Nov 28, 2018

ಪರಿತ್ಯಕ್ತೆ

ಪದ್ಮಜಾ ಜೋಯ್ಸ್ ದರಲಗೋಡು
ವಿಷಾದವೇ ಮಡುಗಟ್ಟಿದಂತೆ ನಿಸ್ಸಾರವಾಗಿ ಮಾಗಿದ ವಯಸ್ಸಿನ ದುಗುಡದ ಮನಸ್ಸಿನಿಂದೆಂಬಂತೆ ಸದ್ದಿಲ್ಲದೇ ಸರಿದು ಬಂದ ಅವನನ್ನು ಹೊತ್ತ ಕಾರೊಂದು ಆ ಕಟ್ಟಡದ ಎದುರು ಬಂದು ನಿ಼ಂತಾಗ ನಿರೀಕ್ಷೆಯಲ್ಲಿದ್ದಂತೇ ಒಳಗಿನಿಂದ ಎರಡು ಜೋಡಿ ಕಂಗಳು ಗಮನಿಸಿದ್ದವು.....ಅದೊಂದು ಮಾನಸಿಕ ಚಿಕಿತ್ಸಾ ಕೇಂದ್ರ....
ಗಮನಿಸಿದ, ನಿರೀಕ್ಷೆಯಲ್ಲೇ ಇದ್ದ ಒಂದು ಜೋಡಿ ಕಂಗಳಲ್ಲೊಂದು ಮನೋರೋಗ ತಜ್ಞರಾದರೇ... ಇನ್ನೊಂದು ಚಿಕಿತ್ಸೆ ಪಡೆಯುತ್ತಿರುವ ರೋಗಿಯದು.... ಇಂದವಳ ಹುಟ್ಟಿದ ಹಬ್ಬ , ಇದು ದಶಕದಿಂದಲೂ ಅನೂಚಾನವಾಗಿ ನೆಡೆಯುತ್ತಿರುವ ಘಟನೆಯೇ ಆದರೂ ಯಾವುದೋ ನಿರೀಕ್ಷೆ ಹೊತ್ತು ಬರುವವರಲ್ಲಿ ದಿನದಿನಕ್ಕೂ ನಿರಾಸೆ ಮಡುಗಟ್ಟುತ್ತಿರುವುದನ್ನು .. ತಜ್ಞರೂ .. ಗಮನಿಸಿ ಸತ್ಯವನ್ನು ಹೇಳಿಬಿಡಿಬೇಕೆಂಬ ತುಡಿತ ಅತಿಯಾದರೂ ರೋಗಿಗಿತ್ತ ವಾಗ್ದಾನ ನೆನಪಾಗಿ ಖೇದದಿಂದ ತುಟಿ ಬಿಗಿದುಕೊಂಡರು...
ಕಾರು ನಿಲ್ಲಿಸಿದವ ಏನನ್ನೋ ನಿರೀಕ್ಷಿಸುವಂತೆ "ಅವಳ" ರೂಮಿನ ಕಿಟಕಿಯತ್ತ ಕಣ್ಣು ಹಾಯಿಸಿ ನಿರಾಸೆಯಿ಼ಂದ ನಿಟ್ಟುಸಿರಿಟ್ಟು, ತಲೆಕೊಡವಿ ಅವನು "ಅವಳಿಗಾಗಿ" ತಂದ ವಸ್ತುಗಳನ್ನು ಎದೆಗವಚಿಕೊಂಡು ಹಿಂದೆ ಬ಼ಂದ ಇನ್ನೊಂದು ಕಾರು ಹಾಗೂ ಬ಼ಂದವರಿಗೆ ಕಾಯದೇ ಒಳನೆಡೆದ , 
ಮತ್ತುಳಿದವರು "ಆವಳ" ಬಳಗ ಅವರೂ ತ಼ಂದದ್ದೆಲ್ಲವನ್ನೂ ಎತ್ತಿಕೊಂಡು ಹಿ಼ಂದೆಯೇ ನೆಡೆದರು... ಎಲ್ಲ ಮೌನವಾಗಿ ಪರಸ್ಪರ ದಿಟ್ಟಿಸಿಕೊಂಡರೇ ವಿನಾ ಆಡಲ್ಯಾವ ಮಾತುಗಳಿರಲಿಲ್ಲ... 
ಮೊದಲಿಳಿದವನು ಹಿಂದೆ ಬ಼ಂದ ಯುವಕನ ಭುಜ ಬಳಸಿ ತಲೆ ಸವರಿ ಮೌನದಲ್ಲೇ ಕುಶಲೋಪರಿ ವಿಚಾರಿಸಿ ಸಾಂತ್ವನಿಸಿದಂತಿತ್ತು.... ಇಬ್ಬರಿಗೂ ಕೊರಳ ಸೆರೆಯುಬ್ಬಿ ಮಾತು ಗಂಟಲಲ್ಲೇ ಹೂತು ಹೋಗಿತ್ತು... ಎಲ್ಲರೂ ಪರಸ್ಪರ ನಿಟ್ಟಿಸಿಕೊಂಡರಷ್ಟೇ.... ಇಲ್ಲವಳನ್ನು ನೋಡಲು ಬರೋ ಹಾಗಾದುದರಲ್ಲಿ ಎಲ್ಲರ ಪಾತ್ರವೂ ಇತ್ತಾದುದರಿಂದ....
ಅಲ್ಲಿನ ಮುಖ್ಯಸ್ಥ ಆ ಮನೋರೋಗ ತಜ್ಞರು ಹೊರಬ಼ಂದು ಎಲ್ಲರನ್ನೂ ಎಲ್ಲವನ್ನೂ ಒಮ್ಮೆ ಧೀರ್ಘವಾಗಿ ಅವಲೋಕಿಸಿದರು .ಒಮ್ಮೆ ನಿಡಿಯುಸಿರೆಳೆದರು ಈ ಕಾಳಜಿ ಮೊದಲೇ ಕಿ಼ಂಚಿತ್ತು ತೋರಿದ್ದರೂ ಇಂದವಳನ್ನ ನೋಡಲು ಅವರ್ಯಾರೂ ಅಲ್ಲಿ ಬರಬೇಕಿರಲಿಲ್ಲ... ಕೊಂಚ ಭಾವುಕರಾದರೂ ತತ್ ಕ್ಷಣ ಎಚ್ಚೆತ್ತುಕೊಂಡವರು ಎಲ್ಲರ ಉಭಯಕುಶಲೋಪರಿ ವಿಚಾರಿಸಿ, ಎಲ್ಲವೂ ತಯಾರಿದೆ ಬನ್ನಿ ಎಂದು ಮೇಲಿನ ಹಾಲ್ಗೆ ಕರೆದೋಯ್ದರು... 
ಎಲ್ಲರ ಬರವು ತನಗೆ ಸಂಬಂಧಿಸಿದ್ದೇ ಅಲ್ಲವೆ಼ಂತಲೋ. ಬ಼ಂದವರು ತನಗೆ ಪರಿಚಿತರೇ ಅಲ್ಲವೆನ್ನುವೆಂಥಲೋ , ಈ ಲೋಕದ ಯಾವ ವ್ಯವಹಾರವೂ ತನಗೆ ಸ಼಼ಂಬಂಧಿಸಿದ್ದೇ ಅಲ್ಲವೆನ್ನುವಂತೆ ಒಳಕೋಣೆಯಲ್ಲಿ ಕಿಟಿಕಿಯಾಚೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ನಿಸ್ತೇಜವಾಗಿ ಕುಳಿತವಳನ್ನು ನೋಡಿ.... ಬದುಕಿನಲ್ಲಿನ ದೈಹಿಕ ಮಾನಸಿಕವಾಗಿ ಜರ್ಜರಿತಗೊ಼ಂಡ "ಅವಳ" ತಾಯಿ ಬಾಯಿಗೆ ಕೈಯಡ್ಡವಿರಿಸಿದರೂ ಸಶಬ್ಧವಾಗೊಮ್ಮೆ ಬಿಕ್ಕಳಿಸಿದಳು, ಜೊತೆ ಬ಼ಂದ ತರುಣ ದುಃಖದ ಉಗುಳು ನುಂಗುತ್ತಲೇ ಅಜ್ಜಿಯ ಭುಜ ಬಳಸಿ ಎದೆಗಾನಿಸಿಕೊಂಡ....
ದಾದಿ ಬಲವಂತದಿಂದ ರೆಡಿ ಮಾಡಿ ಕೂರಿಸಿದವಳನ್ನು ಮೆಲ್ಲಗೆ ಕೈ ಹಿಡಿದು ಹಾಲ್ಗೆ ಕರೆತಂದಳು..... 
"ಅವಳ "ತಾಯಿ ಹೋಗಿ ತಬ್ಬಿಕೊಂಡಳು.... ಮಗ ಮೌನವಾಗಿ "ಅವಳ"ದೇ ಮಡಿಲಿಗೊರಗಿದ... ಮೊದಲು ಬಂದವನು ಹತ್ತಿರವೂ ಹೋಗಲಾರದೇ ದೂರವೂ ನಿಲ್ಲಲಾರದೇ ಚಡಪಡಿಸತೊಡಗಿದ.. ಅವನ ತಳಮಳ ಅರಿತ "ಅವಳ" ಅಣ್ಣ ಅವನ ಭುಜ ಬಳಸಿ "ಅವಳ" ಬಳಿ ಕರೆದೊಯ್ದ...... ಅರಿತವರ಼ಂತೆ ಅಜ್ಜಿ ಮೊಮ್ಮಗ ಬದಿಗೆ ಸರಿದರು ... ಅವಳೆರಡೂ ಕೈಗಳನ್ನು ತನ್ನ ಬೊಗಸೆಯಲ್ಲಿ ತೆಗೆದುಕೊಂಡವ ""ಅವಳ"" ಕೈಗಳಲ್ಲಿ ಮುಖಮುಚ್ಚಿ ಬಿಕ್ಕಳಿಸಿದ, ಎಲ್ಲವನ್ನೂ ನಿರ್ಭಾವುಕಳಾಗಿ ಶೂನ್ಯ ದೃಷ್ಟಿ ಬೀರಿದವಳನ್ನು ನೋಡಿ ಸಾಕ್ಷಿಯಾದವರೆಲ್ಲರೂ ದುಃಖತಪ್ತರಾದರು... 
ಮರು ಕ್ಷಣ ಎಚ್ಚೆತ್ತುಕೊಂಡ ಡಾಕ್ಟರ್ ಮೈಮರೆತ ಎಲ್ಲರನ್ನೂ
ಎಚ್ಚರಿಸಿದ , ದಾದಿ ತಂದಿದ್ದ ಕೇಕ್ ಮತ್ತುಳಿದುದನ್ನು ಜೋಡಿಸಿದಳು... ಯಾ಼ಂತ್ರಿಕವೆಂಬಂತೆ ಒಂದು ಬರ್ತಡೇ ಕೇಕ್ ಕಟಿಂಗ್ ನೆಡೆದು ಹೋಯಿತು , ಸಂತಸದ ಬದಲಿಗೆ ಎಲ್ಲರ ಮೊಗದಲ್ಲೂ ತೀರದ ದುಗುಡ , ಕಣ್ಣಂಚಲ್ಲಿ ಕಂಬನಿಯ ಹನಿ ... ಇದೇನೂ ತನ್ನದಲ್ಲವೆ಼ಂಬಂತೆ ಸೀದ ಎದ್ದು ರೂಮೀಗೆ ನೆಡೆದವಳ ಹಿಂದೆ ಮಗ ನೆಡೆದರೇ... "ಅವಳ " ಅಣ್ಣ ಅಮ್ಮ ಡಾಕ್ಟರ್ ಕಡೆ ತಿರುಗಿದರು... "ಆ ಮನುಷ್ಯನ " ದೃಷ್ಟಿ" ಅವಳ "ಬೆನ್ನಿಗೇ ಇದ್ದುದನ್ನು ಗಮನಿಸಿದ ಡಾಕ್ಟರ್ ಭುಜ ತಟ್ಟಿ ಅವಳ ಬಳಿ ಹೋಗುವಂತೆ ಸೂಚಿಸಿ ಮಿಕ್ಕವರನ್ನು ಕರೆದುಕೊಂಡು ಕೆಳ ನೆಡೆದರು..... 
ಕಿಟಿಕಿಯ ಸರಳಿಡಿದು ಕ್ಷಿತಿಜದತ್ತ ಮೊಗದಿರುವಿ ಕೂತವಳ ಕಣ್ಣಲ್ಲೇನಿತ್ತೋ ಮನದಲ್ಲೇನಿತ್ತೋ... ಮಗನೂ ಅರಿಯದಾದರೇ ದಶಕಗಳಿಂದಲೂ ಆತ್ಮಸಖನಾಗಿದ್ದವನೂ ತಿಳಿದುಕೊಳ್ಳಲಾರದೇ ಸಂಕಟ ಪಟ್ಟರು.... ಕೆಲಹೊತ್ತು ಕಳೆದ ನಂತರ ಈ ಮೌನವನ್ನು ಇನ್ನು ಭರಿಸಲಾರದಂತೆ ಇಬ್ಬರೂ ಉಕ್ಕುವ ಬಿಕ್ಕನ್ನು ಅದುಮಿಡುತ್ತಾ ಡಾಕ್ಟರ್ ರೂಮಿನ ಬಳಿ ನೆಡೆದರು....
ಎಷ್ಟು ಮಾತಾಡಿದರೂ ಏನೇ ಮಾಡಿದರೂ ಮುರಿಯಲಾರದ "ಅವಳ " ಮೌನ , ಉನ್ಮಾದ ಉದ್ವೇಗ ಇಲ್ಲದ ನಿರ್ಲಿಪ್ತ ನಡವಳಿಕೆ ಎಲ್ಲರಿಗೂ ಯಕ್ಷಪ್ರಶ್ನೆಯಾಗಿತ್ತು....
ಕರೆದೊಯ್ದು ತಮ್ಮ ಜೊತೆಗಿರಿಸಿಕೊಳ್ಳುವ ಅವರ ಇರಾದೆಗೆ ಖಡಾಖಂಡಿತವಾಗಿ ನಿರಾಕರಿಸಿದ ಡಾಕ್ಟರ್ ಯಾವಾಗ ಬೇಕಾದರೂ ಬನ್ನಿ ""ಅವಳನ್ನು "" ಅವಳ ಪಾಡಿಗೆ ಇರಲು ಬಿಟ್ಬಿಡಿ ಎಂದರು.... 
ಭಾರವಾದ ದುಃಖತಪ್ತ ಹೃದಯದೊ಼ಂದಿಗೆ ಎಲ್ಲರೂ ಆವಳಿದ್ದ ಕಿಟಕಿಯೆಡೆ ತಿರುತಿರುಗಿ ನೋಡುತ್ತಾ ಸುರಿಯುತ್ತಿರುವ ಕಂಬನಿ ಒರೆಸಿಕೊಳ್ಳುತ್ತಾ ಒಲ್ಲದ ಮನದೊ಼ಂದಿಗೆ ಹಿ಼ಂದಿರುಗಿದರು....
ಅವರತ್ತ ನೆಡೆಯುತ್ತಲೂ ಡಾಕ್ಟರ್ ಮತ್ತು ದಾದಿ "ಅವಳ" ರೂಮೆಡೆಗೆ ಓಡಿದರು..... ಇಷ್ಟೊತ್ತೂ ಬಿಗಿದಿಡಿದ ಅವಳ ಭಾವಧಾರೆಗಳು ಕಟ್ಟೆಯೊಡೆಯುವಾಗ ಸಂಭಾಳಿಸುವ ಜರೂರಿಗಾಗಿ..... ಅವಳಾಗಲೇ ಕುಸಿದು ಕುಳಿತು ಬಿಕ್ಕಳಿಸುತ್ತಿದ್ದಳು... 
ಇಬ್ಬರನ್ನು ನೋಡಿದೊಡನೆ ""ಅವಳ ""ದುಃಖ ಇಮ್ಮಡಿಯಾಯ್ತು ... ಡಾಕ್ಟರ್ ದಾದಿ ಇಬ್ಬರೂ ಸ್ವಲ್ಪ ಹೊತ್ತು ತಲೆ ಸವರುತ್ತಾ ಮೌನವಾಗಿದ್ದು..... "ಅವಳ "ದುಃಖ ತಹಬಂದಿಗೆ ಬಂದ ನಂತರ ಮೆಲ್ಲಗೆ ಮಾತಿಗಾರಂಭಿಸಿದರು...
ಇಷ್ಟೆಲ್ಲಾ ಎದೆ ತುಂಬಾ ವಾತ್ಸಲ್ಯ ಮಮತೆಯ ಬಂಧನ ಇಟ್ಕೊಂಡು ಯಾಕೀ ನಾಟಕ ?? ಯಾಕೆ ಹೋಗೋದಿಲ್ಲ ??
ಯಾಕೆ ಮನೆಯವರ ಜೊತೆ ಯಾಕೆ ಕಣ್ಣಾಮುಚ್ಚಾಲೆ ?? 
ದಾದಿ ಕೈಗಿತ್ತ ನೀರನ್ನು ಹನಿಹನಿಯಾಗಿ ಗುಟುಕರಿಸಿದವಳು , ಡಾಕ್ಟರ್ ನನ್ನೊಮ್ಮೆ ಧೀರ್ಘವಾಗಿ ದಿಟ್ಟಿಸಿದಳು...
ಇಷ್ಟೊತ್ತು ಈ ಲೋಕದರಿವೇ ಇರದಂತಿದ್ದವಳು ಮಾತು ಮರೆತಂತವಳು ನುಡಿದಳು ಒಂದೊ಼ಂದೇ ಪದಗಳ ಜೋಡಿಸುತ್ತಾ..... 
ನಿಮ್ಮನ್ನು ಗೆಳೆಯನೆನ್ನಲಾ ???!! ಅದಕಿಂತ ಹತ್ತಿರ ದೈವವೆನ್ನಲಾ???!! ಅದಕಿಂತ ಎತ್ತರ, ಏನೂ ಆಗೇ ಇರದ ನನ್ನ ದಶಕಗಳ ಕಾಲ ಮನೋರೋಗಿ ಎಂದು ಹೇಳಿ ಆಶ್ರಯ ಆಸರೆ ಭರವಸೆ ನೀಡಿದ್ದೀರಿ , ಅನಾಮಿಕವಾದರೂ ಬರಹಲೋಕದಲ್ಲಿ ನನ್ನ ಸಾರ್ಥಕತೆಯ ಕಂಡುಕೊಳ್ಳುವಲ್ಲಿ ನೆರವಾದಿರಿ , ಮುಖ್ಯವಾಗಿ ಯಾರ ಹಿಡಿ ಪ್ರೀತಿಗಾಗಿ ಹಪಹಪಿಸುತ್ತಿದ್ದೆನೋ ಅವರುಗಳು ನನ್ನ ಪದೇ ಪದೇ ಹೀಯಾಳಿಸಿ ತಿರಸ್ಕರಿಸಿ ಉದಾಸೀನ ತೋರುತ್ತಿದ್ದು ಬದುಕಿನತ್ತ ವಿಮುಖಳಾದಾಗ ಇನ್ನೇನು ಸಾವಿನತ್ತ ಸೆಳೆಯಲ್ಪಡುವವಳನ್ನು ಇಲ್ಲಿ ಆಶ್ರಯ ಆಸರೆ ನೀಡಿ ಸಂತೈಸಿದ್ದೀರಿ . ಗುಪ್ತನಾಮದಲ್ಲೇ ಬರೆದರೂ ಹೆಸರಿಲ್ಲದೇ ಹೆಸರುವಾಸಿಯಾದೆ , ಆರೋಗ್ಯವಾಗಿದ್ದರೇ ಸಿಗದ ಪ್ರೀತಿ ಮನೋರೋಗಿ ಎಂದೊಡನೆ ಸಿಕ್ಕಿದೆ.. ಯಾವುದಕ್ಕಾಗಿ ಮೂರು ದಶಕಗಳೂ ಪರಿತಪಿಸಿದೆನೋ ಅದು ಈಗ ಅಪರೂಪಕ್ಕಾದರೂ ಸಿಗುತ್ತಿದೆ.. ಇದು ಹೀಗೇ ಕೊನೆಯಾಗಿಬಿಡಲಿ ಡಾಕ್ಟರ್ , ನಾನೊಂದು ರೀತಿ ಸಮಾಜದಿಂದ ಸ಼ಂಸಾರದಿಂದ ಪರಿತ್ಯಕ್ತೆ... ಮತ್ತೆ ಯಾವ ಸಂಸಾರ ಸಮಾಜವೂ ಮುಕ್ತವಾಗಿ ಸ್ವೀಕರಿಸುವುದಿಲ್ಲ ನನ್ನ, ಮತ್ತೊಮ್ಮೆ ಆ ನಿರಾಕರಣೆಯ ಉದಾಸೀನದ ಪರಮಾವಧಿಯನ್ನ ಸಹಿಸಲಾರೆ, ದಶಕಗಳೂ ಅವ್ಯಾಹತವಾಗಿ ಪ್ರೀತಿಸಿದರೂ ನನ್ನ ಪ್ರಿಯಕರನ ಕಣ್ಣಲ್ಲಿ ಈ ಪ್ರೀತಿ ಕಾಣಲಾಗಿರಲಿಲ್ಲ, ನನ್ನ ಅಮ್ಮ ಅಣ್ಣ ಸಂಬಂಧಿಕರ ಕಣ್ಣಲ್ಲಿ ಕೊನೆಗೆ ನನ್ನ ದುಃಖ ದುರಂತ ಬದುಕಿನ ಅರಿವಿದ್ದೂ ಮಗನೂ ಹೀಯಾಳಿಸಿದ. ಮತ್ತಷ್ಟು ನೋಯಿಸಿದ ನನ್ನ ಮೌನ ಅಗಲಿಕೆ ಈಗವರಿಗೆ ಪ್ರೀತಿ ತರಿಸಿದೆ, ಮತ್ತೆ ಹತ್ತಿರವಾದರೇ ಇದೂ ಕಳೆದು ಹೋದೀತು... ""ಶರಪಂಜರದ ಕಥಾನಾಯಕಿಯಾಗಲಾರೆ"" ಹೀಗೇ ಇರಲು ಬಿಡಿ ನನ್ನ..... ಇಷ್ಟಾದರೂ ಪ್ರೀತಿ ನನ್ನ ಉಡಿಗಿರಲೀ... ಕಂಬನಿಯೊಂದಿಗಿನ ಮಾತು ಎದುರಿನವರಲ್ಲಿ ದುಃಖ ವಿಷಾದ ಹುಟ್ಟಿಸಿತು, ಲೋಕದ ವಿಪರ್ಯಸ, ವಿಡಂಬನೆಗಳು ಇಂಥಹವೆಷ್ಟಿದೆಯೋ.....??!!
ಡಾಕ್ಟರ್ ತಣ್ಣಗೆ ನುಡಿಯುತ್ತಾರೆ... ನಿನ್ನ ಪ್ರಿಯನದು ಒಂದು ಅಭಿಲಾಷೆ ಇದೆ... ಕೇಳ್ತೀಯಾಮ್ಮಾ.... "ಅವಳು " ಅಚ್ಚರಿ ಕುತೂಹಲ ಭರಿತ ದೃಷ್ಟಿ ಚೆಲ್ಲಿ ಪ್ರಶ್ನಾರ್ಥಕವಾಗಿ ಅವರತ್ತ ತಿರುಗುವಳು.... 
ಡಾಕ್ಟರ್ ಮೆಲ್ಲಗೆ ನುಡಿಯುತ್ತಾರೆ "" ಒಂದು ಬೆಳದಿಂಗಳ ರಾತ್ರಿ ಸಮುದ್ರದೆದುರಾಗಿ ನಿನ್ನೊಂದಿಗೆ ಕಳೆಯಲು ಬಯಸುತ್ತಾನೆ" ತನ್ನ ಒಂದೇ ಒಂದು ಕೊನೆಯಾಸೆ ಎಂದು ನುಡಿದಿದ್ದಾನೆ....
ಅವಳಿಂದ ಹೊರಟಿದ್ದು ಒಂದು ವಿಷಾದದ ವಿಷಣ್ಣ ನಗೆ ಸ್ವಗತವೆಂಬ಼ತೆ ಗೊಣಗಿಕೊಂಡಳು ... ""ಅದು ನನ್ನ ಜೀವಮಾನದ ಕನಸಾಗಿತ್ತು"" ಮತ್ತಾಗ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿರಲಿಲ್ಲ.... !!!! ಅವಳ ಮೌನದ ನೋಟದಲ್ಲಿ ಏನುತ್ತರವಿತ್ತೋ...?? ಮೂವರೂ ಆಗ ತಾನೇ ಜಾರುತ್ತಿದ್ದ ನಿಶೆಯತ್ತ ಮುಖ ತಿರುಗಿಸಿದ್ದರು...



No comments:

Post a Comment