Aug 11, 2018

ಸ್ತ್ರೀ ಸುತ್ತ ಪುರುಷನೆಂಬ ವಿಷವರ್ತುಲ!


ಕೆ.ಜಿ.ಸರೋಜಾ ನಾಗರಾಜ್ ಪಾಂಡೋಮಟ್ಟಿ

ಪುರುಷ ಕೇಂದ್ರಿತ ವ್ಯವಸ್ಠೆಯಲಿ
ಬದುಕ ನದಿ ಈಜುತ್ತೆನೆಂದರೆ 
ಎಲ್ಲಿ ನೋಡಿದರು ಅಲ್ಲಿ ಪುರುಷ ಮೊಸಳೆಗಳು 
ತಪ್ಪಿಸಿಕೊಂಡರೆ ಬಾ ಯಿ ತೆರೆದು 
ಪತಾಳ ಸೇರಿಸುವ ಸುಳಿ ..!

ಹರಸಾಹಸ ಮಾಡಿ ದಂಡೆಗೆ ಬಂದರೆ 
ಹೆಜ್ಜೆ ಹೆಜ್ಜೆಗೂ ಬುಸುಗುಡುವ 
ಕಾಮುಕ ಕಾಳಿಂಗಗಳು 
ಮುಂಗುಸಿಯಾದರೂ ಷಡ್ಯಂತ್ರದಲಿ 
ಮುಗಿಸಿ ಬಿಡುವ ಹುನ್ನಾರ 
ತಲುಪಬೇಕಾದ ಗುರಿ ದೂರ ಬಹುದೂರ ..!
ಹೆತ್ತ ತಾಯಿಯೇ ಹೆಣ್ಣೆಂಬ ಕಾರಣಕ್ಕೆ ಕೀಳಿಲ್ಲಿ 
ಹೆತ್ತ ಮಗನಿಂದಲೇ ನಿನಗೇನು ಗೊತ್ತು 
ಒಳಗೆ ಹೋಗಮ್ಮಾ ಏಂಬ ಕಟ್ಟಪ್ಪಣೆ 
ಬದುಕ ಜೊತೆಗೆ ಹಂಚಿಕೊಳ್ಳುತ್ತೇನೆಂದು 
ಹೃದಯ ಅರ್ಪಿಸಿದವ ಹೆಂಡತಿಯಾದೊಡನೆ 
ಪತಿದೇವ ..!!

ಎಲ್ಲಾರಿಗಾಗಿ ಇದ್ದು ಯಾರಿಗೂ
ಮುಖ್ಯವಾಗದ ಹೆಣ್ಣು ಜೀವ 
ಅರವತ್ತಾಕ್ಕೆ ಅರಳಿ ಮರಳದ ಮಂದಿ
ಮರುಳಾಗಿ ಕೊರಳಿಗೆ ಹುರುಳಾಗಲೂ 
ಯತ್ನಿಸುತ್ತಾರೆ ಅವರ ಕ್ರೂರತನಕ್ಕೆ 
ಬೆರಳಾದರೇ ಪುಣ್ಯ ಕೋಟಿಯ 
ಮಾಡಿ ಮೇಲೆ ಬೀಳುತ್ತಾರೆ ..

ಹೆಣ್ಣೆಂದರೆ ಮಾಂಸ ಎಂದು ಕೊಂಡಿರುವ 
ಈ ಹೆಣ್ಣು ಕೂಲ ಬಾಕರಿಗೆ ನಿರಂತರ ದಿಕ್ಕಾರ ...!

ಮತ್ತಷ್ಟು ಕವಿತೆಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

No comments:

Post a Comment