May 14, 2014

ಹೋಗಿ ಸಿಂಗ್ ಜಿ.... ಮತ್ತೆ ಮರಳದಿರಿ...

ಮುನೀರ್ ಕಾಟಿಪಳ್ಳ
 ಹತ್ತು ವರ್ಷಗಳ ಕಾಲ ಇಂಡಿಯಾ ದೇಶವನ್ನು ಆಳಿದ ಮೌನಿ ಬಾಬ ಸಿಂಗ್ ಜಿ ನಿರ್ಗಮಿಸುತ್ತಿದ್ದಾರೆ. ಪಲಿತಾಂಶ ಏನೇ ಇದ್ದರು ಅವರ ನಿರ್ಗಮನ ಖಚಿತ ಮತ್ತು ಶಾಶ್ವತ.
ಇಂಡಿಯಾ ದೇಶವನ್ನು ನಹರೂ ಅವರಿಂದ ಆರಂಭಿಸಿ ಮನಮೋಹನ್ ಸಿಂಗ್ ವರಗೆ ಹಲವು ಜನ ಪ್ರದಾನಿಗಳು ಆಳಿದ್ದಾರೆ.ಆದರೆ ಮನಮೋಹನ್ ಸಿಂಗ್ ರೀತಿ ಅವಮಾನಿತರಾಗಿ ನಿರ್ಗಮಿಸಿದವರು ಯಾರು ಇಲ್ಲ. ದೇಶವನ್ನು ಹತ್ತು ವರ್ಷಗಳ ಕಾಲ ಆಳಿದ ನಾಯಕನೊಬ್ಬ ನಿರ್ಗಮಿಸುತ್ತಿದ್ದಾನೆ ಎಂಬ ಭಾವನೆ ದೇಶದ ಎಲ್ಲಿಯೂ ಕಂಡು ಬರುತ್ತಿಲ್ಲ.ಅಸಲಿಗೆ ಅವರು ಪ್ರಧಾನಿಯಾಗಿದ್ದರು ಎಂದು ಭಾವಿಸಲು ಜನ ಸಾಮಾನ್ಯರಿಗೆ ಸಾದ್ಯ ವಾಗುತ್ತಿಲ್ಲ.
ಮಹಾನ್ ಆರ್ಥಿಕ ತಜ್ಞ, ಸಜ್ಜನ, ವೆಯುಕ್ತಿಕವಾಗಿ ಭ್ರಷ್ಟರಲ್ಲ, ಕೊಳಕು ರಾಜಕೀಯ ಹಿನ್ನಲೆಯಿಂದ ಬಂದವರಲ್ಲ, ರಾಜಕೀಯ ಕುತಂತ್ರಗಳ ಅರಿವಿಲ್ಲ... ಹೀಗೆ ಹಲವಾರು ಗುಣಾತ್ಮಕ ಅಂಶಗಳ ಹಿಮ್ಮೇಳದೊಂದಿಗೆ ಪ್ರಧಾನಿಯಾಗಿ ಅದೇ ಇಮೇಜ್ ನೊಂದಿಗೆ ಎರಡು ಅವಧಿಗೆ ದೇಶವನ್ನು ಆಳಿದವರು ಸಿಂಗ್. ಇಂತಹ ವ್ಯಕ್ತಿಯನ್ನು ಅವರ ಪಕ್ಷ ಕಾಂಗ್ರೆಸ್ ಚುನಾವಣ ಸ್ಟಾರ್ ಪ್ರಚಾರಕನಾಗಿ ಬಳಸಿಕೊಳ್ಳಲಿಲ್ಲ. ಅಷ್ಟೇ ಅಲ್ಲ ಸೋನಿಯಾ ರಾಹುಲ್ ಬಿಡಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಪುಡಾರಿಗಳು ಸಹ ತಮ್ಮ ಭಾಷಣಗಳಲ್ಲಿ ತಮ್ಮ ಪ್ರಧಾನಿಯ ಹೆಸರನ್ನು ಉಲ್ಲೇಖಿಸಲಿಲ್ಲ.ಬಹುಷ ಇದು ಈ ದೇಶದ ಇತಿಹಾಸದಲ್ಲಿ ಪ್ರಥಮ.ಇಂತಹ ನಿರ್ಗಮನ, ಅವಮಾನ ಎಂತಹಾ ಗಟ್ಟಿ ಹೃದಯ(ಸಿಂಗ್ ಜಿಗೆ ಹೃದಯವೇ ಇಲ್ಲ ಅನ್ನ ಬಹುದೇ?)ದವನಿಗೂ ಅರಗಿಸಿ ಕೊಳ್ಳುವುದು ಕಷ್ಟ. ಸಿಂಗ್ ಜಿ ಮಾತ್ರ ಏನೂ ಆಗೆ ಇಲ್ಲ ಎಂಬಂತೆ ನಿರ್ಗಮನಕ್ಕೆ ಸಿದ್ದತೆ ನಡೆಸುತ್ತಿದ್ದಾರೆ.
ಪಿ ವಿ ನರಸಿಂಹ ರಾವ್ ಜೊತೆ ಸೇರಿ ಈ ದೇಶವನ್ನು ಮಕ್ತಮಾರುಕಟ್ಟೆಗೆ ತೆರೆದಿಟ್ಟವರು ಮನಮೋಹನ್ ಸಿಂಗ್, ಅಂದು ಆರಂಭವಾದ ಉದಾರಿಕರಣದ ಶಕೆ ಇಂದು ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ.ಸಿಂಗ್ ದೇಶದ ಪ್ರಧಾನಿಯಾದ ನಂತರ ದೇಶದ ಮಾಲಿಕ ವರ್ಗಕ್ಕೆ ಸುಗ್ಗಿಕಾಲ. ಮನಮೋಹನ್ ಸಿಂಗ್ ನವ ಉದಾರವಾದಿ ನೀತಿಗಳನ್ನು ಜಾರಿಗೆ ತಂದ ರಭಸಕ್ಕೆ ಅಂಬಾನಿ ಐದು ಸಾವಿರ ಕೋಟಿ ರೂ ಮೌಲ್ಯದ ವಾಸದ ಮನೆ ಕಟ್ಟಿ ಕೊಳ್ಳಲು ಸಾದ್ಯವಾಯಿತು. ಅದಾನಿ, ಅಂಬಾನಿ, ಟಾಟ, ಬಿರ್ಲಾ ಮಾತ್ರವಲ್ಲದೆ ಬಳ್ಳಾರಿಯ ರೆಡ್ಡಿ ಲಾಡ್ ನಂತವರು ಖಾಸಗಿ ವಿಮಾನ ಹೊಂದುವಷ್ಟು ಬೆಳೆದು ಬಿಟ್ಟರು. ವಿದೇಶಿ ಕಂಪೆನಿಗಳಿಗೆ ಇಂಡಿಯಾ ಲಾಭದಾಯಕ ಮಾರುಕಟ್ಟೆಯಾಯ್ತು. ಇಲ್ಲಿನ ಕೃಷಿಭೂಮಿ ಬಂಡವಾಳಶಾಹಿಗಳಿಗೆ ಅಗ್ಗದ ಸರಕಾಗಿ ಹೋಯ್ತು. ನೀರು, ರಸ್ತೆ, ಆರೋಗ್ಯ, ಶಿಕ್ಷಣ ಲಾಭದಾಯಕ ದಂಧೆಯಾಗಿ ಪರಿವರ್ತನೆಯಾಯ್ತ. ಮನಮೋಹನ್ ಸಿಂಗ್ ಪ್ರಣೀತ ಈ ಬೆಳವಣಿಗೆಯಿಂದಾಗಿ. ಒಂದೆಡೆ ಕಣ್ಣು ಕುಕ್ಕುವ ಶ್ರೀಮಂತಿಕೆ ಅಭಿವೃದ್ದಿ ಮತ್ತೊಂದೆಡೆ ಬಡತನ, ರೋದನ, ಅಸಹಾಯಕತೆ, ಹಸಿವಿನ ಸಾವುಗಳು. ಶಿಕ್ಷಣ ವಂಚಿತ ಮಕ್ಕಳು, ಅಂಗೈ ಅಗಲ ಭೂಮಿ ಇಲ್ಲದ ವಸತಿ ರಹಿತರು, ಚಿಕಿತ್ಸೆ ವಂಚಿತ ರೋಗಿಗಳು, ನಿರುದ್ಯೋಗಿ ಯುವಕರು, ಕೃಷಿಭೂಮಿ ಕಳೆದುಕೊಂಡ, ತಮ್ಮ ಬೆಳೆಗೆ ಬೆಲೆ ಇಲ್ಲದೆ ಅಸಹಾಯಕರಾಗಿ ಅತ್ಮಹತ್ಯೆಗೆ ಮುಂದಾದ ರೈತಾಪಿಗಳು...ಹೀಗೆ ಶೇಕಡಾ ಎಬತ್ತರಷ್ಟು ಜನತೆಯ ಬದುಕನ್ನು ಕಸಿದು ಕೊಂಡದ್ದು ಮನಮೋಹನ್ ಸಿಂಗ್ ಎಂಬ ಆರ್ಥಿಕ ತಜ್ಞನ, ಸಜ್ಜನನ ಸಾಧನೆ. ಇಂತಹ ಸಾದನೆಗೆ ತಕ್ಕುದಾದ ವಿದಾಯವೇ ಸಿಂಗ್ ಗೆ ಸಿಗುತ್ತಿದೆ. ಅವಮಾನಿತರಾಗಿ, ಯಾರಿಗೂ ಬೇಡದವರಾಗಿ ಸಿಂಗ್ ಜಿ ನಿರ್ಗಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸರ್ವನಾಶದ ಅಂಚಿಗೆ ತಳ್ಳಿ... ಮೋದಿ ಎಂಬ ಸರ್ವಾದಿಕಾರಿಯನ್ನು ಪ್ರದಾನಿ ಪಟ್ಟದ ಸನಿಹಕ್ಕೆ ತಂದು...
ನಾವು ಅವರಿಗೆ ವಿದಾಯ ಕೋರೋಣ...

ಹೋಗಿ ಸಿಂಗ್ ಜಿ... ಮತ್ತೆ ಮರಳದಿರಿ...
image source - topnews

No comments:

Post a Comment