ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

23.1.17

ತಲ್ಲಣ

ಸವಿತ ಎಸ್ ಪಿ
ಕಂಗಳಲಿ ನಿಂತು
ಕಾಡುವ ಬಗೆ ಏನು
ನೋಟದಲಿ ಸೆಳೆದು
ಮಾಡಿರುವೆ ಮೋಡಿ
ಮೌನದಲೂ ಹಿತವು
ಮಾತೆಲ್ಲವೂ ಹಾಡು
ನೀ ಇರಲು ಸನಿಹ
ಇನ್ನೆಲ್ಲಿಯ ವಿರಹ

ಪಿಸುಗುಡಲು ನನ್ನ ಹೆಸರು
ತನುವಿಲ್ಲಿ ಕಂಪಿಸಿಹುದು
ಜೀವನಾಡಿ ನಾ ನಿನಗೆ
ನೀನಾಗಿಹೆ ನನ್ನುಸಿರು

ಒಡನಾಡಿ ನೀನೆಂದು
ಮನವಿಂದು ಬೀಗಿಹುದು
ಒಡಗೂಡಿ ನಡೆಯಲು
ಸೊಗಸಿಹುದು ಪಯಣವು

ಭಾವದಲಿ ಭಾವವು
ಜೀವದಲಿ ಜೀವವು
ಅನುರೂಪದನುಬಂಧ
ಜನ್ಮಾಂತರದ ಸಂಬಂಧ

No comments:

Post a Comment

Related Posts Plugin for WordPress, Blogger...