Dec 10, 2014

ಕರ್ನಾಟಕ ಮೊಬೈಲ್ ಒನ್: ಕಿರುಪರಿಚಯ

karnataka mobile one
ಮೊದಲ ಪುಟ
ಭಾರತದ ಐಟಿ ಕ್ಯಾಪಿಟಲ್ ಎಂದೇ ಹೆಸರುವಾಸಿಯಾಗಿರುವುದು ನಮ್ಮ ರಾಜಧಾನಿ ಬೆಂಗಳೂರು. ಐಟಿ ಕ್ಯಾಪಿಟಲ್ ಆಗಿರುವುದರಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಅನೇಕ ಅನುಕೂಲಗಳೂ ಆಗಿವೆ, ಅನಾನುಕೂಲಗಳೂ ಆಗಿವೆ. ಐಟಿ ತಂತ್ರಜ್ಞಾನವನ್ನು ಸರಕಾರದ ವತಿಯಿಂದ ಜನರ ಬಳಿಗೆ ಕೆಲಸವೊಂದು ನಡೆದಿದೆ. ಎಲ್ಲರೊಳಗೊಂದಾಗಿರುವ ಮೊಬೈಲು ಫೋನುಗಳನ್ನು ಉಪಯೋಗಿಸಿಕೊಂಡು ಸರಕಾರದ ವಿವಿಧ ಇಲಾಖೆಗಳನ್ನು ಮತ್ತನೇಕ ಖಾಸಗಿ ಸೇವೆಗಳನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸುವ ಪ್ರಯತ್ನಕ್ಕೆ ಸರಕಾರ ಕೈಹಾಕಿದೆ. ಬಿಜೆಪಿಯ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೊಬೈಲ್ ಒನ್ ಯೋಜನೆ ಸಿದ್ಧರಾಮಯ್ಯನವರ ಆಸಕ್ತಿಯಿಂದಾಗಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಜಾರಿಗೊಂಡಿದೆ.
ದೇಶದಲ್ಲೇ ಮೊದಲ ಪ್ರಯತ್ನವಿದು. ಈ ಮೊಬೈಲ್ ಒನ್ ಸೇವೆಯನ್ನು ಆಂಡ್ರಾಯ್ಡ್ ಮತ್ತು ಐಫೋನುಗಳಲ್ಲಿ ಅಪ್ಲಿಕೇಶನ್ ಮೂಲಕ ಮತ್ತು ಸ್ಮಾರ್ಟ್ ಫೋನ್ ಉಪಯೋಗಿಸದವರು 161ಕ್ಕೆ ಎಸ್.ಎಮ್.ಎಸ್ ಕಳುಹಿಸುವ ಮೂಲಕ ಅಥವಾ *161# ಎಂದು ಯು.ಎಸ್.ಎಸ್.ಡಿ ನಂ ಕಳುಹಿಸುವ ಮೂಲಕ ಪಡೆಯಬಹುದು.
mobile one registration
ನೋಂದಣಿ ಪುಟ
ಮೊಬೈಲ್ ಒನ್ನಿನ ಆಂಡ್ರಾಯ್ಡ್ ತಂತ್ರಾಂಶದ ಕಿರುಪರಿಚಯ ಈ ಲೇಖನದ ಉದ್ದೇಶ. ಕರ್ನಾಟಕ ಮೊಬೈಲ್ ಒನ್ ತಂತ್ರಾಂಶವನ್ನು ಗೂಗಲ್ ಪ್ಲೇ ಮುಖಾಂತರ ಡೌನ್ ಲೋಡ್ ಮಾಡಿಕೊಳ್ಳಬೇಕು. ನಂತರ ಇನ್ಸ್ಟಾಲ್ ಮಾಡಿ ಮೊಬೈಲ್ ಒನ್ನನು ತೆರೆದರೆ ರಿಜಿಶ್ಟ್ರೇಷನ್ನಿನ ಪುಟ ತೆರೆದುಕೊಳ್ಳುತ್ತದೆ. ಕನ್ನಡ ಮತ್ತು ಇಂಗ್ಲೀಷ್ ಎಂಬ ಆಯ್ಕೆ ಈ ಪುಟದಲ್ಲಿದೆಯಾದರೂ ನಂತರದ ಪುಟಗಳಲ್ಲಿ ಇಂಗ್ಲೀಷ್ ಮಾತ್ರವಿದೆ. ರಿಜಿಷ್ಟ್ರೇಷನ್ನಿನ ವಿಧಾನ ಅತ್ಯಂತ ಸುಲಭದ್ದಾಗಿದೆ. ನಿಮ್ಮ ಮೊಬೈಲ್ ನಂಬರ್, ಹೆಸರು ಟೈಪಿಸಿ ಓಕೆ ಒತ್ತಿದರೆ ಮೊಬೈಲಿಗೊಂದು ಪಾಸ್ ವರ್ಡ್ ಮೆಸೇಜಿನ ರೂಪದಲ್ಲಿ ಬರುತ್ತದೆ. ಅದನ್ನುಪಯೋಗಿಸಿ ಲಾಗಿನ್ ಆದರೆ ಆಯಿತು. ಯಾವ ಯಾವ ವಿಭಾಗಗಳಿವೆ ಎಂಬುದನ್ನು ಚಿತ್ರಗಳಲ್ಲಿ ಗಮನಿಸಿ.
mobile one features
ಮೊದಲ ಪುಟ
mobile one features
ಎರಡನೆಯ ಪುಟ
mobile one features
ಮೂರನೆಯ ಪುಟ
mobile one agriculture
ಕೃಷಿ ಪುಟ

mobile one banking services
ಬ್ಯಾಂಕಿಂಗ್ ಸೇವೆಗಳು
mobile one booking
ಬಸ್ ಟ್ರೇನ್ ಬುಕ್ಕಿಂಗ್
mobile one disaster monitoring
ವಿಪತ್ತು ಮಾಹಿತಿ
mobile one job portal
ಕೆಲಸ ಹುಡುಕಲು...
mobile one icare
ದೂರು ನೀಡಲು ಐಕೇರ್
mobile one income tax
ತೆರಿಗೆಯ ಮಾಹಿತಿಗಾಗಿ
mobile one india post
ಅಂಚೆ ಇಲಾಖೆ
mobile one vakil search
ವಕೀಲರನ್ನುಡುಕಲು
mobile one M power
ಎಮ್ ಪವರ್
mobile one puc
ಪಿಯುಸಿ ರಿಸಲ್ಟ್ಸ್
mobile one reuters market lite
ರಾಯಿಟರ್ಸ್ ಮಾರುಕಟ್ಟೆ?
mobile one sakala
ಸಕಾಲ
mobile one services
ಆರೋಗ್ಯ ಮತ್ತಿತರ ಸೇವೆಗಳು
mobile one sslc results
ಎಸ್ ಎಸ್ ಎಲ್ ಸಿ ರಿಸಲ್ಟ್ಸ್
mobile one crime record bureau
ಕ್ರೈಂ ರೆಕಾರ್ಡ್
mobile one visa passport
ವೀಸಾ ಸೇವೆಗಳು
mobile one travel
ಪ್ರಯಾಣದನುಕೂಲಕ್ಕೆ

ಕೆಲವೊಂದು ಸೇವೆಗಳು ರಾಜ್ಯದ ಎಲ್ಲಾ ಜನರಿಗೆ ಉಪಯೋಗವಾಗುವಂತಿದ್ದರೆ ಬಹಳಷ್ಟು ಸೇವೆಗಳು ಸದ್ಯಕ್ಕೆ ಬೆಂಗಳೂರಿಗಷ್ಟೇ ಸೀಮಿತವಾದಂತವು. ಹೊಸ ತಂತ್ರಾಂಶವಾದ್ದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜನರಿಗೂ ಹೆಚ್ಚು ಅನುಕೂಲವಾಗುವಂತಾಗಬಹುದು. ವಿಪರೀತವೆನ್ನಿಸುವ ಸೇವೆಗಳು ಒಂದೇ ತಂತ್ರಾಂಶದಲ್ಲಿ ಲಭ್ಯವಿರುವುದು ಒಂದು ದೃಷ್ಟಿಯಿಂದ ಅನುಕೂಲಕರವಾದರೂ ನಿರ್ವಹಣೆ ಸ್ವಲ್ಪ ಕಷ್ಟವಾಗುತ್ತದೆ. ನಿಯಮಿತ ಅಪ್ ಡೇಟುಗಳು, ತಾಂತ್ರಿಕ ತೊಂದರೆಗಳನ್ನು ಸರಿಪಡಿಸುವಲ್ಲಿನ ವೇಗವೆಲ್ಲವೂ ಮೊಬೈಲ್ ಒನ್ನಿನ ಯಶಸ್ಸನ್ನು ನಿರ್ದೇಶಿಸುತ್ತದೆ. ಜನರಿಗೆ ಅನುಕೂಲಕರವಾಗುವ ಒಂದು ಹೊಸ ಪ್ರಯತ್ನವನ್ನು ಮೆಚ್ಚಲೇಬೇಕು. ಜೊತೆಗೆ ಕನ್ನಡದಲ್ಲಿ ಎಲ್ಲಾ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡದಿರುವುದು ಖಂಡನೀಯ. ಕರ್ನಾಟಕ ಸರಕಾರವೇ ಸಿದ್ಧಪಡಿಸಿದ ಅಪ್ಲಿಕೇಶನ್ನಿನಲ್ಲಿ ಕನ್ನಡವೇ ಮಾಯವಾಗುವುದು ಖಂಡಿತ ಒಳ್ಳೆಯ ಲಕ್ಷಣವಲ್ಲ. ಶೀಘ್ರದಲ್ಲಿ ಕನ್ನಡ ಕೂಡ ತಂತ್ರಾಶದ ಭಾಗವಾಗಲಿ. ಮೊಬೈಲ್ ಒನ್ ವೆಬ್ ಪುಟದಲ್ಲಿ ಬಹುತೇಕ ಎಲ್ಲಾ ಮಾಹಿತಿಗಳು ಕನ್ನಡದಲ್ಲಿ ಲಭ್ಯವಿದೆ. ಅದನ್ನೇ ಮೊಬೈಲಿನಲ್ಲಿ ಅಳವಡಿಸುವುದು ಕಷ್ಟಕರವೇನಲ್ಲ ಅಲ್ಲವೇ?

No comments:

Post a Comment