Sep 23, 2013

ಇಂದು ಭವಿಷ್ಯದ ನರೇಂದ್ರ ಮೋದಿಯನ್ನು ಭೇಟಿ ಮಾಡಿದೆ!Noel Chungigudde
ಎಂದಿನಂತೆ ಮನೆಯಿಂದ ಕುಂದಾಪುರದತ್ತ ಬರುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಶೆವರ್ಲೆ ಕಾರೊಂದು ರಸ್ತೆ ಬಿಟ್ಟು ಗದ್ದೆಗೆ ಜಿಗಿದು ಕೆಸರಿನಲ್ಲಿ ಹುದುಗಿ ಹೋಗಿರುವುದನ್ನು ಕಂಡೆ. ಓರ್ವ ಮಹಿಳೆ ಸೇರಿದಂತೆ ಅದರಲ್ಲಿದ್ದ ನಾಲ್ವರು ಕಾರನ್ನು ಗದ್ದೆಯಿಂದ ಹೇಗೆ ಹೊರತೆಗೆಯುವುದು ಎಂಬ ಚಿಂತೆಯಲ್ಲಿ ಮುಳುಗಿ ಕಾರಿನತ್ತ ದೃಷ್ಠಿ ನೆಟ್ಟುದಾರಿ ಕಾಣದಾಗಿದೆ ರಾಘವೇಂದ್ರನೇ, ಬೆಳಕ ತೋರಿ ನಡೆಸ ಬಾ ಯೋಗಿವರ್ಯನೆಎಂಬ ಮುಖಭಾವದಲ್ಲಿ ನಿಂತಿರುವುದನ್ನು ನೋಡಿ ನನ್ನ ವಾಹನ ನಿಲ್ಲಿಸಿ ಅವರತ್ತ ನಡೆದು ಹೋದೆ. ’ಎಲ್ಲರೂ ಸೇರಿ ಕಾರು ಎತ್ತಿದರೆ ಮೇಲೆ ಬಂದೀತೆಎಂದು ಪ್ರಯತ್ನ ಮಾಡೋಣವೇ ಎಂದೆ.
ಮರುಭೂಮಿಯಲ್ಲಿ ಓಯಸಿಸ್ ಕಂಡಂತೆ ಸ್ವಲ್ಪ ಚೇತರಿಸಿಕೊಂಡ ಕಾರಿನ ಪ್ರಯಾಣಿಕರು ನನ್ನ ಸಲಹೆಗೆ ಒಪ್ಪಿ ನಾವೆಲ್ಲ ಸೇರಿ ಕಾರು ಎತ್ತಲು ಪ್ರಯತ್ನಿಸಿದರೂ ಕಾರಿನ ಚಕ್ರ ತಿರುಗಲೇ ಇಲ್ಲ. ಕೊನೆಗೆ ದಾರಿಯಲ್ಲಿ ಹೋಗುತ್ತಿದ್ದ ಸಿಗಡಿ ಉದ್ಯಮಿಯೊಬ್ಬರ ವಾಹನ ಅಡ್ಡಗಟ್ಟಿ ಅವರಿಗೆ ನಮ್ಮೊಂದಿಗೆ ಕೈಜೋಡಿಸುವಂತೆ ವಿನಂತಿಸಿದೆ. ಅವರು ಮಾಡಿದ ಪ್ರಯತ್ನಕ್ಕೆ ಕಾರು ಸ್ವಲ್ಪ ಹಿಂದಕ್ಕೆ ಹೋಯಿತಾದರೂ ಮೇಲೇಳಲಿಲ್ಲ. ಕೊನೆಗೆ ನಾನು ಬಲ್ಲ ಸ್ಥಳೀಯ ಯುವಕನೊಬ್ಬನ ಜೊತೆ ಅಲ್ಲಿನ ಸಿಗಡಿ ಕೆರೆಗೆ ಹೋಗಿ ಕಾರ್ಮಿಕರನ್ನು ಒಟ್ಟುಗೂಡಿಸಿ 20 ಕೈಗಳ ಬಲ ಸೇರಿಸಿ ಕಾರನ್ನು ರಸ್ತೆಗೆ ತರುವಲ್ಲಿ ಸಹಕರಿಸಿದೆ. ತನ್ನ ಕಾರನ್ನೇ ರಸ್ತೆಯಲ್ಲಿ ನಿಧಾನ ಓಡಿಸುವ ಪರಿಸರದ ಅಧಿಕಾರಿಯೊಬ್ಬರು ನಾವ್ಯಾರೂ ನಿರೀಕ್ಷಿಸದ ಆಶ್ಚರ್ಯಕರ ರೀತಿಯಲ್ಲಿ ಡ್ರೈವಿಂಗ್ ಸೀಟ್ ನಲ್ಲಿ ಕುಳಿತು first gear ನಲ್ಲಿ ಕಾರನ್ನು ಮುಂದಕ್ಕೆ ವೇಗವಾಗಿ ಚಲಾಯಿಸಿ ತಾನಿನ್ನೂ ಯುವಕರನ್ನೂ ನಾಚಿಸಬಲ್ಲೆ ಎಂಬಂತೆ ಕಾರಿಳಿದ ಮೇಲೆ ’1967 ಡ್ರೈವಿಂಗ್ ಲೈಸೆನ್ಸ್ ಕಣ್ರೀಎಂದು ಆತ್ಮವಿಶ್ವಾಸದ ನಗು ಬೀರಿದರು. ಅವರನ್ನು ಬಲ್ಲ ನಾವು ಕೆಲವರು ಕಾರು ಒಂದು ಗದ್ದೆಯಿಂದ ಮೇಲಕ್ಕೇರಿ ರಸ್ತೆ ಹಾರಿ ಇನ್ನೊಂದು ಗದ್ದೆಗೆ ಹಾರಬಹುದೇನೋ ಇವರ ಡ್ರೈವಿಂಗ್ ನಲ್ಲಿ ಎಂಬ ಆತಂಕದಲ್ಲಿದ್ದೆವು. ಅವರಿಗೆ ನೀವು ಡ್ರೈವಿಂಗ್ ಮಾಡುವುದು ಬೇಡ ಸರ್ ಎಂಬಂತೆಯೂ ಇರಲಿಲ್ಲ. ಹೀಗೆ ಎಲ್ಲವೂ ಸುಖಾಂತ್ಯಗೊಂಡಾಗ ಕಾರಿನ ಪ್ರಯಾಣಿಕರು ನನಗೆ ತುಂಬು ಮನಸ್ಸಿನಿಂದ whole sale ಲೆಕ್ಕದಲ್ಲಿ thanks ಹೇಳಿದರು.

ಇಲ್ಲಿಯವರೆಗೆ ಎಲ್ಲವೂ normal ಆಗಿತ್ತು.

ಆಗ ನನ್ನ ಬಳಿಗೆ ಬಂದ ಕಾರಿನ ಚಾಲಕ ನನಗೆ ಸಿಕ್ಕಾಪಟ್ಟೆ ಹೊಗಳಿದ. ನಾನು ಇದೆಲ್ಲ ನಮ್ಮ ಕರ್ತವ್ಯ ಮಾರಾಯರೆ ಎಂದೆ. ನಂತರ ನನ್ನ ಹೆಸರನ್ನು ಕೇಳಿದವನೆ ತುಂಬ ಖುಷಿ ಪಟ್ಟು ನಿಮ್ಮ ಹೆಸರನ್ನು helping Noel ಎಂದೇ save ಮಾಡ್ತೇನೆ. ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದ. ಕೊಟ್ಟೆ. ಉಡುಪಿಗೆ ಬಂದರೆ ಎಂತಹ help ಬೇಕಿದ್ದರೂ ಕೇಳಿ ಎಂದ. ನಂತರ ಆತ ಹೇಳಿದ ಸಂಗತಿ ಮಾತ್ರ ನನ್ನ ಅಲ್ಲಿಯ ತನಕದ ಉತ್ಸಾಹವನ್ನೇ ಕೊಂದು ಹಾಕಿತು. ಆತ ಕೊಂಕಣಿಯಲ್ಲಿ ಹೇಳಿದ್ದೇನು ಗೊತ್ತೆ? ’Noel ನೀನೊಬ್ಬ ಕ್ರಿಶ್ಚಿಯನ್ ಆಗಿದ್ದರಿಂದ ಮಾತ್ರ ನಿನಗೆ ಸೇವಾ ಮನೋಭಾವ ಬಂತು. ಹಿಂದೂಗಳಿಗೆ helping nature ಎಂಬುದೇ ಇಲ್ಲ ಮಾರಾಯ. ಇವರಿಗೆ ನಾವು ಏನೇ ಉಪಕಾರ ಮಾಡಿದರೂ ಅದು ನೆನಪು ಇರುವುದಿಲ್ಲ. ಒಬ್ಬ ಕ್ರಿಶ್ಚಿಯನ್ ಗೆ ಇನ್ನೊಬ್ಬ ಕ್ರಿಶ್ಚಿಯನ್ ಮಾತ್ರ ಸಹಾಯ ಮಾಡಲು ಸಾಧ್ಯವೇನೋ ಅಲ್ಲವೆ? ನೀನು ಏನು ಹೇಳ್ತಿಯಾಎಂದ. ನಾನು ಆತನಿಗೆಅಲ್ಲ, ನಿನ್ನ ಗ್ರಹಿಕೆ ತಪ್ಪುಎಂದೆ. ‘ನನ್ನ ಹೆಸರಿನ ಮೇಲೆ ನೀನು ನನ್ನನ್ನು ಕ್ರಿಶ್ಚಿಯನ್ ಎಂದು ಲೆಕ್ಕ ಹಾಕಿರಬಹುದು. ಆದರೆ ನಿನಗೆ ತಿಳಿದಿರಲಿ ಇಲ್ಲಿ ಸೇರಿ ನಿನಗೆ ಸಹಾಯ ಮಾಡಿರುವ ಬಹುತೇಕ ಮಂದಿ ಹಿಂದೂಗಳು ಮತ್ತು ಬಾಲ್ಯದಿಂದಲೂ ಕ್ರೈಸ್ತರ ಮನೆಗಳಲ್ಲೇ ಓಡಾಡಿ ಬೆಳೆದಿರುವ ಅವರೆಲ್ಲರಿಗೂ ಚೆಂದದ ಕೊಂಕಣಿ ಮಾತಾಡಲು ಬರುತ್ತದೆ, ಮತ್ತು ನೀನು ಈಗ ಅವರಿಗೆ ಗೊತ್ತಾಗಬಾರದೆಂದು ಕೊಂಕಣಿಯಲ್ಲಿ ಹೇಳಿದ ಮಾತು ಅವರೆಲ್ಲರಿಗೂ ಗೊತ್ತಾಗಿದೆ. ಅವರಾಗಲೀ, ನಾನಾಗಲೀ ನಿನ್ನ ಜಾತಿ ಕೇಳಿ ನಿನಗೆ ಸಹಾಯ ಮಾಡಿದ್ದಲ್ಲ ಅಲ್ಲವೇಎಂದೆ. ಆತ ಇಂಗು ತಿಂದ ಮಂಗನಂತೆ sorry ಎಂದ. ’ಮದರ್ ತೆರೇಸಾ ಕಲ್ಕತ್ತಾದ ಕೊಳಗೇರಿಯ ಅನಾಥ ಮಕ್ಕಳು, ಕುಷ್ಟ ರೋಗಿಗಳ ಆರೈಕೆ ಮಾಡಿದರಲ್ಲ, ಅವರ ಕೊಳೆತ ಗಾಯಗಳನ್ನು ತೊಳೆದರಲ್ಲ, ಅವರೆಂದಾದರೂ ಯಾವುದೇ ವ್ಯಕ್ತಿಯ ಜಾತಿ ನೋಡಿ ಸಹಾಯ ಮಾಡಿದ್ದರೆಎಂದು ಕೇಳಿದೆ. ಆತನ ಬಳಿ ಉತ್ತರವಿರಲಿಲ್ಲ.

------------------------------------ ------------------------------- ------------------
ನಮ್ಮಲ್ಲಿ ಇಂಥಹ ಅನೇಕ ಮಂದಿ ಇರುತ್ತಾರೆ. ಕುವೈಟ್, ದುಬೈ, ಮಸ್ಕತ್ ಮೊದಲಾದ ಸಾಬರ ದೇಶಗಳಲ್ಲಿ ದುಡಿದು ಭಾರತದ ದುಡಿಮೆಯ ನಾಲ್ಕು ಪಟ್ಟು ದುಡ್ಡು ಮಾಡಿದ ಮೇಲೆ ಇಲ್ಲಿ ಚಕ್ರವರ್ತಿ ಸೂಲಿಬೆಲೆ, ಪ್ರವೀಣ್ ತೊಗಾಡಿಯಾ, ಜಗದೀಶ ಕಾರಂತ ಮೊದಲಾದವರುಅಲ್ಪಸಂಖ್ಯಾತರ ತುಷ್ಠೀಕರಣ’, ’ಮುಸ್ಲಿಂ ಓಲೈಕೆಎಂದು ಬಾಯಿಗೆ ಬಂದದ್ದೆನ್ನೆಲ್ಲ ಒದರಿದ್ದನ್ನು ಕೇಳಿ ತಲೆ ತಿರುಗಿದಂತಾಗಿ, ಬಿ.ಪಿ ಸಿಕ್ಕಾಪಟ್ಟೆ ಏರಿ, ಮಾನಸಿಕ ಸ್ಥಿಮಿತ ತಪ್ಪಿದಂತಾಗಿ, ಶಾಲೆಯಲ್ಲಿ ಕಲಿತದ್ದೂ ಮರೆತು ಹೋಗಿ ಏಕಾಏಕಿ ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಾರೆ. ಕ್ರಿಶ್ಚಿಯನ್ ಶಾಲೆಗಳಲ್ಲಿ 1 ನೇ ತರಗತಿಯಿಂದ ಡಿಗ್ರಿ ತನಕವೂ ಕಲಿತು ಕ್ರೈಸ್ತ ಪಾದ್ರಿಗಳೆಲ್ಲ ಮತಾಂತರ ಮಾಡುತ್ತಾರೆ ಎಂದು ಬೊಗಳುತ್ತಾರೆ. ಇವರನ್ನ್ಯಾಕೆ ಅವರು ಮತಾಂತರಗೊಳಿಸಲಿಲ್ಲ ಎಂದರೆ ಅವರಲ್ಲಿ ಉತ್ತರವಿರುವುದಿಲ್ಲ. ಸಾಬರ ಅಂಗಡಿಯಿಂದ ಪ್ರತೀ ದೀಪಾವಳಿ, ನವರಾತ್ರಿ, ಯುಗಾದಿ ಸಂಚಿಕೆಗಳಿಗೆ ಗರಿಷ್ಠ ಜಾಹೀರಾತು ತಂದು ಅದೇ ಸಾಬರನ್ನು ಯಾವುದೇ ದಾಖಲೆ, ನ್ಯಾಯಾಲಯದ ತೀರ್ಪುಗಳು ಏನೂ ಇಲ್ಲದೇ ಭಯೋತ್ಪಾದಕರು ಎಂದು ಬರೆಯಲೂ ಹೇಸದವರಿದ್ದಾರೆ. ಹಿಂದೂಗಳ ಅಂಗಡಿಗಳಲ್ಲಿ, ವಾಹನಗಳಲ್ಲಿ, ಕಾರ್ಖಾನೆಗಳಲ್ಲಿ ಜೀವನ ಪೂರ್ತಿ ದುಡಿದು ತಾನು ತಿಂದ ಅನ್ನದ ರುಣವನ್ನೂ ಮರೆತು ಹಿಂದೂಗಳೆಲ್ಲ ನಂಬಿಕೆಗೆ ಅನರ್ಹರು ಎಂದು ಹೇಳುತ್ತಿರುತ್ತಾರೆ! ಇಂಥವರನ್ನೆಲ್ಲಾ ನೀವು ಹಿಂದೂಗಳು, ಕ್ರೈಸ್ತರು, ಮುಸ್ಲಿಮರು ಎಂದು ಕರೆದರೆ, ನಿಮ್ಮ ಬೌದ್ಧಿಕ ದಾರಿದ್ರ್ಯದ ಬಗ್ಗೆ ನನಗೆ ಖೇದವಿದೆ. Get Well Soon.

---------------------------- --------------------------- -----------------------
ಕೇವಲ ಪ್ರಧಾನಿಯಾಗುವ ಉದ್ದೇಶದಿಂದ ಟೊಪ್ಪಿ ಧರಿಸಿದ ಸಾಬರನ್ನೇ ಸೇರಿಸಿಸದ್ಭಾವನಾ ಸಮಾವೇಶಮಾಡಿದ ನರೇಂದ್ರ ಮೋದಿ ಮೌಲವಿಯೋರ್ವ ಕೊಟ್ಟ ಟೊಪ್ಪಿ ಧರಿಸಲು ನಿರಾಕರಿಸುತ್ತಾನೆ, ಟೊಪ್ಪಿ ಧರಿಸಿದ ಕೂಡಲೇ ಓರ್ವ ವ್ಯಕ್ತಿ ಮುಸ್ಲಿಮನಾಗಿ ಬಿಡುತ್ತಾನೆಯೆ? ಸೌಹಾರ್ದತೆಯ ಸರಳ ಸಂಕೇತವನ್ನೇ ಅರ್ಥೈಸದ ನರೇಂದ್ರ ಮೋದಿ ಯಾವ ಸೀಮೆಯ ನಾಯಕ? ವಿವಿಧತೆಯಲ್ಲಿ ದೇಶದ ಐಕ್ಯತೆ ಕಾಪಾಡುವುದು ಇಂಥ ಕೋಮುವಾದಿಗಳಿಂದ ಸಾಧ್ಯವೆ? ಭಾರತವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವುದು ಇವರಿಂದ ಸಾಧ್ಯವೆ?
Ridiculous.

ನಮ್ಮ ಸುತ್ತ ಮುತ್ತ ಎಷ್ಟೊಂದು ಜನ ಭವಿಷ್ಯದ ಮೋದಿಗಳು ತುಂಬಿ ತುಳುಕುತ್ತಿದ್ದಾರೆ!

No comments:

Post a Comment