Oct 4, 2014

ಮೌನ

ಅಂದು
'ಅವರೆಲ್ಲಾ ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದಾರೆ. ಛೀ ಅಸಹ್ಯ' ಎಂದರು. ನನಗೆ ಸಂಬಂಧಪಟ್ಟಿದ್ದಾಗಿರಲಿಲ್ಲ. ಏನೋ ರಾಜಕೀಯ, ಮಾಡಿಕೊಳ್ಳಲಿ ಬಿಡಿ ಎಂದು ಸುಮ್ಮನಿದ್ದೆವು.
ಇಂದು
'ರಾಷ್ಟ್ರೀಯವಾದಿ ಪಕ್ಷದ ನಾಯಕನೊಬ್ಬ ಸರಕಾರೀ ದೂರದರ್ಶನದಲ್ಲಿ ಕಾಣಿಸಿಕೊಂಡ್ರೆ ಏನ್ರೀ ತಪ್ಪು' ಎಂದು ಅಬ್ಬರಿಸಿದರು. ಥೂ...ಓಕ್ಕೊಳ್ಲಿ ಬಿಡಪ್ಪ ಎಂದು ಸುಮ್ಮನಿದ್ದೆವು.
ಮುಂದು
'ಹಿಂದೂ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಜಾತಿಯವರೂ ಜೊತೆಜೊತೆಯಾಗಿ ವಾಸಿಸಿದರೆ ಹೆಂಗೆ? ವರ್ಣಾಶ್ರಮ ವ್ಯವಸ್ಥೆಗೆ ಅವಮಾನಿಸಿದರೆ ದೇಶಕ್ಕೆ ಒಳ್ಳೆಯದಲ್ಲ' ಎಂದು ನಯವಾಗಿ ತಲೆಸವರಿದರು. ಅಂದು ಮತ್ತು ಇಂದು ಸುಮ್ಮನಿದ್ದ ಕಾರಣ ಮಾತನಾಡಲೇನೂ ಉಳಿದಿರಲಿಲ್ಲ. ಗಂಟು ಮೂಟೆ ಕಟ್ಟಲಾರಂಭಿಸಿದೆವು.
Also Readಕಥೆಗಳು

No comments:

Post a Comment