Mar 21, 2018

ಕಾಂಗ್ರೆಸ್ಸನ್ನು ಹೊರಗಿಟ್ಟು ಹುಟ್ಟುಹಾಕುವ ಸಂಯುಕ್ತರಂಗದ ಯಶಸ್ಸು ಮರೀಚಿಕೆಯಷ್ಟೆ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕಾಂಗ್ರೇಸ್ಸೇತರ ತೃತೀಯ ರಂಗ ಅಥವಾ ಸಂಯುಕ್ತರಂಗವೊಂದರ ಸ್ಥಾಪನೆಯ ಮಾತು ಮತ್ತೆ ಕೇಳಿ ಬರತೊಡಗಿದೆ. ಕೇಂದ್ರದ ಮಲತಾಯಿ ಧೋರಣೆಯ ವಿರುದ್ದ ಸಿಡಿದೆದ್ದಿರುವ ತೆಲಂಗಾಣ ಮುಖ್ಯಮಂತ್ರಿ ಶ್ರೀ ಕೆ.ಚಂದ್ರೇಖರ್ರಾವ್ ಪ್ರಸ್ತಾಪಿಸಿರುವ ಕಾಂಗ್ರೇಸ್ಸೇತರ ತೃತೀಯರಂಗವೊಂದರ ಬಗ್ಗೆ ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನಜರ್ಿಯಂತವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನುಳಿದ ಹಲವಾರು ಪ್ರಾದೆಶಿಕಪಕ್ಷಗಳು ಸಹ ಈ ಪ್ರಯತ್ನಕ್ಕೆ ಕೈಜೋಡಿಸಬಹುದೆಂಬ ನಂಬಿಕೆಯಲ್ಲಿ ರಾವ್ ಓಡಾಡುತ್ತಿದ್ದಾರೆ. ಕನರ್ಾಟಕದ ಜಾತ್ಯಾತೀತ ಜನತಾದಳದ ರಾಷ್ಟ್ರೀಯ ಅದ್ಯಕ್ಷರಾದ ದೇವೇಗೌಡರು ಸಹ ರಾವ್ ಯತ್ನವನ್ನು ಸ್ವಾಗತಿಸಿರುವುದು ವಿಶೇಷವಾಗಿದೆ. ಅದರಲ್ಲೂ ಉತ್ತರಪ್ರದೇಶ ಮತ್ತು ಬಿಹಾರದ ಉಪಚುನಾವಣೆಗಳಲ್ಲಿ ಬಂದ ಬಾಜಪ ವಿರೋಧ ಪಲಿತಾಂಶಗಳ ನಂತರ ಈ ವಾದಕ್ಕೆ ಮತ್ತಷ್ಟು ಪುಷ್ಠಿ ಬಂದಂತೆ ಕಾಣುತ್ತಿದೆ

ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತ ಒಂದೊಂದೇ ರಾಜ್ಯಗಳನ್ನು ಗೆಲ್ಲುತ್ತಾ ಕಾಂಗ್ರೇಸ್ಸನ್ನು ಮಣಿಸುತ್ತಿರುವ ರಾಷ್ಟ್ರೀಯ ಪಕ್ಷವಾದ ಬಾಜಪವನ್ನು ಮಣಿಸದೇ ಹೋದಲ್ಲಿ ತಮ್ಮಂತಹ ಪ್ರಾದೇಶಿಕ ಪಕ್ಷಗಳಿಗೆ ಉಳಿಗಾಲವಿಲ್ಲವೆಂಬ ಸತ್ಯ ನಮ್ಮ ಸ್ಥಳೀಯ ನಾಯಕರುಗಳಿಗೆ ನಿದಾನವಾಗಿಯಾದರೂ ಅರ್ಥವಾದಂತಿದೆ. ಈ ಹಿನ್ನೆಲೆಯಲ್ಲಿಯೇ ರಾವ್ ಅವರ ಈ ಪ್ರಯತ್ನಕ್ಕೆ ಹಲವು ದಿಕ್ಕುಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು ಬಾಜಪವನ್ನು ಸೈದ್ದಾಂತಿಕವಾಗಿ ವಿರೋದಿಸುವ ಜನತೆಯಲ್ಲು ಹೊಸ ಆಶಾಕಿರಣವೊಂದು ಮೊಳೆತಿದೆ.

ಆದರಿಲ್ಲಿ ಕಾಡುವ ಪ್ರಶ್ನೆಯೆಂದರೆ, ಕಾಂಗ್ರೆಸ್ಸೇತರ ತೃತೀಯರಂಗ ಅಥವಾ ಸಂಯುಕ್ತರಂಗವೆಂದು ಏನು ಹೇಳಲಾಗುತ್ತಿದೆಯೊ ಅದು ನಿಜಕ್ಕೂ ಬಾಜಪವನ್ನು ಸೋಲಿಸುವ ಮಟ್ಟಿಗೆ ಶಕ್ತಿಶಾಲಿಯಾಗಿ ಬೆಳೆದು ನಿಲ್ಲಬಲ್ಲದೆ? ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಹುಟ್ಟುಹಾಕಲು ಹೊರಟಿರುವ ಈ ರಂಗಕ್ಕೆ ಬಾಜಪ ಮತ್ತು ಕಾಂಗ್ರೆಸ್ ಎರಡನ್ನೂ ಏಕಕಾಲಕ್ಕೆ ಎದುರಿಸುವ ಸಾಮರ್ಥ್ಯ  ಇರುತ್ತದೆಯೇ ಎನ್ನುವುದೇ ನನ್ನ ಮುಖ್ಯ ಪ್ರಶ್ನೆಯಾಗಿದೆ. ದಿನದಿನಕ್ಕೂ ತನ್ನ ಕವಲುಗಳನ್ನು ವಿಸ್ತರಿಸುತ್ತರಾಜಕೀಯವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಶಕ್ತಿಶಾಲಿಯಾಗುತ್ತಿರುವ ಬಾಜಪವನ್ನು ಸೋಲಿಸುವ ಶಕ್ತಿ-ಸಾಮಥ್ರ್ಯ ನಮ್ಮಪ್ರಾದೇಶಿಕ ಪಕ್ಷಗಳ ಸಂಘಟನೆಗೆ ಬಂದು ಬಿಡುತ್ತದೆಯೇ?ತೊಂಭತ್ತರ ದಶಕದ ತೃತೀಯ ರಂಗಕ್ಕೆ ಕಾಂಗ್ರೆಸ್ ಪಕ್ಷವೆ ಬಲಿಷ್ಠ ಎದುರಾಳಿಯಾಗಿತ್ತಲ್ಲದೆ. ಆಗಿನ್ನೂ ಬಾಜಪದ ಮತಪ್ರಮಾಣ ತೀರಾ ಕಡಿಮೆಯಿದ್ದು ಆ ಎರಡು ರಾಷ್ಟ್ರೀಯ ಪಕ್ಷಗಳನ್ನು ಸೋಲಿಸಿ ಅಧಿಕಾರ ಹಿಡಿಯುವಷ್ಟರ ಮಟ್ಟಿಗೆ ಶಕ್ತಿ ಹೊಂದಿತ್ತೆಂಬುದೇನೊ ನಿಜ!. ಆದರಿವತ್ತು ಪರಿಸ್ಥಿತಿ ಹಾಗಿಲ್ಲ.ಕಳೆದ ಐದುವರ್ಷಗಳ ಸರಾಸರಿ ಮತಗಳಿಕೆಯ ಪ್ರಮಾಣಗಳನ್ನು ಲೆಕ್ಕ ಹಾಕಿ ನೋಡಿದರೆ ಬಾಜಪ ಶೆಕಡಾವಾರು 39ರಿಂದ 40ರಷ್ಟು ಮತಗಳನ್ನು ಗಳಿಸುತ್ತಲೆ ಬಂದಿದೆ. ಅದೇ ವೇಳೆಗೆ ಕಾಂಗ್ರೇಸ್ ಪಕ್ಷ ಶೇಕಡಾವಾರು 20 ರಿಂದ 22ರಷ್ಟು ಮತ ಗಳಿಸುತ್ತಲೆ ಬರುತ್ತಿದೆ. ಈ ಅಂಕಿಅಂಶಗಳು ರಾಜ್ಯದಿಂದ ರಾಜ್ಯಕ್ಕೆ ಸ್ವಲ್ಪ ಮಟ್ಟಿಗೆ ಆಚೀಚೆ ಆಗಬಹುದಾದರೂ ಹೆಚ್ಚೇನು ವ್ಯತ್ಯಾಸ ಕಂಡುಬರುವುದಿಲ್ಲ. ಇನ್ನಿವತ್ತು ಕಾಂಗ್ರೇಸ್ ಸತತವಾಗಿ ಸೋಲುತ್ತಾ ಹತಾಶೆಯ ಸ್ಥಿತಿ ತಲುಪಿದ್ದರೂ ಅದರ ಬೇರುಗಳು ಇವತ್ತಿಗೂ ರಾಷ್ಟ್ರದ ಎಲ್ಲ ಮೂಲೆಗಳಲ್ಲಿಯೂ ಹರಡಿಕೊಂಡಿವೆ. ಇಂದಿನ ಬಹುತೇಕ ಯುವಜನತೆ ಬಾಜಪದಂತಹ ಬಲಪಂಥೀಯ ಶಕ್ತಿಗಳಿಗೆ ಆಕರ್ಷಿತರಾಗಿ ಅದರತ್ತ ಹೋಗಿದ್ದರೂ, ಇಂಡಿಯಾದ ಪ್ರತಿ ಮತಕ್ಷೇತ್ರದಲ್ಲಿಯೂ ಇವತ್ತಿಗೂ ಕಾಂಗ್ರೇಸ್ಸಿಗೆ ತನ್ನದೆ ಆದ ಕಾರ್ಯಕರ್ತರುಗಳು ಮತ್ತು ಹಿತಚಿಂತಕರು ಇದ್ದೇ ಇದ್ದಾರೆ. ಹಾಗಾಗಿ ಅದರ ಸತತ ಸೋಲಿನಹೊರತಾಗಿಯೂ ಕಾಂಗ್ರೆಸ್ಸನ್ನು ಕಡೆಗಣಿಸುವುದು ಮೂರ್ಖತನವಾಗುತ್ತದೆ. 

ಅದೂ ಅಲ್ಲದೆ ಕಾಂಗ್ರೆಸ್ಸಿನ ರಾಷ್ಟ್ರೀಯ ಅದ್ಯಕ್ಷರಾದ ರಾಹುಲ್ ಗಾಂದಿಯವರ ಅನನುಭವ ಏನೆ ಇರಲಿ ರಾಷ್ಟ್ರ ಮಟ್ಟದಲ್ಲಿ ಜನತೆಯನ್ನು ಆಕಷರ್ಿಸಬಲ್ಲ ಮಂತ್ರವೊಂದು ಅವರ ಹೆಸರಿನಲ್ಲಿರುವ 'ಗಾಂದಿ'ಗೆ ಇದೆ.ಜೊತೆಗೆ ನೆಹರು ಕುಟುಂಬದ ಕುಡಿಗೆ, ಅದರದೇ ಆದ ಮತಬ್ಯಾಂಕು ಇವತ್ತಿಗೂ ಇದೆ.

ಅದೂ ಅಲ್ಲದೆ ಕಾಂಗ್ರೇಸ್ಸೇತರ ರಂಗವೊಂದಕ್ಕೆ ಎಲ್ಲ ಪ್ರಾದೇಶಿಕ ಪಕ್ಷಗಳೂ ಸೇರುತ್ತವೆಯೆಂಬ ಭರವಸೆಯೇನು ಇಲ್ಲ. ಅದರಲ್ಲೂ ಈಗ ಯು.ಪಿ.ಎ. ಜೊತೆಗಿರುವ ಕೆಲವು ಪಕ್ಷಗಳು ಕಾಂಗ್ರೇಸ್ಸಿನ ಜೊತೆಗೆ ಹೋಗುವುದೇ ಕ್ಷೇಮಕರವೆಂದು ನಂಬಿದ್ದರೆ ಅಚ್ಚರಿಯೇನೂ ಇಲ್ಲ. ಯಾಕೆಂದರೆ ಕಾಂಗ್ರೇಸ್ಸಿನ ಮತಬ್ಯಾಂಕನ್ನು ಅದರ ಮಸುಕಾಗಿರಬಹುದಾದ ವರ್ಚಸ್ಸನ್ನು ನಿರಾಕರಿಸಿ ರಾಜಕಾರಣ ಮಾಡುವ ಮನಸ್ಥಿತಿ ಹೊಂದಿರದ ಕೆಲವು ಪಕ್ಷಗಳು ಮುಂದೆಯೂ ಅದರ ಜೊತೆಗೇನೆ ಇರಬಹುದಾಗಿದೆ. ಶರದ್ ಪವಾರರ ಎನ.ಸಿ.ಪಿ. ಮತ್ತು ತಮಿಳುನಾಡಿನ ಕರುಣಾನಿದಿಯವರ ಡಿ.ಎಂ.ಕೆ., ಬಿಹಾರದ ಲಾಲೂಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ ಅಂತಹ ಕೆಲಪಕ್ಷಗಳಾಗಿವೆ. 

ಇಷ್ಟಲ್ಲದೆ ರಾಜಾಸ್ಥಾನ್ ಮತ್ತು ಮದ್ಯಪ್ರದೆಶದಂತಹ ರಾಜ್ಯಗಳಲ್ಲಿ ಬಾಜಪವನ್ನು ಎದುರಿಸಲು ಕಾಂಗ್ರೇಸ್ಸನ್ನು ಬಿಟ್ಟರೆ ಉಳಿದ್ಯಾವ ಪಕ್ಷಗಳ ಅಸ್ಥಿತ್ವವೂ ಅಲ್ಲಿಲ್ಲ. ಅ ರಾಜ್ಯಗಳಲ್ಲಿ ಸ್ಪರ್ದೆ ಏನಿದ್ದರೂ ಕಾಂಗ್ರೆಸ್ ಮತ್ತು ಬಾಜಪದ ನಡುವೇನೆ ನಡೆಯಬೇಕು. ಅಂತಹ ಕಡೆ ಸಂಯುಕ್ತರಂಗದ ಆಟವೇನು ನಡೆಯುವುದಿಲ್ಲ.

ಇನ್ನು ಬಾಜಪವನ್ನು ತೀವ್ರವಾಗಿ ವಿರೋದಿಸುವ ಎಡಪಕ್ಷಗಳು ಕಾಂಗ್ರೇಸ್ಸಿನ ಬಗ್ಗೆ ಮೃದುದೋರಣೆ ಹೊಂದಿದ್ದು, ಕಾಂಗ್ರೆಸ್ಸೇತರ ರಂಗವೊಂದರ ಸ್ಥಾಪನೆಯಿಂದ ಬಾಜಪಕ್ಕೆನೆ ಅನುಕೂಲವಾಗುತ್ತದೆಯೆಂಬ ಅವುಗಳಿಗೆ ಇವೆಯೆಂದು ನಾನು ನಂಬುತ್ತೇನೆ. ಹಾಗಾಗಿ ಅವೂ ಸಹ ಕಾಂಗ್ರೆಸ್ಸನ್ನು ದೂರವಿಟ್ಟು ಬಜಪದ ವಿರುದ್ದ ಗೆಲ್ಲುವ ವಿಫಲ ಪ್ರಯತ್ನ ನಡೆಸುತ್ತವೆಯೆಂದು ನಂಬಲಾಗುವುದಿಲ್ಲ.

2019ರ ಹೊತ್ತಿಗೆ ಬಾಜಪವನ್ನು ಮಣಿಸಲು ವಿರೋದಪಕ್ಷಗಳಿಗೆ ಇರುವ ಏಕೈಕ ದಾರಿಯೆಂದರೆ ಕಾಂಗ್ರೇಸ್ಸನ್ನು, ಎಡಪಕಷ್ಷಗಳನ್ನೂ ಒಳಗೊಂಡ ಒಂದು ವಿಶಾಲ ಅರ್ಥದ ಬಾಜಪವಿರೋಧಿ ರಂಗ ರಚನೆ ಮಡಿಕೊಂಡು ಚುನಾವಣೆ ಎದುರಿಸುವುದಷ್ಟೇ! ಇಲ್ಲದೆ ಹೋದಲ್ಲಿ ಬಾಜಪದ ಗೆಲುವಿಗೆ ಈ ತೃತೀಯ ಅಥವಾ ಸಂಯುಕ್ತರಂಗವೇ ಪರೋಕ್ಷವಾಗಿ ಕಾರಣವಾದಂತಾಗುತ್ತದೆ. 


No comments:

Post a Comment