Jul 7, 2014

ರಕ್ತಭಾಗ್ಯ

mahadevappa
ಮಹದೇವಪ್ಪ
ವಾಸು ಹೆಚ್.ವಿ (ಫೇಸ್ ಬುಕ್ ಪುಟದಿಂದ)
ಹಿಂದೆ.....
ಜನಗಳು ತಿನ್ನುವ ಅನ್ನದ ಪ್ರತಿ ಅಗುಳಿಗೂ ನಮ್ಮ ಬೆವರು ಮೆತ್ತಿಕೊಂಡಿರುತ್ತಿತ್ತು.
ಈಗ.....


ಜನಗಳು ತಿನ್ನುವ ಅನ್ನದ ಅಗುಳಿಗೆ ನಮ್ಮ ರಕ್ತವೂ ಮೆತ್ತಿಕೊಂಡಿದೆ.
ಹೌದು.... ನೋಡಿ, ಇವರು ಮಹದೇವಪ್ಪ. ಪಡಿತರ ವಿತರಕ ವ್ಯವಸ್ಥೆ (ಈಗಿನ ‘ಅನ್ನಭಾಗ್ಯ’)ಯಲ್ಲಿ 30 ವರ್ಷಗಳಿಂದ ಬೆವರು ಹರಿಸಿದವರು. ಇವರು ಅನ್ನಭಾಗ್ಯ ಯೋಜನೆ ಆರಂಭವಾದ ಮೊದಲ ವಾರದಲ್ಲೇ, ಅಕ್ಕಿ ತುಂಬಿಕೊಂಡು ಪಡಿತರ ವಿತರಕ ಅಂಗಡಿಗೆ ಹೋಗುತ್ತಿದ್ದ ಲಾರಿಯು ಅಪಘಾತಕ್ಕೀಡಾಗಿ ಕಾಲಿನ ಮೂಳೆ ಮುರಿದು ಹೋಯಿತು. ಚಿತ್ರವನ್ನು ಹತ್ತಿರದಿಂದ ಗಮನಿಸಿ, ಅವರು ಕೂತಿರುವದು ಅಕ್ಕಿ ಚೀಲಗಳ ಮೇಲೆ. ಇನ್ನೂ ಹತ್ತಿರದಿಂದ ನೋಡಿ, ಗಾಯದಲ್ಲಿ ಅಕ್ಕಿಯ ಕಾಳುಗಳೂ ಇವೆ. ಅನ್ನಭಾಗ್ಯ ಅಕ್ಕಿ. ಅಲ್ಲಿಂದ ಇಲ್ಲಿಯವರೆಗೆ ಮಹದೇವಪ್ಪನವರಿಗೆ ಸರ್ಕಾರದಿಂದ ಒಂದೇ ಒಂದು ರೂ. ಪರಿಹಾರವೂ ದೊರಕಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ 50,000 ರೂ, ಖರ್ಚಾಯಿತು. ಅದರ ಜೊತೆ ಇನ್ನಿತರ ಖರ್ಚುಗಳು ಇನ್ನೂ 50 ಸಾವಿರ.
ಈಗ, ಮಹದೇವಪ್ಪರಿಗೆ ನಾಲ್ಕು ಕಾಲು. ಇನ್ನೆರಡು ಕೋಲುಗಳಿಲ್ಲದೆ ನಡೆಯಲು ಸಾಧ್ಯವಿಲ್ಲ. ಆಹಾರ ಇಲಾಖೆಯ ಸಚಿವರು, ಆಯುಕ್ತರು ಈ ಕುರಿತು ಮನವಿ ಕೊಡಿ, ಪರಿಹಾರ ಕೊಡುತ್ತೇವೆ ಎಂದವರು ಇದುವರೆಗೂ ಏನನ್ನೂ ಮಾಡಿಲ್ಲ. ಏಕೆ? 35 ವರ್ಷ ಕೆಲಸ ಮಾಡಿದರೂ ಸದರಿ ಕಾರ್ಮಿಕರಿಗೆ ಯಾವ ಪರಿಹಾರವೂ ಇಲ್ಲ. ಕೆಲಸದ ಭದ್ರತೆ ಇಲ್ಲ. ಕನಿಷ್ಠ ಇಎಸ್ಐ, ಪಿಎಫ್ ಸೌಲಭ್ಯಗಳೂ ಇಲ್ಲ.


ಹಾಗಾಗಿ, ಅನಿವಾರ್ಯವಾಗಿ ಅನ್ನಭಾಗ್ಯ ಹಮಾಲರು ಜುಲೈ 8ಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ. ಸರ್ಕಾರವು ಎಲ್ಲಾ ಕಾರ್ಮಿಕರಿಗೂ ಗುರುತಿನ ಚೀಟಿ, ಇಎಸ್ಐ ಮತ್ತು ಪಿಎಫ್ ಸೌಲಭ್ಯ ನೀಡುವವರೆಗೆ ವಾಪಸ್ಸು ಹೋಗುವುದಿಲ್ಲ ಎಂಬುದು ಅವರ ಬೇಡಿಕೆ. ಅಂದು ಬೆಳಿಗ್ಗೆ 11.30ಕ್ಕೆ ರೈಲ್ವೇ ನಿಲ್ದಾಣದಿಂದ ಹೊರಟು, ಫ್ರೀಡಂ ಪಾರ್ಕ್ ತಲುಪಿ ಅಲ್ಲೇ ಕೂತು ಬಿಡುತ್ತಾರೆ. ಅವರೊಂದಿಗೆ ಕೈ ಜೋಡಿಸುತ್ತೀರಾ? ಸರ್ಕಾರದ ಈ ನಿಲುವನ್ನು ಖಂಡಿಸಿ, ಕಾರ್ಮಿಕರ ಪರ ನಿಲ್ಲುತ್ತೀರಾ? ಹಾಗಾದರೆ ಬನ್ನಿ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ವರದರಾಜೇಂದ್ರ: 9986598959.
ಕಾರ್ಮಿಕರ ಇಂತಹ ಪರಿಸ್ಥಿತಿಯ ಕುರಿತು ಹಾಗೂ ಸರ್ಕಾರಗಳ ನೀತಿಯ ಕುರಿತು ನಿಮಗೆ ಏನನ್ನಿಸುತ್ತದೆ? ಇಲ್ಲಿ ಬರೆಯಿರಿ. ಹಂಚಿಕೊಳ್ಳಿ (ಷೇರ್ ಮಾಡಿ). ಕೇವಲ ಲೈಕ್ ನಿಂದ ಅಂತಹ ಪ್ರಯೋಜನವಿಲ್ಲ. ಆದರೂ ನೀವು ನೋಡಿದ್ದೀರೆಂದು ನಮಗೆ ಗೊತ್ತಾಗುತ್ತದೆ. ಲೈಕ್ ಸಹಾ ಮಾಡಿ.
(ಈ ಫೋಟೋ ಹಾಕುವುದು ಸರಿಯಲ್ಲವೆಂದು ಕೆಲವು ಸಂಗಾತಿಗಳು ವರ್ಷದ ಕೆಳಗೆ ಕಾಮೆಂಟಿಸಿದ್ದರು. ಇಂತಹ ಫೋಟೋ ಇರಲಿ, ಸಾವಿರ ಸಂಖ್ಯೆಯಲ್ಲಿ ಕಾರ್ಮಿಕರ ಪ್ರತಿಭಟನೆ, ನೂರಾರು ಮನವಿ ಪತ್ರಗಳೂ ಸರ್ಕಾರದ ಮನವನ್ನು ಕರಗಿಸಿಲ್ಲ. ವಾಸ್ತವವನ್ನು ಇದ್ದ ರೀತಿಯಲ್ಲೇ ಮುಖಾಮುಖಿಯಾಗೋಣವೆನ್ನಿಸಿ, ಫೋಟೋ ಹಾಕಿದ್ದೇವೆ)

1 comment:

  1. houdu ivarige yavude soulbhyagalu siguttilla ,ivyavashteyannu sari padisabeku ,

    ReplyDelete