ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

11.8.16

ಶಹಜನಾಪುರದಲ್ಲೊಂದು Snow Plough!

ಸಾಂದರ್ಭಿಕ ಚಿತ್ರ
11/08/2016
ಈ ಚಿತ್ರದಲ್ಲಿ ಕಾಣುತ್ತಿರುವ ವಾಹನದ ಹೆಸರು ‘ಸ್ನೋ ಪ್ಲೋ’ (Snow Plough). ಇದರ ಕೆಲಸವೇನೆಂದರೆ ಹಿಮ ಬೀಳುವ ಸಮಯದಲ್ಲಿ ರಸ್ತೆಯ ಮೇಲೆ ಬಿದ್ದಿರುವ ಹಿಮವನ್ನು ಬದಿಗೆ ಸರಿಸಿ ವಾಹನಗಳು ಓಡಾಡುವಂತೆ ಅನುವು ಮಾಡಿಕೊಡುವುದು. ಹಿಮ ಬೀಳುವ ಕೆನಡಾದಂತಹ ದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುವ ಇಂತಹ ವಾಹನವನ್ನು ಭಾರತದಲ್ಲೂ ತರಿಸಲಾಗಿದೆ. ಎಲ್ಲೋ ಹಿಮಾಲಯದ ಕಡೆಗೆ ಉಪಯೋಗಿಸೋಕೆ ತರಿಸಿದ್ದಾರೆ ಎಂದು ನೀವು ಭಾವಿಸಿದ್ದರೆ ಅದು ತಪ್ಪು. ನಲವತ್ತೈದು ಡಿಗ್ರಿಗಳಿಗಿಂತಲೂ ಅಧಿಕ ತಾಪಮಾನವಿರುವ ಹಿಮವೆಂದರೇನೆಂದೇ ಗೊತ್ತಿರದ ಉತ್ತರಪ್ರದೇಶದ ಶಹಜನಾಪುರದ ಮುನಿಸಿಪಾಲಿಟಿಯವರು ಇಂತಹ ವಾಹನವನ್ನು ತರಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ!

ಇಂತಹ ವಾಹನವನ್ನು ದೂರದೃಷ್ಟಿಯನ್ನು ನಿಜಕ್ಕೂ ಮೆಚ್ಚಬೇಕು! ಜಾಗತಿಕವಾಗಿ ತಾಪಮಾನ ಏರಿಕೆಯಾಗುತ್ತಿದೆ, ಮುಂದೊಂದು ದಿನ ‘ice age’ ಬರುವ ಸಾಧ್ಯತೆಗಳು ಹೆಚ್ಚಾಗುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಮುಂದೆಂದೋ ಬರುವ ‘ice age’ ದಿನಗಳಿಗೆ ಈಗಲೇ ತಯಾರಾಗಿಬಿಟ್ಟಿದೆ ಶಹಜನಾಪುರದ ಮುನಿಸಿಪಾಲಿಟಿ! ಅಷ್ಟರಳೊಗೆ ಈ ವಾಹನ ತುಕ್ಕು ಹಿಡಿದು ಬಿಡುವುದಿಲ್ಲವೋ ಎಂದೆಲ್ಲ ನೀವು ಪ್ರಶ್ನೆ ಮಾಡುವಂತಿಲ್ಲ!

ನಗರ ಪಾಲಿಕೆಯ ಇಂಜಿನಿಯರ್ ವರದಿಗಾರರು ಕೇಳಿದ ಪ್ರಶ್ನೆಗೆ ‘ಎಲ್ಲಾ ರೀತಿಯ ಸವಾಲುಗಳನ್ನೂ ಎದುರಿಸಲು ನಾವು ಸಿದ್ಧರಾಗಿರಬೇಕು’ ಎಂದು ಉತ್ತರ ಕೊಟ್ಟಿದ್ದಾರೆಂದು ವರದಿಯಾಗಿದೆ!

ಮುಂದಿನ ಟೆಂಡರಿನಲ್ಲಿ ಇನ್ಯಾವ್ಯಾವ ವಸ್ತುಗಳನ್ನು ತಂದು ಮುಂದಿನ ಜನಾಂಗವನ್ನು ‘ರಕ್ಷಿಸುತ್ತಾರೋ’ ಕಾದು ನೋಡಬೇಕಿದೆ.


ಸುಳ್ ಸುದ್ದಿ: ಜನರ ಹಣವನ್ನು ಹೆಂಗೆಲ್ಲ ನುಂಗಿ ಅರಗಿಸಿಕೊಳ್ಳಬಹುದು ಎನ್ನುವುದರ ಬಗ್ಗೆ ವಿಶೇಷ ತರಬೇತಿಯನ್ನು ಶಹಜನಾಪುರ ನಗರ ಪಾಲಿಕೆ ಹಮ್ಮಿಕೊಂಡಿದೆ. ಆಸಕ್ತರು ನೇರವಾಗಿ ಪಾಲಿಕೆಯವರನ್ನು ಸಂಪರ್ಕಿಸಬೇಕು.

No comments:

Post a Comment

Related Posts Plugin for WordPress, Blogger...