Apr 23, 2014

ಕಬೀರನ ಪರ ಹೋರಾಟ ದಿಕ್ಕು ತಪ್ಪದಿರಲಿ

ಕಬೀರನ ಹತ್ಯೆಯ ವಿರುದ್ಧದ ಪ್ರತಿಭಟನೆ ಆತನ ಧರ್ಮದ ಕಾರಣದಿಂದಾಗಿ ದಿಕ್ಕು ತಪ್ಪುವ ಸಾಧ್ಯತೆಗಳು ಹೆಚ್ಚಿರುವಾಗ ಮುನೀರ್ ಕಾಟಿಪಳ್ಳ ಬರೆದಿರುವ ಈ ಪುಟ್ಟ ಲೇಖನ ಪ್ರಸ್ತುತವೆನ್ನಿಸಿತು.

ಕಬೀರನ ಹತ್ಯೆ ಮಾಡಿದ್ದು ಪ್ರಭುತ್ವ. ಪ್ರಭುತ್ವ ಮಾಡಿರುವ ಈ ಅನ್ಯಾಯದ ವಿರುದ್ದ ಪ್ರತಿಭಟಿಸುವುದು ಕೇವಲ ಮುಸ್ಲಿಮರ ಜವಾಬ್ದಾರಿ ಅಲ್ಲ.ಇದು ಮುಸ್ಲಿಮರಿಗೆ ಸೀಮಿತವಾದ ವಿಷಯವೂ ಅಲ್ಲ. ಪ್ರಭುತ್ವ ಮಾಡಿದ ಕೊಲೆಯ ವಿರುದ್ದ ಹೋರಾಟದಲ್ಲಿ ಇಡೀ ಜನ ಸಮೂಹ ಪಾಲ್ಗೊಳ್ಳಬೇಕು.ಆ ರೀತಿಯ ಐಕ್ಯ ಹೋರಾಟ ನಡೆದರೆ ಮಾತ್ರ ಕಬೀರ್ ಪ್ರಕರಣಕ್ಕೆ ನ್ಯಾಯ ಸಿಗಬಹುದು. ಅಂತಹ ಐಕ್ಯ ಹೋರಾಟದ ಅಪೂರ್ವ ಸನ್ನಿವೇಶ ನಿರ್ಮಾಣವಾಗುತ್ತಿರುವುದನ್ನು ಕಂಡು, ಜನಚಳುವಳಿ ಎದ್ದುಬರುತ್ತಿರುವುದನ್ನು ಕಂಡು ಪ್ರಭುತ್ವ ಬೀತಿಗೊಂಡಿದೆ. ಹಿಂದು ಮುಸ್ಲಿಂ ಹೀಗೆ ಎಲ್ಲಾ ವಿಭಾಗದ ಜನ ಕಬೀರ್ ತಮ್ಮ ಮನೆಯ ಮಗನೇನೋ ಎಂಬಂತೆ ಕಬೀರ್ ಪರ ದನಿ ಎತ್ತುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ.ಈ ಹೋರಾಟವನ್ನು ಹೇಗಾದರು ಮುರಿಯಬೇಕು ಎಂದು ಪಿತೂರಿ ನಡೆಸತೊಡಗಿದೆ.


ಈ ಪಿತೂರಿಯ ಭಾಗವಾಗಿಯೇ ಮತೀಯ ಶಕ್ತಿಗಳು ರಂಗಕ್ಕಿಳಿದಿವೆ. ಕಬೀರ್ ಹೋರಾಟವನ್ನು ಹಿಂದು ಮುಸ್ಲಿಂ ಎಂದು ವಿಬಜಿಸಲು ನೋಡುತ್ತಿವೆ. ಕಬೀರ್ ಕ್ರಿಮಿನಲ್, ಗೋಕಳ್ಳಸಾಗಾಟದಾರ ಎಂದು ಹೇಳತೊಡಗಿವೆ. ಗುಂಡು ಹಾರಿಸಿ ಹತ್ಯೆಗೈದ ಆರೋಪಿಯ ಪರ ವಕಾಲತ್ತು ಹಾಕಿ ಹಿಂದುಗಳನ್ನು ಹೋರಾಟದ ವಿರುದ್ದ ಎತ್ತಿಕಟ್ಟಲು ನೋಡುತ್ತಿವೆ. ಇದಕ್ಕೆ ಕೆಲ ಸುದ್ದಿ ಮಾದ್ಯಮಗಳು ಹೆಗಲು ಕೊಡುತ್ತಿವೆ. ಸಣ್ಷ ಪುಟ್ಟ ತಪ್ಪುಗಳನ್ನು ಎತ್ತಿ ತೋರಿಸಿ ಹತ್ಯೆಯನ್ನು ನ್ಯಾಯೀಕರಿಸಲು ನಾಚಿಕೆಬಿಟ್ಟು ಯತ್ನಿಸುತ್ತಿದೆ. ಕಬೀರ್ ಪರ ಹೋರಾಟಕ್ಕಿಳಿದಿರೋದು ಕೇವಲ ಮುಸ್ಲಿಂ ಸಂಘಟನೆಗಳು ಮಾತ್ರ ಎಂದು ತೋರಿಸುತ್ತಿದೆ. ಆಳುವ ವರ್ಗಗಳ ಚಮಚಾಗಿರಿ ಮಾಡುವ ಇಂತಹ ಪಿತೂರಿಗಾರರು ಯಶಸ್ವಿ ಆಗದಂತೆ ನೋಡುವುದು ಎಲ್ಲರ ಜವಾಬ್ದಾರಿ. ಅದರಲ್ಲಿಯೂ ಮುಸ್ಲಿಂ ಸಮುದಾಯ ತಾಳ್ಮೆಗೆಡದೆ ಸಹನೆಯಿಂದ ವರ್ತಿಸಬೇಕು. ಕಬೀರ್ ಪರ ಹೋರಾಟ ಒಂದು ಜನ ಚಳುವಳಿ ಆಗುವಂತೆ, ಪ್ರಭುತ್ವದ ದಬ್ಬಾಳಿಕೆಗೆ ಶೋಷಿತ ಜನರ ಉತ್ತರವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ಮುನ್ನಡೆಯೋಣ, ಗೆಲುವು ಎಂದೆಂದು ನಮ್ಮದೇ... ಇಂಕ್ವಿಲಾಬ್ ಜಿಂದಾಬಾದ್.
ಕಬೀರ್ ನ್ಯಾಯ ಮಂಚ್

No comments:

Post a Comment