May 14, 2014

ಬೆಳ್ಳಂದೂರು ಕೆರೆಯ ಸ್ವಗತ

ರಮ್ಯ ವರ್ಷಿಣಿ
ನಾನು ಒಂದು ಕಾಲದಲ್ಲಿ ಹಸುರಿನಿಂದ ಕಂಗೊಳಿಸ್ತಿದ್ದೆ. ಒಂದು ಸಾರಿ ನನ್ನ ಕಡೆ ಕಣ್ಣು ಹಾಯಿಸಿ ನೋಡಿದ್ರೆ ಎಂಥವರನ್ನು ಆಕರ್ಷಣೆ ಮಾಡಿ ನನ್ನ ಕಡೆ ಸೆಳೆದುಕೊಳ್ತಿದ್ದೆ. ನನ್ನ ಸುತ್ತಾಮುತ್ತಲ ಹಸಿರು ಎಲ್ಲರ ಬಾಯಲ್ಲೂ ಅಬ್ಬಾಬ್ಬಾ ಅನ್ನಿಸೊ ಹಾಗೆ ಮನಸೂರೆ ಮಾಡಿತ್ತು. ನೀವ್ ನೋಡ್ತಿರೋ ನಾನು ಬೆಂಗಳೂರಿನ ಅತಿ ದೊಡ್ಡ ಕೆರೆ ಬೆಳ್ಳೆಂದೂರು ಕೆರೆ.
ನಾನು ಸುಮಾರು 950 ಎಕರೆ ವಿಸ್ತೀರ್ಣದಲ್ಲಿ ನಗು ನಗ್ತಾ ಹೋಯ್ಲಾಡ್ತಿದ್ದೆ. ನಾನು ಒಂದು ಕಾಲದಲ್ಲಿ ಇಲ್ಲಿರೋ ರೈತರ ವ್ಯವಸಾಯಕ್ಕೆ ಶುದ್ದ ನೀರನ್ನ ಕೊಡ್ತಿದ್ದೆ. ಬೆಳ್ಳೆಂದೂರಿನ ಜನರು ನನ್ನನ್ನ ಗಂಗಾಮಯಿ ಅಂತೆಲ್ಲಾ ಪೂಜೆ ಮಾಡ್ತಿದ್ರೂ.ಆಗ ನಾನೆಷ್ಟೂ ಪುಣ್ಯವಂತೆ ಅಂತಾ ಅನ್ನಿಸಿತ್ತು. ಅದೆಷ್ಟೋ ಮಂದಿ .ಮೀನು ಹಿಡಿಯೋರು ಬಂದು ಮೀನು ಹಿಡಿತಿದ್ರು. ಅಂತಹ ಸಾವಿರಾರು ಜನರ ಬದುಕಿಗೆ ಜೀವನಾಧಾರವಾಗಿದ್ದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದೆ. ವಿದೇಶಿಗರು ಈ ನನ್ನ ಸೌಂದರ್ಯ ಸವಿಯೋಕೆ ಅಂತಲೆ ಇಲ್ಲಿಗೆ ಬರ್ತಿದ್ರು.
ಆಗ ನನ್ನ ನೋಡಿ ಅವರು ಮೈಮರಿತೀದ್ರೂ. ನಾನೂ ಅವರನ್ನ ನೋಡಿ ಖುಷಿ ಪಡ್ತಿದ್ದೆ… ಆದ್ರೆ ಈಗ ದಿನಗಳು ಬದಲಾಯ್ತು. ನನ್ನ ಅಕ್ಕ ಪಕ್ಕದ ಕೆರೆಗಳೆಲ್ಲ ನಿಧಾನವಾಗಿ ಭೂ ಮಾಫಿಯಾದಂತ ಧಂದೆಗಳಿಗೆ ಸಿಕ್ಕಿಬಿದ್ದವು. ರಿಯಲ್ ಎಸ್ಟೇಟ್ ನಂತಹ ಖದೀಮರ ಕಣ್ಣಿಗೆ ಬಿದ್ದ ಆ ಕರೆಗಳ ಎದೆಯ ಮೇಲೆ ಅಪಾರ್ಟ್ ಮೆಂಟ್ ಗಳನ್ನ ಕಟ್ಟಿದ್ರೂ. ಹೋಟೆಲ್, ಮಾಲ್ ಗಳನ್ನ ಕಟ್ಟಿ ಭೂಗತಗೊಳಿಸಿಬಿಟ್ಟ್ರು. . ಇಂಥಹ ಕೆಟ್ಟ ಭೂ ಮಾಲಿಕರ ಕಣ್ಣಿಗೆ ನಾನು ಬೀಳಬಾರದು ಅನ್ನೋ ಭಯ ಸದಾ ನನ್ನನ್ನಾ ಕಾಡ್ತಿತ್ತು. ಯಾವಾಗ್ಲೂ ನನ್ನ ಊರಿನ ಜನರಿಗೆ ಮೊರೆ ಇಡ್ತಿದ್ದೆ. ನನ್ನ ಮಕ್ಕಳು ಅಂತಾ ಕರೆಸಿಕೊಂಡೋರು ನನ್ನ ರಕ್ಷಣೆಗೆ ಮುಂದಾದ್ರೂ… ಹಳೆಬೇರು ಹೊಸ ಚಿಗುರು ಅನ್ನೋ ಹಾಗೆ ಅವ್ರೆಲ್ಲಾ ತಮ್ಮ ಕಾಲ ಬಂದ್ ಮೇಲೆ ಸತ್ತು ಹೋದ್ರು. ಈಗಿರೋ ಮಕ್ಕಳು ನನ್ನನ್ನೆ ಮಾರಿಕೊಳ್ಳೋಕೆ ಮುಂದಾಗಿದ್ದಾರೆ. 950 ಎಕರೆ ಇದ್ದ ಅರೆ ಜೀವ ಮಾಡಿದ್ದಾರೆ. ನನ್ನ ಕೈಕಾಲುಗಳನ್ನ ಪೆನ್ಸಿಂಗ್ ಮಾಡಿ ಹರಿದು ಹಂಚಿ ಧೂಳಿಪಟ ಮಾಡಿದ್ದಾರೆ. ಅರೆಜೀವವಾಗಿ ಉಳಿದಿರೋ ನನ್ನ ಹೆಸ್ರಲ್ಲಿ ಈ ರಾಜಕಾರಣಿಗಳು ಹಣ ಲೂಟಿ ಮಾಡ್ತಿದ್ದಾರೆ. ನನ್ನ ಶುದ್ದ ಮಾಡಿ ಅಂತಾ ಎಷ್ಟು ಕೇಳಿಕೊಂಡ್ರೂ ನನಗೆ ಮೋಸ ಮಾಡ್ತಿದ್ದಾರೆ ಹೊರತು ಯಾರು ನನ್ನ ಬಗ್ಗೆ ಕಾಳಜಿ ವಹಿಸ್ತಿಲ್ಲ. ಇಡೀ ಬೆಂಗಳೂರಿನ ಮೋರಿ ನೀರನ್ನ ನನಗೆ ತುಂಬಿಸ್ತಿದ್ದಾರೆ. ಅಪಾರ್ಟ್ ಮೆಂಟ್ಗಳ ಸ್ಯಾನಿಟರ್ ವಾಟರ್ ಕೂಡ ಬಿಟ್ಟಿಲ್ಲ… ಈ ನೀರಿನ ಗಲೀಜಿನಿಂದ ನಾನು ವಿಷಯುಕ್ತವಾಗಿ ಗಬ್ಬು ನಾಥ ಹೊಡಿತಿದ್ದೀನಿ. ನನ್ನ ಹತ್ರ ಬರ್ತಿದ್ದ ಜನಗಳು ಈಗ ನನ್ನ ನೋಡಿದ್ರೆ ಸಾಕು ಮೂಗು ಮುಚ್ಚಿಕೊಂಡು ದೂರ ಹೋಗ್ತಾರೆ. ಇಡೀ ಬೆಂಗಳೂರಿನ ಕಸ- ಇಂಡಸ್ಟ್ರೀಗಳ ಕೆಮಿಕಲ್ ವಾಟರ್, ಸೀವೇಜ್ ವಾಟರ್ ಎಲ್ಲಾ ನನ್ನ ಒಡಲಲ್ಲಿ ತುಂಬಿಕೊಳ್ತಿದೆ. ಹೀಗಿದ್ದ್ರೂ… ನನ್ನನ್ನ ನಿರ್ಲಕ್ಷ್ಯಕ್ಕೀಡು ಮಾಡಿದ್ದಾರೆ. ನಾನೇನು ತಪ್ಪು ಮಾಡಿಲ್ಲ ಆದ್ರೆ ನಾನು ಇವತ್ತು ಸಾಯೋ ಸ್ಥಿತಿಯಲ್ಲಿದ್ದೀನಿ..ದಯವಿಟ್ಟು ನಾನು ಉಸಿರುಗಟ್ಟಿ ಸಾಯ್ತಿದ್ದೇನೆ. ನನ್ನನ್ನ ರಕ್ಷಿಸಿ….. ನಾನು ಮೊದಲು ಹೇಗೆ ಶುದ್ದ ತಿಳಿನೀರಿನಿಂದ ತುಂಬಿ ಹರಿತಿದ್ದ್ನೋ ಹಾಗೆ ನನ್ನನ್ನ ಹರಿಯೋಕೆ ಬಿಡಿ…. ನಾನು ನಿಮ್ಮಹತ್ರ ಅಂಗಲಾಚಿ ಬೇಡ್ತಿದ್ದೇನೆ… ನನ್ನನ್ನ ಕಾಪಾಡಿ.
ಇಂತಿ ಬೆಳ್ಳೆಂದೂರು ಕೆರೆ
image source - http://farm3.static.flickr.com/2515/4096646951_d3f801355e_b.jpg 

No comments:

Post a Comment