tag:blogger.com,1999:blog-2184149327937279188.post8086679150755472041..comments2023-08-16T12:58:18.821+05:30Comments on ಹಿಂಗ್ಯಾಕೆ?: ಪ್ರತಿ ಓದಿನಲ್ಲೂ ಹೊಸ ಹೊಳಹು ನೀಡುವ “ಕರ್ವಾಲೋ”Ashok K Rhttp://www.blogger.com/profile/03223206800684997836noreply@blogger.comBlogger2125tag:blogger.com,1999:blog-2184149327937279188.post-34988445828747527132012-07-27T16:24:54.113+05:302012-07-27T16:24:54.113+05:30ನಿಜ ಸರ್.ಕಾರ್ವಾಲೊ ಪುಸ್ತಕನನ್ನು ಅದೆಷ್ಟು ಬಾರಿ ಓದಿದ್ದೇನ...ನಿಜ ಸರ್.ಕಾರ್ವಾಲೊ ಪುಸ್ತಕನನ್ನು ಅದೆಷ್ಟು ಬಾರಿ ಓದಿದ್ದೇನೊ ಗೊತ್ತಿಲ್ಲ.ಯಾವುದೋ ಕಾರಣಕ್ಕೆ ಮತ್ತೆ ಮತ್ತೆ ಪುಸ್ತಕ ತೆರೆಯುವ ಸಂಧರ್ಭಗಳು ಬಂದಿವೆ.ಹಲವಾರು ದಿನಗಳ ನಂತರ ಕೈಗೆ ಸಿಕ್ಕ ಕಾರ್ವಾಲೊವನ್ನು ಮತ್ತೆ ಪುಸ್ತಕಗಳ ಮಧ್ಯೆ ಹುದುಗಿಸಿಡಲು ಮನಸ್ಸೇ ಬರುವುದಿಲ್ಲ.

ಹೌದು,ಕಾರ್ವಾಲೊ ತೇಜಸ್ವಿಯವರ ಪ್ರಮುಖ ಕೃತಿಗಳಲ್ಲಿ ಒಂದು.ಪಾತ್ರಗಳ ಸೃಷ್ಠಿ,ಅವುಗಳ ನಿರೂಪಣೆ,ಪಾತ್ರಗಳ ಸುತ್ತಲಿನ ಪ್ರಭೆ ನಮ್ಮೆಲ್ಲರನ್ನೂ ಆವರಿಸಕೊಳ್ಳುತ್ತದೆ. ಕಿವಿ ಎಂಬ ನಾಯಿ ಕೂಡ ನಮ್ಮ ಮನಸ್ಸಿನಲ್ಲಿ ತುಂಬಾ ದಿನಗಳವರೆಗೆ ಉಲಿಯುವುದೇ ಇದಕ್ಕೆ ಸಾಕ್ಷಿ.ಮತ್ತು ಪಾತ್ರಗಳ ಪ್ರಭಾವಳಿಯ ಶಕ್ತಿ ಎಷ್ಟಿದೆ ಎಂಬುದನ್ನು ತೊರಿಸುತ್ತದೆ.

ಕಾರ್ವಾಲೊ ಬಂದ ನಂತರ ಕುವೆಂಪುರವರು ಒಮ್ಮೆ ರಾಜೇಶ್ವರಿಯವರಲ್ಲಿ ಕೇಳಿದ್ದರಂತೆ "ಕಾರ್ವಾಲೊ ಎಂಬುವವರು ಮೂಡಿಗೆರೆಯಲ್ಲಿ ನಿಜವಾಗಿಯೂ ಇದ್ದಾರೆಯೋ ಅಥವಾ ಕೇವಲ ಪಾತ್ರವೋ"ಎಂದು.ಅಷ್ಟರ ಮಟ್ಟಿಗೆ ತೆಜಸ್ವಿಯವರ ಕೃತಿಗಳಲ್ಲಿ ಜೀವಂತಿಕೆ ತುಂಬಿರುತ್ತದೆ.(ಕಾರ್ವಾಲೊ ಪುಸ್ತಕವನ್ನು ಮೈಸೂರು ವಿಶ್ವವಿದ್ಯಾನಿಲಯ ಪಠ್ಯಪುಸ್ತಕ ಮಾಡಿದಾಗ ಕಾರ್ವಾಲೊದಲ್ಲಿ ಬರುವ ಕೆಲವು ಪಾತ್ರಗಳು ತೇಜಸ್ವಿಯವರೊಡನೆ ಜಗಳವಾಡಿದ್ದು ಬೇರೆ ವಿಷಯ).ತೇಜಸ್ವಿಯವರ ಕೃತಿಗಳೇ ಹಾಗೇ,ಹೇಳಬೇಕಾದುದನ್ನು ನೇರವಾಗಿ,ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುತ್ತಾರೆ.

ಮೊದಲ ಓದಿನಲ್ಲಿ ಕೇವಲ ಹಾಸ್ಯದಂತೆ ಕಾಣುವ ಅವರ ಕಾದಂಬರಿ,ಪುಸ್ತಕಗಳು ನಂತರದ ಓದಿನಲ್ಲಿ ವಿಷಯಗಳು,ಪಾತ್ರಗಳು,ಅವುಗಳ ಸುತ್ತ ನಡೆಯುವ ಸನ್ನಿವೇಶಗಳು ಗಾಂಭೀರ್ಯತೆಯ ರೂಪ ಪಡೆದುಕೊಂಡು ಏನನ್ನೋ ಯೊಚಿಸಲು ಪ್ರೇರೆಪಿಸುತ್ತದೆ.

ಪ್ರಕೃತಿ,ಪರಿಸರವನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಅವೆಲ್ಲಾ ಅವರವರ ಅರಿವಿಗೆ ಬಂದಷ್ಟು,ಅವರವರ ಬೊಗಸೆಯಲ್ಲಿ ಸಿಕ್ಕಷ್ಟು ನೀರು ಎಂಬುದನ್ನು ನಮಗೆಲ್ಲಾ ಮನವರಿಕೆ ಮಾಡಿಕೊಡುತ್ತಾರೆ.Anonymousnoreply@blogger.comtag:blogger.com,1999:blog-2184149327937279188.post-57212047770475944822012-07-23T22:20:48.614+05:302012-07-23T22:20:48.614+05:30This book was non detailed text for 10th standard ...This book was non detailed text for 10th standard many years ago. I had read it then. Thanks for refreshing the memories.dr.raj.shttps://www.blogger.com/profile/09911034683675129484noreply@blogger.com