Sep 3, 2015

ಬರ

ಮೌನಯೋಗಿ
ಬಿಸಿದ ಬುವಿಗೆ
ಮೋಡ ಬಸಿದು ಹನಿಯಾಗದೆ
ಕಾರ್ಮೋಡ ಕಗ್ಗತ್ತಲು ಕವಿಯುವ ಮುನ್ನ


ಕನಸ ಕಡಲೋಳ್
ನವೆ ನೂಕುವ ಭಾರ
ಹನಿ ನೀರಿಗೂ ಇಲ್ಲಿ ತತ್ವಾರ

ಮುಸುಕು ತೆಗೆ ತಾಯೆ
ಹಸಿವೆಯ ಹದ್ದು
ಹರಿದು ನುಂಗುವ ಮುನ್ನ

ಶೋಷಣೆಯ ಮುಸುಕ ಸರಿಸಲು
ಬುದ್ಧ, ಬಸವರ ಪ್ರಯತ್ನವೆಷ್ಟೊ
ಕಷ್ಟಕೂಟಲೆಗಳ ಜೀವಿತ

ವ್ಯರ್ಥವಾಗಿ ಹೋಯಿತೆ
ದಾಸ ಶ್ರೇಷ್ಠರ ಹೋರಾಟ
ಸಂಘಟನೆಗಳ ಹಮ್ಮೀರರ ಹಾರಾಟ ಚೀರಾಟ

ಸ್ನೇಹ ಸೌಹಾರ್ದತೆಯ ಬೀಜ
ಬಿದ್ದು ಬೆಳೆಯಲಿ ಇಲ್ಲಿ
ಶೋಷಣೆ ರಹಿತ ಸಮಾಜ ನಿರ್ಮಾಣವಾಗಲಿ.
ಸಾಂದರ್ಭಿಕ ಚಿತ್ರ: ಅಂತರ್ಜಾಲ

No comments:

Post a Comment