tag:blogger.com,1999:blog-2184149327937279188.post7423331266258181386..comments2023-08-16T12:58:18.821+05:30Comments on ಹಿಂಗ್ಯಾಕೆ?: ಸೂಟು ವಾಚಿನ ಗದ್ದಲದಲ್ಲಿ ಚರ್ಚೆಯಾಗದ ಸಂಗತಿಗಳುAshok K Rhttp://www.blogger.com/profile/03223206800684997836noreply@blogger.comBlogger2125tag:blogger.com,1999:blog-2184149327937279188.post-48418263416809382972016-02-13T11:44:57.435+05:302016-02-13T11:44:57.435+05:30ಸತ್ಯಸತ್ಯAshok K Rhttps://www.blogger.com/profile/03223206800684997836noreply@blogger.comtag:blogger.com,1999:blog-2184149327937279188.post-44664439105195306022016-02-11T08:35:31.442+05:302016-02-11T08:35:31.442+05:30ಸಮಾಜವಾದಿ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ...ಸಮಾಜವಾದಿ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ಅಧಿಕಾರದ ಅಮಲಿನಲ್ಲಿ ಓರ್ವ ಸಮಾಜವಾದಿಯಲ್ಲಿರಬೇಕಾದ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡು ಬೂರ್ಜ್ವಾ ವ್ಯಕ್ತಿಯಾಗಿ ಬದಲಾಗಿಹೋಗಿದ್ದಾರೆ. ಅಧಿಕಾರ ಎಂಬುದು ಮನುಷ್ಯನನ್ನು ಈ ರೀತಿ ಬದಲಾಯಿಸುವುದು ಓರ್ವನ ವ್ಯಕ್ತಿತ್ವ ಎಷ್ಟು ಗಟ್ಟಿಯಾಗಿದೆ ಎಂಬುದರ ಮಾಪಕವಾಗಿ ಕಂಡುಬರುತ್ತದೆ. ಅಧಿಕಾರ ಸಿಕ್ಕಿದ ನಂತರ ಸಿದ್ಧರಾಮಯ್ಯನವರಲ್ಲಿ ಓರ್ವ ಸೂಕ್ಷ್ಮ ಸಂವೇದನೆ ಇಲ್ಲದ ಬಂಡವಾಳಶಾಹಿ ಶ್ರೀಮಂತನಲ್ಲಿ ಕಂಡುಬರುವ ಎಲ್ಲಾ ಲಕ್ಷಣಗಳು ಇಂದು ಕಂಡುಬರುತ್ತಿವೆ. ಜನರ ಸಮಸ್ಯೆಗಳ ಬಗ್ಗೆ ಸಿದ್ಧರಾಮಯ್ಯ ಕುರುಡಾಗಿದ್ದಾರೆ. ಓರ್ವ ವ್ಯಕ್ತಿಯ ವ್ಯಕ್ತಿತ್ವ ಪಕ್ವವಾಗಿ ಇಲ್ಲದಿರುವಾಗ ಇಂಥ ಬದಲಾವಣೆಗಳು ಕಂಡುಬರುತ್ತವೆ. ಓರ್ವ ಪಕ್ವ ವ್ಯಕ್ತಿ ಈ ರೀತಿ ಬದಲಾಗುವುದಿಲ್ಲ, ಅಧಿಕಾರಕ್ಕಾಗಿ ಮೌಲ್ಯಗಳನ್ನು ಗಾಳಿಗೆ ತೂರುವುದಿಲ್ಲ. ಸಿದ್ಧರಾಮಯ್ಯ ಓರ್ವ ಸಮಾಜವಾದಿ ಹಿನ್ನೆಲೆಯಿಂದ ಬಂದವರಾದರೂ ಇಂದು ಎಲ್ಲಾ ಸಮಾಜವಾದಿ ಕಳೆದುಕೊಂಡು ಅಧಿಕಾರದ ಕುರ್ಚಿಗೆ ಅಂಟಿ ಕುಳಿತುಕೊಂಡಿರುವುದು ಅವರ ವ್ಯಕ್ತಿತ್ವದ ಅಪಕ್ವತೆಯನ್ನೇ ತೋರಿಸುತ್ತದೆ.<br /><br />ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಡಿಗೆ ಆಯೋಜಿಸಿದ್ದ ಸಿದ್ಧರಾಮಯ್ಯ ಇಂದು ಲೋಕಾಯುಕ್ತ ಹುದ್ದೆಯನ್ನು ತುಂಬದೆ ಖಾಲಿ ಬಿಟ್ಟಿದ್ದಾರೆ. ಜನಸಾಮಾನ್ಯರು ಆಡಳಿತದ ಕುಂದುಕೊರತೆಗಳ ಬಗ್ಗೆ ದೂರು ನೀಡುವ ರಾಜ್ಯ ಸರ್ಕಾರದ ವೆಬ್ ಪೋರ್ಟಲ್ ನಿಷ್ಕ್ರಿಯವಾಗಿದೆ. ಇದು ಸಮಾಜವಾದಿ ಸಿದ್ಧರಾಮಯ್ಯನವರ ಅಸೂಕ್ಷ್ಮತೆಯನ್ನೂ, ಭ್ರಷ್ಟಾಚಾರಕ್ಕೆ ಇಂಬು ಕೊಡುವ ನಡವಳಿಕೆಯಾಗಿಯೂ ಕಂಡುಬರುತ್ತದೆ. ಬೇರೆ ರಾಜ್ಯಗಳ ಜನಸಾಮಾನ್ಯರು ದೂರು ನೀಡುವ ವೆಬ್ ಪೋರ್ಟಲ್ಗಳು ಜೀವಂತವಾಗಿವೆ. ಕರ್ನಾಟಕದ ಆಡಳಿತವನ್ನು ಚುರುಕಾಗಿಸಬಹುದಾದ ಇಂಥ ವೆಬ್ ಪೋರ್ಟಲ್ ನಿಷ್ಕ್ರಿಯವಾಗಿದೆ. ಇದರಿಂದ ಓರ್ವ ಸಮಾಜವಾದಿಯಾಗಿ ಸಿದ್ಧರಾಮಯ್ಯನವರ ವ್ಯಕ್ತಿತ್ವ ಎಷ್ಟು ಗಟ್ಟಿ ಎಂಬುದು ತಿಳಿಯುತ್ತದೆ.anand prasadhttps://www.blogger.com/profile/09623502548493814304noreply@blogger.com