ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

13.5.17

ಕಾಣದ ಕವಿತೆ

ರಘು ಮಾಗಡಿ (ನೇತೇನಹಳ್ಳಿ)
ಕಾಣದ ಕವಿತೆಯ ಹಾಡಲಿ ಹೇಗೆ
ನೋಡದೆ ನಿನ್ನನು ಬಾಳಲಿ ಹೇಗೆ
ಹೇಳೆಯಾ.. ನೀ ಹೇಳೆಯಾ..
ಪ್ರೀತಿಯ ಸುಡುವುದೇ ವಿರಹದ ಬೇಗೆ?
ಅಪ್ಪಳಿಸಿ ಕೊರೆವ ಕಡಲ ಅಲೆಗಳ,
ಮನ ವನದಿ ಅಲೆದಾಡುವ ಕಾಡ್ಗಿಚ್ಚ ಕಿಡಿಗಳ,
ಹೇಳೆಯಾ.. ನೀ ಹೇಳೆಯಾ..
ಭಾವ ಸಾಗರವ ತಡೆದಿಡಲಿ ಹೇಗೆ?

ಕಣ್ಣೆಂಬ ಪುಟದಲ್ಲಿ ನೀನಿಂತು ನಿಂತೆ ಎದೆಯೆಂಬ ರಥದಲ್ಲಿ ನೀನಿಂತು ಕುಂತೆ
ಕೇಳೆಯಾ.. ನೀ ಕೇಳೆಯಾ..
ಮನವೆಂಬ ಊರೆಲ್ಲ ನೆನಪೆಂಬ ಸಂತೆ…

No comments:

Post a Comment

Related Posts Plugin for WordPress, Blogger...