Nov 30, 2014

ಗೋವಾದಲ್ಲಿ ಆರಂಭ ಚಿತ್ರದ ದ್ವನಿಸುರುಳಿ ಬಿಡುಗಡೆ.

aarambha goa publicity
ಪತ್ರಿಕಾ ಪ್ರಕಟಣೆ 
ಅಖಿಲ ಗೋವಾ ಕನ್ನಡ ಮಹಾ ಸಂಘ ಅಧ್ಯಕ್ಷರಾದ ಸಿದ್ದಣ್ಣ ಮೀಟಿಯವರು, ಎಸ್ ಅಭಿ ಹನಕೆರೆ ನಿರ್ದೇಶನದ  ಆಡಿಯೋ ಸೀಡಿಯನ್ನು ಗೋವಾ ಬೀಚಿನಲ್ಲಿ ಬಿಡುಗಡೆಗೊಳಿಸಿದರು.
ಕನ್ನಡ ಚಲನಚಿತ್ರಗಳನ್ನು ಗಡಿನಾಡು ,ಹೊರನಾಡು, ಹಾಗೂ ಹೊರದೇಶ ಕನ್ನಡಿಗರಿಗೆ ತೋರಿಸಿ,ಕನ್ನಡ ಬೆಳೆಸುವ ಮಹತ್ಕಾರ್ಯಕ್ಕೆ ಗಿರೀಶ್ ತಡಗವಾಡಿ ಯವರು ಶ್ರಮಿಸುತ್ತಿದ್ದಾರೆ. ಈ ಮಹತ್ಕಾರ್ಯಕ್ಕೆ ಕನ್ನಡ ಚಿತ್ರ ಆರಂಭವನ್ನು ಆಯ್ಕೆ ಮಾಡಿಕೊಂಡ್ದಿದ್ದಾರೆ.  ಈ ಚಿತ್ರವನ್ನು ಬಿಡುಗಡೆ ಮಾಡುವುದರ ಮೂಲಕ ಹೆಚ್ಚು ಹೆಚ್ಚು ಹೊರ ಕನ್ನಡಿಗರು ಚಿತ್ರವನ್ನು ನೋಡುವ ಅವಕಾಶ ಸಿಕ್ಕಂತಾಗುತ್ತೆ, ಇದರಿಂದ ಕನ್ನಡ ಬೆಳೆಸಿದ ತೃಪ್ತಿ ನನಗಿರುತ್ತೆ ಎಂದು ಗಿರೀಶ್ ತಡಗವಾಡಿ ಹೇಳುತ್ತಾರೆ.
ಆರಂಭ ಚಿತ್ರವನ್ನು ಗೋವಾ,ಮುಂಬೈ,ದೆಹಲಿ,ಪುಣೆ,ಕೋಲ್ಕತ್ತಾ , ಚೆನ್ನೈ, ಕೊಯಮತ್ತೂರ್, ಹೊಸೂರ್, ಕಾಸರಗೋಡು ಮತ್ತಿತರ ಕಡೆಯಲ್ಲಿ ಬಿಡುಗಡೆಗೊಳಿಸಲಾಗುವುದು.
ಇದಲ್ಲದೆ ಹೊರ ದೇಶಗಳಾದ ಆಸ್ಟ್ರೇಲಿಯ,ಅಮೇರಿಕ,ಕೆನಡಾ,ಸಿಂಗಾಪುರ್,ಡುಬೈ,ಮಲೇಶಿಯ,ಇನ್ನೂ ಅವಕಾಶ ಸಿಕ್ಕ ದೇಶದಲ್ಲೆಲ್ಲಾ ಆರಂಭ ಚಿತ್ರವನ್ನು ಬಿಡುಗಡೆಗೊಳಿಸಿ ಕನ್ನಡ ಬೆಳೆಸುವ ಕಾರ್ಯಕ್ಕೆ ಮುನ್ನುಡಿ ಬರೆಯಲಿದ್ದಾರೆ.
ಶರ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಡಿ. ಗಣೇಶ್ ವಿ ನಾಗೇನಹಳ್ಳಿ ನಿರ್ಮಿಸಿ ಎಸ್ ಅಭಿ ಹನಕೆರೆ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.
ಹೊರನಾಡು ಹಾಗೂ ಹೊರದೇಶದಲ್ಲಿ ಚಿತ್ರ ಬಿಡುಗಡೆ ಮಾಡಲಿಚ್ಛಿಸುವ ನಿರ್ಮಾಪಕರು ಗಿರೀಶ್ ತಡಗವಾದಿಯವರನ್ನು  gnibygiri@gmail. com ಮೂಲಕ ಸಂಪರ್ಕಿಸಬಹುದು

No comments:

Post a Comment