Oct 23, 2014

ಫ್ಯಾಕ್ಟರಿ ಹಾಲು!

Muufri
ಹಾಲು ಫ್ಯಾಕ್ಟರಿ!
ದೂರದ ಅಮೆರಿಕಾದಲ್ಲಿ ಭಾರತೀಯ ಮೂಲದವರಾದ ರಿಯಾನ್ ಪಾಂಡೆ, ಪೆರುಮಾಲ್ ಗಾಂಧಿ ಮತ್ತು ಇಶಾ ದತಾರ್ ಸೇರಿಕೊಂಡು ಹಾಲಿನ ಫ್ಯಾಕ್ಟರಿ ತಯಾರಿಸುವ ಉತ್ಸಾಹದಲ್ಲಿದ್ದಾರೆ. Genetically engineered ಹಸುಗಳನ್ನು ಚಿಕ್ಕ ಜಾಗದಲ್ಲಿ ಗುಡ್ಡೆ ಹಾಕಿಕೊಂಡು ಹಾಲು ಉತ್ಪಾದಿಸುವ ಫ್ಯಾಕ್ಟರಿ ಎಲ್ಲೆಡೆಯೂ ಇರುವಾಗ ಈ ಹಾಲಿನ ಫ್ಯಾಕ್ಟರಿಯ ವಿಶೇಷವೇನೆಂದರೆ ಇಲ್ಲಿ ಹಸುಗಳೊಂದೂ ಇರುವುದಿಲ್ಲ! ಬೇರೆ ಪ್ರಾಣಿಯೂ ಇರುವುದಿಲ್ಲ ಎಂಬುದನ್ನು ನೆನಪಿಡಿ! ಸಿಲಿಕಾನ್ ವ್ಯಾಲಿಯಲ್ಲಿ ಕಾರ್ಯಾಚರಣೆ ಪ್ರಾರಂಭಿಸಿರುವ ಮುಫ್ರಿ ತಂಡದ ಪ್ರಯತ್ನವಿದು!
Also Read
ಹಿಂಗೂ ಇರುತ್ತೆ!

ಮತ್ತೆ ಇಲ್ಲಿ ಜೆನೆಟಿಕ್ ಇಂಜಿನಿಯರಿಂಗಿನ ಅನಿವಾರ್ಯತೆಯಿದೆ.ಆದರಿಲ್ಲಿ ಜೆನೆಟಿಕ್ ಇಂಜಿನಿಯರಿಂಗ್‍ಗೆ ಒಳಗಾಗಿರುವುದು ಕಣ್ಣಿಗೆ ಕಾಣದ ಯೀಷ್ಟ್(yeast)ಗಳು. ಯೀಷ್ಟುಗಳ ಸಹಕಾರದಿಂದ ಹಸುಗಳಿಂದ ಉತ್ಪತ್ತಿಯಾಗುವುದಕ್ಕಿಂತಲೂ ಶ್ರೇಷ್ಟ ಹಾಲನ್ನು ಉತ್ಪಾದಿಸುವುದಾಗಿ ಕಂಪನಿ ಹೇಳಿಕೊಂಡಿದೆ. ಶ್ರೇಷ್ಟವೇಕೆಂದರೆ ಹಸುವಿನ ಹಾಲು ನೈಸರ್ಗಿಕವಾಗಿ ಮಾನವನಿಗೆ ಸೇರಬೇಕಾದ್ದಲ್ಲ. ಹಾಗಾಗಿ ಹಸುವಿನ ಹಾಲಿನಲ್ಲಿರುವ ಎಲ್ಲಾ ಅಂಶಗಳು ಮಾನವನ ಜಠರದಲ್ಲಿ ಜೀರ್ಣವಾಗುವುದಿಲ್ಲ. ಜೀರ್ಣವಾಗದ ಅಂಶಗಳನ್ನು ಕೃತಕ ಉತ್ಪಾದನೆಯ ಹಾಲಿನಿಂದ ಹೊರಗಿಡಲಾಗುತ್ತದಂತೆ. ಅಲ್ಲಿಗೆ ಈ ಫ್ಯಾಕ್ಟರಿ ಹಾಲಿನ ಪೌಷ್ಟಿಕತೆ ಹಸುವಿನ ಹಾಲಿಗಿಂತ ಉತ್ತಮವಾಗಿರುತ್ತದೆ.
ಕೇಳುವುದಕ್ಕೆ ವಿಚಿತ್ರವಾಗಿದೆಯಲ್ಲವೇ?!ಕೃತಕ ಹಾಲು ಮನುಷ್ಯರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದೆಂಬ ಭಯವೂ ಕಾಡುತ್ತದೆಯೇ? ಗೋವು ಪೂಜನೀಯ, ಗೋಮಾತೆ ಎಂಬ ಭಾವನೆಗಳು ನಿಮ್ಮಲ್ಲಿ ಹೆಚ್ಚಾಗಿದ್ದರೆ ಒಮ್ಮೆ ಬಿಡುವು ಮಾಡಿಕೊಂಡು ಹತ್ತಾರು 'ಇಲಾತಿ' ಹಸುಗಳನ್ನು ಸಾಕುವ ಜಾಗಗಳಿಗೆ ಭೇಟಿ ಕೊಡಿ. "ಪೂಜನೀಯ" ಗೋವನ್ನು ಮಾಂಸಕ್ಕೆ ಉಪಯೋಗಿಸದಿದ್ದರೂ ಹಾಲಿಗಾಗಿ ಹೇಗೆ ಹಿಂಡಿ ಹಿಪ್ಪೆ ಮಾಡಲಾಗುತ್ತದೆ ಎಂಬುದನ್ನು ಅರಿಯಬಹುದು. ಗೋಮಾಂಸ ಭಕ್ಷಣೆ ರಾಷ್ಟ್ರದ್ರೋಹದ ಕೆಲಸ ಎಂದರಚುವವರು ಹಾಲು ಕುಡಿಯುವುದಕ್ಕಿಂತ ಮಾಂಸ ತಿನ್ನುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದರೂ ಬರಬಹುದು! ಎಲ್ಲ ರೀತಿಯ ಸಿದ್ಧ ಆಹಾರ, ಹಾಲಿನ ಉತ್ಪಾದನೆ ಹೆಚ್ಚಲು ಸಿಕ್ಕಾಪಟ್ಟೆ ಹಾರ್ಮೋನುಗಳು........ ಫ್ಯಾಕ್ಟರಿಯ ಹಸುಗಳು ಮೆಲಕು ಹಾಕುವುದನ್ನೇ ಮರೆತುಬಿಟ್ಟಿವೆ, ಮರೆಯುತ್ತಿವೆ! ಉಳಿದೆಲ್ಲ ಆಹಾರಗಳಂತೆ ಹಾಲು ಕೂಡ ಕಲ್ಮಶವಾಗಿದೆ. ಹಸುಗಳಿಗೆ ತೊಂದರೆ ಕೊಟ್ಟು ಹಾಲು ಉತ್ಪಾದಿಸುವುದಕ್ಕಿಂತ ಹಸುವಿಲ್ಲದೇ ಅದೇ ಗುಣಮಟ್ಟದ ಹಾಲು ಉತ್ಪಾದಿಸುವುದೇ ಒಳ್ಳೆಯದೇನೋ?!!

No comments:

Post a Comment