Dec 24, 2018

ಕಂಡೆ ನೋಡ !?

ಪ್ರವೀಣಕುಮಾರ್ ಗೋಣಿ
ನಿನಗೆ ಶರಣಾಗುವಿಕೆಯ 
ಹೊರತು ಮಿಕ್ಕೆಲ್ಲವೂ 
ವ್ಯರ್ಥವೆನಿಸುವ ವೇಳೆ 
ಮಾಯೆ ಅಳಿದು ನಿಂತಿತ್ತು ನೋಡ .

ವಾಸನೆಗಳ ತಾಳಕ್ಕೆ 
ತಕ ತಕನೇ ಕುಣಿದು 
ಮೈಮನಗಳು ದಣಿದಾಗ 
ನಿನ್ನ ಅನುಭಾವವೊಂದೇ ಚಿರವೆನ್ನುವ 
ಅರಿವು ಅರಳಿ ನಿಂತಿತ್ತು ನೋಡ . 

ಏನಿದೆಲ್ಲ ವ್ಯರ್ಥ ಎನ್ನುವ 
ಲೌಕಿಕ ಹೇಸಿಗೆ ಎನಿಸಿದಾಗ 
ಮನಸಿಗೆ ಆನಿಕೆಯಾದ 
ಅಲೌಕಿಕದ ಅಮೃತಕ್ಕೆ ಮನ ಹಸಿದಿತು ನೋಡ . 

ಕತ್ತಲೆಯನ್ನೇ ಬೆಳಕೆಂದು 
ಭಾವಿಸಿ ತನಗೆ ತಾನೇ 
ಮರಾಮೋಸಗೊಳಿಸುವ ಮನಸಿನ 
ಭ್ರಾಂತಿ ಅರಿವಾಗುವೆಡೆ 
ನಿನ್ನ ಪ್ರಕಾಶದ ಛಾಯೆ ಪಸರಿತ್ತು ನೋಡ . 

No comments:

Post a Comment