Oct 6, 2013

ಗಿಮಿಕ್ಕು ಮಾಡುವುದಾದರೆ ಹೀಗೆ ಮಾಡಿ...!!!

Akshatha Humchadakatte
ಜನಾರ್ಧನ ಪೂಜಾರಿಯವರೇ , ಧನ್ಯವಾದಗಳು .
ನೀವು ಮಾಡಿದ ಕೆಲಸ ಬಹಳ ದೊಡ್ಡದು . ಎಷ್ಟು ದೊಡ್ಡದೆಂದರೆ ಅದು ಹೆಣ್ಣು ಕುಲಕ್ಕೆ ಮಾತ್ರವೇ ಅರ್ಥವಾಗುವಂತದ್ದು . ಇದನ್ನು ಗಿಮಿಕ್, ಸ್ಟಂಟ್ , ಮತ್ತೆ ಹೆಣ್ಣು ಮಕ್ಕಳನ್ನು ತಮ್ಮ ಹಿಡಿತದಲ್ಲಿರಿಸಿಕೊಳ್ಳುವ ಪುರುಷ ಪ್ರಧಾನ ಸಮಾಜದ ಒಂದು ಪ್ರಯತ್ನ ... ಹೀಗೆ ಏನೇ ಹೀಗೆಳೆಯಲಿ
. ಯಾರದ್ರು ರಾಜಕಾರಣಿ ಗಿಮಿಕ್ ಮಾಡುವುದೇ ಆದರೆ ಇಂಥ ಗಿಮಿಕ್ಕುಗಳನ್ನೇ ಮಾಡಲಿ ಎಂದು ಆಶಿಸುವವಳು ನಾನು. ಏಕೆಂದರೆ ಇಂಥ ಗಿಮಿಕ್ಗಳನ್ನೂ ಮಾಡಲಾದರೂ ಒಂದು ಒಳ್ಳೆಯ ಮನಸ್ಥಿತಿಯೇ ಬೇಕು ಎನ್ನುವುದು ಈ ಕಾಲ-ದೇಶಗಳು ನನಗೆ ಕಲಿಸಿದ ಪಾಠ . ಇತ್ತೀಚಿಗೆ ಒಂದು ಮಠಕ್ಕೆ ಹೋಗಿದ್ದೆ . ಅದು ತುಸು ಕ್ರಾಂತಿಕಾರಿ ಮಠ ಎಂದೇ ಪ್ರಖ್ಯಾತ ಗೊಂಡಿರುವುದು . ಎಲ್ಲರಿಗೂ ಜಾತಿಬೇಧವಿಲ್ಲದೆ ಸಾಮೂಹಿಕ ದಾಸೋಹವಿದೆ .ಪಂಕ್ತಿಬೇಧದಂತ ಶಬ್ದಗಳಿಗೆ ಅಲ್ಲಿ ಅವಕಾಶವಿಲ್ಲ . ಅಂತ ಮಠದಲ್ಲಿ ಸುಂದರವಾದ ವನವು ಇದೆ . ಅ ವನಕ್ಕೆ ಇತ್ತೀಚಿಗೆ ಒಂದಿಸ್ಟು ಹೊಸ ಸಸಿಗಳನ್ನು ತಂದರಂತೆ . ಅದರಲ್ಲಿ ಹತ್ತಿಪ್ಪತ್ತು ರುದ್ರಾಕ್ಷಿ ಗಿಡಗಳು ಇವೆ. ಸ್ವಾಮಿಗಳು ಕರೆದು ಅದೇಶಿಸಿದರಂತೆ ... ರುದ್ರಾಕ್ಷಿ ಗಿಡಗಳಿಗೆ ಹೆಣ್ಣು ಮಕ್ಕಳು ಆ ಮೂರು ದಿನಗಳಲ್ಲಿ ನೀರು ಹಾಕುವುದಾಗಲಿ , ಇದನ್ನು ಮುಟ್ಟುವುದಾಗಲಿ ಮಾಡಬಾರದು .ಈ ಅಂಶ ಮರೆತುಹೋಗುವ ಸಾದ್ಯತೆ ಇರುವುದರಿಂದ ಗಂಡಸರೇ ರುದ್ರಾಕ್ಷಿ ಗಿಡದ ದೆಖರೆಖಿ ವಹಿಸಿಕೊಳ್ಳಬೇಕು . ಹೆಣ್ಣು ಮಕ್ಕಳು ಆ ಕಡೆ ಸುಳಿಯಬಾರದು ... ಅಲ್ಲಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ನನ್ನ ಗೆಳತಿಯೊಬ್ಬಳು ಈ ಘಟನೆ ಹೇಳುವಾಗ ಅವಳ ಕಣ್ಣುಗಳಲ್ಲಿ ಹೇಳಿಕೊಳ್ಳಲಾಗದ ಅಕ್ರೋಶ ನೋವು ಮನೆ ಮಾಡಿದ್ದವು. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವವರು ಕೂಡ ಮಹಿಳೆಯರ ವಿಷಯದಲ್ಲಿ ಸಂವೇದನ ಶೂನ್ಯರಾಗಿರುವುದನ್ನು ನಾವು ಹಲವು ಬಾರಿ ಬಾರಿಗೂ ಕಾಣುತ್ತ ಬಂದಿದ್ದೇವೆ .
ಅಂತ ಹೊತ್ತಲ್ಲಿ ನೀವು ಮಾಡಿದ ಇಂಥದೊಂದು ಕಾರ್ಯ ಖಂಡಿತಾ ಕಡೆಗನಿಸುವನ್ತದ್ದಲ್ಲ . ನೀವು ಹೆಣ್ಣುಮಕ್ಕಳನ್ನು ಅರ್ಚಕರಾಗಿ ನೇಮಿಸಿದಿರಿ ಎಂಬ ಕಾರಣಕ್ಕೆ ನಿಮ್ಮನ್ನು ಅಭಿನಂದಿಸುತಿಲ್ಲ ಬದಲಿಗೆ ಗಂಡನಿಲ್ಲ ಎಂಬ ಕಾರಣಕ್ಕೆ ನಿಕೃಸ್ಟವಾಗಿ ಕಾಣುವ ತಿಂಗಳ ಆ ಮೂರು ದಿನಗಳ ಕಾಲ ಹೊರಗೆ ಕೂರಿಸುವ ಪದ್ದತಿಯನ್ನು ಇನ್ನು ಪರಿಪಾಲಿಸುತ್ತಿರುವ ಎಷ್ಟೋ ಮನಸ್ಸುಗಳು ಮತ್ತು ಮನೆಗಳು ಇರುವ ನಮ್ಮ ಸಮಾಜದಲ್ಲಿ ನೀವು ಇಂಥ ಎಲ್ಲ ಕಟ್ಟು ಪಾಡುಗಳನ್ನು ಮೀರಿ ಅವುಗಳು ಅನ್ವಯವಾಗದಂತೆ ಹೆಣ್ಣು ಮಕ್ಕಳಿಗೆ ಇಂಥದೊಂದು ಗೌರವ ಕೊಟ್ಟಿರಲ್ಲ . ಅದು ದೊಡ್ಡದು .
ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ದೇವರ ಮೇಲೆ ಪ್ರೀತಿ ಜಾಸ್ತಿಯೆ. (ಪ್ರೀತಿ ಅನ್ನಿ , ಭಕ್ತಿ ಅನ್ನಿ ) . ಕುದ್ರೋಳಿ ದೇವಸ್ಥಾನಕ್ಕೆ ಹೊಸದಾಗಿ ನೇಮಕಗೊಂಡ ಅರ್ಚಕರು ಒಂದೆರಡು ದಿನ ಮುಜಗರ , ಕಂಗಾಲು ತನದಿಂದ ದಿಕ್ಕುಗೆತ್ಹಾರು ... (ಮೊದಲ ದಿನ ಅಳುವೇ ತುಟಿಗೆ ಬಂದಂತೆ .... ) ಮುಂದೆ ಅವರೇ ದೇವಸ್ತಾನದ ಪರಿಸರವನ್ನೇ ನಿಧಾನಕ್ಕೆ ಹೊಸ ಗಾಳಿ ಬೆಳಕುಗಳೊಂದಿಗೆ ಬದಲಿಸಿಯಾರು . ಅವರು ವೈಚಾರಿಕವಾಗಿ ಯೋಚಿಸುವಂತೆ ಚೂರು ಅವಕಾಶ ಆಗಬೇಕಿದೆ ಅಸ್ಟೆ . ಇಷ್ಟೆಲ್ಲಾ ವೈಚಾರಿಕ ಹೆಜ್ಜೆಗಳನ್ನು ಧೃಡವಾಗಿಟ್ಟ ನಿಮಗೆ ಅದೇನು ಕಷ್ಟದಲ್ಲ .
ಅಕ್ಕ ಚೆನ್ನಮಲ್ಲಿಕಾರ್ಜುನನ ಮೇಲಿಟ್ಟ ಭಕ್ತಿ,ಶ್ರದ್ದೆ ಪ್ರೀತಿಯಿಂದ ಅದ್ಭುತ ಸಾಹಿತ್ಯವೇ ಸೃಷ್ಟಿಯಾಯಿತು ಎನ್ನುವುದು ನಮಗೆ ಸದಾ ನೆನಪಲ್ಲಿರುತ್ತದೆ .
ಚಿತ್ರಕೃಪೆ - ಅಂತರ್ಜಾಲ

No comments:

Post a Comment