ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

27.12.16

ಸೀತಾ ಸ್ವಗತ

ಸವಿತ ಎಸ್ ಪಿ
ಬಿಲ್ಲ ಹೆದೆಯೇರಿಸಿ ನನ್ನ ವರಿಸಿದ 
ಸೀತಾರಾಮ‌....
ನಿನ್ನ ಅರಮನೆಗೆ, ಮನಕೆ ಬೆಳಕಾಗಿ, 
ಹೆಜ್ಜೆಗೆ ಹೆಜ್ಜೆ ಸೇರಿಸಿದ ನನಗೆ 
ನಿನ್ನ ಜೊತೆಗಿನ ವನವಾಸವೂ ಸಹ್ಯವಾಗಿತ್ತು...
ಶತ್ರುವಿನ ಸೆರೆವಾಸದಲೂ 
ನಿನ್ನ ಪ್ರೇಮದ ಬೆಳಕ ನಂಬಿ ಬದುಕಿದ ನನ್ನ....
ಅಲ್ಪ ಅಗಸನ ಮಾತಿಗೆ,
ಲೋಕೋಪವಾದಕೆ‌ ಅಂಜಿ 
ಅನುಮಾನವೆಂಬ ಅಗ್ನಿಕುಂಡಕೆ ತಳ್ಳಿದೆಯಲ್ಲ...
ಅವನೇನೋ ದಹಿಸದೆ 
ಪರಮ ಪವಿತ್ರಳೆಂದು 
ಇಡೀ ಜಗತ್ತಿಗೆ ಸಾರಿದ ನೀನು...
ತುಂಬು ಗರ್ಭಿಣಿಯಾದ ನನ್ನ 
ಕಾಡುಪಾಲು ಮಾಡಿದೆಯಲ್ಲ...
ನಿನ್ನ ಕರುಳಕುಡಿಗಳ ವಿರುದ್ದವೇ 
ಯುದ್ಧ ಸಾರಿದೆಯಲ್ಲ..
ಕ್ಷಮಿಸು ಜಾನಕಿ ಎಂದು ಉಪಕಾರ ಮಾಡುವವನಂತೆ‌ ಸ್ವೀಕರಿಸಲು ಬಂದೆಯಲ್ಲ
ನಿನ್ನ ಅಪ್ಪುಗೆಗಿಂತ ಭೂಮಾತೆಯ
ಗರ್ಭದಾಲಿಂಗನವೇ ನನಗೆ 
ಹಿತವೆನಿಸಿದೆ ಜಗದಭಿರಾಮ...
ಶ್ರೀ ರಾಮ.........ಏಕಪತ್ನಿವ್ರತಸ್ಥ ರಾಮ..!

No comments:

Post a Comment

Related Posts Plugin for WordPress, Blogger...