ಹಿಂಗ್ಯಾಕೆ?
ಅರ್ಥ ಹುಡುಕುವ ಸಡಗರದಲ್ಲಿ ಬದುಕು ಕಳೆದುಹೋಗಿದೆ!
ಜೂನ್ 12, 2009
ಅವಳು.
›
ಮರೆತೆನೆಂದುಕೊಂಡರು ಮತ್ತೆ ಮತ್ತೆ ಮರುಕಳಿಸುವ ನೆನಪೇ ಪ್ರೀತಿ. - ಪ್ರಶಾಂತ್ ಅರಸ್.
ಛೇ ಛೇ
›
ನಮ್ಮ ಜನಗಳೇ ಇಷ್ಟು ಬದುಕಿರೋ ಅಷ್ಟು ದಿನ ಸಾಯೋದೆ ಇಲ್ವೇನೋ ಅಂಥ ಬದುಕ್ತಾರೆ; ಸಾಯೋ ಟೈಮಲ್ಲಿ ಬದುಕಲೇ ಇಲ್ಲ ಅಂಥ ಪಶ್ಚಾತಾಪದಿಂದ ಸಾಯ್ತಾರೆ. - ಪ್ರಶಾಂತ್ ಅರಸ...
ಪಾಪಿಯ ಭಾಗ್ಯ.
›
ಪ್ರೀತಿಯ ಪರದಾಟದಲ್ಲಿ ಪೇಚಾಡುವುದಕ್ಕಿಂತ ಪ್ರೀತಿಯೇ ದಕ್ಕದ ಪಾಪಿಯೇ ಭಾಗ್ಯವಂತ!! - ಪ್ರಶಾಂತ್ ಅರಸ್.
ಮರೀಚಿಕೆ.
›
ತಿಳಿದಷ್ಟೂ ತಿಳಿಯಾಗುವುದು ತಿಳಿವು; ದೂರವಿದ್ದಷ್ಟೂ ಹತ್ತಿರವಾಗುವುದು ಒಲವು; ಬಚ್ಚಿಕೊಂಡಷ್ಟೂ ಹೆಚ್ಚುವುದು ಚೆಲುವು; ತಾಳ್ಮೆಯಿಂದ ಕಾದವನಿಗೆ ಸಿಕ್ಕೇ ಸಿಗುವುದು...
ಪ್ರೇಮಪಾಶ.
›
ಕಲ್ಪನೆಗೆ ಮೀರಿದ ಊಹೆಗೂ ನಿಲುಕದ ಎಂದು ಮುಗಿಯದ ಭಾವನೆಗಳ ಪಾಶವೇ ಪ್ರೇಮ!! - ಪ್ರಶಾಂತ್ ಅರಸ್.
ತೆರೆ ಸರಿದಾಗ.
›
ನಗುವ ಗುಲಾಬಿ ಹೂವಿನ ಹಿಂದೆ ನೋವೆಂಬ ಮುಳ್ಳಿರುತ್ತೆ; ನಗಿಸುವವರ ಹೃದಯದಲ್ಲಿ ನಗಲಾರದಷ್ಟು ನೋವಿರುತ್ತೆ. - ಪ್ರಶಾಂತ್ ಅರಸ್.
ಇರುಳು.
›
ಕಾಣದ ಕೈಗಳು ಕರೆದಾಗ ಹೊರಟವನು, ಕಾರಣವಿಲ್ಲದೆ ಅಲೆಯುತಿಹೆನು; ಗುರಿ ಏನೆಂದು ಅರಿಯದ ನಾನು ಎಲ್ಲಿಗೆ ತಲುಪುವೆನು? - ಪ್ರಶಾಂತ್ ಅರಸ್.
ನಿರೀಕ್ಷೆ.
›
ನಿನ್ನೆ ಬರಿದಾದರು ನಾಳೆ ಬೆಳಕಿಲ್ಲವೇ? - ಪ್ರಶಾಂತ್ ಅರಸ್.
ವ್ಯಸನ.
›
ಮರೆಯದ ಮನಸಿನ ಮಾತು ಮತ್ತೆ ಮತ್ತೆ ಕರೆದಿದೆ; ಹೃದಯದ ಕೋಟೆಯ ಇಂಚು ಇಂಚು ಕೊರೆಯುತ್ತಲಿದೆ. - ಪ್ರಶಾಂತ್ ಅರಸ್.
ಲಹರಿ.
›
ನೀರಿನ ಮೇಲೆ ಮುನಿಸಿಕೊಂಡರೆ ನಾರುವವರು ನಾವು ತಾನೆ!! - ಪ್ರಶಾಂತ್ ಅರಸ್.
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ