Sep 20, 2016

ಪ್ರೀತಿಯನ್ನೇ ಮರೆತಿರಲು

ಪ್ರವೀಣಕುಮಾರ್ ಗೋಣಿ
20/09/2016
ಪ್ರೀತಿಯ ಪರಿಮಳವಿಲ್ಲದ
ರಸಹೀನ ಬದುಕಿಗಿಂತ
ಚರಾ ಚರಗಳಲ್ಲಿ ಅವನಿರುವ
ಗ್ರಹಿಸದೆ ಗೋಳಾಡುವ ಅಜ್ಞಾನಕಿಂತ
ಬೇರೆ ಪಾಮರತೇ ಉಂಟೇ ?


ಪ್ರೀತಿಯನ್ನೇ ಹಂಚುತ್ತಾ
ಸುಳಿಯುತಿದೆ ಗಾಳಿ ಪ್ರೀತಿಯನ್ನೇ
ಪಸರುತ್ತ ನಲಿಯುತಿದೆ ಭುವಿಯೆಲ್ಲ
ಪ್ರೀತಿಯಲ್ಲೇ ಸ್ವರ್ಗದ ಉಪಸ್ಥಿತಿಯಿರಲು
ಅದ ಮರೆತು ಅಲೆದರೆ ಅರ್ಥವುಂಟೆ ?

ಏಸು ಬೋಧಿಸಿದ್ದು ಪ್ರೀತಿ ಬುದ್ಧ ಕಲಿಸಿದ್ದು ಪ್ರೀತಿ
ಕೃಷ್ಣ ಜಗಕೆಲ್ಲ ಅರುಹಿದ್ದು ಪ್ರೀತಿ
ಮೂಲದ್ರವ್ಯವಾದ ಪ್ರೀತಿಯನ್ನೇ ಮರೆತು
ಅಂಧಕಾರದಲ್ಲಿ ಮುಳುಗಿ ಅರಿವಿಗೆ ಹಾತೊರೆದರೆ ಬೇರೆ ಮರುಳು ಉಂಟೆ ?

No comments:

Post a Comment