾ ಮಾಡೋದು' ಎಂದು ನಕ್ಕೆ. ನನ್ನ ಕೈಯಿನ್ನೂ ಯೋನಿಯ ಸುತ್ತಲಿನ ಚರ್ಮವನ್ನು ಹಿಸುಕುತ್ತಿತ್ತು. 

“ಸರಿ ಬಿಡು ಇನ್ಮೇಲೆ ಮಾಡಲ್ಲ" 

'಻಻಻ಅದೇ ಮತ್ತೆ. ನೀ ಮಾಡದೇ ಹೋದರೆ ನಾನೇ ಮೇಲ್ಬಿದ್ದು ರೇಪ್ ಮಾಡಿಬಿಟ್ತೀನಿ ಅಷ್ಟೇ' ಇಬ್ಬರೂ ನಕ್ಕೆವು. 

'ಸರಿ ಕಣೋ. ಸುಸ್ತಾಗೋಗಿದೆ. ಮಲಗುವ' ಎಂದೆ. 

“ಹು. ನಂಗೂ ಸುಸ್ತಾಗಿದೆ. ಮಲಗ್ತೀನಿ. ಬಾಯ್" 

'ನೋಡ್ದಾ ಸೆಕ್ಸ್ ಮಾಡಿ ಸುಸ್ತು ಮಾಡಿ ಬಾಯ್ ಅಂದ್ಬಿಟ್ಟು ಹೋಗ್ಬಿಡೋದಾ....ಎಲ್ಗೂ ಹೋಗಂಗಿಲ್ಲಪ್ಪ. ಬಾ ಇಲ್ಲೇ ತಬ್ಬಿ ಮಲಗುವ' 

“ಹ ಹ. ಸರಿ ಡಾರ್ಲಿಂಗ್" ಎಂದ್ಹೇಳಿದ ಮೇಲೆ ಫೋನಿಟ್ಟ. 

ಸೆಕ್ಸ್ ಚಾಟಿಂಗಿಗೆ ಇಷ್ಟೊಂದೆಲ್ಲ ಶಕ್ತಿ ಇರ್ತದೆ ಅಂತ ಇವತ್ತೇ ಅರಿವಾಗಿದ್ದು ನನಗೆ. ಕೇವಲ ಮಾತುಗಳಿಗೆ ಇಷ್ಟೊಂದು ಉತ್ಕಟತೆ, ಇಷ್ಟೊಂದು ಮಾದಕತೆ ತುಂಬುವ ಶಕ್ತಿಯಿದೆ ಎನ್ನುವಂಶವೇ ಅಚ್ಚರಿ ಮೂಡಿಸುತ್ತದೆ. ಈ ಹುಡುಗನ ಮಾತಿಗೇ ಇಷ್ಟು ಶಕ್ತಿಯಿರಬೇಕಾದರೆ ಇನ್ನೀತ ನೇರಾನೇರ ಭೇಟಿಯಾದಾಗ ನನ್ನಲ್ಲಿನ ಕಾಮನೆಗಳನ್ನು ಎಷ್ಟರಮಟ್ಟಿಗೆ ಬಡಿದೆಬ್ಬಿಸಬಹುದು? ಅದನ್ನು ನೆನಪಿಸಿಕೊಂಡರೇ ನನ್ನೊಳಗೆ ಬಿಸಿ ರಕ್ತದ ಸಂಚಾರವಾದಂತಾಗುತ್ತಿದೆ. ನಾವಿಬ್ಬರೂ ಭೇಟಿಯಾಗಲೇಬೇಕು, ಕೊನೇ ಪಕ್ಷ ಒಮ್ಮೆಯಾದರೂ ಸೇರಲೇಬೇಕು ಎಂಬ ಧೃಡ ನಿರ್ಧಾರ ಮಾಡಿದೆ. ಏದುಸಿರು ಈಗ ಕಡಿಮೆಯಾಗಿತ್ತು. ಇನ್ನೇನು ನಿದ್ರೆಗೆ ಜಾರುವಷ್ಟರಲ್ಲಿ ಮೆಸೇಜು ಬಂದ ಶಬ್ದ ಕೇಳಿಸಿತು. 

“ಬೆಳಿಗ್ಗೆ ಇಷ್ಟುದ್ದದ ಮೆಸೇಜುಗಳನ್ನು ಕಳಿಸೋ ಎಲ್ಲಾ ಸಾಧ್ಯತೆಗಳಿವೆ. ಬೇಜಾರಾಗ್ಬೇಡ" ಸಾಗರನ ಮೆಸೇಜು. ಅಯ್ಯೋ ಈ ಹುಡುಗ ಎಷ್ಟೆಲ್ಲ ಯೋಚಿಸಿಕೊಂಡು ನರಳ್ತಾನಲ್ಲ 'ಪರವಾಗಿಲ್ಲ. ನನಗೆ ಸಾಗರನ ಆ ಮುಖ ಈ ಮುಖಗಳಷ್ಟೇ ಬೇಕಿಲ್ಲ. ನನಗೆ ಸಾಗರ ಇಡಿಯಾಗಿ ಬೇಕು. ಅವನ ಯೋಚನೆಗಳ ಸಮೇತ ಬೇಕು, ಅವನ ಗೊಂದಲಗಳ ಸಮೇತ ಬೇಕು' ಪ್ರತ್ಯುತ್ತರಿಸಿದೆ. ಅಳುವ ಸ್ಮೈಲಿಯನ್ನು ಕಳುಹಿಸಿದ. “ನಿಜ್ಜ ನನ್ನ ಕಣ್ಣಲ್ಲಿ ನೀರು ತರಿಸಿಬಿಟ್ಟೆ ಕಣೆ. ಮಿಸ್ಡ್ ಯು ಇನ್ ಮೈ ಲೈಫ್". ನನ್ನ ಕಣ್ಣಂಚಲ್ಲೂ ನೀರಾಡಿತು. 'ಸೇಮ್ ಹಿಯರ್ ಕಣೋ. ಲವ್ ಯು. ಜಾಸ್ತಿ ಯೋಚಿಸದೆ ಮಲಗು'

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

2 comments:

  1. ಸ್ವಲ್ಪ ಸೆಕ್ಸ್ ಚಾಟಿಂಗ್ ಹೆಚ್ಚಾಗಿ ಉದ್ರೇಕವಾದರೂ ಸೆಕ್ಸ್'ಗಿಂತ ಹೆಚ್ಚಾಗಿ ಪ್ರೀತಿಯೂ ಅನುಭವವಾಗುತ್ತಿತ್ತು.
    ಅಂತ್ಯದ ಬಗ್ಗೆ ಕುತೂಹಲವಾಗುತ್ತಿದೆ. ಪ್ಲೀಸ್... ಹ್ಯಾಪಿ ಎಂಡಿಂಗ್ ಇರಲಿ.

    ReplyDelete
    Replies
    1. ನಿಮ್ಮಭಿಪ್ರಾಯಕ್ಕೆ ಧನ್ಯವಾದಗಳು

      Delete