ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

28.8.14

ಅತಿ ಶೀಘ್ರದಲ್ಲಿ ಸಂಗೀತದ "ಆರಂಭ"

aarambha
"ಆರಂಭ"
ಹೊಸಬರ ತಂಡವನ್ನು ಕಟ್ಟಿ ಚಿತ್ರ ನಿರ್ಮಿಸುವುದು ಕಷ್ಟಕರವಾದ ಕೆಲಸ. ಹೊಸತೇನನ್ನಾದರೂ ಕೊಡಲೇಬೇಕೆಂಬ ತುಡಿತದಿಂದ ಬಹುತೇಕ ಹೊಸಬರನ್ನೇ ಸೇರಿಸಿ ರೂಪಿಸಿ "ಆರಂಭ" ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಸ್. ಅಭಿ ಹನಕೆರೆ. ಚಿತ್ರ ಶೂಟಿಂಗ್ ಮುಗಿಸಿ ಈಗ ಡಬ್ಬಿಂಗಿನ ಕೊನೆಯ ಹಂತದಲ್ಲಿದೆ. ಚಿತ್ರದ ಹಾಡುಗಳನ್ನು ಶೀಘ್ರದಲ್ಲೇ ಜನರ ಮುಂದಿಡುವುದಾಗಿ ಚಿತ್ರ ತಂಡ ತಿಳಿಸಿದೆ. 
ಹೊಸಬರ ಚಿತ್ರಕ್ಕೆ ಸಂಪೂರ್ಣ ಸಹಕಾರ ನೀಡಿ ಸಂಗೀತ ನೀಡಿರುವುದು ಹೊಸಬರಿಗೆ ಹೊಸ ಆಲೋಚನೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹಿಸುತ್ತ ಬಂದಿರುವ ಗುರುಕಿರಣ್. ಗುರುಕಿರಣ್, ಅಭಿ ಹನಕೆರೆ, ವಿ.ಮನೋಹರ್, ಗೊಟೂರಿ ಮತ್ತು ಕವಿರಾಜ್ ರಚಿಸಿರುವ ಸಾಹಿತ್ಯಕ್ಕೆ ದನಿ ನೀಡಿರುವವರು ಮುರುಳಿ ಮೋಹನ್, ಗುರುರಾಜ್ ಹೊಸಕೋಟೆ, ಮಾಲ್ಗುಡಿ ಶುಭ ಮತ್ತು ಗುರುಕಿರಣ್.

ಚಿತ್ರರಂಗದಲ್ಲಿ ಹಲವಾರು ವರುಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ, ಅನೇಕ ಚಿತ್ರಗಳಲ್ಲಿ ನಟರಾಗಿ ಅಭಿನಯಿಸಿರುವ ಮಧುಗಿರಿ ಪ್ರಕಾಶ್ ರವರ ಪುತ್ರ ಮಿಥುನ್ ಪ್ರಕಾಶ್ ಈ ಚಿತ್ರದಿಂದ ನಾಯಕರಾಗುತ್ತಿದ್ದಾರೆ. ನೀಮಾ ಚಿತ್ರದ ನಾಯಕಿ. ಶರ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ಚಿತ್ರವನ್ನು ನಿರ್ಮಿಸುತ್ತಿರುವವರು ಡಿ ಗಣೇಶ್ ವಿ ನಾಗೇನಹಳ್ಳಿ.
ಎಸ್ ಅಭಿ ಹನಕೆರೆ
ಚಿತ್ರದ ಪೋಸ್ಟರಿನಲ್ಲಿ ಹಿರೋಯಿನ್ - ಗುರುಕಿರಣ್ ಎಂದು ಹಾಕಿರುವುದರ ಬಗ್ಗೆ ಕೇಳಿದಾಗ 'ಚಿತ್ರಕ್ಕೆ ನಾಯಕ ನಿರ್ದೇಶಕ, ನಾಯಕಿ ಸಂಗೀತ ನಿರ್ದೇಶಕ' ಎಂದು ವ್ಯಾಖ್ಯಾನಿಸಿದ್ದು ನಿರ್ದೇಶಕ ಅಭಿ! ಹೊಸತನದ ತಾಜಾತನದಿಂದ ಕೂಡಿರುವ ಚಿತ್ರದ ಹಾಡುಗಳು ಜನರ ಮನಗೆಲ್ಲುವಲ್ಲಿ ಸಂಶಯವಿಲ್ಲ ಎಂಬುದು ಚಿತ್ರತಂಡದ ನಂಬುಗೆ. ಆ ನಂಬಿಕೆ ನಿಜವಾಗಲಿ.

2 comments:

Related Posts Plugin for WordPress, Blogger...