ಡಾ. ಅಶೋಕ್. ಕೆ.
ಆರ್.
ಅದು ಕಡಲಕಿನಾರೆಯ ಕಥೆ. ಮನೆಬಿಟ್ಟು ಓಡಿಬಂದವರ,
ಮನೆಯಿಲ್ಲದೆ ಬಂದವರ, ಮನೆಯಿಂದ ಓಡಿಸಿಕೊಂಡವರ ಮನಮುಟ್ಟುವ ಕಥೆ. ಪಾಂಡಿರಾಜ್ ಎಂಬ ನಿರ್ದೇಶಕನ ಮನದ
ಪಟದಲ್ಲಿ ಮೂಡಿದ ಕಥೆಯ ಯಶಸ್ಸು ಚಿತ್ರ ನೋಡುವಾಗ ನಮ್ಮ ಕಣ್ಣಂಚಿನಲ್ಲಿ ಮೂಡುವ ಹನಿಗಳಲ್ಲಿದೆ. ಧಾರಾಕಾರವಾಗಿ
ಗೊಳೋ ಎಂದಳುತ್ತಾ ಕುಳಿತರೆ ನಿರ್ದೇಶಕ ಜವಾಬ್ದಾರನಲ್ಲ!