Dec 25, 2018

ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ

ಪದ್ಮಜಾಜೋಯ್ಸ್ ದರಲಗೋಡು
ಆಧುನಿಕತೆಯಲ್ಲಿ ಹೆಣ್ಣಿನ ಸ್ಥಾನಮಾನ ಅಂದರೇ ಆಚಾರ ವಿಚಾರಗಳನ್ನು ದೂಷಿಸುವುದಲ್ಲ, ಸ಼ಂಪ್ರದಾಯದ ಸಂಕೋಲೆಯ ಧಿಕ್ಕಾರವಲ್ಲ, ಪದ್ಧತಿಗಳ ರದ್ಧತಿಯಲ್ಲ, ಉಡುಗೆ ತೊಡುಗೆಗಳ ಬದಲಾವಣೆಯೂ ಅಲ್ಲ, ರೀತಿನೀತಿಗಳ ಮಿತಿ ಮೀರುವುದೂ ಅಲ್ಲ ಸಾಂಸಾರಿಕ ಕೌಟುಂಬಿಕ ಚೌಕಟ್ಟುಗಳ ನಿರಾಕರಣೆಯೂ ಅಲ್ಲ.....

ಇಂದು ಆಧುನಿಕತೆ ಮಹಿಳೆಯರಿಗೂ ಅತ್ಯಗತ್ಯ , ಅದು ಸಕಾರಣವಾಗಿದ್ದಲ್ಲಿ ಹಾಗೂ ಸಂಧರ್ಭಗಳ ಸಮಯೋಚಿತತೆಯಲ್ಲಿ, ಅಂದರೇ ನಮ್ಮ ಆಲೋಚನೆಯಲ್ಲಿ ಆಧುನಿಕತೆ ಇರಲೀ ಆಚಾರ ವಿಚಾರಗಳ ನಿರಾಕರಣೆಯಲ್ಲಲ್ಲ....

ಇಂದು ಮಹಿಳೆಯೊಬ್ಬಳು ಮೌಢ್ಯವನ್ನು ಮೀರಿ ಹೊಸ್ತಿಲಾಚೆ ಕಾಲಿಟ್ಟು ಶಿಕ್ಷಣದ ವಿಚಾರಪರತೆಯ ಜ್ಞಾನದ ವಿಜ್ಞಾನದ ಬೆನ್ನೇರಿ

ಭಾಗಶಃ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರ ಮೀರಿ ಯಶೋಗಾಥೆ ಹಾಡುವಂತಹ ಆಧುನಿಕತೆಯ ಅಳವಡಿಕೆಯಲ್ಲಿ ಮಹಿಳೆಯ ಪಾತ್ರ ಅಮೋಘವಾಗಿದೆ,

ಈ ಮೊದಲು ಮಹಿಳೆಯ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿತ್ತು, ಮಕ್ಕಳನ್ನು ಹೆರುವುದು ಅವುಗಳ ಲಾಲನೆ ಪಾಲನೆ, ಕುಟುಂಬ ನಿರ್ವಹಣೆ, ಮಾತ್ರ ಅವಳ ಕೆಲಸವಾಗಿತ್ತು, ಈಗ ಕಾಲ ಬದಲಾಗುತ್ತಿದೆ ಮಹಿಳೆಯರ ಅರಿವಿನ ಪರಿ ವಿಸ್ತರಿಸುತ್ತಿದೆ, ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದಾಳೆ. ಅವಳ ಈ ಸಾಧನೆಗೆ ಸಹಾಯಕವಾದ ಶಿಕ್ಷಣ ಮಾಧ್ಯಮಗಳಿಗೆ ಧನ್ಯವಾಧ ಅರ್ಪಿಸಬೇಕಿದೆ,

ಭಾರತೀಯ ಮಹಿಳೆಯು ಹೊಲಮನೆಗಳಲ್ಲಿ ಕೆಲಸ ಮಾಡುವುದರಿಂದ ಹಿಡಿದು ವಿಮಾನ ನೆಡೆಸುವ, ಶಿಖರ ಏರುವ ಹಂತಕ್ಕೆ ಬೆಳದಿದೆ, ಈಗ ಮಹಿಳೆಯರದ್ದೇ ಸಂಘಟಿತ ಅಸಂಘಟಿತ ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಪ್ರವೇಶಿಸಿ ತಮ್ಮ ಪ್ರತಿಭೆ ಮೆರೆಯುತ್ತಾರೆ... ಇವೆಲ್ಲವೂ ಮಹಿಳೆಯರ ಸಕಾರಾತ್ಮಕ ಧೋರಣೆಯಾಗಿದೆ,

ಅಡುಗೆ ಮನೆಯ ಸೀಮಿತ ಚೌಕಟ್ಟಿನ ನಡುವಿಂದ ಸ್ತ್ರೀ ಹೊರಬಂದು ಅನೇಕ ವರ್ಷಗಳಾಗಿವೆ 50 ವರ್ಷಗಳ ಹಿಂದೆ ಸ್ತ್ರೀಯನ್ನು ಕಲ್ಪಿಸಿಕೊಳ್ಳಲಾರದ ಕ್ಷೇತ್ರಗಳಲ್ಲಿ ಅವಳಿಂದು ಪುರುಷರಿಗೆ ಸರಿಸಮಾನಳಾಗಿ ನಿಲ್ಲಬಲ್ಲಳು....

ಮೂಢನಂಬಿಕೆಯ ಬೇಲಿಯನ್ನು ಮುರಿದು ರಾಜಕೀಯ ಪಿತೂರಿಗೆ ಒಳಗಾಗದೇ ಧರ್ಮಗಳ ತುಳಿತವನ್ನೂ ಮೀರಿ ಮಹಿಳೆ ತನ್ನ ಸರ್ವತೋಮುಖ ಪ್ರಗತಿ ಸಾಧ್ಯವಾಗಿರಿಸಿಕೊಳ್ಳುವುದರಲ್ಲಿ ಆಕೆಯ ಸಫಲತೆ ಇದೆ...

ಪುರುಷ ಮಹಿಳೆಯ ಮನಃಸ್ಥಿತಿ ಬದಲಾಗಿ ಹೆಣ್ಣು ಕೇವಲ ಭೋಗದ ವಸ್ತುವಾಗದೇ ಸರ್ವಸ್ವತಂತ್ರ್ಯಳಾಗಿರಬೇಕು, ಪುರುಷನಾಗಲೀ ಮಹಿಳೆಯರಾಗಲೀ ಸ್ವೇಚ್ಛಾಚಾರ ಒಳಿತಲ್ಲ ಅದೇ ಆಧುನಿಕತೆಯಂತೂ ಅಲ್ಲವೇ ಅಲ್ಲ,

ಶಿಕ್ಷಣ ಪಡೆದ ಮಹಿಳೆಯರ ವಿದ್ಯೆ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಬಾರದು, ಆಕೆಯ ಶಿಕ್ಷಣಕ್ಕೆ ತಕ್ಕಂತೆ ಅರ್ಹತೆಗೆ ತಕ್ಕಂತೆ ಉದ್ಯೋಗ ದೊರೆಯುವುದೂ ಅವಶ್ಯವೇ....

ಆಧುನಿಕ ತಂತ್ರಜ್ಞಾನವನ್ನು ತನ್ನ ಸರ್ವಾಂಗೀಣ ಅಭಿವೃದ್ಧಿಗೆ ಬಳಸಿಕೊಳ್ಳುವಿಕೆ, ಆಧುನಿಕತೆಯ ದ್ಯೋತ್ಯಕವಾದ ಮೊಬೈಲ್ ಸಾಮಾಜಿಕ ಜಾಲತಾಣ, ಅಂತರ್ಜಾಲ ಬಳಕೆಯನ್ನು ತನ್ನ ರಕ್ಷಣಾ ಕವಚವಾಗಿ ಆಯುಧವಾಗಿ ಬಳಸುವಿಕೆ , ತನ್ನ ಏಳ್ಗೆಗಾಗಿ ಉಪಯೋಗಿಸಿಕೊಳ್ಳುವ ಜಾಣ್ಮೆ, ಸಾಮಾಜಿಕ ಜಾಲತಾಣಗಳ ಮೂಲಕ ತನ್ನಲ್ಲಿಯ ವಿಶಿಷ್ಟ ಕಲೆಗಳನ್ನು ಜಗಕ್ಕೇ ಪರಿಚಯಿಸುವುದು ಅದರ ಮೂಲಕ ಆದಾಯ ಗಳಿಸುವುದು, ನಟನೆ ನೃತ್ಯ ಸಂಗೀತ ಸಾಹಿತ್ಯ ಕರಕುಶಲ ಕಲೆಗಳು ಇವುಗಳ ತರಬೇತಿಯಿಂದ ಆದಾಯದ ಮೂಲ ಹುಟ್ಟಾಕಿಕೊಳ್ಳುವುದು ಹೀಗೇ, ಈ ಮೂಲಕ ತನ್ನ ಕುಟುಂಬದ ನಿರ್ವಹಣೆಯಲ್ಲಿ ಆರ್ಥಿಕ ಸಬಲತೆಯೂ ಮುಂದಿನ ಪೀಳಿಗೆಗೆ ಆದರ್ಶವಾಗಿ ಮಾರ್ಗದರ್ಶಿಯಾಗಿ ಬದುಕುವುದು,

ಇವೆಲ್ಲದರಲ್ಲೂ ಆಧುನಿಕತೆಯಲ್ಲಿ ಮಹಿಳೆಯ ಪಾತ್ರದ ಪರಿಚಯವಿದೆ... ಇದು ಸಂಕ್ಷಿಪ್ತತೆ ಮಾತ್ರ ಇದರ ಆಳ ಅಗಲಗಳು ವಿಸ್ತಾರವಾಗಿದೆ....

ಇಂದಿನ ಮಹಿಳೆ ತನ್ನ ಚಾಕಚಕ್ಯತೆ ಇಂದ ತನ್ನ ಔನ್ನ್ಯತ್ಯಗಳಿಗೆ ಚ್ಯುತಿ ತಾರದ಼ಂತೆ ನಿಭಾಯಿಸಿದಲ್ಲಿ ಕೌಟುಂಬಿಕ ಸಾಮಾಜಿಕ ಸರ್ವತೋಮುಖ ಏಳ್ಗೆಯ ಶಿಲ್ಪಿಯಾಗಬಲ್ಲಳು

No comments:

Post a Comment