Mar 2, 2015

ಜೊಯಡಾ ಹಳಿಯಾಳ ಕ್ಷೇತ್ರದರ್ಶನ

Umesh Mundalli
ವಿಸ್ತೀರ್ಣದ ದೃಷ್ಟಿಯಲ್ಲಿ ಜೊಯಡಾ ಜಿಲ್ಲೆಯ ಅತಿ ದೊಡ್ಡ ತಾಲೂಕಾದರೂ ಇಲ್ಲಿ ಜನಸಂಖ್ಯೆ ಮಾತ್ರ ವಿರಳ. ಅನೇಕ ಸವಲತ್ತುಗಳಿಂದ ವಂಚಿತವಾದರೂ ಇಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸುವವರಿಗೆ ಮಾತ್ರ ಅದಕ್ಕೆ ಕಿಂಚಿತ್ತು ಕೊರತೆ ಇಲ್ಲಾ. ಮುಗಿಲೆತ್ತರಕ್ಕೆ ಚಾಚಿರುವ ಬೆಟ್ಟಗಳು, ದಟ್ಟ ಅರಣ್ಯದಲ್ಲಿ ಗಗನಕ್ಕೆ ಮುತ್ತಿಡಲು ಹೊರಟ ವೃಕ್ಷ ಸಂಕುಲಗಳು, ಪ್ರಾಣಿ ಪಕ್ಷಿಗಳ ಕೂಗು ಎಂತವನ ಎದೆಯಲ್ಲೂ ಪ್ರೀತಿಯ ಸಿಂಚನಗೈಯುತ್ತವೆ. ಇಲ್ಲಿ ಸಂಚರಿಸುವಾಗ ಊಟಿಯ ತಣ್ಣನೆ ಅನುಭವವಾಗುತ್ತದೆ. 


ಉಳವಿ ಚೆನ್ನ ಬಸವಣ್ಣದೇವಾಲಯ.
chennabasavanna temple
ಚೆನ್ನ ಬಸವಣ್ಣ ದೇವಾಲಯ

ಇದು ಜೊಯ್ಡಾದಿಂದ 35 ಕಿ.ಮಿ. ದೂರದಲ್ಲಿದೆ.  12 ನೇ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಿಂದಾಗಿ ಕಲ್ಯಾಣವನ್ನು ಬಿಟ್ಟ ಶರಣರ ಗುಂಪೊಂದುಚೆನ್ನಬಸವಣ್ಣನ ನೇತೃತ್ವದಲ್ಲಿ ಉಳವಿಗೆ ಬಂದು ನೆಲೆಸಿದ್ದರು.  ಕ್ರಮೇಣ ಚೆನ್ನಬಸವಣ್ಣ ಇಲ್ಲಿಯೇ ಲಿಂಗೈಕ್ಯರಾದ್ದರಿಂದ ಈ ಸ್ಥಳದಲ್ಲಿ  ಅವರ ಸಮಾಧಿ ನಿರ್ಮಿತವಾಯಿತು. ಇದೇ ಇಂದು ವೀರಶೈವರ ಪವಿತ್ರತಾಣ ಉಳವಿ ಚೆನ್ನಬಸವಣ್ಣ ದೇವಾಲಯ. ಇಲ್ಲಿ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮ ಸಡಗರದಿಂದ ಜರುಗುತ್ತದೆ. ಲಕ್ಷಲಕ್ಷ ಭಕ್ತಾದಿಗಳು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿ ಪ್ರತಿ ನಿತ್ಯ ಅನ್ನದಾಸೋಹ ವ್ಯವಸ್ಥೆ ಇದೆ.
ಆಕಳ ಗವಿ
ಇಲ್ಲಿಯೇ ಸಮೀಪ 6 ಕಿಮಿ. ದೂರದಲ್ಲಿದೆ ಆಕಳ ಗವಿ. ಇದು ದುರ್ಗಮ ಪ್ರದೇಶ. ಇಲ್ಲಿ ಪ್ರಯಾಣ ಮಾಡುವವರು ಬೆಳಗಿನ ಹೊತ್ತಿನಲ್ಲಿಯೇ ಬರಬೇಕಾಗುತ್ತದೆ. 

ಕವಳಾ ಗುಹೆ
ಜಾಗೃತ ಶೈವ ಪುಣ್ಯಕ್ಷೇತ್ರ ಎಂದು ಹೇಳಲಾಗುತ್ತಿರುವ ಕವಳಾ ಗುಹೆಯಲ್ಲಿ ಪ್ರಾಚೀನ ಕಾಳದಲ್ಲಿ ಸಿದ್ಧ ಪಂಥಕ್ಕೆ ಸೇರಿದ ಕಪಿಲ ಸಿದ್ದ ಮುನಿ ಎಂಬಾತ ಅಗ್ನಿ ಹೋತ್ರ ತಪಸ್ಸುಗಳನ್ನ ಮಾಡಿಕೊಂಡಿದ್ದ.ಈ ಮುನಿಗೆ  ಆಗಾಗ ಹಿಂಸೆ ನೀಡುತ್ತಿದ್ದ ಕವಳಾಸುರನೆಂಬ ರಕ್ಕಸನನ್ನು ಮುನಿಯ ವಿನಂತಿಯಂತೆ ಶಿವನು ವಧಿಸಿದ್ದರಿಂದ ಇದು ಕವಳಾ ಗುಹೆಯಾಯಿತು ಎಂಬ ಪ್ರತೀತಿಯಿದೆ.
ಈ ಕವಳಾ ಗುಹೆಯನ್ನ ಒಂದು ತುದಿಯಿಂದ ಪ್ರವೇಶಿಸಿ ಇನ್ನೊಂದು ತುದಿಯಿಂದ ಹೊರಬರಬಹುದು. ನಡು ಬಗ್ಗಿಸಿ ತಲೆ ತಗ್ಗಿಸಿ ಸುಮಾರು 60 ಅಡಿ ಅಂತರವನ್ನು ಕ್ರಮಿಸಿದರೆ ಲಿಂಗಾಕೃತಿ ಗೋಚರಿಸುತ್ತದೆ. ಕವಳಾ ಗುಹೆಯ ಹೊರಭಾಗದಿಂದ ಕಾಳಿನದಿಯ ಮನಮೋಹಕ ದೃಶ್ಯ, ಹಸಿರು ಗಿರಿಸಿರಿ ಸೊಬಗನ್ನು ಸವಿಯಬಹುದಾಗಿದೆ. ನಿಸರ್ಗಪ್ರಿಯರಿಗೆ ಮತ್ತು ಚಾರಣಿಗರಿಗೆ ಇದು ಅತ್ಯಂತ ಮುದ ನೀಡುವ ತಾಣ. ಕವಳಾ ಗುಹೆಗೆ ಹೋಗಬೇಕೆಂದರೆ ದಾಂಡೇಲಿಯಿಂದ  ಕುಳಗಿ ಮಾರ್ಗವಾಗಿ ಪಣಸೋಲಿಗೆ ಬಂದು ಅಥವಾ ಜೋಯ್ಡಾದಿಂದ ಪೋಟೋಲಿ ಮಾರ್ಗವಾಗಿ ಪಣಸೋಲಿಗೆ ಬಂದು ಅಲ್ಲಿಂದ ಅರಣ್ಯ ಮಾರ್ಗವಾಗಿ ವಾಹನ ಸಾಗಬೇಕು. ಆದರೆ ಐದಾರು ಮೈಲಿ ಕವಳಾ ಗುಹೆಗೆ ನಡೆದೇ ಸಾಗಬೇಕಾಗುತ್ತದೆ. ಅನಂತರ ಮೆಟ್ಟಿಲುಗಳನ್ನಿಳಿದು ಗುಹೆಶ್ವರನ ದರ್ಶನ ಪಡೆಯಬಹುದು.

ಸಿಂಥೇರಿ ರಾಕ್ಸ
ಜೊಯಡಾದಿಂದ 20 ಕಿಮಿ ದೂರದಲ್ಲಿದೆ. ಬೃಹತ್ ಬಂಡೆಯೊಂದು ನದಿಯ
cintheri rocks
ಸಿಂಥೇರಿ ರಾಕ್ಸ್
ನೀರನ್ನೆಲ್ಲಾ ಕುಡಿದು ಇನ್ನೊಂದೆಡೆ ಬಿಡುತ್ತಿದೆಯೇನೋ ಎನ್ನಿಸುತ್ತದೆ ಇಲ್ಲಿ.  ಇದು ಪ್ರವಾಸಿಗರ ಸ್ವರ್ಗ. ಅತಿಯಾದರೆ ಇದು ಪ್ರವಾಸಿಗರಿಗೆ ನರಕವೂ ಆದೀತು. ಇಲ್ಲಿ ಜಾಗೃತೆಯಿಂದ ಜಲಕ್ರೀಡೆ ಆಡಬಹುದಾಗಿದೆ. ಇಲ್ಲಿ ಅಂತರ್ಗಾಮಿನಿಯಾಗಿರುವುದು ಕಾನೇರಿ ನದಿ. ಹತ್ತಿರದಲ್ಲಿ ಪುರಾಣ ಪ್ರಸಿದ್ಧ ಕವಳ ಗುಹೆ ಇದೆ.
ದೂದ್ ಸಾಗರ
ಜೊಯ್ಡಾದಿಂದ ಎಪ್ಪತ್ತು ಕಿ.ಮೀ. ಮತ್ತು ಕ್ಯಾಸ್ಟಲ್ರಾಕ್ ನಿಂದ 10 ಕಿ.ಮೀ. ಅಂತರದಲ್ಲಿ ದಟ್ಟವಾದ ಕಾಡಿನ ಮಧ್ಯದಲ್ಲಿ ಹಾಲಿನಂತೆ ನೊರೆ ನೊರೆಯಾಗಿ ಧುಮುಕುತ್ತಿರುವ ಜಲಪಾತವಿದೆ. ಅದೇ ದೂದ್ ಸಾಗರ ಜಲಪಾತ. ಇದು ಚಾರಣಿಗರ ಸ್ವರ್ಗ. ಮಡಗಾಂವ ಬೆಳಗಾವಿ ರೈಲು ಈ ಮಾರ್ಗವಾಗಿ ಹಾದು ಹೋಗುತ್ತದೆ.

No comments:

Post a Comment