Jan 24, 2014

ತಾರತಮ್ಯ

ಮುನೀರ್ ಕಾಟಿಪಳ್ಳ
ಇಂದು ಸಾವಿರಾರು ಬಡ ಕಾರ್ಮಿಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ರು. ಮೀಡಿಯಾಗಳಿಗೆ ಇದು ಸುದ್ದಿ ಅಲ್ಲ. ಹಜಾರೆ, ಕ್ರೇಜಿ ಮುಂತಾದವರ ಎಲ್ಲ ಪ್ರತಿಭಟನೆಗಳನ್ನು ದಿನವಿಡೀ ತೋರಿಸೋ ಮೀಡಿಯಾ ಕಮ್ಯುನಿಷ್ಟರ ನಾಯಕತ್ವದ ಬಡವರ ನಿಜ ಹೋರಾಟಗಳನ್ನು ಕಡೆಗಣಿಸುತ್ತದೆ. ಇಷ್ಟಕ್ಕೆ ವಾಸ್ತವದ ಅರಿವಿಲ್ಲದವರು ಕಮ್ಯುನಿಷ್ಟರು ಅಪ್ರಸ್ತುತ ಎಂದು ಹೀಗಳೆಯುತ್ತಾರೆ. ಅಂಗನವಾಡಿ ಮಹಿಳಾ ಕಾರ್ಮಿಕರು ಹಗಲು ರಾತ್ರಿ ಪ್ರತಿಭಟನೆಗೆ ಕೂತಿದ್ದಾರೆ. ರಾತ್ರಿ ಇಡೀ ಚಳಿಯಲ್ಲಿಯೇ ರಸ್ತೆಯಲ್ಲಿ ಮಲಗಿದ್ದಾರೆ. ಸರಕಾರ ವಿಧಾನಸೌಧದಲ್ಲಿ ಬೆಚ್ಚಗೆ ಮಲಗಿದೆ. ದಿನಪತ್ರಿಕೆಗಳು, ಮೀಡಿಯಾಗಳು ಪ್ರತಿಭಟನೆಯಿಂದ ಉಂಟಾದ ಟ್ರಾಫಿಕ್ ಜಾಮಿನ ಬಗ್ಗೆ ಮಾತ್ರ ಸುದ್ದಿ ಮಾಡಿವೆ. ಕಾರ್ಮಿಕರ ಅತಂತ್ರ ಬದುಕು ಇವರಿಗೆ ಕಾಣೋದಿಲ್ಲ.
ಜೈ ಹಿಂದ್!

No comments:

Post a Comment