Jan 13, 2019

ಎನಿತು ದಕ್ಯಾವು ?

ಪ್ರವೀಣಕುಮಾರ್ ಗೋಣಿ
ಅರ್ಪಣೆ ಈಡಿಯಾಗಿ
ಇರದಿರಲು ಅರಿವಿಗೆ 
ಬಂದೀತೆ ಅವನಿರುವಿನ ಅನುಭಾವ ?

ಅಣು ಅಣುವು ಬಿಸಿಗೆ 
ತನುವೊಡ್ಡಿ ಕೊಳ್ಳದಿರಲು 
ಕೆನೆಗಟ್ಟಿ ಹೋದೀತೇ ಹಾಲು ?

ಮೇಲು ಮೇಲಷ್ಟೇ ಅರ್ಪಣೆಯ 
ಮಾತಾಡಿ ಅಂತರ್ಯದೊಳಗೆ 
ಬಿಡದಿರಲು ಹಿಡಿದಿಟ್ಟ ವಾಸನೆಗಳ 
ಮೀರಾಳಿಗೆ ಕಂಡ ಮುಕುಂದ 
ಅದ್ಹೇಗೆ ತಾನೇ ಕಂಡಾನು ?

ಬೆರಗಿನ ಪುಳಕಗಳು 
ಅಚ್ಚರಿಯ ಸೆಳಕುಗಳು 
ವಿಸ್ಮಯದ ಅನುಭಾವಗಳು 
ಮಗುವಂತಾದರೆ ದಕ್ಕುವವು 
ಹೊರತು ಮೃಗದಂತಿದ್ದು 
ತಡಕಾಡಿದರೆನಿತು ದಕ್ಯಾವು ?

No comments:

Post a Comment