ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

13.1.16

ಮತ್ತೆ ಮತ್ತೆ ಕೇಳಿಸಿಕೊಳ್ಳುವ ರಿಕ್ಕಿ ಚಿತ್ರದ ಹಾಡುಗಳು.

ರಿಷಬ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಅಚ್ಯುತ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರಿಕ್ಕಿ' ಚಿತ್ರ ಆಕರ್ಷಿಸುವ ಟ್ರೇಲರ್ರಿನಿಂದ ಗಮನ ಸೆಳೆದಿತ್ತು. ಒಂದಷ್ಟು ಪ್ರೀತಿ, ವಿರಹ, ಸರಕಾರೀ ಕ್ರೌರ್ಯ, ನಕ್ಸಲರ ಹಿಂಸೆ, ನಾಯಕನ ವಿರೋಧದ ತುಣುಕುಗಳಿದ್ದ ಟ್ರೇಲರ್ ಕನ್ನಡಕ್ಕೆ ಮತ್ತೊಂದು ಹೊಸ ಬಗೆಯ ಚಿತ್ರವನ್ನು ನೀಡುವ ಸೂಚನೆ ನೀಡಿತ್ತು. 

ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಹೊಸ ಕನ್ನಡ ಸಿನಿಮಾಗಳ ಹಾಡುಗಳೆಂದರೆ ಅಬ್ಬರವೇ ಅತಿಯಾಗಿ ಆ ಕ್ಷಣಕ್ಕೆ ಇಷ್ಟವಾದರೂ ಮೂರು ತಿಂಗಳ ನಂತರ ಕೇಳುವುದು ಕಷ್ಟ ಕಷ್ಟ ಎಂಬ ಪರಿಸ್ಥಿತಿ. ಮತ್ತೆ ಮತ್ತೆ ಕೇಳಬೇಕೆನ್ನಿಸುವ ಹಾಡುಗಳು ಅಲ್ಲೊಂದು ಇಲ್ಲೊಂದು ಇರುತ್ತದಷ್ಟೆ. ರಿಕ್ಕಿ ಚಿತ್ರಗಳ ಎಲ್ಲಾ ಹಾಡುಗಳು ಇಷ್ಟವಾಗುವುದರಲ್ಲಿ ಸಂದೇಹವಿಲ್ಲ. ಅರ್ಜುನ್ ಜನ್ಯರವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಗಮನಸೆಳೆಯಲು ಸಾಹಿತ್ಯವೂ ಕಾರಣ.

ಹರುಷ ತಾಳದೆ, ಓ ಬೇಬೆ, ಎಲೆ ಮರೆಯಲಿ, ಜೀವ ನೀನು ಹಾಡುಗಳು ಮತ್ತೆ ಮತ್ತೆ ಕೇಳುವಂತಿವೆ. ಇನ್ನು ಝೀ ವಾಹಿನಿಯ ಸಾರೆಗಾಮಪ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದ ಅಂಕಿತಾ ಕುಂದು ಹಾಡಿರುವ ಮಲಗೆ ಮಲಗೆ ಹಾಡು ಈಗಾಗಲೇ ಜನಪ್ರಿಯವಾಗಿದೆ. ಹಾಡಿನ ವೀಡಿಯೋ ಹಾಡಿನಷ್ಟು ಚೆನ್ನಾಗಿಲ್ಲ ಎನ್ನಿಸುವುದು ಹಾಡಿನ ಹೆಚ್ಚುಗಾರಿಕೆ! ಕೇಳಿ ಆನಂದಿಸಿ, ಗೆಳೆಯರಿಗೂ ಕೇಳಿಸಿ.

No comments:

Post a Comment

Related Posts Plugin for WordPress, Blogger...