Dec 18, 2014

ಸ್ವಚ್ಛತೆಯ ಕಾರ್ಮಿಕರಿಗೆ ಬಿ.ಬಿ.ಎಂ.ಪಿಯ ‘ಗೌರವ’

pourakarmikas protest
ಸಂಬಳ ಕೇಳುತ್ತಿದ್ದೇವೆ ಭಿಕ್ಷೆಯಲ್ಲ
 ಇಂಗ್ಲೀಷ್ ಮೂಲ: ರವಿ ಕೃಷ್ಣರೆಡ್ಡಿ
ಅನುವಾದ: ಡಾ. ಅಶೋಕ್.ಕೆ.ಆರ್
ಈ ದೌರ್ಜನ್ಯದ ಬಗ್ಗೆ ಬೆಂಗಳೂರಿಗರಿಗೆ ನಾಚಿಕೆಯಾಗಬೇಕು. ಮೂರು ವಾರ್ಡಿನ ಇನ್ನೂರು ಮಂದಿ ಪೌರಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ಸಂಬಳವಾಗಿಲ್ಲ. ಸಿಗುವ ಕನಿಷ್ಠ ಸಂಬಳಕ್ಕಾಗಿ ಈ ಪೌರಕಾರ್ಮಿಕರು ಈ ವರುಷದಲ್ಲಿದು ಏಳನೇ ಬಾರಿ ಪ್ರತಿಭಟನೆಯ ಹಾದಿ ಹಿಡಿದಿರುವುದು. ಇಡೀ ನಗರದಲ್ಲಿ ಇಂಥವರ ಸಂಖೈ ಸಾವಿರದ ಆಸುಪಾಸಿನಲ್ಲಿರಬಹುದು.

pourakarmikas protest bangalore
ಈ ರೀತಿಯ ಅಮಾನವೀಯ ವರ್ತನೆಗೆ ಬೆಂಗಳೂರೆಂಬ ನಗರಕ್ಕೆ ಆತ್ಮಸಾಕ್ಷಿ ಇಲ್ಲದಿರುವುದೇ ಕಾರಣವೆಂದೆನ್ನಿಸುತ್ತೆ ನನಗೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಅನೇಕ ಮಹಿಳೆಯರು ನಲವತ್ತಕ್ಕಿಂತ ಹೆಚ್ಚು ಕೆ.ಜಿ ಇರಲಾರರು. ಕೈಗವಸುಗಳೂ ಇಲ್ಲದೆ ನಗರದ ಗಲೀಜನ್ನು ಶುದ್ಧಗೊಳಿಸುವವರಿವರು. 8436 ರುಪಾಯಿಗಳಷ್ಟು ಸಂಬಳ ಪಡೆಯಬೇಕಾದವರು ಬಿ.ಬಿ.ಎಂ.ಪಿ ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಗುತ್ತಿಗೆ ನೀಡಿಬಿಟ್ಟಿರುವುದರಿಂದ ಪೌರಕಾರ್ಮಿಕರು ನಾಲ್ಕು ಸಾವಿರಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಾರೆ, ಅದೂ ಅನಿಯಮಿತವಾಗಿ. ನಾಚಿಕೆಗೇಡು. ಸ್ಲಮ್ಮುಗಳಲ್ಲಿ ವಾಸಿಸುತ್ತಾ ಇಡೀ ನಗರವನ್ನು ಸ್ವಚ್ಛವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುವವರಿಗೆ ನೆಮ್ಮದಿಯ ಊಟವನ್ನೂ ನೀಡಲಾಗದ ನಗರವಿದು. ಬದಲಿಗೆ ಅವರನ್ನು ಬಯ್ಯುತ್ತೇವೆ, ಅಪಹಾಸ್ಯಕ್ಕೊಳಪಡಿಸುತ್ತೇವೆ ಮತ್ತು ಶೋಷಿಸುತ್ತೇವೆ.
ನಾಗರೀಕವೆನ್ನಿಸಿಕೊಂಡ ಸಮಾಜ ನಡೆದುಕೊಳ್ಳುವ ರೀತಿ ಇದಲ್ಲ.
ಬ್ಯಾಟರಾಯನಪುರದ ಪೌರಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ನಿರಶನ ನಡೆಸುತ್ತಿದ್ದಾರೆ. ಯಾರಿಗೂ ತಲೆಬಿಸಿಯಾಗಿಲ್ಲ. ಆಮ್ ಆದ್ಮಿ ಪಕ್ಷದ ವತಿಯಿಂದ ನಾವು ಪ್ರತಿಭಟನೆಯ ಸ್ಥಳಕ್ಕೆ ತೆರಳಿ ಪೌರಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸುತ್ತ ಸ್ಥಳೀಯ ಪೋಲೀಸರಿಗೆ ಅಲ್ಲಿನ ಕಾರ್ಪೋರೇಟರ್ ಮತ್ತು ಬಿ.ಬಿ.ಎಂ.ಪಿ ಆಫೀಸರುಗಳನ್ನು ಕರೆಸುವಂತೆ ವಿನಂತಿಸಿದೆವು. ರಸ್ತೆ ಬದಿಯಲ್ಲಿ ಮೂರು ತಾಸು ಕಾದರೂ ಯಾರೊಬ್ಬರೂ ಗಮನಹರಿಸಲಿಲ್ಲ. ನಂತರ ಅಲ್ಲೇ ರಸ್ತೆಯ ಮೇಲೆ ಕುಳಿತುಕೊಳ್ಳುವಾಗ ಸ್ಥಳೀಯ ಪೋಲೀಸರು ದೌರ್ಜನ್ಯವೆಸಗಿದರು. ಮಹಿಳೆಯರು ಇರದಿದ್ದಲ್ಲಿ ದೌರ್ಜನ್ಯ ಎಲ್ಲೆ ಮೀರುತ್ತಿತ್ತು.

ravikrishnareddy manhandled
ಶನಿವಾರ ಮಧ್ಯಾಹ್ನದವೊಳಗೆ ಸಂಬಳ ನೀಡುವಂತೆ ಆಗ್ರಹಿಸುತ್ತಾ ಸದ್ಯಕ್ಕೆ ಪೌರಕಾರ್ಮಿಕರು ನಿರಶನವನ್ನು ಹಿಂಪಡೆದುಕೊಂಡಿದ್ದಾರೆ. ಆಗಲೂ ಸಂಬಳ ನೀಡದಿದ್ದಲ್ಲಿ ಭಾನುವಾರ ದೊಡ್ಡ ಮಟ್ಟದ ಪ್ರತಿಭಟನೆ ಖಂಡಿತ.

No comments:

Post a Comment