Aug 3, 2013

ಮಾಧ್ಯಮಗಳ ಆದ್ಯತೆ ಏನು?

ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ನಟ ದರ್ಶನ್. ಆಸ್ಪತ್ರೆಯ ವೈದ್ಯರ ಪ್ರಕಾರ ಕುತ್ತಿಗೆಯ ಬಳಿ ಪೆಟ್ಟಾಗಿದೆ, ಅಪಾಯವೇನೂ ಇಲ್ಲ.
ದರ್ಶನ್ ಸದ್ಯದ ಮಟ್ಟಿಗೆ ಕರ್ನಾಟಕದ ಖ್ಯಾತ ನಾಯಕ ನಟ. ಬಾಕ್ಸ್ ಆಫೀಸ್ ಹೀರೋ ಎನ್ನವುದು ಹೆಚ್ಚು ಸೂಕ್ತ. ದರ್ಶನ್ ಗಾಯಗೊಂಡಾಗ ಅದನ್ನು ವರದಿ ಮಾಡಬೇಕಿರುವುದು ಮಾಧ್ಯಮದ ಕರ್ತವ್ಯವೆಂಬುದೇನೋ ಸರಿ ಆದರೆ ಸತತ ಎರಡು ದಿನದಿಂದ ಆಸ್ಪತ್ರೆಯ ಹೊರಗೆ ಓ.ಬಿ ವ್ಯಾನ್ ನಿಲ್ಲಿಸಿಕೊಂಡು ವರದಿ ಮಾಡುವಷ್ಟು ಪ್ರಮುಖ ವಿಷಯವಾ ಅದು? 

No comments:

Post a Comment