Sep 2, 2014

ಇದು ಮಂಗಳೂರಿನ ದುರಂತವಲ್ಲದೆ ಬೇರೇನೂ ಅಲ್ಲ.....

hingyake
ಅಬ್ದುಲ್ ಶಮೀರ್
ಮುನೀರ್ ಕಾಟಿಪಳ್ಳ
ಜಾನುವಾರು ಸಾಗಾಟದ ಸಂಧರ್ಭ ಭಜರಂಗದಳದ ಕಾರ್ಯಕರ್ತರಿಂದ ಪೆಟ್ಟುತಿಂದ ಯುವಕ ಅಬ್ದುಲ್ ಶಮೀರ್ ಹತ್ತು ದಿನದ ನಂತರವೂ ಕೋಮಾದಿಂದ ಹೊರಬಂದಿಲ್ಲ. ಮೂರುಮಕ್ಕಳ ತಂದೆಯಾದ ಈ ಬಡಪಾಯಿ ಬದುಕುವ ಸಾಧ್ಯತೆ ಇಲ್ಲ, ಮನೆಗೆ ಕರೆದುಕೊಂಡು ಹೋಗಿ ಅಂತ ವೈದ್ಯರು ಕುಟುಂಬಸ್ಥರೊಂದಿಗೆ ಹೇಳಿಯಾಗಿದೆ.
ಇಷ್ಟಕ್ಕೂ ಈತ ಮಾರ್ಗಮಧ್ಯೆ ನೈತಿಕಪೊಲೀಸ ರಿಂದ ಬಡಿಸಿಕೊಂಡು ಸಾಯುವಂತ ತಪ್ಪೇನು ಮಾಡಿದ್ದಾನೆ ? ಪೊಲೀಸರ ಪ್ರಕಾರ ಇವರ ವಾಹನದಲ್ಲಿ ಇದ್ದದ್ದು ಕದ್ದ ಜಾನುವಾರುಗಳಲ್ಲ,
ಇದು ನಿಯಮ ಮೀರಿ ಸಾಗಾಟದ ಪ್ರಕರಣ ಅಷ್ಟೆ.

(ಹಟ್ಟಿಯಿಂದ ಜಾನುವಾರು ದರೋಡೆ ಮಾಡುವುದು ಒಂದು ಧರ್ಮದ ಕಳ್ಳರಿಗೆ ಸೀಮಿತ ಅಲ್ಲ, ಮೊನ್ನೆ ಮೂಡಿಗೆರೆಯಲ್ಲಿ ಸಿಕ್ಕಿಬಿದ್ದವರು ಗೋಸಂರಕ್ಷಣಾ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು) ಆದರೆ ಆ ಜಾನುವಾರು ಸಾಗಾಟದ ವಾಹನದಲ್ಲಿ ಚಾಲಕನಾಗಿ(ವ್ಯಾಪಾರಿ ಅಲ್ಲ)ದುಡಿಮೆಯಲ್ಲಿದ್ದ 'ಘೋರ ಅಪರಾಧಕ್ಕೆ' ಆತ ಇಂದು ತನ್ನ ಪ್ರಾಣವನ್ನೆ ಕಳಕೊಳ್ಳು ಪರಿಸ್ಥಿತಿ ಎದುರಾಯಿತು.
ದ ಕ, ಉಡುಪಿ ಜಿಲ್ಲೆಯಲ್ಲಿ ಈ ರೀತಿ ಧರ್ಮೆಕ್ಷಕರು ಮಾರ್ಗಮಧ್ಯದಲ್ಲಿ ತಡೆದು ನಿಲ್ಲಿಸುವುದು, ವಿಚಾರಣೆ ಇಲ್ಲದೆ ತಮಗೆ ತೋಚಿದ ಶಿಕ್ಷೆ(ಮರಣದಂಡನೆ ಸೇರಿದಂತೆ) ಜಾರಿಗೊಳಿಸುವುದು ಸಾಮಾನ್ಯ ಎಂಬಂತಾಗಿದೆ. ಇದು ಇಲ್ಲಿನ ನಾಗರಿಕ ಪ್ರಜ್ಞೆಗೆ ತಪ್ಪು ಎಂದು ಅನಿಸುವುದಿಲ್ಲ. ಇಲ್ಲಿನ ಪೊಲೀಸರಿಗೆ ಇದೊಂದು ಗಂಭೀರ ಕಾನೂನು ಸುವ್ಯವಸ್ತೆಯ ಸಮಸ್ಯೆ,ತಮ್ಮ ಇಲಾಖೆಗೆ ಹಾಕುತ್ತಿರುವ ಸವಾಲು ಎಂದು ಅನಿಸುವುದೇ ಇಲ್ಲ. ಒಂದು ವಿಭಾಗದ ಮಾಧ್ಯಮಗಳಿಗೆ ಇದು 'ಜಾನುವಾರು ಕಳ್ಳಸಾಗಾಟದಾರರ ಮೇಲೆ ಆಕ್ರೋಶಿತರ ಹಲ್ಲೆ' ಅಷ್ಟೆ. ಇಂತಹ ಕಲುಷಿತ ಸಾಮಾಜಿಕ ಸಂಧರ್ಭದಲ್ಲಿ ಜಾನುವಾರು ವ್ಯಾಪಾರಿಗಳ ಕೂಲಿಯಾಳು ಕಬೀರ, ಚಾಲಕ ಶಮೀರ್ ಸಾವಿಗೆ ಅರ್ಹ ಆಗುತ್ತಾರೆ (ಪೊಲೀಸರು ವಿನಾಕಾರಣ ಗುಂಡಿಟ್ಟು ಹತ್ಯೆ ಮಾಡಿದ ಕಬೀರ್ ಕುಟುಂಬಕ್ಕೆ ಹತ್ತು ಲಕ್ಚ ಸರಕಾರ ಪರಿಹಾರ ನೀಡಿದಾಗ ಮಂಗಳೂರಿನ ಬೀದಿಗಳಲ್ಲಿ ಪರಿಹಾರ ವಾಪಾಸ್ ಪಡೆಯಬೇಕು ಎಂದು ತೀವ್ರ ಪ್ರತಿಭಟನೆ ನಡೆದಿತ್ತು.)
ಇಷ್ಟಕ್ಕೂ ಶಮೀರ್ ಮತ್ತು ಸಹಚರರ ಮೇಲೆ ವಾಹನ ತಡೆದು ಹಲ್ಲೆ ನಡೆಸಿದವರ ಹಿನ್ನಲೆ ಹೇಗಿದೆ ನೋಡಿ. ಈ ಘಟನೆ ನಡೆಯುವ ಎರಡು ದಿನಗಳ ಹಿಂದೆ ಸಾಹಿತಿ ಅನಂತಮೂರ್ತಿಯವರ ಸಾವಿನ ಸಂಭ್ರಮಾಚರಣೆಯ ಪಟಾಕಿಸಿಡಿಸಲಾಗಿತ್ತು. ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾದ ಪಟಾಕಿ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿರಲಿಲ್ಲ. ಅದಾದ ಎರಡು ದಿನಗಳ ನಂತರ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆ ಗಂಭೀರ ಸ್ವರೂಪದ್ದಾದ್ದರಿಂದ ಕೆಲವರನ್ನು(ಎಲ್ಲರನ್ನೂ ಅಲ್ಲ) ಪೊಲೀಸರು ಬಂಧಿಸಿದ್ದರು. ಈಗ ನೋಡಿದರೆ ಅನಂತಮೂರ್ತಿಯವರ ಸಾವಿಗೆ ನಡುಬೀದಿಯಲ್ಲಿ ಪಟಾಕಿಬಿಟ್ಟದ್ದು ಇವರೇ...

ಈ ರಾಜ್ಯಕ್ಕೆ ಗೃಹಸಚಿವರು ಇದ್ದಾರ ? ನಮ್ಮ ಉಸ್ತುವಾರಿ ಮಂತ್ರಿಗಳು ಏನುಮಾಡುತ್ತಿದ್ದಾರೆ?
ಪಟಾಕಿ ಬಿಟ್ಟ ಘಟನೆಗಾಗಿ ಕ್ಷಮೆ ಕೇಳಿದ ಮಂತ್ರಿ ಯಾದರೂ.....
Summary - Abdul Shameer, who was the driver of vehicle carrying cows was brutally hit by Bhajarangadala activists. Abdul Shameer is now in death bed writes Muneer Katipalla.

No comments:

Post a Comment