ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

27.8.17

ದೀಪವಾಗು

ರಘು ಮಾಗಡಿ
ದೀಪವಿರದ ಮನೆಯ
ದೀವಿಗೆಯು ನಾನು
ಅಘಾದ ಕತ್ತಲಲ್ಲೂ ಬೆಳಗದಿರಲು
ಕಾರಣವು ಏನು ..?
ಜೀವದ ದೀವಿಗೆ ಹೊತ್ತಿಸುವ
ನೇತಾರ ನೀನು
ಜೀವದ ತೈಲವು ಆವಿಯಾಗುವ ಮುನ್ನ ಹೊತ್ತಿಸೆಯೇನು ..?
ನಂದಿದರೂ ಚಿಂತಿಲ್ಲ
ಒಂದು ಕ್ಷಣಕಾದರೂ
ನನ್ನ ಮನೆಯ ನಂದಾದೀಪವಾಗುವಾಸೆ ಪೂರೈಸೆಯೇನು..?
ನನ್ನಲ್ಲಾ ಹಲುಬಿಕೆ ಕೇಳಿದ ಮೇಲೂ
ಸುಮ್ಮನಿರುವಿಯೆಂದರೆ ನೀನು
ಈ ಜೀವನಕೆ ನೀ ನೀಡುತಿರುವ ಪರೀಕ್ಷೆಯೋ..?
ಅಥವಾ ಜನ್ಮಾಂತರದ ಕರ್ಮಗಳಿಗಿದುವೆ
ಈ ಜನ್ಮದಲೇ ಶಿಕ್ಷೆಯೋ..?
ತಿಳಿಯೆ ನಾನು.

No comments:

Post a Comment

Related Posts Plugin for WordPress, Blogger...