Sep 27, 2014

ಜನಸಂಗ್ರಾಮ ಪರಿಷತ್ತಿನಿಂದ ಯುವಜನತೆಗಾಗಿ ಯುವಚೈತನ್ಯ ಮತ್ತು ನಾಯಕತ್ವ ತರಬೇತಿ ಕಾರ್ಯಕ್ರಮ

ಜನ ಸಂಗ್ರಾಮ ಪರಿಷತ್ - ಪತ್ರಿಕಾ ಟಿಪ್ಪಣಿ
ಬೆಂಗಳೂರು, 26-09-2014
ನಾಡಿನ ಸುಸ್ಥಿರ ಅಭಿವೃದ್ಧಿಗೆ ಪ್ರಜ್ಞಾವಂತ ನಾಗರಿಕರ ಅದರಲ್ಲೂ ಯುವಜನರ ಪಾತ್ರ ಮಹತ್ವದ್ದಾಗಿರುತ್ತದೆ. ನಾಡಿನ ನೆಲ ಜಲ ಮತ್ತು ಇತರೆ ನೈಸರ್ಗಿಕ ಸಂಪತ್ತಿನ ರಕ್ಷಣೆಯಲ್ಲಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಜ್ಞಾವಂತ ಯುವಜನರ ಪಾತ್ರ ನಿರ್ಣಾಯಕ ಪಾತ್ರವಹಿಸಲಿದೆ. ಇಂತಹ ಪ್ರಜ್ಞಾವಂತ ಯುವಜನರನ್ನು ಗಮನದಲ್ಲಿ ಇಟ್ಟುಕೊಂಡು ಜನಸಂಗ್ರಾಮ ಪರಿಷತ್ ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಯುವ ಚೈತನ್ಯ ಮತ್ತು ನಾಯಕತ್ವ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಿದೆ. ತರಬೇತಿಯು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಪರಿವರ್ತನಾ ಸದನದಲ್ಲಿ ನಡೆಯಲಿದ್ದು, 18ರಿಂದ 35 ರವರೆಗಿನ ವಯೋಮಿತಿಯ ಆಸಕ್ತ ಯುವಜನರು ಭಾಗವಹಿಸಬಹುದಾಗಿದೆ. ತರಬೇತಿಯ ಸಮಯದಲ್ಲಿ ಊಟ ಮತ್ತು ವಸತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, 500 ರೂಪಾಯಿಗಳ ಶುಲ್ಕವನ್ನು ನೀಡಬೆಕಾಗಿರುತ್ತದೆ. ತರಬೇತಿಗೆ ನೊಂದಾಯಿಸಿಕೊಳ್ಳಲು 9916601969/ 8867186343 ದೂರವಾಣಿಗೆ ಕರೆ ಮಾಡಬೇಕು.
ತರಬೇತಿಯನ್ನು ಅಕ್ರಮ ಗಣಿಗಾರಿಕೆ, ಭೂಗಳ್ಳರ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕರು ಮತ್ತು ಜನ ಸಂಗ್ರಾಮ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಆರ್. ಹಿರೇಮಠ, ಪಶ್ಚಿಮಘಟ್ಟಗಳ ಉಳುವಿಗಾಗಿ, ಸುಸ್ಥಿರ ಅಭಿವೃದ್ಧಿ ಮತ್ತು ಕೃಷಿ ಬಗೆಗಿನ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಿ. ಯತಿರಾಜು, ಸಾಮಾಜಿಕ ಹೋರಾಟಗಾರರಾದ ರವಿ ಕೃಷ್ಣಾರೆಡ್ಡಿ, ಶಾ0ತಲಾ ದಾಮ್ಲೆ, ದೀಪಕ್ ಸಿ. ಎನ್. ತುಮಕೂರಿನ ಸಿಜ್ಞಾ ಸಂಸ್ಥೆಯ ಜ್ಞಾನ ಸಿಂಧು ಸ್ವಾಮಿ ಮತ್ತು ಪ್ರತಿಮಾ ನಾಯಕ್ ಹಾಗೂ ಇನ್ನಿತರರು ನಡೆಸಿಕೊಡಲಿದ್ದಾರೆ. ತರಬೇತಿಯಲ್ಲಿ ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದ್ದು, ಪ್ರಮುಖವಾಗಿ ಸಾಮಾಜಿಕ ಚಳುವಳಿಗಳು, ಸ್ವರಾಜ್ಯ, ಪ್ರಜಾಪ್ರಭುತ್ವದ ಪರಿಕಲ್ಪನೆ, ಸುಸ್ಥಿರ ಬದಲಾವಣೆ, ಸಾಮಾಜಿಕ ಬದಲಾವಣೆಗೆ ಸಂಬಂಧಿಸಿದಂತೆ ಸಾಹಿತ್ಯ ಕೃತಿಗಳ ಪರಿಚಯ, ಮಾಹಿತಿ ಹಕ್ಕು ಕಾಯ್ದೆ ಮತ್ತು ಇನ್ನೂ ಇತರ ವಿಷಯಗಳನ್ನು ಒಳಗೊಂಡಿರುತ್ತದೆ. ತರಬೇತಿಯ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ತುಮಕೂರಿನ ಹಸಿರು ಬಳಗ ಮತ್ತು ಸಿಜ್ಞಾ ತಂಡಗಳು ನಡೆಸಿಕೊಡಲಿವೆ.
ತರಬೇತಿಗೆ ಕೇವಲ 30 ಜನರಿಗೆ ಮಾತ್ರ ಅವಕಾಶವಿದ್ದು, ಆಸಕ್ತರು ಮೊದಲೇ ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ವಿವರಗಳಿಗೆ 9916601969 / 8867186343 ದೂರವಾಣಿಯನ್ನು ಸಂಪರ್ಕಿಸಬಹುದು.
ದೀಪಕ್ ಸಿ. ಎನ್.
ಪ್ರಧಾನ ಕಾರ್ಯದರ್ಶಿ

No comments:

Post a Comment