Jan 20, 2017

ಮನದ ಮರೆಯಲಿ ನಿಂತ ಚಲುವೆ

ನಾಗಪ್ಪ.ಕೆ.ಮಾದರ
ರವಿಯ ಕಿರಣಗಳ ನಡುವೆ 
ಬಳಲುವ ಚಲುವೆ ನಿನ್ನಂದವನ್ನು 
ನೋಡಲು ಸೂರ್ಯ ತನ್ನ 
ರಶ್ಮಿಯನ್ನು ಚಿಮ್ಮುಕಿಸುತಿಹನು
ಸವಿ ಗಳಿಗೆಯೂ ಬಂದು 
ಸೇರುವೆಯಾ ನನ್ನನ್ನು ಪ್ರತಿ 
ಗಳಿಗೆಯ ಕಿರು ಓರೆನೋಟಕ್ಕೆ 
ನನ್ನ ಮನವೂ ಸೋತು ಸುಣ್ಣವಾಗಿಹಿದು 
ಪ್ರತಿ ಕ್ಷಣವೂ ಮರೆಯಲ್ಲಿ 
ಮನ ಮಿಡಿಯುತ್ತಿದೆ 
ಪ್ರೀತಿಯ ಸೆಲೆ ಚಿಮ್ಮುತಿಹೆ 
ಸತ್ತು ಹೋಗುವ ಈ ದೇಹಕ್ಕೆ 
ಒಮ್ಮೆ ಬಂದು ಸಂತೈಸಬಾರದೆ 
ಸವಿ ನುಡಿಯ ಹೇಳಿ 
ನಗಬಾರದೇ ನನ್ನ ಒಲವೇ 
ನಮ್ಮ ಪ್ರೀತಿಯ ಪಯಣ 
ಚಲುವಿನ ಚಿತ್ತಾರದಂತೆ 
ಮೂಡಲಿ ಎಂದು ಆಶಿಸುವೆ

No comments:

Post a Comment

Related Posts Plugin for WordPress, Blogger...